ತೀರ್ಥಹಳ್ಳಿಯಲ್ಲಿ ಜೆಡಿಎಸ್​ನಿಂದ ಹಣ ಹೆಂಡದ ರಾಜಕಾರಣ!: ದುರಂತ ರಾಜಕೀಯಕ್ಕೆ ಸಾಕ್ಷಿಯಾದ ದೃಶ್ಯಗಳು


Updated:February 13, 2018, 1:26 PM IST
ತೀರ್ಥಹಳ್ಳಿಯಲ್ಲಿ ಜೆಡಿಎಸ್​ನಿಂದ ಹಣ ಹೆಂಡದ ರಾಜಕಾರಣ!: ದುರಂತ ರಾಜಕೀಯಕ್ಕೆ ಸಾಕ್ಷಿಯಾದ ದೃಶ್ಯಗಳು

Updated: February 13, 2018, 1:26 PM IST
-ಚಿದಾನಂದ ಪಟೇಲ್, ನ್ಯೂಸ್ 18 ಕನ್ನಡ

ಶಿವಮೊಗ್ಗ(ಫೆ.13): ರಾಜ್ಯದಲ್ಲಿ ಜೆ.ಡಿ.ಎಸ್ ತನ್ನದೇ ಆದ ಒಂದು ಸಂಘಟನೆಯನ್ನ ಹೊಂದಿದೆ. ರಾಜ್ಯದಲ್ಲಿನ ಏಕೈಕ ಪ್ರಧಾನ ಮಂತ್ರಿಯನ್ನ ನೀಡಿದ ಪಕ್ಷ. ಆದರೀಗ ತೀರ್ಥಹಳ್ಳಿಯಂತ ಸುಸಂಸ್ಕೃತರ ಕ್ಷೇತ್ರದಲ್ಲಿ ಹಣ ಹೆಂಡದ ಭಲದಿಂದ ರಾಜಕಾರಣ ಮಾಡುವ ಕೆಲಸಕ್ಕಿಳಿದಿದೆ. ಇದಕ್ಕೆ ಸಾಕ್ಷಿಯಾಗಿದ್ದು, ಕಾಂಗ್ರೆಸ್​ನಿಂದ ಜೆಡಿಎಸ್​ಗೆ ಪಕ್ಷಾಂತರ ಮಾಡಿದ್ದ ಮಂಜುನಾಥ್ ಗೌಡ ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ಸಮಾವೇಶ ಬಳಿಕದ ಎಣ್ಣೆ ದುಡ್ಡಿನ ಪಾರ್ಟಿ.

ಕಳೆದ ಚುನಾವಣೆಯಲ್ಲಿ ಅತ್ಯಂತ ಪ್ರಬಲವಾದ ಪೈಪೋಟಿ ನೀಡಿದ್ದನ್ನೂ ಅಭ್ಯರ್ಥಿಯನ್ನು ಮರೆತ ಜೆಡಿಎಸ್ ಪಕ್ಷದ ಹಿರಿಯ ನಾಯಕರು ಬರಿ ಹಣದಾಸೆಗೆ ರೈತರ ದುಡ್ಡನ್ನ ಲಪಟಾಯಿಸಿದ ಮಂಜುನಾಥ್ ಗೌಡ ಅವರನ್ನು ಈ ಬಾರಿ ಅಭ್ಯರ್ಥಿಯನ್ನಾಗಿಸಿ ಪ್ರಚಾರಕಾರ್ಯ ಪ್ರಾರಂಭಿಸಿದೆ. ಇತ್ತೀಚೆಗಷ್ಟೇಮಂಜುನಾಥ್ ಗೌಡ ತೀರ್ಥಹಳ್ಳಿಯಲ್ಲಿ ಜೆಡಿಎಸ್ ಸಮಾವೇಶವನ್ನು ಆಯೋಜಿಸಿದ್ದರು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಆದರೆ ಮಂಜುನಾಥ್ ಗೌಡ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗೆ ಸಾಲ ನೀಡುವ ಆಮಿಷವೊಡ್ಡಿ, ಕೂಲಿ ಕೆಲಸ ಮಾಡುವವರಿಗೆ ಪುಡಿಗಾಸಿನ ಹೆಂಡದ ರುಚಿತೋರಿಸಿ ಯುವಕರಿಗೆ ಮೋಜುಮಸ್ತಿ ಮಾಡಿಸಿ, ಕೇವಲ

ಜನಸೇರಿಸುವ ಉದ್ದೇಶ ಇಟ್ಟುಕೊಂಡು ಕ್ಷೇತ್ರವನ್ನು ಹೊರತುಪಡಿಸಿ ಸಾಗರ ಶಿಕಾರಿಪುರ ಭದ್ರಾವತಿ ಕೊಪ್ಪ ರಾಯಚೂರಿನಿಂದಲೂ ಪ್ರತಿ ತಲೆಗೆ ಬೆಲೆಕಟ್ಟಿ ಸಮಾವೇಶಕ್ಕೆ ಕರೆಸಿಕೊಂಡಿದ್ದರೆಂಬ ಆರೋಪ ಕೇಳಿ ಬಂದಿದೆ. ಡಿ.ಸಿ.ಸಿ ಬ್ಯಾಂಕಿನ ಸಿಬ್ಬಂದಿಗಳೇ ಜನರನ್ನ ಬಸ್ಸುಗಳಿಗೆ ತುಂಬಿಸುತ್ತಿದ್ದ ದೃಶ್ಯಗಳೂ ಇದೀಗ ವೈರಲ್ ಅಗಿವೆ.

ಇನ್ನು ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ ಹಣ ಹಂಚಿಕೆ ವಿಚಾರದಲ್ಲಿ ಅವರ ಕಾರ್ಯಕರ್ತರ ನಡುವೆಯೇ ಗೊಂದಲವೇರ್ಪಟ್ಟಿದೆ. ಸಂಘದ ಕಾರ್ಯಕ್ರಮಕ್ಕೆ ಸಾಲಕೊಡುತ್ತೇವೆಂದು ಕರೆತಂದ ಹೆಣ್ಮಕ್ಕಳ ಶಾಪ ಹಾಕುತ್ತಿದ್ದರೆ, ಬಿಟ್ಟಿ ಹೆಂಡದ ಅಮಲಿನಲ್ಲಿ ರಸ್ತೆಯಲ್ಲಿ ಹೊರಳಾಡುತ್ತಿದ್ದ ಪಕ್ಷದ ಪೇಮೆಂಟ್ ಕಾರ್ಯಕರ್ತರ ಪರಿಸ್ಥಿತಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದ್ದು, ಲಾಭದ ವಿಷಯದಲ್ಲಿ ಮುಖಂಡರುಗಳ ನಡುವೆ ಏರ್ಪಟ್ಟ ಮನಸ್ತಾಪ. ಇವೆಲ್ಲಾ ನಿಜಕ್ಕೂ ತೀರ್ಥಹಳ್ಳಿಯ ದುರಂತ ರಾಜಕೀಯಕ್ಕೆ ಸಾಕ್ಷಿಯಂತಿದ್ದವು.

ಏನೇ ಆದರೂ ಇಂತಹ ದುರಾಡಳಿತಕ್ಕೆ ತೀರ್ಥಹಳ್ಳಿಯ ಜನ ಯಾವತ್ತೂ ಪ್ರೋತ್ಸಾಹಿಸಬಾರದು ಶಾಂತವೇರಿ ಗೋಪಾಲಗೌಡ ಕಡಿದಾಳ್ ಮಂಜಪ್ಪರವರಂತ ಆದರ್ಶ ರಾಜಕಾರಣಿಗಳನ್ನ ಕೊಟ್ಟ ಈ ಸುಸಂಸ್ಕೃತ ಕ್ಷೇತ್ರದಲ್ಲಿ ಇಂತಹ ಬೆಳವಣಿಗೆ ಅಸಹನೀಯ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ