ಅಂಗೈ ಹುಣ್ಣಿಗೆ ಕನ್ನಡಿ ಯಾಕೆ?; ಜಿಟಿಡಿ ಜೆಡಿಎಸ್​ನಲ್ಲಿ ಇರಲ್ಲ; ಬಸವರಾಜ ಹೊರಟ್ಟಿ

ಸಿಎಂ ಬಿಟ್ಟರೆ ಬೇರೆ ಯಾವ ಮಂತ್ರಿಯೂ ಕೆಲಸ ಮಾಡುತ್ತಿಲ್ಲ. ಪ್ರವಾಹ ಪರಿಸ್ಥಿತಿಯಲ್ಲಿ ಮಂತ್ರಿಗಳು ಹಗಲು ರಾತ್ರಿ ಕೆಲಸ ಮಾಡಬೇಕಿತ್ತು. ಆದರೆ ಕೇವಲ ಪ್ರವಾಹ ನೋಡಿ ಬರುವುದು ಮಾಡುತ್ತಿದ್ದಾರೆ.

Latha CG | news18-kannada
Updated:September 13, 2019, 4:09 PM IST
ಅಂಗೈ ಹುಣ್ಣಿಗೆ ಕನ್ನಡಿ ಯಾಕೆ?; ಜಿಟಿಡಿ ಜೆಡಿಎಸ್​ನಲ್ಲಿ ಇರಲ್ಲ; ಬಸವರಾಜ ಹೊರಟ್ಟಿ
ಬಸವರಾಜ​​ ಹೊರಟ್ಟಿ
  • Share this:
ಧಾರವಾಡ(ಸೆ.13): ಜೆಡಿಎಸ್​ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಬಿಜೆಪಿಗೆ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಜಿಟಿಡಿ ಕೂಡ ಮುಂದೆ ರಾಜಕೀಯಲ್ಲಿ ಏನು ಬೇಕಾದರೂ ಆಗಬಹುದು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದರು. ಇಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ​ಜಿಟಿಡಿಗೆ ಮೊದಲಿನಿಂದಲೂ ಪಕ್ಷದ ಬಗ್ಗೆ ಅಸಮಾಧಾನ ಇದೆ. ಅವರು ಜೆಡಿಎಸ್​ನಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ. 

"ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಬೇಕು. ಜಿಟಿಡಿ ಇಲ್ಲಿ ಇರುವುದಿಲ್ಲ ಎನ್ನುವುದು ಅವರ ಮಾತಿನಲ್ಲೇ ಗೊತ್ತಾಗುತ್ತದೆ. ಅವರಿಗೆ ಮೊದಲೇ ಅಸಮಾಧಾನ ಇತ್ತು. ಉಸಿರುಗಟ್ಟುವ ವಾತಾವಾರಣ ಇದೆ ಎಂದು ಹೇಳಿದ್ದರು. ಅದು ನನಗೂ ಸರಿ ಅನಿಸಿತ್ತು. ಹೀಗಾಗಿ ಅವರು ಈ ಪಕ್ಷದಲ್ಲಿ ಇರುವುದಿಲ್ಲ, ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ," ಎಂದರು.

ಮತ್ತೆ ಆಪರೇಷನ್​ ಕಮಲ

ಸರ್ಕಾರ ಇದ್ದಾಗ ನಮ್ಮನ್ನೆಲ್ಲಾ ಸರಿಯಾಗಿ ನೋಡಿಲ್ಲ ಅಂತ ಬಹಳ ಜನ ಶಾಸಕರು ನೋವು ವ್ಯಕ್ತಪಡಿಸಿದ್ದಾರೆ. ನನಗೂ ಸಾಕಷ್ಟು ನೋವಾಗಿದ್ದರೂ ಕೂಡ ನಾನು ಹೇಳಿಕೊಂಡಿಲ್ಲ.  ನಾನು ಒಂದು ಶಿಸ್ತಿನಲ್ಲಿ ಇರುವ ಕಾರಣ ಹೇಳಿಕೊಂಡಿಲ್ಲ. ನನ್ನ ಬಳಿಯೂ ಅನೇಕರು ಮಾತನಾಡಿದ್ದಾರೆ. ಆವಾಗಿನ ಅತೃಪ್ತಿ ಈಗ ಸ್ಪೋಟಗೊಳ್ಳುತ್ತಿದೆ.  ಪಕ್ಷದ ವರಿಷ್ಠರು ಈ ಬಗ್ಗೆ ಅಂಥವರನ್ನೆಲ್ಲ ಕರೆದು ಮಾತನಾಡುವುದು ಅವರ ಧರ್ಮ. ಈಗ  ಒಬ್ಬೊಬ್ಬರು ಹೇಳಿಕೊಳ್ಳುತ್ತಾ ಹೋದರೆ ಪಕ್ಷದ ಭವಿಷ್ಯ ಕಷ್ಟವಾಗುತ್ತದೆ. ಈಗಿನ ಬೆಳವಣಿಗೆ ನೋಡಿದರೆ ಆಪರೇಷನ್ ಕಮಲ ನಡೆಯುತ್ತದೆ ಅನಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಐಎನ್ಎಕ್ಸ್ ಮೀಡಿಯಾ ಪ್ರಕರಣ: ಪಿ. ಚಿದಂಬರಮ್ ಅರ್ಜಿ ವಜಾ; ಸೆ. 19ರವರೆಗೂ ತಿಹಾರ್ ಜೈಲುವಾಸ ಮುಂದುವರಿಕೆ

ಸರ್ಕಾರದಲ್ಲಿ ಅನಾನುಭವಿಗಳೇ ಜಾಸ್ತಿ

ಇದೇ ವೇಳೆ ಹೊರಟ್ಟಿ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಸರ್ಕಾರದಲ್ಲಿ ಅನಾನುಭವಿಗಳೆ ಜಾಸ್ತಿ ಇದ್ದಾರೆ, ಅನುಭವಿಗಳೇ ಇಲ್ಲ. ಮಂತ್ರಿಗಳಾಗಿ ಕೆಲಸ ಮಾಡಬೇಕು. ಕಾನೂನು ಪ್ರಕಾರ ಮಾಡಿದರೆ ಬೇಕಾದ್ದು ಆಗುತ್ತದೆ. ಆದರೆ ಅವರಿಗೆ ಇಚ್ಛಾಸಕ್ತಿ ಕೊರತೆ ಇದೆ, ಅಸಮಾಧಾನಗಳು ಹೆಚ್ಚಿದೆ. ಈ ಹಿನ್ನೆಲೆ ಸಿಎಂ ಬಿಟ್ಟರೆ ಬೇರೆ ಯಾವ ಮಂತ್ರಿಯೂ ಕೆಲಸ ಮಾಡುತ್ತಿಲ್ಲ. ಪ್ರವಾಹ ಪರಿಸ್ಥಿತಿಯಲ್ಲಿ ಮಂತ್ರಿಗಳು ಹಗಲು ರಾತ್ರಿ ಕೆಲಸ ಮಾಡಬೇಕಿತ್ತು. ಆದರೆ ಕೇವಲ ಪ್ರವಾಹ ನೋಡಿ ಬರುವುದು ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಇದೆಯೋ ಇಲ್ಲವೋ ಎನ್ನುವ ಭಾವನೆ ಜನರಲ್ಲಿದೆ. ವಿಧಾನಸಭೆಯಲ್ಲಿ ಯಾರೊಬ್ಬರೂ ಇರುವುದಿಲ್ಲ. ಅಲ್ಲಿಯೂ ಇಲ್ಲ ಜನರ ಬಳಿಯೂ ಇಲ್ಲ ಎಲ್ಲಿಗೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆ ಎಂಬ ಭಾವನೆ‌ ಜನರಲ್ಲಿ ಕಡಿಮೆ ಆಗಿದೆ," ಎಂದು ಟೀಕಿಸಿದರು.ಡಿಕೆಶಿ ಅರೆಸ್ಟ್​ ಮಾಡುವ ಅಗತ್ಯ ಇರಲಿಲ್ಲ

ಡಿಕೆಶಿ ಬಂಧನ ವಿಚಾರವಾಗಿ, ಅದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಅದು ಕಾನೂನು ಕೆಲಸ. ಆದರೆ ಅವರು ಎಂದಿಗೂ ವಿಚಾರಣೆ ತಪ್ಪಿಸಿಲ್ಲ, ಕರೆದಾಗಲೆಲ್ಲ ಹೋಗಿದ್ದಾರೆ. ಹೀಗಾಗಿ ಅವರನ್ನು ಅರೆಸ್ಟ್ ಮಾಡುವ ಅಗತ್ಯ ಇರಲಿಲ್ಲ ಎಂದರು.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading