• Home
 • »
 • News
 • »
 • state
 • »
 • HK Kumaraswamy: ಪಕ್ಷವನ್ನು ಗೆಲ್ಲಿಸಿಕೊಡಿ ಎಂದು ಕಾರ್ಯಕರ್ತರ ಮುಂದೆ ಕಣ್ಣೀರು ಹಾಕಿದ ಕುಮಾರಸ್ವಾಮಿ!

HK Kumaraswamy: ಪಕ್ಷವನ್ನು ಗೆಲ್ಲಿಸಿಕೊಡಿ ಎಂದು ಕಾರ್ಯಕರ್ತರ ಮುಂದೆ ಕಣ್ಣೀರು ಹಾಕಿದ ಕುಮಾರಸ್ವಾಮಿ!

ಎಚ್‌ಕೆ ಕುಮಾರಸ್ವಾಮಿ

ಎಚ್‌ಕೆ ಕುಮಾರಸ್ವಾಮಿ

ನಮ್ಮ ಕಾರ್ಯಕರ್ತರ ಮನಸ್ಸನ್ನು ಕೆಡಿಸೋದಕ್ಕೆ ನೋಡ್ತಾ ಇದ್ದಾರೆ ಎಂದ ಎಚ್‌ಕೆ ಕುಮಾರಸ್ವಾಮಿ, ದಯಮಾಡಿ ಯಾರೂ ಅದಕ್ಕೆ ಬಲಿಯಾಗಬಾರದು. ನಾವು ಎಂತಹ ಸಂದರ್ಭ ಬಂದರೂ ಮಾನವೀಯತೆಯನ್ನು ಇಟ್ಕೊಂಡು ಪಕ್ಷವನ್ನು ಕಾಪಾಡಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

 • News18 Kannada
 • 2-MIN READ
 • Last Updated :
 • Hassan, India
 • Share this:

ಹಾಸನ: ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್‌ ಕೆ ಕುಮಾರಸ್ವಾಮಿ (HK Kumaraswamy) ಅವರು ಕಾರ್ಯಕರ್ತರ ಸಭೆಯಲ್ಲಿ ಕಣ್ಣೀರಿಟ್ಟ ಘಟನೆ ಸಕಲೇಶಪುರದಲ್ಲಿ (Sakaleshpura) ನಡೆದಿದೆ. ಇಲ್ಲಿ ನಡೆದ ಜೆಡಿಎಸ್‌ (JDS Party) ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದ ವೇಳೆ ಭಾಷಣದ ಕೊನೆಯಲ್ಲಿ ಗದ್ಗದಿತರಾದ ಎಚ್‌ ಕೆ ಕುಮಾರಸ್ವಾಮಿ, ಕೆಲವರು ನನ್ನ ವ್ಯಕ್ತಿತ್ವವನ್ನು ಹಾಳು ಮಾಡಬೇಕೆಂದು ಏನೇನೋ ಕ್ರಿಯೇಟ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.


ವ್ಯಕ್ತಿತ್ವ ಹಾಳು ಮಾಡಲು ಯತ್ನ


ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿಸಲು ಅನೇಕರು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಭಾಷಣದ ವೇಳೆ ಉಲ್ಲೇಖಿಸಿದ ಜೆಡಿಎಸ್‌ನ ಮಾಜಿ ರಾಜ್ಯ ಘಟಕದ ಅಧ್ಯಕ್ಷ, ಶಾಸಕ ಎಚ್‌ಕೆ ಕುಮಾರಸ್ವಾಮಿ, ನನ್ನ ವ್ಯಕ್ವಿತ್ವವನ್ನು ಹಾಳು ಮಾಡಬೇಕೆಂದು ಏನೇನೋ ಕ್ರಿಯೇಟ್ ಮಾಡ್ತಿದ್ದಾರೆ. ನಾವೆಲ್ಲಾ ಸೇರಿ ಜನ ಸಂಘಟನೆ ಮಾಡಿ ಪಕ್ಷದ ಕಾರ್ಯಕ್ರಮಗಳನ್ನು ಹೇಳಿ ಗೆಲ್ಲೋಣ. ಮುಂದೆ ಜನತಾದಳವೇ ಅಧಿಕಾರಕ್ಕೆ ಬರಲಿದೆ. ನಮ್ಮ ಅಭಿವೃದ್ಧಿಯನ್ನು ಯಾರೂ ಕೂಡಾ ನಿಲ್ಲಿಸೋದಕ್ಕೆ ಸಾಧ್ಯವಿಲ್ಲ ಎಂದರು.


ಇದನ್ನೂ ಓದಿ: JDS Future: ಮಾಡು ಇಲ್ಲವೇ ಮಡಿ ಕಾದಾಟಕ್ಕೆ ಸಿದ್ಧವಾಗಿರುವ ಜೆಡಿಎಸ್!


ಮುಂದುವರಿದು ಮಾತನಾಡಿದ ಎಚ್‌ಕೆ ಕುಮಾರಸ್ವಾಮಿ, ನಾವು ಗೆದ್ದೇ ಗೆಲ್ತೀವಿ ಅನ್ನೋ ಕಾರಣಕ್ಕಾಗಿ ಕೆಲವರು ಕುಚೋದ್ಯೆಯನ್ನು ಶುರು ಮಾಡಿದ್ದಾರೆ. ನಾನು ಇಲ್ಲಿ ಎಲ್ಲವನ್ನೂ ಬಾಯ್ಬಿಟ್ಟು ಹೇಳೋದಕ್ಕೆ ಆಗೋದಿಲ್ಲ. ನಿಮ್ಮ ಎಚ್‌ಕೆ ಕುಮಾರಸ್ವಾಮಿ ಇರಬಾರದು, ಜನತಾದಳ ಗೆಲ್ಲಬಾರದೆಂದು 14 ವರ್ಷಗಳ ಹಿಂದೆ ಇದ್ದ ಆರೋಪಗಳು ಈಗ ಪ್ರಾರಂಭವಾಗಿವೆ. ಕೊನೆ ವರ್ಷದಲ್ಲಿ ಏನಾದ್ರೂ ಮಾಡಿ ವ್ಯಕ್ತಿತ್ವಕ್ಕೆ ತೊಡಕು ಮಾಡಬೇಕು, ಪಕ್ಷವನ್ನು ಹಾಳು ಮಾಡಬೇಕು ಅಂತೇಳಿ ಎಲ್ಲಾ ಕ್ರಿಯೇಟ್ ಮಾಡ್ತಾ ಇದ್ದಾರೆ, ಪ್ರಚೋದನೆ ಮಾಡ್ತಾ ಇದ್ದಾರೆ ಎಂದಾಗ ಅವರ ಕಣ್ಣಾಲಿಗಳು ತುಂಬಿತ್ತು.


ಮಾನವೀಯತೆ ಇಟ್ಕೊಂಡು ಪಕ್ಷವನ್ನು ಕಾಪಾಡಿ


ಇನ್ನು, ನಮ್ಮ ಕಾರ್ಯಕರ್ತರ ಮನಸ್ಸನ್ನು ಕೆಡಿಸೋದಕ್ಕೆ ನೋಡ್ತಾ ಇದ್ದಾರೆ ಎಂದ ಕುಮಾರಸ್ವಾಮಿ, ದಯಮಾಡಿ ಯಾರೂ ಅದಕ್ಕೆ ಬಲಿಯಾಗಬಾರದು. ನಾವು ಎಂತಹ ಸಂದರ್ಭ ಬಂದರೂ ಮಾನವೀಯತೆಯನ್ನು ಇಟ್ಕೊಂಡು ಪಕ್ಷವನ್ನು ಕಾಪಾಡಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕಾಯಾ, ವಾಚಾ, ಮನಸಾ ನಾವು ಕೆಲಸ ಮಾಡ್ತಾ ಇದ್ದೇವೆ. ನಿಮ್ಮಂತಹ ಕಾರ್ಯಕರ್ತರನ್ನ ಮುಖಂಡರನ್ನು ಪಡೆದ ನಾವು ಪುಣ್ಯವಂತರು ಎಂದು ಹೇಳುತ್ತಿದ್ದಂತೆ ಕುಮಾರಸ್ವಾಮಿ ಅವರ ಕಣ್ಣಲ್ಲಿ ನೀರು ತುಂಬಿ ಹರಿಯುತ್ತಿತ್ತು.


ಇದನ್ನೂ ಓದಿ: JDS Pancharatna Yatra: 33 ದಿನ 500ಕ್ಕೂ ಹೆಚ್ಚು ಕ್ರೈನ್ ಹಾರ; ಮಾಜಿ ಸಿಎಂ ಹೆಚ್​ಡಿಕೆ ಹೆಸರಿಗೆ ಏಷ್ಯಾ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್!


ಮುಂದುವರೆದು ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯ ಅಲ್ಲ ಇಲ್ಲಿ, ನಮಗೆ ಪಕ್ಷ ಮುಖ್ಯ. ಹಾಗಾಗಿ ಪಕ್ಷವನ್ನು ಗೆಲ್ಲಿಸಿಕೊಡಿ, ಆಡಳಿತ ಕೈಗೆ ಕೊಡಿ, ಖಂಡಿತಾ ಜನರ ಸೇವೆ ಮಾಡೋದಕ್ಕೆ ಬದ್ದರಾಗಿದ್ದೇವೆ ಎಂದು ಎಚ್‌ಕೆ ಕುಮಾರಸ್ವಾಮಿ ಹೇಳಿದರು. ವಿಶೇಷ ಅಂದ್ರೆ ಸಕಲೇಶಪುರ ಪಟ್ಟಣದಲ್ಲಿ ಆಯೋಜನೆಗೊಂಡಿದ್ದ ಜೆಡಿಎಸ್ ತಾಲೂಕು ಕಾರ್ಯಕರ್ತರ ಸಭೆಯ ವೇದಿಕೆಯಲ್ಲಿ ಮಾಜಿ ಸಚಿವ ಎಚ್‌ಡಿ ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ಎಚ್‌ಡಿ ರೇವಣ್ಣ ಸಮ್ಮುಖದಲ್ಲೇ ಶಾಸಕ ಎಚ್‌ಕೆ ಕುಮಾರಸ್ವಾಮಿ ಗದ್ಗದಿತರಾಗಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ತಳಮಟ್ಟದಲ್ಲಿ ಜೆಡಿಎಸ್ ಪಕ್ಷ ಸಂಘಟನೆ


ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೇಕೆಂದು ಜಾತ್ಯಾತೀತ ಜನತಾದಳ ಪಣ ತೊಟ್ಟಿದ್ದು, ಈಗಾಗಲೇ ಈ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆಯ ಹೆಸರಿನಲ್ಲಿ ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೇನು ಕೆಲವೇ ವಾರಗಳಲ್ಲಿ ರಾಜ್ಯದಲ್ಲೂ ಕೂಡ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಹಂಬಲಿಸುತ್ತಿರುವ ಜೆಡಿಎಸ್ ಪಕ್ಷ ಈಗಿಂದಲೇ ಕಾಂಗ್ರೆಸ್ ಮತ್ತು ಬಿಜೆಪಿಯ ಮತ ಬುಟ್ಟಿಗಳಿಗೆ ಕೈ ಹಾಕಲು ಇನ್ನಿಲ್ಲದ ಶ್ರಮ ಪಡುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು