ಲೋಕಸಭಾ ಚುನಾವಣೆ ಸಮಯದಲ್ಲಿ ನಡೆದ ಘಟನೆ ಬಿಜೆಪಿಗೆ ಜಯ ತಂದುಕೊಟ್ಟಿತ್ತು; ದೇವೇಗೌಡ

ಕಾಂಗ್ರೆಸ್​ನಲ್ಲಿ ಸಾಕಷ್ಟು ಮುಖಂಡರು ಇದ್ದಾರೆ. ಆದರೆ ಯಾರನ್ನೇ ಅಧ್ಯಕ್ಷ ಸ್ಥಾನಕ್ಕೆ ಕೂರಿಸಿದರೂ, ಪಕ್ಷದ ಜವಾಬ್ದಾರಿಯನ್ನು ರಾಹುಲ್ ಗಾಂಧಿಯವರೇ ವಹಿಸಿಕೊಳ್ಳಬೇಕಾಗುತ್ತದೆ-ದೇವೇಗೌಡ

Latha CG | news18
Updated:July 3, 2019, 6:03 PM IST
ಲೋಕಸಭಾ ಚುನಾವಣೆ ಸಮಯದಲ್ಲಿ ನಡೆದ ಘಟನೆ ಬಿಜೆಪಿಗೆ ಜಯ ತಂದುಕೊಟ್ಟಿತ್ತು; ದೇವೇಗೌಡ
ಎಚ್.ಡಿ. ದೇವೇಗೌಡ
Latha CG | news18
Updated: July 3, 2019, 6:03 PM IST
ಬೆಂಗಳೂರು(ಜು.03): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲ್ಲಲು ಸರ್ಜಿಕಲ್ ಸ್ಟ್ರೈಕ್ ಕಾರಣ ಎಂದು  ಮಾಜಿ ಪ್ರಧಾನಿ ದೇವೇಗೌಡರು ಪರೋಕ್ಷವಾಗಿ ಹೇಳಿದ್ದಾರೆ. ಅಲ್ಪಸಂಖ್ಯಾತ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು, "ಪಕ್ಕದ ದೇಶ ಪಾಕಿಸ್ತಾನದಿಂದ ಅಪಾಯವಿದೆ ಎಂದು ಜನ ಭಾವಿಸಿದ್ದರು. ಇದೇ ಸಂದರ್ಭದಲ್ಲಿ ನಡೆದ ಘಟನೆ ಬಿಜೆಪಿಗೆ ಜಯ ತಂದು ಕೊಟ್ಟಿತ್ತು. ಮೋದಿ ವರ್ಚಸ್ಸು ಕಡಿಮೆ ಆಗುತ್ತಿದ್ದಾಗ ಆ ಘಟನೆ ನಡೆದಿತ್ತು. ಈ ಘಟನೆಯಿಂದಾಗಿ ಮತ್ತೆ ಜನರು ಬಿಜೆಪಿಗೆ ಬೆಂಬಲ ನೀಡಿದರು," ಎಂದು ಹೇಳಿದರು.

ರಾಹುಲ್​ ಗಾಂಧಿ ರಾಜೀನಾಮೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಎಚ್​ಡಿಡಿ, ಕಾಂಗ್ರೆಸ್​ ಸೋಲಿಗೆ ರಾಹುಲ್​ ಕಾರಣವಲ್ಲ ಎಂದು ಸಮರ್ಥಿಸಿಕೊಂಡರು. 'ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿ ಕಾರಣ ಅಲ್ಲ. ಅವರಿಗೆ ಹೋರಾಟ ಮಾಡುವ ಛಲ ಇತ್ತು. ಆದರೆ ದೇಶದ ಜನರು ಬಿಜೆಪಿಗೆ ಆಶೀರ್ವಾದ ಮಾಡಿದರು," ಎಂದರು.

"ಕಾಂಗ್ರೆಸ್​ನಲ್ಲಿ ಸಾಕಷ್ಟು ಮುಖಂಡರು ಇದ್ದಾರೆ. ಆದರೆ ಯಾರನ್ನೇ ಅಧ್ಯಕ್ಷ ಸ್ಥಾನಕ್ಕೆ ಕೂರಿಸಿದರೂ, ಪಕ್ಷದ ಜವಾಬ್ದಾರಿಯನ್ನು ರಾಹುಲ್ ಗಾಂಧಿಯವರೇ ವಹಿಸಿಕೊಳ್ಳಬೇಕಾಗುತ್ತದೆ. ರಾಹುಲ್ ಗಾಂಧಿ ಇನ್ನೂ ಯುವಕರಿದ್ದಾರೆ," ಎಂದರು.

ಇದೇ ವೇಳೆ ಜೆಡಿಎಸ್​ ವರಿಷ್ಠ ಪಕ್ಷ ಸಂಘಟನೆ ಕುರಿತು ಮಾತನಾಡಿದರು. "ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಮೈತ್ರಿ ಸರ್ಕಾರಕ್ಕೆ ಧಕ್ಕೆ ಬರದಂತೆ ಪಕ್ಷ ಸಂಘಟನೆ ಮಾಡುತ್ತಿದ್ದೇನೆ," ಎಂದರು.

ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್ ಸಿಡಿಸಿದ ಕೆ. ಮಹದೇವ್; ರಾಜೀನಾಮೆಗಾಗಿ ರಮೇಶ್ 80 ಕೋಟಿ ಕೇಳಿದ್ದು ನಿಜಾನ?

'ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 37 ಸ್ಥಾನ ಮಾತ್ರ ಬಂದಿತ್ತು. ಆದರೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿಯನ್ನು ದೂರ ಇಡಲು ಕುಮಾರಸ್ವಾಮಿ ಸಿಎಂ ಆಗಬೇಕು ಅಂತ ತೀರ್ಮಾನ ಮಾಡಿದ್ದರು. ಕಾಂಗ್ರೆಸ್ ಹಿರಿಯ ನಾಯಕರು ಸಮ್ಮುಖದಲ್ಲಿ ಈ ತೀರ್ಮಾನ ಆಗಿತ್ತು. ಹೀಗಾಗಿ ಸರ್ಕಾರ ರಚನೆ ಆಯ್ತು," ಎಂದು ಹೇಳಿದರು.

"ಈಗ ಮೈತ್ರಿ ಸರ್ಕಾರದಲ್ಲಿ ಇಬ್ಬರು ರಾಜೀನಾಮೆ ಕೊಟ್ಟಿದ್ಧಾರೆ. ಮತ್ತೆ ಐದಾರು ಜನ ಹೋಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕುಮಾರಸ್ವಾಮಿ ಅಮೆರಿಕಾದಲ್ಲಿ ಇದ್ದುಕೊಂಡು ಎಲ್ಲರನ್ನು ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್​​ ಕೂಡಾ ಎಲ್ಲವನ್ನು ಸರಿಪಡಿಸಲು ಕೆಲಸ ಮಾಡುತ್ತಿದ್ದಾರೆ," ಎಂದರು.
First published:July 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...