ಬೆಂಗಳೂರು (ಜೂ. 11): ರಾಜ್ಯಸಭೆ ಚುನಾವಣೆಯಲ್ಲಿ (Rajya Sabhe Election) ಅಡ್ಡ ಮತದಾನ ಮಾಡಿದ ಇಬ್ಬರು ಶಾಸಕರಿಗೆ (Legislators) ನೋಟಿಸ್ (Notice) ನೀಡಿದ್ದೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೇಳಿದ್ದಾರೆ. ಜೆಡಿಎಸ್ ಕಚೇರಿ (JDS Office) ಜೆಪಿ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬರು ಕಾಂಗ್ರೆಸ್‌ಗೆ (Congress) ಮೊದಲ ಪ್ರಾಶಸ್ತ್ಯದ ಮತ ನೀಡಿ ಬಿಜೆಪಿಗೆ ಎರಡನೇ ಪ್ರಾಶಸ್ತ್ಯದ ಮತ ಕೊಟ್ಟಿದ್ದಾರೆ. ಮತ್ತೊಬ್ಬರು ಬಿಜೆಪಿಗೆ ಮೊದಲ ಪ್ರಾಶಸ್ತ್ಯದ ಮತ ಕೊಟ್ಟು ಕಾಂಗ್ರೆಸ್‌ಗೆ ಎರಡನೇ ಪ್ರಾಶಸ್ತ್ಯ ಹಾಕಿದ್ದಾರೆ ಎಂದು ತಿಳಿಸಿದರು.
ಎಲ್ಲಾ ಡೀಲ್.. ಡೀಲ್.. ಡೀಲ್..
ಕಾಂಗ್ರೆಸ್ ನವರು ಡೀಲ್ ಮಾಡಿದ್ದಾರೆ. ಬಿಎಸ್ ವೈ, ಕಾಂಗ್ರೆಸ್ ಇದರಲ್ಲಿ ಇನ್ವಾಲ್ ಆಗಿದ್ದಾರೆ. ಅವರ ಜಾತ್ಯಾತೀತ ಅಂತಾರೆ ಬಣ್ಣ ಬಯಲಾಗಿದೆ. ಸಿಟಿ ರವಿ ನಿನ್ನೆ ಕಾಂಗ್ರೆಸ್ ಆಫೀಸ್ ಗೆ ಹೋಗಿ ಧನ್ಯವಾದ ಹೇಳ್ತಾರೆ. ಸುರ್ಜೇವಾಲಾ ಆ ವಾಲಾ ಈ ವಾಲಾಗಳು ಹೇಳ್ತಾರಲಾ. ಯಾವ ಮುಖ ಇಟ್ಟುಕೊಂಡು ಮಾತಾಡ್ತಾರೆ.
ಮನ್ಸೂರ್ ಖಾನ್ ಸೋಲಿಸಿದ್ರಲ್ಲಾ ಏನು ಲಾಭ ಬಂತು
ಮನ್ಸೂರ್ ಖಾನ್ ನಿಲ್ಲಿಸಿ ಹೀಗೆ ಸೋಲಿಸಿದ್ರಲ್ಲಾ ನಿಮಗೆ ಏನು ಲಾಭ ಬಂತು. ಸೆಕೆಂಡ್ ಪ್ರಿಫರೆನ್ಸ್ ಮತ ಹಾಕಿದ್ರು ನಾವು ಗೆಲ್ತಾ ಇದ್ವಿ. ಈ ಚುನಾವಣೆಯಲ್ಲಿ ನೂರಾರು ಕೋಟಿ ವ್ಯವಹಾರ ನಡೆದಿದೆ. ಅಡ್ಡ ಮತದಾನ ಮಾಡಿದ ಇಬ್ಬರು ಶಾಸಕರನ್ನು ಪಕ್ಷದಿಂದ ಹೊರ ಹಾಕ್ತೀವಿ. ಅವರಿಗೆ ಉಚ್ಚಾಟನೆ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇವೆ. ಇದರ ಜೊತೆಗೆ ನಾಳೆ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ಮಾಡ್ತೀವಿ ಎಂದು ಸಿ.ಎಂ ಇಬ್ರಾಹಿಂ ಹೇಳಿದ್ರು.
ಇದನ್ನೂ ಓದಿ: Gubbi Srinivas: ರಾಜೀನಾಮೆ ಕೇಳೋಕೆ ಅವನ್ಯಾರು; H.D ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶ್ರೀನಿವಾಸ್ ವಾಗ್ದಾಳಿ
ಸಿಎಂ ಇಬ್ರಾಹಿಂ ತೀವ್ರ ವಾಗ್ದಾಳಿ
ಎರಡು ಬ್ಯಾಲೆಟ್ ಪೇಪರ್ ಕುರಿತಾಗಿ ಅಲ್ಲಿ ಕೂತಿದ್ದ ಏಜೆಂಟರು ರಿಪೋರ್ಟ್ ಮಾಡಿದ್ದಾರೆ. ಎಂತಹ ದುರ್ದೈವ ಇದು, ಕೋಮುವಾದಿಗಳನ್ನು ಸೋಲಿಸಬೇಕು ಅಂತ ರಾಷ್ಟ್ರಮಟ್ಟದಲ್ಲಿ ಮಾತನಾಡುವ ಪಕ್ಷ ಇವತ್ತು ಬಿಜೆಪಿ ಗೆಲ್ಲಿಸಬೇಕು ಅಂತ ಮಾಡಿಕೊಂಡಿರುವ ಡೀಲ್ ರಾಜ್ಯದ ಜನತೆ ಮುಂದೆ ನಗ್ನ ಸತ್ಯವಾಗಿದೆ ಎಂದು ಸಿಎಂ ಇಬ್ರಾಹಿಂ ತೀವ್ರ ವಾಗ್ದಾಳಿ ನಡೆಸಿದರು.
ಶ್ರೀನಿವಾಸ್ ಗೌಡ, ಗುಬ್ಬಿ ಶ್ರೀನಿವಾಸರಿಂದ ಅಡ್ಡಮತದಾನ
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಶಾಸಕರಾದ ಶ್ರೀನಿವಾಸ್ ಗೌಡ ಹಾಗೂ ಗುಬ್ಬಿ ಶ್ರೀನಿವಾಸ್ ಅವರು ಅಡ್ಡ ಮತದಾನ ಮಾಡಿದ್ದಾರೆ. ಶ್ರೀನಿವಾಸ್ ಗೌಡ ಕಾಂಗ್ರೆಸ್‌ಗೆ ಮತ ಹಾಕಿದರೆ, ಗುಬ್ಬಿ ಶ್ರೀನಿವಾಸ್ ಬಿಜೆಪಿಗೆ ಹಾಕಿದ್ದಾರೆ.
ದೊಡ್ಡ ಶಕ್ತಿಯಾಗಿ ಜೆಡಿಎಸ್ ಹೊರ ಹೊಮ್ಮಲಿದೆ
2023ರ ವಿಧಾನಸಭೆ ಚುನಾವಣೆಯಲ್ಲಿ ಜನ ನಮಗೆ ಮತ ಹಾಕುತ್ತಾರೆ. ದೊಡ್ಡ ಶಕ್ತಿಯಾಗಿ ಜೆಡಿಎಸ್ ಹೊರ ಹೊಮ್ಮಲಿದೆ. 30 ಜನರನ್ನು ನಾವು ಇಟ್ಟುಕೊಂಡಿದ್ದೇವೆ. ಬಡತನದ ಪಾರ್ಟಿ ಇದು. ಆದರೂ ನಮಗೆ ಗೌರವ ಇದೆ. ಪ್ರಜಾಪ್ರಭುತ್ವದ ಸಿದ್ದಾಂತವನ್ನು ನಮ್ಮ ಶಾಸಕರು ಎತ್ತಿ ಹಿಡಿದಿದ್ದಾರೆ. ಅಲ್ಪ ಸಂಖ್ಯಾತರಿಗೆ ಗೊತ್ತಾಗಿದೆ. ನನ್ನನ್ನು ಪಕ್ಷದ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಅಲ್ಪಸಂಖ್ಯಾತ, ರೈತರ ಮಕ್ಕಳಿಗೆ ಜೆಡಿಎಸ್ ಏನು ಮಾಡ್ತಾ ಇದೆ ಎಂದು ಜನರಿಗೆ ಗೊತ್ತಾಗಿದೆ ಎಂದರು.
ಇದನ್ನೂ ಓದಿ: BMTC ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್; ಶೇ.35ರಷ್ಟು ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ
ನೀವು ಮಾಡಿದ ಕೆಲಸ ಒಳ್ಳೆದಲ್ಲ
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಇಬ್ರಾಹಿಂ, ಸಿದ್ದರಾಮಯ್ಯ ಮಾತನಾಡದೇ ಇರುವುದು ಒಳ್ಳೆಯದು. ನೀವು ಮಾಡಿದ ಕೆಲಸ ಒಳ್ಳೆದಲ್ಲ. ಜನರ ಮುಂದೆ ಬೆತ್ತಲೆ ಆಗಿದ್ದೀರಾ. ಎರಡನೇ ಪ್ರಾಶಸ್ತ್ಯದ ಮತ ಹಾಕುವುದಕ್ಕೆ ಏನಾಗಿತ್ತು? ಶ್ರೀನಿವಾಸ್ ಗೌಡರನ್ನು ಯಾಕೆ ಕರೆದುಕೊಂಡು ಹೋದರು ಎಂದು ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ