ಸ್ವಂತ ಪಕ್ಷೀಯರಿಂದಲೇ ಬಿಎಸ್​ವೈಗೆ ಖೆಡ್ಡಾ; ಆಪರೇಷನ್ ಕಮಲ ಆಡಿಯೋ ಪ್ರಕರಣ ರೀ ಓಪನ್ ಮಾಡಿಸಲು ಬಿಜೆಪಿಗರಿಂದಲೇ ಮನವಿ: ಜೆಡಿಎಸ್ ನಾಯಕ ಶರಣುಗೌಡ ಹೊಸ ಬಾಂಬ್

ಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಅವರದೇ ಪಕ್ಷದ ಅಗ್ರಗಣ್ಯ ನಾಯಕರೊಬ್ಬರು ಖೆಡ್ಡಾ ತೋಡುತ್ತಿದ್ದಾರೆ. ಈಗಾಗಲೇ ಆ ನಾಯಕರು ತನ್ನ ಜತೆ ಪೋನ್ ಸಂಭಾಷಣೆ ನಡೆಸಿದ್ದಾರೆ. ನನ್ನ ಮುಖಾಂತರ ಕೆಲ ಬಿಜೆಪಿಗರೇ ಯಡಿಯೂರಪ್ಪರಿಗೆ ಹಳ್ಳ ತೋಡುತ್ತಿದ್ದಾರೆ.

G Hareeshkumar | news18-kannada
Updated:September 13, 2019, 7:27 PM IST
ಸ್ವಂತ ಪಕ್ಷೀಯರಿಂದಲೇ ಬಿಎಸ್​ವೈಗೆ ಖೆಡ್ಡಾ; ಆಪರೇಷನ್ ಕಮಲ ಆಡಿಯೋ ಪ್ರಕರಣ ರೀ ಓಪನ್ ಮಾಡಿಸಲು ಬಿಜೆಪಿಗರಿಂದಲೇ ಮನವಿ: ಜೆಡಿಎಸ್ ನಾಯಕ ಶರಣುಗೌಡ ಹೊಸ ಬಾಂಬ್
ಸಿಎಂ ಯಡಿಯೂರಪ್ಪ ಹಾಘೂ ಜೆಡಿಎಸ್ ಮುಖಂಡ ಶರಣು ಗೌಡ
G Hareeshkumar | news18-kannada
Updated: September 13, 2019, 7:27 PM IST
ಯಾದಗಿರಿ(ಸೆ. 13): ಮೈತ್ರಿ ಸರ್ಕಾರ ಇದ್ದಾಗ ಬಿಜೆಪಿಯ ಆಪರೇಷನ್ ಕಮಲದ ಆಡಿಯೋ ಮತ್ತು ವಿಡಿಯೋ ಬಿಡುಗಡೆ ಮಾಡಿ ಶಾಕ್ ಕೊಟ್ಟಿದ್ದ ಜೆಡಿಎಸ್ ಯುವ ನಾಯಕ ಶರಣಗೌಡ ನಾಯಕ್ ಅವರು ಈಗ ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯ ಆಪರೇಷನ್ ಕಮಲದ ಆಡಿಯೋ ಪ್ರಕರಣವನ್ನು ರೀ ಓಪನ್ ಮಾಡಿಸಲು ಆ ಪಕ್ಷದ ಕೆಲ ಮುಖಂಡರೇ ನನಗೆ ಆಫರ್ ಮಾಡಿದ್ಧಾರೆ ಎಂದು ಗುರುಮಿಟ್ಕಲ್ ಶಾಸಕ ನಾಗನಗೌಡ ಕಂದಕೂರ ಅವರ ಮಗನೂ ಆದ ಶರಣಗೌಡ ಹೇಳಿದ್ಧಾರೆ.

ಜೆಡಿಎಸ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಅವರದೇ ಪಕ್ಷದ ಅಗ್ರಗಣ್ಯ ನಾಯಕರೊಬ್ಬರು ಖೆಡ್ಡಾ ತೋಡುತ್ತಿದ್ದಾರೆ. ಈಗಾಗಲೇ ಆ ನಾಯಕರು ತನ್ನ ಜತೆ ಪೋನ್ ಸಂಭಾಷಣೆ ನಡೆಸಿದ್ದಾರೆ. ನನ್ನ ಮುಖಾಂತರ ಕೆಲ ಬಿಜೆಪಿಗರೇ ಯಡಿಯೂರಪ್ಪರಿಗೆ ಹಳ್ಳ ತೋಡುತ್ತಿದ್ದಾರೆ. ಯಡಿಯೂರಪ್ಪ ಅವರ ಅಸ್ತಿತ್ವ ಈಗ ನನ್ನ ಕೈಲಿದೆ ಎಂದು ಶರಣಗೌಡ ತಿಳಿಸಿದ್ದಾರೆ. ಆದರೆ, ಫೋನ್ ಮಾಡಿದ ಆ ಬಿಜೆಪಿ ನಾಯಕನ ಹೆಸರನ್ನು ಅವರು ಬಹಿರಂಗಪಡಿಸಿಲ್ಲ ಎಂದರು.

ಗುರುಮಠಕಲ್ ಕ್ಷೇತ್ರಕ್ಕೆ ಬಿ.ಎಸ್.ವೈ ಅವರು ಬೇಗ ಅನುದಾನ ಬಿಡುಗಡೆ ಮಾಡದಿದ್ದರೆ ಎರಡು ದಿನಗಳ ಒಳಗೆ ಬಿಜೆಪಿ ನಾಯಕರನ್ನು ಭೇಟಿಯಾಗಿ ಅಡಿಯೋ ಪ್ರಕರಣ ರೀ ಓಪನ್ ಮಾಡಿಸಿ ಬಿಎಸ್​ವೈಗೆ ಮತ್ತೆ ಒಂದು ಗತಿ ಕಾಣಿಸುತ್ತೇನೆ ಎಂದು ಶರಣು ಗೌಡ ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಸಿಎಂ ವಿರುದ್ಧ ತಿರುಗಿಬಿದ್ದ ಮಂಡ್ಯ ಬಿಜೆಪಿ: ಹಾಲು ಒಕ್ಕೂಟದ ನಾಮನಿರ್ದೇಶನ ತಡೆಹಿಡಿಯಲು ರಾಜ್ಯಾಧ್ಯಕ್ಷರಿಗೆ ಪತ್ರ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಫೆಬ್ರುವರಿ ತಿಂಗಳಲ್ಲಿ ಬಜೆಟ್​​ ಮಂಡನೆ ಮಾಡಿ, ನಂತರ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿಯ 'ಬಿ' ಟೀಮ್​ನವರು ಮತ್ತೊಬ್ಬರನ್ನು ಮುಖಮಂತ್ರಿಯನ್ನಾಗಿ ಮಾಡುತ್ತಾರೆ ಎಂದೂ ಜೆಡಿಎಸ್ ನಾಯಕ ಹೇಳಿದ್ದಾರೆ.

ಸಿಎಂ  ಯಡಿಯೂರಪ್ಪ ಅವರ ಕಾಲಾವಧಿ ಕೇವಲ ಐದಾರು ತಿಂಗಳು ಮಾತ್ರ. ಇದರಿಂದ ಅವರು ಹತಾಶೆಗೊಂಡಿದ್ದಾರೆ. ಇತ್ತೀಚೆಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಸಿಎಂ ಯಡಿಯೂರಪ್ಪ‌  ಅವರ ಅಕ್ಕ-ಪಕ್ಕದಲ್ಲಿ ಕಾಣುತ್ತಿಲ್ಲ.‌ ಶೋಭಾ ಹತ್ತಿರಕ್ಕೆ ಬಿಎಸ್​ವೈ ಹೋಗದಂತೆ ಅವರ ಮಕ್ಕಳಾದ ವಿಜಯೇಂದ್ರ ಮತ್ತು ಸಂಸದ ರಾಘವೇಂದ್ರ ಬಿಡುತ್ತಿಲ್ಲ ಎಂದೂ ಶರಣಗೌಡ‌‌ ಕಂದಕೂರ ಅವರು ಲೇವಡಿ ಮಾಡಿದ್ದಾರೆ.

First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...