Kolara: JDS ಬಿಟ್ಟು BJP ಸೇರ್ತಾರಾ ಮಾಜಿ ಶಾಸಕ ವೆಂಕಟಶಿವಾರೆಡ್ಡಿ?

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇತ್ತೀಚೆಗೆ ನೀಡಿರುವ ಕಾಂಗ್ರೆಸ್ ಎರಡು ತಲೆಮಾರಿನ ಋಣ ಸಂದಾಯ ಹೇಳಿಕೆಯನ್ನ ಆಧರಿಸಿ, ಅವರ ವಿರುದ್ದ ತನಿಖೆಗೆ ಸಚಿವ ಸುಧಾಕರ್ ಆಗ್ರಹಿಸಿದ್ದು, ರಮೇಶ್ ಕುಮಾರ್ ಮಾಡಿರುವ ಆಸ್ತಿಯ ಕುರಿತ ವಿಚಾರಣೆ ನಡೆಸುವಂತೆ ಸಚಿವ ಸುಧಾಕರ್ ಆಗ್ರಹಿಸಿದ್ದಾರೆ.

ಮುಳಬಾಗಿಲಿನಲ್ಲಿ ಸಚಿವ ಸುಧಾಕರ್

ಮುಳಬಾಗಿಲಿನಲ್ಲಿ ಸಚಿವ ಸುಧಾಕರ್

  • Share this:
ಕೋಲಾರ(ಜು.26): ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ (State Govt) ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆ ಇದೇ ತಿಂಗಳ 28 ರಂದು ಹಮ್ಮಿಕೊಂಡಿರುವ ಜನೋತ್ಸವ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಕೋಲಾರದಿಂದ (Kolara) ಜನರನ್ನ ಸೇರಿಸಲು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಹಾಗು ಮುಳಬಾಗಿಲು ಪಟ್ಟಣದಲ್ಲಿ ಜನೋತ್ಸವ ಸಮಾವೇಶದ ಪೂರ್ವಭಾವಿ ಸಭೆಯನ್ನ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಸಚಿವ ಡಾಕ್ಟರ್ ಸುಧಾಕರ್, ಪರಿಷತ್ ಮುಕ್ಯ ಸಚೇತಕ ವೈಎ ನಾರಾಯಣಸ್ವಾಮಿ,  ಮಾಜಿ ಶಾಸಕರಾದ (Former MLA) ವರ್ತೂರು ಪ್ರಕಾಸ್, ಸಂಪಂಗಿ, ಎಂ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ್ಯ ವೇಣುಗೋಪಾಲ್ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು , ಕಾರ್ಯಕರ್ತರು ಭಾಗಿಯಾಗಿದ್ದರು, ಮುಳಬಾಗಿಲು ಪಟ್ಟಣಕ್ಕೆ ಸಚಿವ ಸುಧಾಕರ್ ಆಗಮಿಸಿದ ವೇಳೆ ಮುಳಬಾಗಿಲು ಬಿಜೆಪಿ ನಾಯಕರು (BJP Leaders) ಅದ್ದೂರಿಯಾಗಿ ಸ್ವಾಗತಿಸಿ, ಸನ್ಮಾನಿಸಿದರು.

ಕಾರ್ಯಕ್ರಮ ನಂತರ ಮಾತನಾಡಿದ ವಿಧಾನಪರಿಷತ್ ಮುಖ್ಯ ಸಚೇತಕ, ಶಾಸಕ ವೈಎ ನಾರಾಯಣಸ್ವಾಮಿ, ಒಕ್ಕಲಿಗ ಸಮುದಾಯವನ್ನ ಅವಹೇಳ ಮಾಡದಂತೆ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಗೆ, ವೈ ಎ ನಾರಾಯಣಸ್ವಾಮಿ ಎಚ್ಚರಿಕೆ ಸಂದೇಶ ರವಾನಿಸಿದರು.

ಒಕ್ಕಲಿಗ ಸಮುದಾಯದ ಬಗ್ಗೆ ಕೆಟ್ಟದಾಗಿ ಜಮೀರ್ ಅಹಮದ್ ಮಾತನಾಡಿದ್ದಾರೆ. ಆವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು, ಜಮೀರ್ ಅಹಮದ್ ಇತಿಹಾಸ ಎಲ್ಲರಿಗೂ ಗೊತ್ತಿದೆ. ಒಕ್ಕಲಿಗ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆಯನ್ನ ವಾಪಾಸ್ ಪಡೆದು, ಕೂಡಲೇ ಕ್ಷಮೆಯಾಚನೆ ಮಾಡಬೇಕೆಂದು ವೈಎ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಬಿಜೆಪಿ ಸೇರ್ತಾರಾ ಮಾಜಿ ಶಾಸಕ ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ಆಯೋಜಿಸಿದ್ದ ಬಿಜೆಪಿ ಪೂರ್ವಭಾವಿ ಸಭೆಗೆ ಆಗಮಿಸಿದ ಸಚಿವ ಸುಧಾಕರ್ ರಿಗೆ, ಶ್ರೀನಿವಾಸಪುರ ಪಟ್ಟಣದ ಇಂದಿರಾ ಭವನ ವೃತ್ತದಲ್ಲಿ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಅದ್ದೂರಿಯಾಗಿ ಸ್ವಾಗತ ಕೋರಿದರು, ಜೆಡಿಎಸ್ ಜಿಲ್ಲಾಧ್ಯಕ್ಷ್ಯರಾಗಿ ವೆಂಕಟಶಿವಾರೆಡ್ಡಿ, ಶ್ರೀನಿವಾಸಪುರ ಜೆಡಿಎಸ್ ಅಭ್ಯರ್ಥಿಯೂ ಆಗಿದ್ದಾರೆ. ಆದರೆ ಸಚಿವ ಸುಧಾಕರ್ ಆಗಮಿಸಿದ ವೇಳೆ ಆತ್ಮೀಯವಾಗಿ ಬರಮಾಡಿಕೊಂಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಜೆಡಿಎಸ್ ಗೆ ಗುಡ್ ಬೈ ಹೇಳಿ, ಬಿಜೆಪಿ ಸೇರ್ತಾರಾ ಎನ್ನುವ ಚರ್ಚೆಗಳು ಆರಂಭವಾಗಿದೆ.

ಇಬ್ಬರ ಭೇಟಿಯನ್ನ ಅಸ್ತ್ರವಾಗಿಸಿಕೊಂಡಿರೊ ಕಾಂಗ್ರೆಸ್ ಕಾರ್ಯಕರ್ತರು, ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ರೀತಿಯಲ್ಲಿ ಪೋಸ್ಟ್ ಮಾಡಿದ್ದು, ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಂ ಹಾಗು ಶ್ರೀನಿವಾಸಪುರದಲ್ಲಿ ಎರಡೂ ಪಕ್ಷಗಳು ವಿಲೀನವಾಗಿದೆ ಎಂದು ಟೀಕಿಸಿದ್ದಾರೆ. ಈ ಭಾರಿ ರಮೇಶ್ ಕುಮಾರ್ ಸೋಲಿಸಲು ಸಚಿವ ಸುಧಾಕರ್ ಸಹ ಪಣತೊಟ್ಟಿದ್ದು ಚುನಾವಣೆಯ ವೇಳೆಯಲ್ಲಿ ವೆಂಕಟಶಿವಾರೆಡ್ಡಿ ನಡೆಯ ಬಗ್ಗೆಯೂ ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Karnataka Weather Report: ನಿಮ್ಮ ಜಿಲ್ಲೆಯಲ್ಲಿಂದು ಮಳೆಯಾಗುತ್ತಾ? ಇಲ್ಲಿದೆ ಇವತ್ತಿನ ಹವಾಮಾನ ವರದಿ

ಈ ಬಗ್ಗೆ ಜೆಡಿಎಸ್ ನ ಕಾರ್ಯರ್ತರು ಪ್ರತಿಕ್ರಿಯೆ ನೀಡಿದ್ದು, ಸಚಿವ ಸುಧಾಕರ್ ಹಾಗು ವೆಂಕಟಶಿವಾರೆಡ್ಡಿ ಮಧ್ಯೆ ರಾಜಕೀಯೇತರ ಒಡನಾಟ ಇದ್ದು, ಶ್ರೀನಿವಾಸಪುರ ಪಟ್ಟಣಕ್ಕೆ ಆಗಮಿಸಿದ ಹಿನ್ನಲೆ ಸ್ವಾಗತಿಸಿದ್ದಾರೆ, ವೆಂಕಟಶಿವಾರೆಡ್ಡಿ ಜೆಡಿಎಸ್ ತೊರೆಯುವ ಮಾತಿಲ್ಲ, ಸೋಲಿನ ಭೀತಿಯಿಂದ ಕಾಂಗ್ರೆಸ್ ಕಾರ್ಯಕರ್ತರೇ ಅಪಪ್ರಚಾರ ಮಾಡ್ತಿದ್ದಾರೆಂದು ಪ್ರತಿಕ್ರಿಯೆ ನೀಡಿದ್ದಾರೆ.

ರಮೇಶ್ ಕುಮಾರ್ ಹೇಳಿಕೆ ಆಧರಿಸಿ ತನಿಖೆ ನಡೆಸುವಂತೆ ಸಚಿವ ಸುಧಾಕರ್ ಆಗ್ರಹ

ಶ್ರೀನಿವಾಸಪುರ ಬಿಜೆಪಿ ಸಭೆಯಲ್ಲಿ   ಮಾತನಾಡಿದ ಸಚಿವ ಸುಧಾಕರ್,  ಮಾಜಿ ಸ್ಪೀಕರ್  ರಮೇಶ್ ಕುಮಾರ್ ವಿರುದ್ದ  ವಾಗ್ದಾಳಿ ನಡೆಸಿದರು.  ಶ್ರೀನಿವಾಸಪುರ ದಲ್ಲಿ ಸಾಡೇ ಸಾಥ್ ಶನಿ ಅವಧಿ ನಡೆಯುತ್ತಿದೆ,  ಮುಂದೆ ಶನಿ ತೊಲಗಿ ಒಳ್ಳೆಯ ಕಾಲ ಬರಲಿದೆ.  ಈ ಕ್ಷೇತ್ರದಲ್ಲಿನ ಶಾಸಕರು ಹೇಳುವುದೊಂದು ಮಾಡೊದೊಂದು ಮತ್ತೊಂದು.

ಇದನ್ನೂ ಓದಿ: ಸಿದ್ಧರಾಮೋತ್ಸವ ಪೂರ್ವಭಾವಿ ಸಭೆಗೆ ಕೈ ಶಾಸಕ ಗೈರು! ಪ್ರಸಾದ್‌ ಅಬ್ಬಯ್ಯ ವಿರುದ್ಧ ಜಮೀರ್ ಗುಡುಗು

ಇಂತಹ ವ್ಯಕ್ತಿಯನ್ನ ನನ್ನ ಜೀವಮಾನದಲ್ಲಿ  ನೋಡಿಲ್ಲ, ಮುಂಬರುವ ಚುನಾವಣೆಯಲ್ಲಿ ರಮೇಶ್ ಕುಮಾರ್ ಸೋಲು ಖಚಿತ,  ಕಾಂಗ್ರೆಸ್ ಪಕ್ಷದ ತಲೆಮಾರಿನ ಭ್ರಷ್ಟಾಚಾರವನ್ನ ಇತ್ತೀಚೆಗೆ ರಮೇಶ್ ಕುಮಾರ್ ಹೇಳಿದ್ದರು, ಹಾಗಾಗಿ  ರಮೇಶ್ ಕುಮಾರ್ ಹೇಳಿಕೆ ಆಧರಿಸಿ ತನಿಖೆ ನಡೆಸಬೇಕು, ಜೊತೆಗೆ ರಮೇಶ್ ಕುಮಾರ್ ಎಷ್ಟು ತಲೆಮಾರಿಗೆ ಆಗುವಷ್ಟು ಗಳಿಸಿದ್ದಾರೆ ಅದನ್ನು ತನಿಖೆ ನಡೆಸುವಂತೆ  ಒತ್ತಾಯಿಸಿದರು.
Published by:Divya D
First published: