HOME » NEWS » State » JDS GAVE KARNATAKA LEGISLATIVE COUNCIL TICKET GIVEN TO BUSINESSMEN GOVINDARAJU RMD

ವರಿಷ್ಠರಿಗಾಗಿ ಸ್ಥಾನ ತೊರೆದಿದ್ದವರ ಮರೆತು ಉದ್ಯಮಿಗೆ ಮಣೆ ಹಾಕಿದ ಜೆಡಿಎಸ್; ಗೋವಿಂದರಾಜು​ಗೆ ಪರಿಷತ್​ ಟಿಕೆಟ್

ಎಚ್​​ಡಿ ದೇವೇಗೌಡರಿಗಾಗಿ ರಾಜ್ಯಸಭೆ ಸ್ಥಾನವನ್ನು ಕುಪೇಂದ್ರ ರೆಡ್ಡಿ ಬಿಟ್ಟುಕೊಟ್ಟಿದ್ದರು. ಈ ವೇಳೆ ಅವರಿಗೆ ವಿಧಾನಪರಿಷತ್ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು ಎನ್ನಲಾಗಿದೆ. ಆದರೆ, ಈಗ ಭರವಸೆ ಹುಸಿಯಾಗಿದೆ.

news18-kannada
Updated:June 18, 2020, 9:48 AM IST
ವರಿಷ್ಠರಿಗಾಗಿ ಸ್ಥಾನ ತೊರೆದಿದ್ದವರ ಮರೆತು ಉದ್ಯಮಿಗೆ ಮಣೆ ಹಾಕಿದ ಜೆಡಿಎಸ್; ಗೋವಿಂದರಾಜು​ಗೆ ಪರಿಷತ್​ ಟಿಕೆಟ್
ಗೋವಿಂದರಾಜು
  • Share this:
ಕೋಲಾರ (ಜೂ.18): ಪರಿಷತ್ ಸ್ಥಾನದ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಭಿನ್ನ ನಿಲುವು ತಾಳಿದೆ. ಸ್ಥಾನ ತೊರೆದಿದ್ದವರನ್ನು ಮರೆತು ಉದ್ಯಮಿ ಗೋವಿಂದ ರಾಜುಗೆ ಟಿಕೇಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದೆ.

ಗೋವಿಂದ ರಾಜು, ಕೋಲಾರ ಮೂಲದ ಉದ್ಯಮಿ. ನಿನ್ನೆ ತಡರಾತ್ರಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರನ್ನು ಗೋವಿಂದ ರಾಜು ಭೇಟಿಯಾಗಿದ್ದರು. ಈ ವೇಳೆ ಟಿಕೆಟ್ ಪಡೆಯಲು ಅವರು ಯಶಸ್ವಿಯಾಗಿದ್ದಾರೆ. ಈ ಮೂಲಕ ಟಿಕೆಟ್ ಆಕಾಂಕ್ಷಿಗಳಾಗಿದ್ದ ಕುಪೇಂದ್ರ ರೆಡ್ಡಿ ಹಾಗೂ ಶರವಣಗೆ ಅವಕಾಶ ತಪ್ಪಿದೆ.

ಎಚ್​​ಡಿ ದೇವೇಗೌಡರಿಗಾಗಿ ರಾಜ್ಯಸಭೆ ಸ್ಥಾನವನ್ನು ಕುಪೇಂದ್ರ ರೆಡ್ಡಿ ಬಿಟ್ಟುಕೊಟ್ಟಿದ್ದರು. ಈ ವೇಳೆ ಅವರಿಗೆ ವಿಧಾನಪರಿಷತ್ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು ಎನ್ನಲಾಗಿದೆ. ಆದರೆ, ಈಗ ಭರವಸೆ ಹುಸಿಯಾಗಿದೆ.
ಜೆಡಿಎಸ್ ವರಿಷ್ಠರ ನಡೆಯಿಂದ ಕುಪೇಂದ್ರ ರೆಡ್ಡಿ ಅಸಮಾಧಾನಗೊಂಡಿದ್ದಾರೆ.

ಇದನ್ನೂ ಓದಿ: ಪರಿಷತ್ ಫೈಟ್: ಜೆಡಿಎಸ್​ನಿಂದ ಗೋವಿಂದರಾಜು ಅಭ್ಯರ್ಥಿ? ನಿನ್ನೆಯಷ್ಟೇ ಪಕ್ಷದ ಸದಸ್ಯತ್ವ ಪಡೆದ ಇವರು ಯಾರು?

'ತಮ್ಮ ರಾಜ್ಯಸಭೆ ಸ್ಥಾನವನ್ನು ದೇವೇಗೌಡರಿಗೆ ಬಿಟ್ಟುಕೊಟ್ಟಿದ್ದೇನೆ. ಆದರೆ ತನಗೆ ಪರಿಷತ್ ಟಿಕೇಟ್ ಕೊಟ್ಟಿಲ್ಲ,' ಎಂದು ಕಿಡಿಕಾರಿದ್ದಾರೆ. ಇನ್ನು, ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಸಂಬಂಧಿಸಿ ಶರವಣ ಕೂಡ ಸಿಟ್ಟಾಗಿದ್ದಾರೆ.

'ರಾಜ್ಯಸಭಾ ಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನೀಡಿದ ಕುಪೇಂದ್ರ ರೆಡ್ಡಿ, ನಮ್ಮ ರಾಜ್ಯದ ಧ್ವನಿಯಾಗಿ ದೇವೇಗೌಡರು ರಾಜ್ಯಸಭೆಗೆ ಹೊಗಬೇಕೆಂಬುದು ನನ್ನ ಆಶಯ. ಒಂದು ವೇಳೆ ದೇವೇಗೌಡರು ರಾಜ್ಯಸಭೆಗೆ ಹೋಗಲು ಒಪ್ಪಿದರೆ, ನಾನು ತ್ಯಾಗ ಮಾಡಲು ಸಿದ್ದನಿದ್ದೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ, ಎಂದು ಕುಪೇಂದ್ರ ರೆಡ್ಡಿ ಹೇಳಿದ್ದರು. ಅಂತೆಯೇ ಅವರು ಸ್ಥಾನವನ್ನು ದೇವೇಗೌಡರಿಗೆ ಬಿಟ್ಟುಕೊಟ್ಟಿದ್ದರು.
Youtube Video

ಯಾರು ಈ ಗೋವಿಂದ ರಾಜು?:

ಕೋಲಾರ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಪಾಸ್ತಿ ಹೊಂದಿರುವ ಗೋವಿಂದರಾಜು ಪ್ರಸ್ತುತ ಉದ್ಯಮಿಯಾಗಿದ್ದಾರೆ. ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದ ಬೆನ್ನೆಲುಬಾಗಿ ಇದ್ದುಕೊಂಡು, ಪಕ್ಷದ ಮುನ್ನೆಲೆಗೆ ಬಾರದೆ, ಕಾರ್ಯಕರ್ತನೂ ಆಗದೆ ಸಲಹೆ ಸೂಚನೆ, ಹಾಗು‌ ಆರ್ಥಿಕವಾಗಿ ಜಿಲ್ಲೆಯಲ್ಲಿ ಎಲ್ಲಾ ಮುಖಂಡರಿಗೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಹೀಗೆ ಪಕ್ಷದ ಅಭಿವೃದ್ಧಿಗೆ ಶ್ರಮಿಸಿ ವರಿಷ್ಠರ ಕಡೆಯಿಂದಲೂ ವಿಶ್ವಾಸ ಗಿಟ್ಟಿಸಿಕೊಂಡಿದ್ದಾರೆ. ಅದಕ್ಕೆ ಬಯಸದೇ ಇದ್ದರೂ ಕರೆದು ಟಿಕೆಟ್ ಕೊಡಲಾಗಿದೆ.
First published: June 18, 2020, 9:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories