ಲೋಕಸಭೆ ಚುನಾವಣೆಗೆ ಜೆಡಿಎಸ್​-ಕಾಂಗ್ರೆಸ್​​ ಮೈತ್ರಿ ಅನಿವಾರ್ಯ: ಇಲ್ಲವಾದಲ್ಲಿ ಬಿಜೆಪಿ ಪಾಲಿಗೆ ಹೆಚ್ಚು ಸೀಟು


Updated:September 5, 2018, 6:44 PM IST
ಲೋಕಸಭೆ ಚುನಾವಣೆಗೆ ಜೆಡಿಎಸ್​-ಕಾಂಗ್ರೆಸ್​​ ಮೈತ್ರಿ ಅನಿವಾರ್ಯ: ಇಲ್ಲವಾದಲ್ಲಿ ಬಿಜೆಪಿ ಪಾಲಿಗೆ ಹೆಚ್ಚು ಸೀಟು

Updated: September 5, 2018, 6:44 PM IST
ನ್ಯೂಸ್​-18 ಕನ್ನಡ

ಬೆಂಗಳೂರು(ಸೆಪ್ಟೆಂಬರ್​​.05): ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಯನ್ನು ಎದುರಿಸಲು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಅನಿವಾರ್ಯ ಎಂಬ ಸಂದೇಶವನ್ನು ಮತದಾರ ಮತ್ತುಷ್ಟು ಬಲಪಡಿಸಿದ್ಧಾನೆ. ಮೈತ್ರಿ ಇಲ್ಲದೆ ಪ್ರತ್ಯೇಕವಾಗಿ ಸ್ಪರ್ಧಿಸಿದರೆ, ಹೆಚ್ಚು ಸೀಟುಗಳು ಬಿಜೆಪಿ ಪಾಲಾಗುವುದು ಎಂಬುದು ಬಹುತೇಖ ಖಚಿತ ಎನ್ನುತ್ತಿವೆ ಮೂಲಗಳು.

ಕಾಂಗ್ರೆಸ್-ಜೆಡಿಎಸ್ ದೋಸ್ತಿಯನ್ನು ಒಪ್ಪಿಕೊಂಡಿರುವ ಮತದಾರ ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆ ಚುನಾವಣೆ ಫಲಿತಾಂಶದಲ್ಲಿ ಮತ್ತೆ ಮೈತ್ರಿ ಮಾಡಿಕೊಳ್ಳಬೇಕಿರುವ ಅನಿವಾರ್ಯ ಸೃಷ್ಟಿಸಿದ್ಧಾನೆ. ಒಟ್ಟು ಸಂಖ್ಯೆಯನ್ನು ಪರಿಗಣಿಸಿದರೆ ಬಿಜೆಪಿಗಿಂತಲೂ ಕಾಂಗ್ರೆಸ್​-ಜೆಡಿಎಸ್​​ ಹೆಚ್ಚಿನ ಸ್ಥಾನ ಗಳಿಸಿವೆ.

ರಾಜ್ಯಸ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಗರಸಭೆಯ ಒಟ್ಟು 926 ಸ್ಥಾನಗಳ ಪೈಕಿ ಬಿಜೆಪಿ ತೆಕ್ಕೆಗೆ 370, ಕಾಂಗ್ರೆಸ್​ಗೆ 294 ಹಾಗೂ ಜೆಡಿಎಸ್ 106(ಒಟ್ಟು 400). ಪುರಸಭೆಯ 1246 ಸ್ಥಾನಗಳಲ್ಲಿ ಕಾಂಗ್ರೆಸ್ 514, ಬಿಜೆಪಿ 375, ಜೆಡಿಎಸ್ 210 (ಒಟ್ಟು 724). ಪಟ್ಟಣ ಪಂಚಾಯ್ತಿ 355 ಸ್ಥಾನಗಳಲ್ಲಿ ಕಾಂಗ್ರೆಸ್ 138, ಬಿಜೆಪಿ 130, ಜೆಡಿಎಸ್ 29 (ಒಟ್ಟು 167) ಸ್ಥಾನಗಳನ್ನು ಪಡೆದಿವೆ.

ಹೀಗಾಗಿ ಶೇಕಡಾವಾರು ಮತದಾನಕ್ಕೆ ಹೋಲಿಸಿದರೆ ಬಿಜೆಪಿಗಿಂತ ಕಾಂಗ್ರೆಸ್-ಜೆಡಿಎಸ್ ಹೆಚ್ಚು ಮತದಾನ ಪಡೆದಿವೆ. ಈ ಫಲಿತಾಂಶದ ಮೇರೆಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ  ಮುಂದುವರೆದರೆ, ಉಭಯ ಪಕ್ಷಗಳು ಕನಿಷ್ಠ 18ರಿಂದ 20 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ ಎನ್ನುತ್ತಾರೆ ರಾಜಕೀಯ ತಜ್ಞರು.

2013 ರಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆ ಚುನಾವಣೆಗಿಂತ ಬಿಜೆಪಿ ಈ ಬಾರಿ ಶೇ.8.73ರಷ್ಟು ಹೆಚ್ಚುವರಿ ಮತಗಳು ಪಡೆದಿದೆ. ಕಾಂಗ್ರೆಸ್ ಶೇ.-2.07 ಮತ್ತು ಜೆಡಿಎಸ್‍ ಶೇ.-2.25ರಷ್ಟು ಮತಗಳು ಕಳೆದುಕೊಂಡಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಶೇ.36.5, ಕಾಂಗ್ರೆಸ್ 38.32, ಜೆಡಿಎಸ್ 16.65 ಮತ ಪಡೆದಿತ್ತು. ಆದರೆ, ಈ ಚುನಾವಣೆಯ ಫಲಿತಾಂಶ ಅವಲೋಕಿಸಿದರೆ ಮೈತ್ರಿ ಪಕ್ಷಕ್ಕೆ ಮತದಾರ ಕೈ ಹಿಡಿಯಲಿದ್ದಾರೆ ಎನ್ನುವ ಮುನ್ಸೂಚನೆ ಸಿಕ್ಕಿದೆ.

ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್, ಬಿಜೆಪಿ ಎಂದಿನಂತೆ ಕರಾವಳಿ, ಮಧ್ಯಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಂಡಿದೆ. ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದ್ದು, ಮೈಸೂರು ಭಾಗದಲ್ಲಿ ಜೆಡಿಎಸ್​​ ಕಾಂಗ್ರೆಸ್​ಗೆ ತೀವ್ರ ಪೈಟೋಟಿ ನೀಡಿದೆ. ಕಾಂಗ್ರೆಸ್​ ಸ್ಥಿತಿ ದಯಾನೀಯವಾಗಿರುವ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಭಾವ ಹೆಚ್ಚಾಗಿದೆ.
Loading...

ಈ ಎಲ್ಲಾ ಬೆಳವಣಿಗೆ ನೋಡಿದರೆ ಮೈತ್ರಿಗೆ ಮತದಾರ ಮತ ನೀಡಲಿದ್ದಾರೆ ಎನ್ನುವುದು ಖಾತ್ರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಆರ್ಭಟಕ್ಕೆ ಕಡಿವಾಣ ಹಾಕಲು ರಾಜ್ಯದಲ್ಲಿ ಕಾಂಗ್ರೆಸ್​ ಜೆಡಿಎಸ್​​ ಮೈತ್ರಿ ಅನಿವಾರ್ಯವಾಗಿದೆ. ಒಂದು ವೇಳೆ ಮೈತ್ರಿ ಹೊರತು ಪ್ರತ್ಯೇಕವಾಗಿ ಸ್ಪರ್ಧಿಸಿದರೆ, ಬಿಜೆಪಿ ತೆಕ್ಕೆಗೆ ಹೆಚ್ಚು ಸೀಟುಗಳು ಬೀಳಲಿವೆ ಎನ್ನುತ್ತಿದ್ದಾರೆ ರಾಜಕೀಯ ತಜ್ಙರು.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ