ಮೈತ್ರಿ ಸರ್ಕಾರಕ್ಕೆ ನೂರು ದಿನಗಳು: ಎಚ್​ಡಿಕೆ, ಸಿದ್ದು ನಡುವೆ ಇಲ್ಲವಂತೆ ಭಿನ್ನಾಭಿಪ್ರಾಯ..!

Ganesh Nachikethu
Updated:August 30, 2018, 11:18 AM IST
ಮೈತ್ರಿ ಸರ್ಕಾರಕ್ಕೆ ನೂರು ದಿನಗಳು: ಎಚ್​ಡಿಕೆ, ಸಿದ್ದು ನಡುವೆ ಇಲ್ಲವಂತೆ ಭಿನ್ನಾಭಿಪ್ರಾಯ..!
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ
Ganesh Nachikethu
Updated: August 30, 2018, 11:18 AM IST
ಗಣೇಶ್​ ನಚಿಕೇತು, ನ್ಯೂಸ್​-18 ಕನ್ನಡ

ಬೆಂಗಳೂರು(ಆಗಸ್ಟ್​.30): ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ಸರ್ಕಾರ ಶತ ದಿನಗಳು ಪೂರೈಸಿದೆ. ಒಂದೆಡೆ ನಮ್ಮ ಸರ್ಕಾರ ಸುಭದ್ರವಾಗಿದೆ ಎಂದು ಖುದ್ದು ಸಿಎಂ ಹೇಳಿದರೆ, ಮತ್ತೊಂದೆಡೆ ಸರ್ಕಾರ ಪತನವಾಗಲಿದೆ ಎಂದು ಹಲವರು ಭವಿಷ್ಯ ನುಡಿದಿದ್ಧಾರೆ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೆ ಆಪತ್ತು ಇಲ್ಲ ಎಂಬ ಸಿಂಎ ಹೇಳಿಕೆ ಒಮ್ಮೆ ಅವಲೋಕಿಸೋಣ.

ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರ ಕೃಪಕಟಾಕ್ಷ ಸರ್ಕಾರದ ಮೇಲಿದೆ. ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಬೀಳುವ ಸಾಧ್ಯತೆಯಿಲ್ಲ. ನಮ್ಮೆಲ್ಲರ ಆಶಯವೂ ಸರ್ಕಾರವನ್ನು ಜೀವಂತವಾಗಿರುಸುವುದು ಎಂದು ಸಿಎಂ ಹಲವು ಬಾರಿ ಸಮಜಾಯಿಷಿ ನೀಡಿದ್ಧಾರೆ.

ಶತ ದಿನಗಳ ಆಡಳಿತ: ನೂರು ದಿನದ ಆಡಳಿತದಲ್ಲಿ ರೈತರ ಸಾಲಮನ್ನಾ ವಿಚಾರ ಮಂದಿಟ್ಟುಕೊಂಡು ಬಿಜೆಪಿ ರಾಜಕೀಯ, ಕೊಡಗು ಪ್ರಾಕೃತಿಕ ವಿಕೋಪ, ಪ್ರತ್ಯೇಕ ಉತ್ತರ ಕರ್ನಾಟಕ ಕೂಗು, ಸಿದ್ದರಾಮಯ್ಯ ಘೋಷಿಸಿದ್ದ ಯಶಸ್ವಿ ಯೋಜನೆ ಮುಂದುವರಿಕೆ, ಮಹದಾಯಿ ಮತ್ತು ಎತ್ತಿನಹೊಳೆ ಯೋಜನೆಗೆ ಆಗ್ರಹಿಸಿ ಹೋರಾಟ ಸೇರಿದಂತೆ ಹಲವು ಸಾಲುಸಾಲು ವಿಚಾರಗಳಲ್ಲಿ ಸಿಎಂಗೆ ಸಂಕಷ್ಟ ಎದುರಾಗಿದೆ.

ಆದರೆ, ಸರ್ಕಾರ ಸುಭದ್ರವಾಗಿದೆ, ನಾವು ಸಂಕಷ್ಟದಲ್ಲಿಲ್ಲ. ಪ್ರಮಾಣಿಕವಾಗಿ ಜನರಿಗೆ ಸೇವೆಯನ್ನು ಮಾಡುತ್ತಿದ್ಧೇವೆ. ನೂರು ದಿನಗಳಲ್ಲಿ ಎಲ್ಲವನ್ನು ಮಾಡಿದ್ದೇವೆ ಎಂದು ಹೇಳುವುದಿಲ್ಲ. ಆದರೆ, ರಾಜ್ಯ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾಂಗ್ರೆಸ್​-ಜೆಡಿಎಸ್​ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಜನತೆಯ ಆಶೋತ್ತರ ಈಡೇರಿಕೆಗಾಗಿ ಶ್ರಮಿಸುತ್ತಿದ್ದೇವೆ ಎನ್ನುತ್ತಿದ್ಧಾರೆ ವಕ್ತಾರರು.

ಸರ್ಕಾರದ ಮುಂದಿನ ಯೋಜನೆ: ಶಿಕ್ಷಣ, ವಸತಿ, ಆರೋಗ್ಯ, ನಗರ ಮತ್ತು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡುವುದು, ಕೈಗಾರಿಕಾ ಪ್ರಗತಿಯತ್ತ ಚಿತ್ತ ಹರಿಸುವುದು ಹೀಗೆ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ಧಾರೆ ಎನ್ನಲಾಗಿದೆ. ಸರ್ಕಾರದಿಂದ ಸಾಧ್ಯವಾದಷ್ಟು ರೀತಿಯಲ್ಲಿ ಜನಪರ ಕಾರ್ಯಗಳನ್ನು ಮಾಡಲಿದ್ದೇವೆ ಎಂದು ಖುದ್ದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ಧಾರೆ.

ರೈತರ ಸಾಲಮನ್ನಾ ಘೋಷಣೆ: ರೈತರ ಸಾಲಮನ್ನಾ ಸರ್ಕಾರದ ಆದ್ಯತೆ. ಆರ್ಥಿಕ ತಜ್ಞರ ಸಲಹೆ-ಸೂಚನೆ ಮೇರೆಗೆ ಸಾಲಮನ್ನಾ ಘೋಷಿಸಿದ್ದೇವೆ. ಕಾಂಗ್ರೆಸ್‌ ಪಕ್ಷದ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಕೈಗೊಂಡಿದ್ದೇವೆ. ಸಹಕಾರಿ, ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಕಂತುಗಳಲ್ಲಿ ಪಾವತಿಸಲಾಗುತ್ತದೆ ಎಂದು ಸಿಎಂ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ಧಾರೆ.
Loading...

ನಗರ ಅಭಿವೃದ್ದಿ ಕಾರ್ಯಗಳು: ನಗರ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡುತ್ತಿದೆ ಎನ್ನಲಾಗಿದೆ. ಬೆಂಗಳೂರು ಸೇರಿದಂತೆ ಹಲವು ಎಲ್ಲಾ ನಗರಗಳಲ್ಲೂ ಈಗಾಗಲೇ ಕುಡಿಯುವ ನೀರು, ರಸ್ತೆ, ಒಳಚರಂಡಿ ವ್ಯವಸ್ಥೆ, ಸಂಚಾರ ದಟ್ಟಣೆ ನಿವಾರಣೆ, ಬಡವರಿಗೆ ವಸತಿ ಯೋಜನೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸಿಎಂ ಕಚೇರಿ ಮೂಲಗಳಿಂದ ತಿಳಿದು ಬಂದಿದೆ.

ಸರ್ಕಾರ ಸುಭದ್ರ: ಬಿಜೆಪಿ ಸರ್ಕಾರ ಬೀಳಿಸಲು ತುದಿಗಾಲಲ್ಲಿ ನಿಂತಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಯಾವುದೇ ಮೈಮನಸ್ಸು ಇಲ್ಲ. ನಾವು ಐದು ವರ್ಷ ಸಮ್ಮಿಶ್ರ ಸರ್ಕಾರ ಪೂರೈಸುತ್ತೇವೆ. ಸರ್ಕಾರದ ಸಚಿವರು ಅದಕ್ಕಾಗಿಯೇ ದುಡಿಯುತ್ತಿದ್ದಾರೆ. ಯಾರೊಂದಿಗೂ ಭಿನ್ನಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ಧಾರೆ ಮುಖ್ಯಮಂತ್ರಿಗಳು.

ಕಾಂಗ್ರೆಸ್​ ಜತೆಗೆ ಮೈತ್ರಿ ವಿಚಾರ: ಮೈತ್ರಿ ಸರ್ಕಾರದಲ್ಲಿ ಯಾವುದೇ ಸಮಸ್ಯೆಯಿಲ್ಲ. ಹೀಗಾಗಿಯೇ ಮುಂದಿನ ಲೋಕಸಭಾ ಚುಣಾವಣೆಯಲ್ಲಿ ಸೀಟು ಹೊಂದಾಣಿಕೆ ಕುರಿತು ಚರ್ಚಿಸಲಾಗಿದೆ. ಐದು ವರ್ಷಗಳ ಕಾಲ ಈ ಸರ್ಕಾರ ಸುಭದ್ರವಾಗಿರಲಿದೆ. ಮುಂದೆಯೂ ಮೈತ್ರಿ ಮುಂದುವರೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಮಾರ್ಗದರ್ಶನ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಅವರ ಸಲಹೆ-ಸೂಚನೆ ಮೇರೆಗೆ ಸರ್ಕಾರ ನಡೆಯುತ್ತಿದೆ. ಸಿದ್ದರಾಮಯ್ಯ ಘೋಷಿಸಿದ್ದ ಎಲ್ಲಾ  ಕಾರ್ಯಕ್ರಮಗಳು ಮುಂದುವರಿಸಲಾಗಿದೆ. ಎಚ್​ಡಿಕೆ ಮತ್ತು ಸಿದ್ದರಾಮಯ್ಯ ನಡುವೆಯೂ ಯಾವುದೇ ಅಸಮಾಧಾನಗಳೂ ಇಲ್ಲ ಎಂದು ಹೇಳಲಾಗ್ತಿದೆ.

ಒಟ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಸರ್ಕಾರಕ್ಕೆ ಹಾನಿಯಾಗುವ ಹೇಳಿಕೆಗಳನ್ನು ನೀಡಿದ್ಧಾರೆ. ಅಲ್ಲದೇ ಬಹಿರಂಗವಾಗಿ ಎರಡು ಪಕ್ಷದವರು ಕಿತ್ತಾಡಿದ್ಧಾರೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದರೂ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್​ ಸೇರಿದಂತೆ ಹಲವರು ಸರ್ಕಾರ ಸುಭದ್ರವಾಗಿದೆ ಎಂದು ಹೇಳಿ ಸಮಸ್ಯೆಗಳನ್ನು ಮರೆಮಾಚುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ