ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಖಜಾನೆ ಖಾಲಿ ಮಾಡಿದೆ: ಕಲ್ಲಡ್ಕ ಪ್ರಭಾಕರ್ ಭಟ್

ಬಿಎಸ್​ವೈ ಸರ್ಕಾರಕ್ಕೆ ತೆರಿಗೆ ಕೊಟ್ಟವರು ಜನರು. ಕಾಂಗ್ರೆಸ್, ಜೆಡಿಎಸ್ ನ ಸರ್ಕಾರವಿದ್ದಾಗ ತೆರಿಗೆ ಕೊಟ್ಟವರು ಜನರು. ಹಾಗಾದ್ರೆ ಇವರ ಕಾಲದಲ್ಲಿ ತೆರಿಗೆ ಎಲ್ಲಿ ಹೋಗುತ್ತಿತ್ತು ಎಂದು ಪ್ರಶ್ನೆ ಮಾಡಿದರು.

G Hareeshkumar | news18-kannada
Updated:October 7, 2019, 2:24 PM IST
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಖಜಾನೆ ಖಾಲಿ ಮಾಡಿದೆ: ಕಲ್ಲಡ್ಕ ಪ್ರಭಾಕರ್ ಭಟ್
ಕಲ್ಲಡ್ಕ ಪ್ರಭಾಕರ್ ಭಟ್
  • Share this:
ಬಾಗಲಕೋಟೆ(ಅ.07): ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಅಂತ ಅವತ್ತು ಬೊಬ್ಬೆ ಹೊಡೆದ ಮನುಷ್ಯ ಕುಮಾರಸ್ವಾಮಿ ಅವರು, ಇವತ್ತು ಯಾಕೆ ಈ ರೀತಿ ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಸ್ಪಂದಿಸದೇ ಹೋಗಿದ್ರೆ ಕೇಂದ್ರ ದಿಂದ  1200ಕೋಟಿ ಬಂದಿರೋದು ಹೇಗೆ. ಅವರ ಹತ್ತಿರ ಹೋಗಿದ್ದಾರೆ, ಹಾಗಾಗಿ ನೆರೆ ಪರಿಹಾರ ಬಂದಿದೆ ಎಂದು ಆರ್​ ಎಸ್​ ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​​​ ಹೇಳಿದ್ದಾರೆ. ಗುಳೇದ ಗುಡ್ಡದಲ್ಲಿ ನಡೆದ ಆರ್​ಎಸ್​ಎಸ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಅವತ್ತು ಕುಮಾರಸ್ವಾಮಿ ಅವರು, ಒಳ್ಳೆಯ ಪ್ರಧಾನಿ, ಒಳ್ಳೆಯ ಸತ್ಕಾರ, ಸ್ಪಂದನೆ ಸಿಕ್ಕಿತ್ತು ಅಂತ ಹೇಳಲಿಲ್ಲ ಯಾಕೆ. ರಾಜಕಾರಣಕ್ಕಾಗಿ ಎಚ್ ಡಿಕೆ ಹೇಳಿಕೆ ಕೊಡುತ್ತಿದ್ದಾರೆ. ಮೊನ್ನೆ ಪ್ರವಾಹ ಆದಾಗ ಎಚ್ ಡಿ ಕೆ ಎಲ್ಲಿ ಹೋಗಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ,  ಮಾಜಿ ಪ್ರಧಾನಿ ಹೆಚ್ ಡಿ  ದೇವೇಗೌಡ ಅವರು ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗಿದ್ರಾ. ನಾನು ನೋಡಿರುವ ಪ್ರವಾಹ ಪೀಡಿತರ ಬಳಿಹೋದ ಸಿಎಂ ಯಾರಾಗಿದ್ರೇ ಅದು ಬಿಎಸ್ವೈ ಎಂದು ಹೆಚ್ ಡಿ ದೇವೇಗೌಡರು ಹೇಳಿದ್ದರು.  ಇದನ್ನು ಹೇಳುವ ಯೋಗ್ಯತೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಇಲ್ಲ ಅಂತ ಪ್ರಭಾಕರ್​ ಭಟ್​​ ವಾಗ್ದಾಳಿ ನಡೆಸಿದರು.

ಮೈತ್ರಿ ಸರ್ಕಾರ ಖಜಾನೆ ಖಾಲಿ ಮಾಡಿಯೇ ಹೋಗಿದೆ. ಹಿಂದೆ ಯಡಿಯೂರಪ್ಪ ಸಿಎಂ  ಆಗಿದ್ದಾಗ ಖಜಾನೆ ತುಂಬಿದ್ದು ನೋಡಿ ಕಾಂಗ್ರೆಸ್, ಜೆಡಿಎಸ್ ನವರಿಗೆ ಆಶ್ಚರ್ಯವಾಗಿತ್ತು. ಹಿಂದೆ ಸಂಗ್ರಹವಾದ ತೆರಿಗೆ ಕಾಂಗ್ರೆಸ್, ಜೆಡಿಎಸ್ ಜೇಬಿಗೆ ಹೋಗುತ್ತಿತ್ತು. ಬಿಎಸ್​ವೈ ಸರ್ಕಾರಕ್ಕೆ ತೆರಿಗೆ ಕೊಟ್ಟವರು ಜನರು. ಕಾಂಗ್ರೆಸ್, ಜೆಡಿಎಸ್ ನ ಸರ್ಕಾರವಿದ್ದಾಗ ತೆರಿಗೆ ಕೊಟ್ಟವರು ಜನರು. ಹಾಗಾದ್ರೆ ಇವರ ಕಾಲದಲ್ಲಿ ತೆರಿಗೆ ಎಲ್ಲಿ ಹೋಗುತ್ತಿತ್ತು ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ :  ‘ಅಧಿಕಾರ ಹೋದ ಮೇಲೆ ಇಬ್ಬರಿಗೂ ಹುಚ್ಚು ಹಿಡಿದಿದೆ’; ಸಿದ್ದರಾಮಯ್ಯ, ಎಚ್​​ಡಿಕೆ ಬಗ್ಗೆ ಕೆ.ಎಸ್​ ಈಶ್ವರಪ್ಪ ವ್ಯಂಗ್ಯ

ಐದು ರಾಜ್ಯಗಳಲ್ಲೂ ನೆರೆಯಾಗಿದೆ. ಅದನ್ನು ಯೋಚನೆ ಮಾಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ  1,200ಕೋಟಿ ಬಿಡುಗಡೆ ಮಾಡಿದೆ. ಇನ್ನುಳಿದಿದ್ದು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಕಳೆದ ಐದು ವರ್ಷಗಳಿಂದ ಕೇಂದ್ರ ಸರ್ಕಾರ ಜನಪರ ಕೆಲಸವನ್ನು ಮಾಡುತ್ತಾ ಬಂದಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದರು.

ಬಿಎಸ್​​ವೈ , ನಳೀನ್ ಕುಮಾರ್ ಕಟೀಲ್ ಮಧ್ಯೆ ಭಿನ್ನಮತವಿಲ್ಲ.

ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​​​ ಕುಮಾರ್​​ ಕಟೀಲ್ ಒಟ್ಟಿಗೆ ಇದ್ದಾರೆ. ಕಟೀಲ್ ಚೆನ್ನಾಗಿ ಪಕ್ಷ ಕಟ್ಟುತ್ತಾರೆ. ಬಿಎಸ್​​ವೈ ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ. ಹಾಗಂತ ಬಿಎಸ್​​ವೈ ಹೇಳಿದ್ದಾರೆಯೇ? ಅಂದು ಪ್ರಶ್ನಿಸಿದ ಭಟ್, ಇದನ್ನು ಮಾಧ್ಯಮದವರೇ ಸೃಷ್ಟಿ ಮಾಡುತ್ತಿರೋದು ಎಂದು ಆರೋಪಿಸಿದರು.ವರದಿ : ರಾಚಪ್ಪ ಬನ್ನಿದಿನ್ನಿ 

 
First published:October 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ