ರಾಜ್ಯ ರಾಜಕಾರಣಕ್ಕೆ ಗ್ರಹಣ ಹಿಡಿದಿದೆ; ಮೈತ್ರಿ ಪಕ್ಷದ ನಾಯಕರ ವಿರುದ್ಧ ಚಾಟಿ ಬೀಸಿದ ಹೆಚ್​. ವಿಶ್ವನಾಥ್

ರಾಜ್ಯದಲ್ಲಿ ನನ್ನ ಬಿಜೆಪಿ ಸೇರ್ಪಡೆ ಬಗ್ಗೆ ಚರ್ಚೆ ನಡೆಯುತ್ತಿದೆಯೇ ವಿನಃ ಅಭಿವೃದ್ಧಿ ವಿಚಾರ ಚರ್ಚೆ ಆಗುತ್ತಿಲ್ಲ. ಬಿಜೆಪಿಯವರನ್ನು ಭೇಟಿಯಾದರೆ ಬಿಜೆಪಿ ಸೇರುತ್ತೇನೆ ಎಂದು ಅರ್ಥವಲ್ಲ ಎಂದು ಜೆಡಿಎಸ್​ ಮುಖಂಡ ಹೆಚ್​. ವಿಶ್ವನಾಥ್ ನ್ಯೂಸ್​18 ಕನ್ನಡ ಹೇಳಿದ್ದಾರೆ.

Sushma Chakre | news18
Updated:July 3, 2019, 1:50 PM IST
ರಾಜ್ಯ ರಾಜಕಾರಣಕ್ಕೆ ಗ್ರಹಣ ಹಿಡಿದಿದೆ; ಮೈತ್ರಿ ಪಕ್ಷದ ನಾಯಕರ ವಿರುದ್ಧ ಚಾಟಿ ಬೀಸಿದ ಹೆಚ್​. ವಿಶ್ವನಾಥ್
ಹೆಚ್. ವಿಶ್ವನಾಥ್​.
  • News18
  • Last Updated: July 3, 2019, 1:50 PM IST
  • Share this:
ನವದೆಹಲಿ (ಜು.3): ಮೈತ್ರಿ ಸರ್ಕಾರವನ್ನು ಕಾಪಾಡುವಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಿಎಂ ಹೆಚ್​.ಡಿ. ಕುಮಾರಸ್ವಾಮಿ ವಿಫಲರಾಗಿದ್ದಾರೆ ಎಂದು ನವದೆಹಲಿಯಲ್ಲಿ ನ್ಯೂಸ್18ಗೆ ಜೆಡಿಎಸ್​ ಮುಖಂಡ ಹೆಚ್. ವಿಶ್ವನಾಥ್ ಟೀಕಿಸಿದ್ದಾರೆ.

ಮೈತ್ರಿ ಕಾಪಾಡುವಲ್ಲಿ ಸಿಎಂ ಕುಮಾರಸ್ವಾಮಿ ವಿಫಲರಾಗಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಕೂಡ ವಿಫಲರಾಗಿದ್ದಾರೆ. ರಾಜ್ಯ ರಾಜಕಾರಣಕ್ಕೆ ಗ್ರಹಣ ಹಿಡಿದು ವರ್ಷವಾಗಿದೆ. ಮೈತ್ರಿಯಲ್ಲಿ ಹಲವರು ಅಸಮಾಧಾನಗೊಂಡಿದ್ದಾರೆ. ಆದರೆ, ಯಾರೂ ಅತೃಪ್ತರನ್ನು ಸಮಾಧಾನಪಡಿಸುತ್ತಿಲ್ಲ. ಎಲ್ಲ ನಾಯಕರೂ ಜವಾಬ್ದಾರಿಯೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಹುಮತ ಸಾಬೀತುಪಡಿಸಿದರೆ ನಾವೇ ಸರ್ಕಾರವನ್ನು ಬಿಟ್ಟುಕೊಡುತ್ತೇವೆ; ಶೋಭಾ ಕರಂದ್ಲಾಜೆಗೆ ಸಿದ್ದರಾಮಯ್ಯ ಸವಾಲ್​

ಸಮಸ್ಯೆ ಬಗೆಹರಿಸಿಕೊಳ್ಳಲು ಯಾರಿಗೂ ಇಷ್ಟವಿಲ್ಲ. ಮೈತ್ರಿ ನಾಯಕರೆಲ್ಲರೂ ನಿಷ್ಕ್ರಿಯರಾಗಿದ್ದಾರೆ. ಮೈತ್ರಿ ಪಕ್ಷದಲ್ಲೇ ಗೊಂದಲ ನಿರ್ಮಾಣವಾಗಿದೆ. ರಾಷ್ಟ್ರ ಮಟ್ಟದಲ್ಲಿ ನಾವು ನಗೆಪಾಟಲಿಗೀಡಾಗಿದ್ದೇವೆ. ಇದು ರಾಜ್ಯ ರಾಜಕಾರಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಪರೋಕ್ಷವಾಗಿ ಮೈತ್ರಿ ಸರ್ಕಾರ ಪತನದ ಸುಳಿವು ನೀಡಿರುವ ಹೆಚ್​. ವಿಶ್ವನಾಥ್​ ಕಾಂಗ್ರೆಸ್- ಜೆಡಿಎಸ್​ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಕುಮಾರಸ್ವಾಮಿ


ಬಿಜೆಪಿಯಿಂದ ಆಫರ್ ಬಂದಿಲ್ಲ:

ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್​. ವಿಶ್ವನಾಥ್​ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಸಂಸದರೇ ನನ್ನನ್ನು ದೆಹಲಿಗೆ ಆಹ್ವಾನಿಸಿದ್ದರು. ಬಿಜೆಪಿ ಸಂಸದರು ನನ್ನ ಹಳೆಯ ಸ್ನೇಹಿತರು. ಯಾರೂ ನನ್ನನ್ನು ಬಿಜೆಪಿಗೆ ಆಹ್ವಾನಿಸಿಲ್ಲ. ಆದರೆ ಕರ್ನಾಟಕದಲ್ಲಿ ಎಲ್ಲರೂ ಒಂದಾಗಬೇಕು. ರಾಜ್ಯದಲ್ಲಿ ನನ್ನ ಬಿಜೆಪಿ ಸೇರ್ಪಡೆ ಬಗ್ಗೆ ಚರ್ಚೆ ನಡೆಯುತ್ತಿದೆಯೇ ವಿನಃ ಅಭಿವೃದ್ಧಿ ವಿಚಾರ ಚರ್ಚೆ ಆಗುತ್ತಿಲ್ಲ. ಬಿಜೆಪಿಯವರನ್ನು ಭೇಟಿಯಾದರೆ ಬಿಜೆಪಿ ಸೇರುತ್ತೇನೆ ಎಂದು ಅರ್ಥವಲ್ಲ. ಜೆಡಿಎಸ್​ ಬಿಟ್ಟು ಹೋಗುವುದಾದರೆ ಎಲ್ಲರಿಗೂ ತಿಳಿಸಿಯೇ ಹೋಗುತ್ತೇನೆ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.ವರದಿ: ಧರಣೀಶ್​ ಬೂಕನಕೆರೆ
First published:July 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ