ರಾತ್ರೋರಾತ್ರಿ ಅಭ್ಯರ್ಥಿ ಬದಲಿಸಿದ ಜೆಡಿಎಸ್​; ಬಿಸಿ ಪಾಟೀಲ್​ ಹಣಿಯಲು ದೇವೇಗೌಡರ ರಣತಂತ್ರ?

ಅನರ್ಹ ಶಾಸಕ ಬಿಸಿಪಾಟೀಲ್​ ಬಿಜೆಪಿಯಿಂದ ಸ್ಪರ್ಧಿಸಿದರೆ, ಕಾಂಗ್ರೆಸ್​ನಿಂದ ಬಿಎಸ್​ ಬನ್ನಿಕೋಡ ಕಣಕ್ಕೆ ಇಳಿಯುತ್ತಿದ್ದಾರೆ. ಕ್ಷೇತ್ರದಲ್ಲಿ ಇಬ್ಬರು ನಾಯಕರ ಮಧ್ಯ ಭಾರೀ ಪೈಪೋಟಿ ಎದುರಾಗಿರುವ ಹಿನ್ನೆಲೆ ಕಡೆ ಕ್ಷಣಕ್ಕೆ ಜೆಡಿಎಸ್​ ಜಾತಿ ಲೆಕ್ಕಾಚಾರದ ದಾಳ ಉರುಳಿಸಿ ಈ ಬದಲಾವಣೆಗೆ ಮುಂದಾಗಿದೆ. 

Seema.R | news18-kannada
Updated:November 18, 2019, 11:33 AM IST
ರಾತ್ರೋರಾತ್ರಿ ಅಭ್ಯರ್ಥಿ ಬದಲಿಸಿದ ಜೆಡಿಎಸ್​; ಬಿಸಿ ಪಾಟೀಲ್​ ಹಣಿಯಲು ದೇವೇಗೌಡರ ರಣತಂತ್ರ?
ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ
  • Share this:
ಹಾವೇರಿ (ನ.18): ಜೆಡಿಎಸ್​ನಲ್ಲಿ ದಿಢೀರ್​ ರಾಜಕೀಯ ಬೆಳವಣಿಗೆ ನಡೆದಿದ್ದು, ರಾತ್ರೋರಾತ್ರಿ  ಹಿರೇಕೆರೂರು ಕ್ಷೇತ್ರದ ಅಭ್ಯರ್ಥಿಯನ್ನು ಬದಲಾವಣೆ ಮಾಡಿ ಪಕ್ಷ ಅಚ್ಚರಿ ಮೂಡಿಸಿದೆ. 

ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಕ್ಷೇತ್ರದಲ್ಲಿ ಗೆಲುವಿನ ಲೆಕ್ಕಾಚಾರ ನಡೆಸಿರುವ ಜೆಡಿಎಸ್​ ಅಭ್ಯರ್ಥಿಯನ್ನು ಬದಲಾವಣೆ ಮಾಡಿದೆ. ಈ ಹಿಂದೆ ಕ್ಷೇತ್ರದಿಂದ ಉಜಿನಪ್ಪ ಅವರಿಗೆ ಟಿಕೆಟ್​ ನೀಡಿದ್ದ ಪಕ್ಷ ಈಗ ಇಲ್ಲಿನ  ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶಿವಾಚಾರ್ಯ ಅವರನ್ನು ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದು, ಇಂದು ಇವರು ನಾಮಪತ್ರ ಸಲ್ಲಿಸಿದ್ದಾರೆ.

ಅನರ್ಹ ಶಾಸಕ ಬಿಸಿಪಾಟೀಲ್​ ಬಿಜೆಪಿಯಿಂದ ಸ್ಪರ್ಧಿಸಿದರೆ, ಕಾಂಗ್ರೆಸ್​ನಿಂದ  ಬಿಎಸ್​ ಬನ್ನಿಕೋಡ ಕಣಕ್ಕೆ ಇಳಿಯುತ್ತಿದ್ದಾರೆ. ಕ್ಷೇತ್ರದಲ್ಲಿ ಇಬ್ಬರು ನಾಯಕರ ಮಧ್ಯ ಭಾರೀ ಪೈಪೋಟಿ ಎದುರಾಗಿರುವ ಹಿನ್ನೆಲೆ ಕಡೆ ಕ್ಷಣಕ್ಕೆ ಜೆಡಿಎಸ್​ ಜಾತಿ ಲೆಕ್ಕಾಚಾರದ ದಾಳ ಉರುಳಿಸಿ ಈ ಬದಲಾವಣೆಗೆ ಮುಂದಾಗಿದೆ.

ಈ ಹಿಂದೆ ಕ್ಷೇತ್ರದಲ್ಲಿ ಶ್ರೀ ಶಿವಲಿಂಗ ಶಿವಾಚಾರ್ಯ ಅವರ ಸ್ಪರ್ಧೆ ಬಗ್ಗೆ ವದಂತಿಗಳು ಕೇಳಿ ಬಂದಿದ್ದವು. ಆದರೆ, ಜೆಡಿಎಸ್​ ಅಭ್ಯರ್ಥಿ ಪಟ್ಟಿಯಲ್ಲಿ ಉಜಿನಪ್ಪ ಹೆಸರು ಪ್ರಕಟಿಸುವ ಮೂಲಕ ಈ ಸುದ್ದಿಗೆ ತೆರೆ ಎಳೆದಿದ್ದರು. ಮೂಲಗಳ ಪ್ರಕಾರ ಈ ಹಿಂದಿನಿಂದಲೂ ಶಿವಾಚಾರ್ಯ ಸ್ಪರ್ಧೆಗೆ ಜೆಡಿಎಸ್​ ಮನಸ್ಸು ಮಾಡಿತ್ತು. ಆದರೆ, ಶ್ರೀಗಳು ಇದಕ್ಕೆ ಸಮ್ಮತಿ ಸೂಚಿಸಿರಲಿಲ್ಲ ಎನ್ನಲಾಗಿದೆ. ಕೊನೆಯವರೆಗೂ ಅವರ ಮನವೊಲಿಕೆ ಮಾಡಿದ ಪಕ್ಷದ ನಾಯಕರು ಅವರನ್ನು ಕಣಕ್ಕೆ ಇಳಿಸುವಲ್ಲಿ ಸಫಲರಾಗಿದ್ದಾರೆ.

 

ನಿನ್ನೆ ರಾತ್ರಿ ಒಂದು ಗಂಟೆಗೆ ಶ್ರೀಗಳು ಬಿ ಫಾರಂ ಪಡೆದಿದ್ದು, ಇಂದು ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್​ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತ ಮತಗಳನ್ನು ಒಡೆಯಲು ಹಾಗೂ ಅನರ್ಹ ಶಾಸಕ ಬಿಸಿ ಪಾಟೀಲ್​ಗೆ ಮತ ವಿಭಜನೆಯಾಗುವ ದೃಷ್ಟಿಯಿಂದ ದೇವೇಗೌಡರು ಈ ತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ.

ಗುರುವನ್ನು ಮೀರಿಸುವ ಶಿಷ್ಯ ಆಗುತ್ತೇನೆ-ಬಿಸಿ ಪಾಟೀಲ್​ಸ್ವಾಮೀಜಿಗಳನ್ನು ತಮ್ಮ ಎದುರಾಳಿಯಾಗಿ ಜೆಡಿಎಸ್​ ನಿಲ್ಲಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಅಭ್ಯರ್ಥಿ ಬಿಸಿ ಪಾಟೀಲ್​, ಕುಮಾರಸ್ವಾಮಿ ಎರಡು ಸಲ ಮುಖ್ಯಮಂತ್ರಿ ಮಾಡುವುದಕ್ಕೆ ನಾನು ಸಹಿ ಹಾಕಿದ್ದೇವು. ನನ್ನ ಸೋಲಿಸುವ ತಿರ್ಮಾನ ಮಾಡುವುದು ಮತದಾರು ಕುಮಾರಸ್ವಾಮಿ ಅಲ್ಲ. ಸಿದ್ದರಾಮಯ್ಯನ ಹಣೆಯಲು ದೇವೆಗೌಡರು ಪ್ರಯತ್ನಿಸಿದರು ಆದರೂ ಅವರು ಮುಖ್ಯಮಂತ್ರಿ ಆದರು. ಈಗ ನನ್ನ ಹಣೆಯಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ ಆದರೂ ಗುರುವನ್ನು ಮೀರಿಸುವ ಶಿಷ್ಯ ಆಗಿ ಬೆಳೆಯುತ್ತೆನೆ ಎಂದು ಸವಾಲು ಹಾಕಿದ್ದಾರೆ.

ಇದನ್ನು ಓದಿ: ನಾಮಪತ್ರ ಸಲ್ಲಿಕೆಗೆ ಇಂದೇ ಕೊನೆಯ ದಿನ; ಇಲ್ಲಿದೆ ಮೂರೂ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ

 

ಇಂದು ಬಿಜೆಪಿ ಅಭ್ಯರ್ಥಿ  11 ಗಂಟೆಗೆ ಬಿಸಿ ಪಾಟೀಲ್​ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಮೆರವಣಿಗೆಯಲ್ಲಿ ಅವರು ಭಾಗಿಯಾಗಲಿದ್ದಾರೆ. ಬಿಸಿ ಪಾಟೀಲ್​ ನಾಮಪತ್ರ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ,ಸಂಸದ ಶಿವಕುಮಾರ ಉದಾಸಿ, ಬಿ. ವೈ. ರಾಘವೇಂದ್ರ, ಯುಬಿ ಬಣಕಾರ್, ಶಾಸಕರಾದ ಕುಮಾರ ಬಂಗಾರಪ್ಪ ಕೂಡ ಜೊತೆಯಾಗಲಿದ್ದಾರೆ.

ಶ್ರೀಗಳ ಮನವೊಲಿಕೆಗೆ ಮುಂದಾದ ಬಿವೈ ರಾಘವೇಂದ್ರ

ಜೆಡಿಸ್​ನಿಂದ ಕಬ್ಬಿಣಕಂಥಿಮಠದ ಸ್ವಾಮೀಜಿ ಸ್ಪರ್ಧೆ ಮಾಡುತ್ತಿರುವ ವಿಚಾರ ತಿಳಿಯುತ್ತಿದ್ಧಂತೆ ಕಬ್ಬಿಣಕಂಥಿಮಠಕ್ಕೆ ಕಮಲ ನಾಯಕರು ದೌಡಾಯಿಸಿದ್ದಾರೆ.

ಕಬ್ಬಿಣಕಂಥಿಮಠದ ಸ್ವಾಮೀಜಿ ಶಿವಲಿಂಗ ಶಿವಾಚಾರ್ಯ ಸ್ಪರ್ಧೆ ಮಾಡಿದರೆ ಮತಗಳು ಹಂಚಿ ಹೋಗುತ್ತವೆ ಎಂದು ಅರಿತ ರಾಘವೇಂದ್ರ ಚುನಾವಣಾ ಕಾಣದಿಂದ ಶ್ರೀಗಳಿಗೆ ಹಿಂದೆ ಸರಿಯುವಂತೆ ಮನವೊಲಿಕೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಮಠದ ಶಕ್ತಿ ಸಾಮರ್ಥ್ಯ ತಿಳಿದಿರುವ ಅವರು ಸ್ವಾಮೀಜಿ ನಾಮಪತ್ರ ಸಲ್ಲಿಸದಿರುವಂತೆ   ಮನವಿ ಮಾಡಿದ್ದಾರೆ.
First published:November 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ