ಬಿಎಲ್ ಸಂತೋಷ್ ಅಥವಾ ಪ್ರಭಾಕರ್ ಕೋರೆ ಸಿಎಂ ಆದರೆ ಜೆಡಿಎಸ್ ಬೆಂಬಲ: ಜೆಡಿಎಸ್ ಯುವ ಮುಖಂಡ ಶರಣಗೌಡ ಹೇಳಿಕೆ

ಕಲಬುರ್ಗಿ ಹೈಕೋರ್ಟ್ ನ್ಯಾಯಪೀಠದಲ್ಲಿ ನವೆಂಬರ್ 6 ಮತ್ತು 7ರಂದು ಆಡಿಯೋ ಪ್ರಕರಣದ ವಿಚಾರಣೆ ಇದೆ. ಇಲ್ಲಿ ತಮಗೆ ನ್ಯಾಯ ಸಿಗುವ ವಿಶ್ವಾಸ ಇಲ್ಲ ಎಂದು ಹೇಳಿದ ಶರಣಗೌಡ ಕಂದಕೂರ ಅವರು, ಸುಪ್ರೀಂ ಕೋರ್ಟ್​ಗೆ ಮೊರೆ ಹೋಗುವ ಸುಳಿವು ನೀಡಿದ್ಧಾರೆ.

news18-kannada
Updated:October 30, 2019, 4:08 PM IST
ಬಿಎಲ್ ಸಂತೋಷ್ ಅಥವಾ ಪ್ರಭಾಕರ್ ಕೋರೆ ಸಿಎಂ ಆದರೆ ಜೆಡಿಎಸ್ ಬೆಂಬಲ: ಜೆಡಿಎಸ್ ಯುವ ಮುಖಂಡ ಶರಣಗೌಡ ಹೇಳಿಕೆ
ಶರಣಗೌಡ ಕಂದಕೂರ
  • Share this:
ಯಾದಗಿರಿ(ಅ. 30): ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅಪ್ಪಟ 24 ಕ್ಯಾರೆಟ್ ಚಿನ್ನ. ಅವರು ಪೋನ್ ಕದ್ದಾಲಿಕೆ ಮಾಡಿದ್ದಾರೆಂಬ ಆರೋಪ ಸತ್ಯಕ್ಕೆ ದೂರವಾದದ್ದು. ಒಂದು ವೇಳೆ  ಪೋನ್ ಕದ್ದಾಲಿಕೆ ಮಾಡಿದ್ದರೆ ಮೈತ್ರಿ ಸರಕಾರ ಪತನವಾಗಿರುತ್ತಿರಲಿಲ್ಲ ಎಂದು ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದಕೂರ ಹೇಳಿದ್ಧಾರೆ.

ಇಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಶರಣಗೌಡ, ಸಿಬಿಐನಿಂದ ವಿಚಾರಣೆಗೆ ತಮಗೆ ಯಾವುದೇ ನೋಟೀಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನೋಟೀಸ್ ಯಾರಿಗೆ ಬರುತ್ತೆ ಅಂತ ನವೆಂಬರ್ 7ರ ನಂತರ ನೋಡಿ” ಎಂದವರು ಹೇಳುವ ಮೂಲಕ ಬಿಎಸ್ ಯಡಿಯೂರಪ್ಪ ಅವರಿಗೆ ನೋಟೀಸ್ ಬರಬಹುದು ಎಂಬ ಅಭಿಪ್ರಾಯವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ ಸರ್ವಾಧಿಕಾರಿಯಾ?; ಪಠ್ಯದಿಂದ ಟಿಪ್ಪು ಕೈಬಿಡುವ ಸಿಎಂ ನಿರ್ಧಾರಕ್ಕೆ ದಿನೇಶ್ ಗುಂಡೂರಾವ್ ಆಕ್ರೋಶ

ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದ್ದ ಸಂದರ್ಭವದು. ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಪಾಟೀಲ್ ಅವರನ್ನು ಸೆಳೆಯಲು ಬಿಜೆಪಿ ನಾಯಕರು ಅವರ ಮಗ ಶರಣಗೌಡರನ್ನು ಸಂಪರ್ಕಿಸಿ ಹಲವು ಆಮಿಷಗಳನ್ನ ಒಡ್ಡಿದ್ದರೆನ್ನಲಾಗಿದೆ. ಫೆಬ್ರವರಿ 7ರ ರಾತ್ರಿ ದೇವದುರ್ಗದ ಐಬಿಯಲ್ಲಿ ದೇವದುರ್ಗ ಶಾಸಕ, ಯಡಿಯೂರಪ್ಪ ಮೊದಲಾದವರ ಜೊತೆಗಿನ ಸಂಭಾಷಣೆಯನ್ನು ಶರಣಗೌಡ ಕಂದಕೂರು ಅವರು ತಮ್ಮ ಫೋನ್​ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಮರುದಿನದಂದು ಅಂದಿನ ಸಿಎಂ ಕುಮಾರಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ಈ ಆಡಿಯೋವನ್ನು ಬಿಡುಗಡೆ ಮಾಡಿದ್ದರು. ಅದರೊಂದಿಗೆ ಬಿಜೆಪಿಯ ಆಪರೇಷನ್ ಕಮಲದ ಆರನೇ ಪ್ರಯತ್ನ ನಿಂತುಹೋಗಿತ್ತು. ಈಗ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಶರಣಗೌಡ ಕಂದಕೂರ ಅವರ ಹೆಸರು ಕೇಳಿಬಂದಿದೆ. ಫೋನ್ ಕದ್ದಾಲಿಕೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಬಿಐ ಈಗ ಶರಣಗೌಡರಿಗೆ ನೋಟೀಸ್ ನೀಡಿದೆ ಎಂಬ ಸುದ್ದಿ ಇದೆ. ಇವತ್ತಿನ ಪತ್ರಿಕಾಗೋಷ್ಠಿಯಲ್ಲಿ ಕಂದಕೂರ ಅವರು ಈ ನೋಟೀಸ್ ವಿಚಾರವನ್ನು ತಳ್ಳಿಹಾಕಿದ್ಧಾರೆ.

ಇದನ್ನೂ ಓದಿ: ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ, ಬಿಜೆಪಿಯವರೇ ಮತಾಂಧರು; ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ

ಕಲಬುರ್ಗಿ ಹೈಕೋರ್ಟ್ ನ್ಯಾಯಪೀಠದಲ್ಲಿ ನವೆಂಬರ್ 6 ಮತ್ತು 7ರಂದು ಆಡಿಯೋ ಪ್ರಕರಣದ ವಿಚಾರಣೆ ಇದೆ. ಇಲ್ಲಿ ತಮಗೆ ನ್ಯಾಯ ಸಿಗುವ ವಿಶ್ವಾಸ ಇಲ್ಲ ಎಂದು ಹೇಳಿದ ಶರಣಗೌಡ ಕಂದಕೂರ ಅವರು, ಸುಪ್ರೀಂ ಕೋರ್ಟ್​ಗೆ ಮೊರೆ ಹೋಗುವ ಸುಳಿವು ನೀಡಿದ್ಧಾರೆ.

ಅಡಿಯೋ ಪ್ರಕರಣದಲ್ಲಿ ಹಿರಿಯ ವಕೀಲರ ಸಲಹೆ ಪಡೆದು ಸುಪ್ರೀಂಕೋರ್ಟ್​ಗೆ ಮೊರೆ ಹೋಗುತ್ತೇನೆ. ಅದೆ ರೀತಿ ಅಡಿಯೋ ಪ್ರಕರಣ ಹಾಗೂ ಆಪರೇಷನ್ ಕಮಲ ಸಂಬಂಧದ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಮುಂದಿನ ದಿನಗಳಲ್ಲಿ ಸಿಬಿಐ ಹಾಗೂ ಇಡಿ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ ಎಂದು ಗುರುಮಠಕಲ್ ಶಾಸಕರ ಮಗ ತಿಳಿಸಿದ್ದಾರೆ.ಇದನ್ನೂ ಓದಿ: ಪಟಾಕಿ ಸಿಡಿಸಿ ಓಡುವಾಗ ರೈಲಿಗೆ ಡಿಕ್ಕಿ; ತುಂಬು ಗರ್ಭಿಣಿ ಹೆಂಡತಿ ಕಣ್ಣೆದುರೇ ಪ್ರಾಣ ಬಿಟ್ಟ ಗಂಡ

ಬಿಎಲ್ ಸಂತೋಷ್ ಅಥವಾ ಪ್ರಭಾಕರ್ ಕೋರೆ ಸಿಎಂ ಆಗಲಿ:
ಮತ್ತೊಮ್ಮೆ ಚುನಾವಣೆ ಎದುರಿಸುವುದು ಯಾವ ಶಾಸಕರಿಗೂ ಇಷ್ಟವಿಲ್ಲ. ಹೀಗಾಗಿ, ಬಿಜೆಪಿ ಸರ್ಕಾರವನ್ನು ಬೀಳಿಸುವ ಆಸಕ್ತಿ ಯಾರಿಗೂ ಇಲ್ಲ. ವಿಧಾನಸಭೆ ಉಪಚುನಾವಣೆಯ ನಂತರ ಸರ್ಕಾರ ಬೀಳುವ ಪರಿಸ್ಥಿತಿ ಬಂದರೆ ಜೆಡಿಎಸ್ ಬೆಂಬಲ ನೀಡಬಹುದು ಎಂದು ಶರಣಗೌಡ ಕಂದಕೂರ ಹೇಳಿದ್ದಾರೆ. ಮೈತ್ರಿ ಸರಕಾರಕ್ಕೆ ಬೆನ್ನಿಗೆ ಚೂರಿ ಹಾಕಿದ್ದ ಯಡಿಯೂರಪ್ಪ ಅವರು ಸಿಎಂ ಆಗಿ ಮುಂದುವರೆಯಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಅವರ ಪಕ್ಷದಲ್ಲಿ ಸಂತೋಷ್​​ಜೀ ಮತ್ತು ಪ್ರಭಾಕರ್ ಕೋರೆ ಹೆಸರುಗಳು ಕೇಳಿಬರುತ್ತಿವೆ. ಅವರು ಸಿಎಂ ಆದರೆ ಜೆಡಿಎಸ್ ಬೇಷರತ್ ಬೆಂಬಲ ನೀಡುತ್ತದೆ ಎಂದು ಶರಣಗೌಡ ಸ್ಪಷ್ಟಪಡಿಸಿದ್ದಾರೆ. ಸಿಎಂ ಸ್ಥಾನಕ್ಕೆ ಬಿಎಸ್ ಸಂತೋಷ್ ಮತ್ತು ಪ್ರಭಾಕರ್ ಕೋರೆ ಹೆಸರನ್ನು ತಾನು ಸೂಚಿಸುತ್ತಿಲ್ಲ. ಅವರ ಪಕ್ಷದಲ್ಲೇ ಮಾತನಾಡಿಕೊಳ್ಳುತ್ತಿರುವುದನ್ನು ತಾನು ಉಲ್ಲೇಖಿಸಿ ಹೇಳಿದೆ ಅಷ್ಟೇ ಎಂದೂ ಕೊನೆಯಲ್ಲಿ ಕಂದಕೂರ ಸ್ಪಷ್ಟಪಡಿಸಿದ್ದಾರೆ.

(ವರದಿ: ನಾಗಪ್ಪ ಮಾಲಿ ಪಾಟೀಲ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ