ರಾಸಲೀಲೆ ಪ್ರಕರಣ: ಸಿ.ಡಿ. ನಕಲಿಯಾದರೆ ಮತ್ತೆ ರಮೇಶ್​​ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಿ; ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಒತ್ತಾಯ

ಓರ್ವ ಜವಾಬ್ದಾರಿಯುತ ಹಿರಿಯ ಸಚಿವರ ರಾಸಲೀಲೆ ಸಿ. ಡಿ ಹಗರಣದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಅದು ಸಣ್ಣ ವಿಷಯ ಅಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ ಸರ್ಕಾರ ಈವರೆಗೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಶೋಕ್ ಪೂಜಾರಿ ಗಂಭೀರ ಆರೋಪ ಮಾಡಿದರು. 

ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ

ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ

  • Share this:
ಚಿಕ್ಕೋಡಿ(ಮಾ.11): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ಈಗಾಗಲೇ ಬಿಜೆಪಿ ಶಾಸಕರು ಸಚಿವರುಗಳು ಹಾಗೂ ಜೆಡಿಎಸ್ ಬ್ಯಾಟಿಂಗ್ ಶುರು ಮಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯೇ ರಮೇಶ್ ಜಾರಕಿಹೋಳಿ ಪರ ಮಾತನಾಡಿದ ಬೆನ್ನಲ್ಲೇ, ಈಗ ಗೋಕಾಕ ಕ್ಷೇತ್ರದಲ್ಲಿ ರಮೇಶ್ ಅವರ ರಾಜಕೀಯ ವಿರೋಧಿ ಅಂತಲೇ ಗುರುತಿಸಿಕೊಂಡಿರುವ ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಕೂಡ ರಮೇಶ್ ಜಾರಕಿಹೋಳಿ ಬೆಂಬಲಕ್ಕೆ ನಿಂತಿದ್ದು ಸಿ. ಡಿ. ನಕಲಿ ಎಂದಾದರೆ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅಶೋಕ್ ಪೂಜಾರಿ, ರಮೇಶ್ ಜಾರಕಿಹೊಳಿ ವಿರುದ್ಧದ ಸಿ. ಡಿ. ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಿ. ಡಿ. ನಕಲಿ ಎನ್ನುವುದಾದರೆ ಅವರನ್ನ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ನಕಲಿ ಸಿ. ಡಿ.ಯಾಗಿದ್ದರೆ ಯಾರು ಅದಕ್ಕೆ ಬಲಿಪಶು ಆಗುವುದು ಬೇಡ. ರಾಜಕಾರಣವೇ ಬೇರೆ, ಇಂತಹ ವಿಷಯಗಳೆ ಬೇರೆ. ಸಿ.ಡಿ. ಬಂದಾಗ ಅವರು ರಾಜೀನಾಮೆ ನೀಡಬೇಕು ಎಂದು ನಾನು ಮೊದಲು ಗೋಕಾಕ್ ನಲ್ಲಿ ಪ್ರತಿಭಟನೆ ನಡೆಸಿದ್ದೆ. ಆದ್ರೆ ಅವರು ಸ್ವತಃ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ.  ಈಗ ರಮೇಶ್ ಜಾರಕಿಹೊಳಿ ಹಾಗೂ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಇದೊಂದು ನಕಲಿ ಸಿ.ಡಿ ಎಂದು ಪದೇ ಪದೇ ಹೇಳುತ್ತಿದ್ದಾರೆ. ಇದೊಂದು ಷಡ್ಯಂತ್ರ ಎನ್ನುವುದಾದರೆ ಕೂಡಲೇ ತನಿಖೆ ಆಗಬೇಕು ಎಂದಿದ್ದಾರೆ.

ಕಾರು ಕಳ್ಳತನದ ನಂತರ ತೆಗೆದುಕೊಳ್ಳಬೇಕಾದ ಕ್ರಮಗಳು ಯಾವುವು..? ಇಲ್ಲಿದೆ ವಿವರ

ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ:

ಓರ್ವ ಜವಾಬ್ದಾರಿಯುತ ಹಿರಿಯ ಸಚಿವರ ರಾಸಲೀಲೆ ಸಿ. ಡಿ ಹಗರಣದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಅದು ಸಣ್ಣ ವಿಷಯ ಅಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೆ ಸರ್ಕಾರ ಈವರೆಗೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಶೋಕ್ ಪೂಜಾರಿ ಗಂಭೀರ ಆರೋಪ ಮಾಡಿದರು. ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಸಂಪೂರ್ಣವಾಗಿ ಇದು ಫೇಕ್ ವಿಡಿಯೋ ಇದೆ ಎಂದು ಹೇಳುತ್ತಿದ್ದಾರೆ. ಇದು ನಕಲಿ ವಿಡಿಯೋ ಆಗಿತ್ತು ಎಂದಾದ್ರೆ ಸಕಾರಣ ಇಲ್ಲದೇ ಓರ್ವ ಸಚಿವ ಬಲಿಪಶು ಆಗಿದ್ದಾರೆ. ಆದ್ದರಿಂದ ಈ ಎಲ್ಲಾ ಹೇಳಿಕೆಗಳಲ್ಲಿ ಗೊಂದಲವಿದೆ. ಸಿ. ಡಿ ಫೇಕ್, ಹನಿಟ್ರ್ಯಾಪ್ ಎಂಬ ಆರೋಪವಿದೆ.

ಅದೇ ರೀತಿ ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿ ಅಭಿಪ್ರಾಯಗಳು ಆಗುತ್ತಿವೆ. ಈ ಎಲ್ಲದಕ್ಕೂ ತೆರೆ ಎಳೆಯುವ ಕೆಲಸವನ್ನು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಶೀಘ್ರವೆ ಮಾಡಬೇಕು. ರಮೇಶ ಜಾರಕಿಹೊಳಿ ಸಿ. ಡಿ ಕೇಸ್‍ನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಶೋಕ್ ಪೂಜಾರಿ ಆರೋಪಿಸಿದ್ದಾರೆ.

ಮಾರ್ಚ್​ 22 ರಂದು ಧರಣಿ:

ಇನ್ನು ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಛೇರಿಗಳನ್ನ ಸ್ಥಳಾಂತರ ಮಾಡಬೇಕು ಎನ್ನುವುದು ಈ ಭಾಗದ ಜನರ ಬೇಡಿಕೆಯಾಗಿದೆ. ಮುಖ್ಯ ಮಂತ್ರಿ ಬಜೆಟ್ ನಲ್ಲಿ ಇದನ್ನು ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷೆ ಇತ್ತು. ಆದ್ರೆ ಅದು ಆಗಿಲ್ಲ.‌ ಇನ್ನು ಎಂಟು ದಿನಗಳಲ್ಲಿ ಸರ್ಕಾರ ಕಛೇರಿ ಸ್ಥಳಾಂತರ ನಿರ್ಣಯ ಕೈಗೊಳ್ಳದಿದ್ದರೆ ಮಾರ್ಚ್​​ 22 ರಂದು ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
Published by:Latha CG
First published: