ಮಂಡ್ಯದಲ್ಲೇ ಇರಲು ನಿಖಿಲ್ ನಿರ್ಧಾರ​; ತಮ್ಮ ಹೊಸ ಮನೆಗೆ ಹೆಸರನ್ನೂ ಇಟ್ಟಿದ್ದಾರೆ ಜೆಡಿಎಸ್​ ಮುಖಂಡ

ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ  ನಾನು ಕುಡಿಯುತ್ತಿದೆ. ಎಂಟು ವರ್ಷ ಆಯ್ತು ನಾನು ಕುಡಿಯುವುದು ಬಿಟ್ಟು. ಆರೋಗ್ಯದ ದೃಷ್ಟಿಯಿಂದ, ಸಾರ್ವಜನಿಕ ಬದುಕಲ್ಲಿ ಇರುವುದರಿಂದ ನಾನು ಕುಡಿಯುವುದನ್ನು ಬಿಟ್ಟಿದ್ದೇನೆ-ನಿಖಿಲ್​

Latha CG | news18
Updated:June 24, 2019, 4:59 PM IST
ಮಂಡ್ಯದಲ್ಲೇ ಇರಲು ನಿಖಿಲ್ ನಿರ್ಧಾರ​; ತಮ್ಮ ಹೊಸ ಮನೆಗೆ ಹೆಸರನ್ನೂ ಇಟ್ಟಿದ್ದಾರೆ ಜೆಡಿಎಸ್​ ಮುಖಂಡ
ನಿಖಿಲ್​ ಕುಮಾರಸ್ವಾಮಿ
  • News18
  • Last Updated: June 24, 2019, 4:59 PM IST
  • Share this:
ಮಂಡ್ಯ,(ಜೂ.24): ಜೆಡಿಎಸ್​ ಮುಖಂಡ ನಿಖಿಲ್​ ಕುಮಾರಸ್ವಾಮಿ ಲೋಕಸಭಾ ಚುನಾವಣೆ ಸೋಲಿನ ಬಳಿಕ ಮಂಡ್ಯ ಜಿಲ್ಲೆಯಲ್ಲೇ ಮನೆ ಮಾಡಲು ನಿರ್ಧರಿಸಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಂತಿದೆ. ಯಾಕೆಂದರೆ ನಿಖಿಲ್​ ಮಂಡ್ಯ ನಗರಕ್ಕೆ ಒಂದು ಕಿ.ಮೀ.ವ್ಯಾಪ್ತಿಯಲ್ಲಿ ತೋಟ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಅವರ ಹೊಸ ಮನೆಗೆ ಒಂದು ಹೆಸರನ್ನೂ ಸಹ ಇಡಲು ನಿಖಿಲ್​ ನಿರ್ಧರಿಸಿದ್ದಾರೆ. "ನನ್ನ ಮನೆಗೆ 'ನಿಮ್ಮ ಮನೆ'  ಎಂದು ಹೆಸರಿಡುತ್ತೇನೆ. ನಾನು ಮನೆಯಲ್ಲಿ ಇಲ್ಲ ಅಂದರೂ ಯಾರೂ ಬೇಕಾದರೂ ಮನೆಗೆ ಬರಬಹುದು. 15 ದಿನದೊಳಗೆ ಎಲ್ಲಾ ಪ್ರಕ್ರಿಯೆ ಪೂರ್ಣ ವಾಗುತ್ತದೆ," ಎಂದು ಸ್ಪ​ಷ್ಟನೆ ನೀಡಿದ್ದಾರೆ.

ಜೊತೆಗೆ ಮಂಡ್ಯ ಪ್ರವಾಸದ ಬಗ್ಗೆಯೂ ಮಾತನಾಡಿದ ಅವರು, ಈ ಬಗ್ಗೆ ಜೆಡಿಎಸ್​ ವರಿಷ್ಠರ ಜೊತೆ ಚರ್ಚೆ ಮಾಡಿರುವುದಾಗಿ ತಿಳಿಸಿದರು. " ನನಗೆ ಮತಚಲಾಯಿಸಿದ ಮತದಾರರಿಗೆ ಧನ್ಯವಾದಗಳು. ಮಂಡ್ಯ ಪ್ರವಾಸದ ಬಗ್ಗೆ ಜೆಡಿಎಸ್‌ ವರಿಷ್ಠರ ಜೊತೆ ಚರ್ಚೆಮಾಡಿದ್ದೇನೆ. ಚುನಾವಣೆ ಫಲಿತಾಂಶ ಬಂದ ನಂತರ ಯಾವುದೋ ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಬಂದಿತ್ತು. ನಿಖಿಲ್ ಸೋತಿದ್ದರಿಂದ ಧೃತಿಗೆಟ್ಟು ಕುಡಿದು ಗಲಾಟೆ ಮಾಡಿದ್ದಾರೆಂದು ಸುಳ್ಳು ಸುದ್ದಿ ಬರೆದಿದ್ದರು. ಆದರೆ ಆ ರೀತಿ ಬರೆಯುವ ಮುನ್ನ ಆ‌ ಮಾಹಿತಿ ಸರಿ ಇದೆಯಾ ಇಲ್ವಾ ಎನ್ನುವುದನ್ನು ಪರಿಶೀಲನೆ ಮಾಡಿ. ಈ ಸಂಗತಿ ನನಗೆ ಬಹಳ ನೋವುಂಟು ಮಾಡಿದೆ. ನನ್ನನ್ನು ಧೃತಿಗೆಡಿಸುವುದಕ್ಕೆ ಸಾಧ್ಯವಿಲ್ಲ ," ಎಂದು ಹೇಳಿದರು.

ಇದನ್ನೂ ಓದಿ: ಇಂದು ಸಿಎಂ ನೇತೃತ್ವದಲ್ಲಿ ಬಸ್ ಟಿಕೆಟ್​​ ದರ ಪರಿಷ್ಕರಣೆ ಕುರಿತಾದ ಮಹತ್ವದ ಸಭೆ

"ನಾನು ಪ್ರತಿನಿತ್ಯ ಕುಮಾರಸ್ವಾಮಿ, ದೇವೆಗೌಡರ ಜೊತೆ ಚರ್ಚೆ ಮಾಡುತ್ತಿದ್ದೇನೆ. ಅವರ ರಾಜಕೀಯ ಅನುಭವವನ್ನು ನನಗೆ ಹೇಳಿಕೊಡುತ್ತಿದ್ದಾರೆ. ನನಗೆ ಚುನಾವಣೆಗೆ ನಿಲ್ಲಲು ಅವಕಾಶ ಮಾಡಿಕೊಟ್ಟ ಜಿಲ್ಲೆಯ ಶಾಸಕರು ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ. ನಾನು ಜೆಡಿಎಸ್‌ ಕಾರ್ಯಕರ್ತರ ಪರವಾಗಿ ಸಾಯುವವರೆಗೂ ಇರುತ್ತೇನೆ ಎಂದಿದ್ದೆ. ಆ ಮಾತು ಚುನಾವಣೆಗೆ ಮಾತ್ರ ಸೀಮಿತ ಅಲ್ಲ," ಎಂದರು.

"ಸಿಎಂ ನೋಡಲು ನಮ್ಮ ಮನೆ ಬಳಿ ರಾಜ್ಯದ ಹಲವೆಡೆಯಿಂದ ಜನರು ಬರುತ್ತಾರೆ. ಕೆಲಸದ ಒತ್ತಡದಿಂದ ಎಲ್ಲರನ್ನೂ ಸಿಎಂ ಭೇಟಿ ಮಾಡಲು ಸಾಧ್ಯವಿಲ್ಲ. ಆ ವೇಳೆ ಆ ಜನರ ಸಮಸ್ಯೆಗೆ ಮನೆ ಬಳಿ ಸ್ಪಂದಿಸುತ್ತಿದ್ದೇನೆ", ಎಂದು ಹೇಳಿದರು.

ಕಾಲೇಜಿಗೆ ಹೋಗ್ತಿದ್ದಾಗ ಕುಡೀತಿದ್ದೆ:

"ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ  ನಾನು ಕುಡಿಯುತ್ತಿದೆ. ಎಂಟು ವರ್ಷ ಆಯ್ತು ನಾನು ಕುಡಿಯುವುದು ಬಿಟ್ಟು. ಆರೋಗ್ಯದ ದೃಷ್ಟಿಯಿಂದ, ಸಾರ್ವಜನಿಕ ಬದುಕಲ್ಲಿ ಇರುವುದರಿಂದ ನಾನು ಕುಡಿಯುವುದನ್ನು ಬಿಟ್ಟಿದ್ದೇನೆ. ದೇವೇಗೌಡರ ಮುಂದೆ ನಿಂತುಕೊಂಡು ಮಾತನಾಡುವ ಧೈರ್ಯ ನನಗಿಲ್ಲ. ಹೀಗಿರುವಾಗ ನಾನು ಕುಡಿದು ಅವರ ಮುಂದೆ ನಿಲ್ಲಲು ಸಾಧ್ಯಾನಾ..? ರಾಜ್ಯಾಧ್ಯಕ್ಷ ಸ್ಥಾನ, ಯುವಘಟಕಕ್ಕೆ ಅಧ್ಯಕ್ಷ ಸ್ಥಾನ ಪಡೆಯಲು ನನಗಿನ್ನು ಅನುಭವದ ಅವಶ್ಯಕತೆ ಇದೆ. ನಾನು ಕಾರ್ಯಕರ್ತನಾಗಿ ಜೆಡಿಎಸ್‌ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು.ಚಲುವರಾಯಸ್ವಾಮಿ, ಸುಮಲತಾಗೆ ಟಾಂಗ್​:

"ಚಲುವಣ್ಣನಿಗೆ ಇವತ್ತು ಕಾವೇರಿ ನೀರಿನ ಬಗ್ಗೆ ಕಾಳಜಿ ಬಂದಿದೆ. ಆರಿಸಿ ಕಳಿಸಿರುವ ಸಂಸದರು ಕಾವೇರಿ ವಿಚಾರವಾಗಿ ಹೋರಾಟ ಮಾಡುತ್ತಾರೆ. ನೂತನ ಸಂಸದರಿಗೆ ಬಿಜೆಪಿ ಬೆಂಬಲ ಇದೆ. ಅವರು ಸಖತ್ ಶಕ್ತಿಶಾಲಿ. ನಾವೆಲ್ಲಾ ಯಾರು..ನಾವೆಲ್ಲಾ ಸಣ್ಣವರು.  ಜನರ ನಿರೀಕ್ಷೆಗೆ ತಕ್ಕಂತೆ ಅವರು ಕೆಲಸ ಮಾಡುತ್ತಾರೆ," ಎಂದು ಟಾಂಗ್​ ಕೊಟ್ಟರು

ನನ್ನ ತಂದೆಗಿರುವ ದೊಡ್ಡ ಮನಸ್ಸನ್ನು ಜಗನ್ ಅಣ್ಣನಲ್ಲಿ ಕಂಡೆ. ಚುನಾವಣೆಯಲ್ಲಿ ಸೋತಿದ್ದಕ್ಕೆ ಧೃತಿಗೆಡಬಾರದು ಅಂತ ಜಗನ್ ಅಣ್ಣ ಸಲಹೆ ಕೊಟ್ಟರು ಎಂದರು.

ಇದೇ ವೇಳೆ ಮೃತ ಜೆಡಿಎಸ್​​​​​​​​​​​​​​​ ಕಾರ್ಯಕರ್ತ ಸಂತೋಷ್ ಕುಟುಂಬಕ್ಕೆ ನಿಖಿಲ್​ 1 ಲಕ್ಷ ವೈಯಕ್ತಿಕ ಪರಿಹಾರ ನೀಡಿದರು. ಜೊತೆಗೆ ಸಂತೋಷ್ ಕುಟುಂಬಕ್ಕೆ ಸಾಂತ್ವನ‌ ಹೇಳಿದರು. ಸಿಎಂಗೆ ಹೇಳಿ ಕುಟುಂಬದ ಸದಸ್ಯರೊಬ್ಬರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ಸಾರಿಗೆ ಸಚಿವ ತಮ್ಮಣ್ಣ 50 ಸಾವಿರ ವೈಯಕ್ತಿಕ ನೆರವು ನೀಡಿದರು.

First published:June 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ