HOME » NEWS » State » JDS LEADER JEDRALLI KRISHNAPPA JOIN BJP ATVR ZP

ಜೆಡಿಎಸ್​ಗೆ ಜೇಡ್ರಳ್ಳಿ ಕೃಷ್ಣಪ್ಪ ಗುಡ್ ಬೈ, ಬಿಜೆಪಿಗೆ ಜೈ..!

ಮಾಗಡಿಯಲ್ಲಿ ಯಾವುದೇ ಪಕ್ಷದ ಕಾರ್ಯಕ್ರಮವಿದ್ದರೂ ಸಹ ನನಗೆ ಆಹ್ವಾನ ಮಾಡುವುದಿಲ್ಲ. ಇದು ಪಕ್ಷದ ನಾಯಕರಿಗೂ ಗೊತ್ತಿರುವ ವಿಚಾರ. ಆದರೆ ಅವರು ಸಹ ಈ ಬಗ್ಗೆ ಗಮನಹರಿಸಿಲ್ಲ.

news18-kannada
Updated:December 6, 2020, 9:11 PM IST
ಜೆಡಿಎಸ್​ಗೆ ಜೇಡ್ರಳ್ಳಿ ಕೃಷ್ಣಪ್ಪ ಗುಡ್ ಬೈ, ಬಿಜೆಪಿಗೆ ಜೈ..!
jedralli krishnappa
  • Share this:
ರಾಮನಗರ(ಮಾಗಡಿ) : ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ , ಸಮಾಜ ಸೇವಕ ಹೆಚ್.ಎಂ.ಕೃಷ್ಣಮೂರ್ತಿ(ಜೇಡರಹಳ್ಳಿ ಕೃಷ್ಣಪ್ಪ) ಜೆಡಿಎಸ್ ಗೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಪಕ್ಷ ಸೇರಲು ಮುಂದಾಗಿದ್ದಾರೆ. ಶಾಸಕ ಎ.ಮಂಜು ಹಾಗೂ ಪಕ್ಷದ ನಾಯಕರ ನಡೆಗೆ ಬೇಸತ್ತು ಬಿಜೆಪಿ ಸೇರುತ್ತಿದ್ದೇನೆ ಎಂದು ಜೇಡ್ರಳ್ಳಿ ಕೃಷ್ಣಪ್ಪ ನ್ಯೂಸ್ 18 ಗೆ ತಿಳಿಸಿದ್ದಾರೆ.

ಮಾಗಡಿಯ ಕೆಂಪೇಗೌಡರ ಪುತ್ಥಳಿ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಾಸಕ ಎ.ಮಂಜು ಕಳೆದ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಸಾಕಷ್ಟು ಕೆಲಸ ಮಾಡಿದ್ದೇನೆ. ಜೊತೆಗೆ ಪುರಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಬರಬೇಕಾದರೆ ದುಡಿದ್ದಿದ್ದೇನೆ. ಆದರೆ ಪಕ್ಷದಲ್ಲಿ ನನಗೆ ಗೌರವವಿಲ್ಲ, ಯಾವುದೇ ಸ್ಥಾನಮಾನ ನೀಡಿಲ್ಲ ಎಂದರು.

ಜೊತೆಗೆ ಮಾಗಡಿಯಲ್ಲಿ ಯಾವುದೇ ಪಕ್ಷದ ಕಾರ್ಯಕ್ರಮವಿದ್ದರೂ ಸಹ ನನಗೆ ಆಹ್ವಾನ ಮಾಡುವುದಿಲ್ಲ. ಇದು ಪಕ್ಷದ ನಾಯಕರಿಗೂ ಗೊತ್ತಿರುವ ವಿಚಾರ. ಆದರೆ ಅವರು ಸಹ ಈ ಬಗ್ಗೆ ಗಮನಹರಿಸಿಲ್ಲ. ಹಾಗಾಗಿ ನಾನು ಇದೇ 10ನೇ ತಾರೀಖು ಬಿಜೆಪಿ ಪಕ್ಷಕ್ಕೆ ಸೇರುತ್ತಿದ್ದೇನೆ. ಮಾಗಡಿಯಲ್ಲಿ ಬಿಜೆಪಿ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡುತ್ತೇನೆ ಎಂದು ಜೇಡ್ರಳ್ಳಿ ಕೃಷ್ಣಪ್ಪ ತಿಳಿಸಿದರು.

ಕಳೆದ ಚುನಾವಣೆಯಲ್ಲಿ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣರನ್ನ ಸೋಲಿಸಬೇಕಾದರೆ ನಿಮ್ಮ ಅವಶ್ಯಕತೆ ಇದೇ ಎಂದು ಸ್ವತಃ ದೇವೇಗೌಡರೇ ನನಗೆ ಹೇಳಿದ್ದರು. ಅದೇ ರೀತಿ ನಾನು ಅವರ ಮಾತಿಗೆ ಬೆಲೆಕೊಟ್ಟು ಜೆಡಿಎಸ್ ಗೆ ಸೇರಿ ಎ.ಮಂಜು ಪರವಾಗಿ ಕೆಲಸ ಮಾಡಿದ್ದೆ. ಚುನಾವಣೆಯಲ್ಲಿ ಎ.ಮಂಜು ದೊಡ್ಡಮಟ್ಟದಲ್ಲಿ ಗೆದ್ದರು. ಆದರೆ ಚುನಾವಣೆಯ ಬಳಿಕ ಪಕ್ಷದ ಶಾಸಕ ಹಾಗೂ ನಾಯಕರು ನನ್ನ ಬಗ್ಗೆ ಗಮನವೇ ಕೊಡಲಿಲ್ಲ ಎಂದು ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಈ ಕಾರಣದಿಂದ ನಾನು ಬಿಜೆಪಿ ಸೇರಲು ನಿರ್ಧರಿಸಿದ್ದೇನೆಂದು ಸ್ಪಷ್ಟಪಡಿಸಿದರು. ಭವಿಷ್ಯದ ದಿನಗಳಲ್ಲಿ ನಾನು ಮಾಗಡಿಯಲ್ಲಿ ಬಿಜೆಪಿ ಬೆಳೆಸುತ್ತೇನೆಂದು ಅಭಿಪ್ರಾಯಪಟ್ಟರು. ಪಕ್ಷ ಅವಕಾಶ ಮಾಡಿಕೊಟ್ಟರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಸಿದ್ಧ ಎಂದು ತಿಳಿಸಿದರು.

ವರದಿ : ಎ.ಟಿ.ವೆಂಕಟೇಶ್


ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್​ಬೈ ಹೇಳಿದ ನ್ಯೂಜಿಲೆಂಡ್ ಕ್ರಿಕೆಟಿಗ: ಅಮೆರಿಕ ಪರ ಹೊಸ ಇನಿಂಗ್ಸ್
Published by: zahir
First published: December 6, 2020, 8:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories