ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ (Congress And JDS) ಸಾಂಪ್ರದಾಯಿಕ ಎದುರಾಳಿಗಳು. ಆದ್ರೆ ಈಗ ಬಿಜೆಪಿ ಸಹ ಮಂಡ್ಯದಲ್ಲಿ (Mandya Politics) ಹೆಚ್ಚು ಹೆಚ್ಚು ಆಕ್ಟಿವ್ ಆಗ್ತಿದೆ. ಚುನಾವಣೆ (Assembly Election 2023) ಸಮೀಪಿಸುತ್ತಿರೋ ಹಿನ್ನೆಲೆ ರಾಜಕೀಯ ನಾಯಕರು (Political Leaders) ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಬರುತ್ತಿದ್ದಾರೆ. ಸ್ಥಳೀಯ ಪ್ರಭಾವಿ ಮುಖಂಡರನ್ನು ಸೆಳೆಯುವ ಮೂಲಕ ಮೂರು ಪಕ್ಷಗಳು ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿವೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ದಳಪತಿಗಳಿಗೆ ಶಾಕ್ ನೀಡಿದ್ದಾರೆ. ಕೆಆರ್ ಪೇಟೆಯ (KR Pete) ಜೆಡಿಎಸ್ ಮುಖಂಡ ಬಿ.ಎಲ್.ದೇವರಾಜು (JDS Leader BL Devaraju) ಅವರನ್ನ ಸೆಳೆಯುವಲ್ಲಿ ಕಾಂಗ್ರೆಸ್ (Congress) ಯಶಸ್ವಿಯಾಗಿದೆ. ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ದೇವರಾಜು ಸೇರಿದಂತೆ ಹಲವು ಮುಖಂಡರು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದರು.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಶಿಗ್ಗಾಂವಿ ಕ್ಷೇತ್ರದ ಮಾಜಿ ಸಂಸದರಾದ ಮಂಜುನಾಥ್ ಕುನ್ನೂರು, ಚಿಂತಾಮಣಿಯ ಎಂ.ಸಿ. ಸುಧಾಕರ್ ಹಾಗೂ ಕೆ.ಆರ್ ಪೇಟೆ ಕ್ಷೇತ್ರದ ಜೆಡಿಎಸ್ ಮುಖಂಡರಾದ ಬಿ.ಎಲ್ ದೇವರಾಜು ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಯಾರು ಬಿ.ಎಲ್.ದೇವರಾಜು?
ಜೆಡಿಎಸ್ ಶಾಸಕರಾಗಿದ್ದ ನಾರಾಯಣಗೌಡರು ರಾಜೀನಾಮೆ ನೀಡಿದ್ದರಂದ ಕೆಆರ್ ಪೇಟೆಯಲ್ಲಿ ಉಪ ಚುನಾವನೆ ನಡೆದಿತ್ತು. ಜೆಡಿಎಸ್ನಲ್ಲಿದ್ದ ನಾರಾಯಣಗೌಡರು ಬಿಜೆಪಿ ಸೇರಿ ಕಮಲ ಚಿಹ್ನೆಯ ಅಭ್ಯರ್ಥಿಯಾಗಿದ್ದರು.
ಕೆಪಿಸಿಸಿ ಅಧ್ಯಕ್ಷರಾದ @DKShivakumar, ವಿಪಕ್ಷ ನಾಯಕರಾದ @siddaramaiah
ಅವರ ನೇತೃತ್ವದಲ್ಲಿ ಶಿಗ್ಗಾಂವಿ ಕ್ಷೇತ್ರದ ಮಾಜಿ ಸಂಸದರಾದ ಮಂಜುನಾಥ್ ಕುನ್ನೂರು, ಚಿಂತಾಮಣಿಯ ಎಂ.ಸಿ. ಸುಧಾಕರ್ ಹಾಗೂ ಕೆ.ಆರ್ ಪೇಟೆ ಕ್ಷೇತ್ರದ ಜೆಡಿಎಸ್ ಮುಖಂಡರಾದ ಬಿ.ಎಲ್ ದೇವರಾಜು ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. pic.twitter.com/8631DfpZTX
— Karnataka Congress (@INCKarnataka) March 27, 2023
ಇದನ್ನೂ ಓದಿ: Madal Virupakshappa: ಬಂಧನ ಬಳಿಕ ಎದೆನೋವು ಎಂದು ಹೈಡ್ರಾಮಾ: ಶಾಸಕರ ಮುಂದಿರುವ ಆಯ್ಕೆಗಳೇನು?
ಕಾಂಗ್ರೆಸ್ ಸೇರಲ್ಲ ಎಂದ ನಾರಾಯಣಗೌಡರು
ಇನ್ನು ನಾರಾಯಣಗೌಡರು ಕಾಂಗ್ರೆಸ್ ಸೇರ್ತಾರೆ ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬಂದಿದ್ದವು. ಈ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿರುವ ನಾರಾಯಣಗೌಡರು ಬಿಜೆಪಿ ತೊರೆಯಲ್ಲ ಎಂದು ಹೇಳಿದ್ದಾರೆ. ಈಗ ಬಿಎಲ್ ದೇವರಾಜು ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ