'ಆಪರೇಷನ್​ ಕಮಲದ ಅಗತ್ಯವೇ ಇಲ್ಲ, ಸದ್ಯದಲ್ಲೇ ಎಚ್​ಡಿಕೆಗೆ ಕಾಂಗ್ರೆಸ್​ ತಲಾಖ್​ ನೀಡಲಿದೆ'; ಆರ್. ಅಶೋಕ್​ ವ್ಯಂಗ್ಯ

ಡಿ. 22ರಂದು ಸಚಿವ ಸಂಪುಟ ವಿಸ್ತರಣೆ ಆಗುವುದಿಲ್ಲ. ಮತ್ತೊಮ್ಮೆ ಲೋಕಸಭೆ ಚುನಾವಣೆಯ ನೆಪ ಹೇಳಿ ಮುಂದಕ್ಕೆ ಹಾಕುತ್ತಾರೆ. ಸಂಪುಟ ವಿಸ್ತರಣೆ ಅಂದರೆ ನಾಳೆ ಬಾ ಅಂತಾರೆ ಎಂದು ಟೀಕಿಸಿದ್ದಾರೆ.

sushma chakre | news18
Updated:December 20, 2018, 1:12 PM IST
'ಆಪರೇಷನ್​ ಕಮಲದ ಅಗತ್ಯವೇ ಇಲ್ಲ, ಸದ್ಯದಲ್ಲೇ ಎಚ್​ಡಿಕೆಗೆ ಕಾಂಗ್ರೆಸ್​ ತಲಾಖ್​ ನೀಡಲಿದೆ'; ಆರ್. ಅಶೋಕ್​ ವ್ಯಂಗ್ಯ
ಅಶೋಕ್​, ಸಿದ್ದರಾಮಯ್ಯ, ಹೆಚ್ಡಿಕೆ
sushma chakre | news18
Updated: December 20, 2018, 1:12 PM IST
ಕೃಷ್ಣ ಜಿ.ವಿ/ ರಮೇಶ್​ ಹಿರೇಜಂಬೂರು

ಬೆಳಗಾವಿ (ಡಿ. 20): 'ನಾವು ಆಪರೇಷನ್​ ಕಮಲ ಮಾಡುವ ಅಗತ್ಯವೇ ಇಲ್ಲ. ಮೈತ್ರಿ ಸರ್ಕಾರದವರೇ ತಮ್ಮ ಖೆಡ್ಡ ತೋಡಿಕೊಂಡಿದ್ದಾರೆ. ಜೆಡಿಎಸ್​ಗೆ ತಲಾಖ್​ ನೀಡಲು ಕಾಂಗ್ರೆಸ್​ ಸಜ್ಜಾಗಿ ನಿಂತಿದೆ. ಸೋಡಾಚೀಟಿ ಪಡೆಯಲು ಹೆಚ್ಡಿಕೆ ತಯಾರಾಗಲಿ' ಎಂದು ಬಿಜೆಪಿ ಶಾಸಕ ಆರ್​. ಅಶೋಕ್​ ವ್ಯಂಗ್ಯವಾಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿರುವ ಆರ್​. ಅಶೋಕ್​, ಮೈತ್ರಿ ಸರ್ಕಾರದ ನಾಯಕರು ಹೇಳಿದಂತೆ ಡಿ. 22ರಂದು ಸಚಿವ ಸಂಪುಟ ವಿಸ್ತರಣೆ ಆಗುವುದಿಲ್ಲ. ಮತ್ತೊಮ್ಮೆ ಲೋಕಸಭೆ ಚುನಾವಣೆಯ ನೆಪ ಹೇಳಿ ಮುಂದಕ್ಕೆ ಹಾಕುತ್ತಾರೆ. ಸಂಪುಟ ವಿಸ್ತರಣೆ ಅಂದರೆ ನಾಳೆ ಬಾ ಅಂತಾರೆ. ಸಿಎಂ ಮನೆ ಮುಂದೆ ಕೂಡ ನಾಳೆ ಬಾ ಅಂತ ಬೋರ್ಡ್ ಹಾಕಿದ್ದಾರೆ ಅನಿಸುತ್ತದೆ ಎಂದು ಟೀಕಿಸಿದ್ದಾರೆ.

ನಾವು ಆಪರೇಷನ್​ ಕಮಲ ಮಾಡಬೇಕಾದ ಅಗತ್ಯವೇ ಇಲ್ಲ. ಸರ್ಕಾರ ಉರುಳೋಕೆ ದಿನಗಣನೆ ಶುರುವಾಗಿದೆ. ಸರ್ಕಾರ ಯಾವಾಗ ಬೀಳುತ್ತದೆ ಎಂದು ಹೇಳೋಕೆ ನಾನು ಜ್ಯೋತಿಷಿಯಲ್ಲ. ಆದರೆ, ಸದ್ಯದಲ್ಲೇ ಸರ್ಕಾರ ಪಥನವಾಗೋದಂತೂ ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಡಿಕೆಶಿಯಿಂದಲೇ ಕಾಂಗ್ರೆಸ್ ಪಕ್ಷ ಬಿಡ್ತಾರಂತೆ ರಮೇಶ್​ ಜಾರಕಿಹೊಳಿ!; ಮೈತ್ರಿ ನಾಯಕರಿಗೆ ಮತ್ತೊಂದು ತಲೆನೋವು

ಕಾಂಗ್ರೆಸ್​ ಶಾಸಕರ ಸಮಸ್ಯೆಗೆ ಸಿದ್ದರಾಮಯ್ಯ ಸ್ಪಂದಿಸುತ್ತಿಲ್ಲ. ವಿದೇಶ ಪ್ರವಾಸ, ಸ್ವಕ್ಷೇತ್ರ ಪ್ರವಾಸ, ದೆಹಲಿ ಪ್ರವಾಸ, ಬೆಂಗಳೂರು ನಿವಾಸ ಎಂದು ಓಡಾಡಿಕೊಂಡಿರುವ ಸಿದ್ದರಾಮಯ್ಯನವರಿಗೆ ಸದನದಲ್ಲಿ ಇರಲು ಆಸಕ್ತಿಯೇ ಇಲ್ಲ. ಅವರ ವರ್ತನೆಯೇ ಪಕ್ಷಕ್ಕೆ ಮುಳುವಾಗಲಿದೆಯೇ ಹೊರತು ನಾವು ಅವರ ಪಕ್ಷದವರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದೇವೆ ಎಂಬುದೆಲ್ಲ ವದಂತಿ ಎಂದು ಹೇಳಿದ್ದಾರೆ.
Loading...

ಸರ್ಕಾರದೊಳಗೆ ಅಸಮಾಧಾನ ಹೊಗೆಯಾಡುತ್ತಿದೆ:

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿದೇಶಕ್ಕೆ ಹೋಗಿ ಬಂದು ಕೇವಲ ಎರಡು ಗಂಟೆ ಮಾತ್ರ ಸದನದಲ್ಲಿದ್ದರು. ಅವರಿಗೆ ಸದನ ನಡೆಸೋಕೆ ಆಸಕ್ತಿಯೇ ಇಲ್ಲ. ಒಬ್ಬರು ಸಿಎಂ ಇರುವಾಗಲೇ ಸತೀಶ್​ ಜಾರಕಿಹೊಳಿ ಸಿಎಂ ಆಗಬೇಕು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಜೆಡಿಎಸ್​-ಕಾಂಗ್ರೆಸ್​ ಒಳಗೆ ಎಲ್ಲ ಸರಿಯಿಲ್ಲ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ? ನಾವೇನೂ ಬಾಯಿ ಬಿಟ್ಟು ಹೇಳಬೇಕಾಗಿಲ್ಲ. ಅವರ ವರ್ತನೆಯನ್ನು ನೋಡಿದರೆ ಸರ್ಕಾರದಲ್ಲಿ ಎಲ್ಲ ಸರಿಯಿಲ್ಲ ಅನ್ನೋದು ಸಾಬೀತಾಗುತ್ತದೆ ಎಂದು ಆರ್​. ಅಶೋಕ್​ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಬಿಜೆಪಿ ಶಾಸಕರ ಮಹತ್ವದ ಸಭೆ; ಮುಂದಿನ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಚರ್ಚೆ

ವಿಶ್ವಾಸದಿಂದ ಊಟಕ್ಕೆ ಬಂದಿರಬಹುದು:

ಬಿಜೆಪಿ ಶಾಸಕರ ಔತಣಕೂಟದಲ್ಲಿ ಸಚಿವ ರಮೇಶ್​ ಜಾರಕಿಹೊಳಿ ಭಾಗಿಯಾಗಿದ್ದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅಶೋಕ್​, ಬೆಳಗಾವಿಯಲ್ಲಿರುವ ಕಾರಣ ಎಲ್ಲರೂ ಬಂದಿದ್ದಾರೆ. ಅದಕ್ಕೆ ಬೇರೆ ಅರ್ಥ ಹುಡುಕೋದು ಬೇಡ. ರಮೇಶ್​ ಜಾರಕಿಹೊಳಿ-ಡಿ.ಕೆ. ಶಿವಕುಮಾರ್ ಎಣ್ಣೆ ಸೀಗೇಕಾಯಿ ಇದ್ದಂತೆ. ಅವರಿಬ್ಬರ ಸಂಬಂಧ ಹೇಗೆಂದು ಎಲ್ಲರಿಗೂ ಗೊತ್ತಿದೆ. ಡಿಕೆಶಿ ಬೆಳಗಾವಿಯನ್ನು ಎರಡು ಭಾಗ ಮಾಡಿದರು. ಅವರು ಕರೆದ ಔತಣಕೂಟಕ್ಕೆ ಜಾರಕಿಹೊಳಿ‌ ಹೋಗಿಲ್ಲ. ರಮೇಶ್​ ಜಾರಕಿಹೊಳಿ ತೀರ್ಮಾನದ ಬಗ್ಗೆ ಗೊತ್ತಿಲ್ಲ. ಯಾವ ಕಾರಣಕ್ಕೆ ಬಿಜೆಪಿ ಔತಣಕೂಟದಲ್ಲಿ ಭಾಗವಹಿಸಿದರೋ ಗೊತ್ತಿಲ್ಲ. ಬಿಜೆಪಿ ಡಿನ್ನರ್​ಗೆ ಪ್ರೀತಿ-ವಿಶ್ವಾಸದಿಂದ ಬಂದಿರಬಹುದು ಎಂದು ಹೇಳಿದ್ದಾರೆ.

First published:December 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626