ಬಿಜೆಪಿ ಶಾಸಕ ಪ್ರೀತಮ್ ಗೌಡ ಸೇರಿ ನಾಲ್ವರ ವಿರುದ್ದ ಎಫ್ಐಆರ್ ದಾಖಲು

ನಿನ್ನೆ ರಾತ್ರಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದ ಗೌಡರ ಬೀದಿಯಲ್ಲಿ ಜೆಡಿಎಸ್  ಕಾರ್ಯಕರ್ತರ ಮೇಲೆ ಹಲ್ಲೆ ಯತ್ನ ನಡೆಸಿದ್ದಾರೆಂದು ಗಣೇಶ್ ಮತ್ತು ಪ್ರಭಾಕರ್ ರಿಂದ ಶಾಸಕರ ವಿರುದ್ದ ದೂರು ನೀಡಿದ್ದರು.

news18-kannada
Updated:December 5, 2019, 11:25 PM IST
ಬಿಜೆಪಿ ಶಾಸಕ ಪ್ರೀತಮ್ ಗೌಡ ಸೇರಿ ನಾಲ್ವರ ವಿರುದ್ದ ಎಫ್ಐಆರ್ ದಾಖಲು
ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಮ್ ಗೌಡ
  • Share this:
ಹಾಸನ(ಡಿ.05): ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಯತ್ನದ ಆರೋಪ ಹಿನ್ನೆಲೆಯಲ್ಲಿ ಶಾಸಕ ಪ್ರೀತಮ್ ಗೌಡ ಸೇರಿ ನಾಲ್ವರ ವಿರುದ್ದ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. 

ನಿನ್ನೆ ರಾತ್ರಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದ ಗೌಡರ ಬೀದಿಯಲ್ಲಿ ಜೆಡಿಎಸ್  ಕಾರ್ಯಕರ್ತರ ಮೇಲೆ ಹಲ್ಲೆ ಯತ್ನ ನಡೆಸಿದ್ದಾರೆಂದು ಗಣೇಶ್ ಮತ್ತು ಪ್ರಭಾಕರ್ ರಿಂದ ಶಾಸಕರ ವಿರುದ್ದ ದೂರು ನೀಡಿದ್ದರು.

ಈ ದೂರಿನ ಹಿನ್ನೆಲೆಯಲ್ಲಿ ಶ್ರವಣಬೆಳಗೊಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೆ.ಆರ್​.ಪೇಟೆ ಕ್ಷೇತ್ರದಲ್ಲಿ ಹಣ ಹಂಚುತ್ತಿದ್ದಾರೆಂದು ಜೆಡಿಎಸ್ ಕಾರ್ಯಕರ್ತರು ಪ್ರಶ್ನಿಸಿದಕ್ಕೆ ಈ ಘಟನೆ ನಡೆದಿತ್ತು ಎನ್ನಲಾಗಿದೆ.

ನಾಳೆಯ ಪ್ರತಿಭಟನೆಯನ್ನ ಮುಂದೂಡಿದ ರೇವಣ್ಣ

ಚೀಲದಲ್ಲಿ ಹಣ ತುಂಬಿಕೊಂಡು ಹೋಗಿ ಹುಣಸೂರು ಕ್ಷೇತ್ರದಲ್ಲಿ ಹಣ ಹಂಚಿದ್ದಾರೆ ಈ ಬಗ್ಗೆ ಚುನಾವಣಾ ಆಯೋಗಕ್ಕೆ ನಮ್ಮ ಪಕ್ಷದಿಂದ ದೂರು ನೀಡಿದ್ದೆವು. ಇದೀಗ ಐಜಿಗೆ ಆಯೋಗದಿಂದ ನೊಟೀಸ್ ನೀಡಲಾಗಿದೆ ಎಂದು ಮಾಜಿ ಸಚಿವ ರೇವಣ್ಣ ಹೇಳಿದ್ದಾರೆ.

ಚುನಾವಣೆ ಆಯೋಗಕ್ಕೆ ಗಲಭೆ  ಮತ್ತು ಅಕ್ರಮ ಕುರಿತು ಮನವಿ‌ ಕೊಟ್ಟಿದ್ದೇವೆ, ವಿನಾಕಾರಣ ಸೂರಜ್ ಮೇಲೆ ಎಫ್ ಐ ಆರ್ ಹಾಕಲಾಗಿದೆ, ಹೆಣ್ಣು ಮಗು ಮೇಲೆ ಬೆಂಗಳೂರು ಕಾರ್ಪೋರೆಟ್ ಕಡೆಯವರು ದೌರ್ಜನ್ಯ ಮಾಡಿದ್ದಾರೆ ಎಂದರು.

ಇದನ್ನೂ ಓದಿ : Karnataka ByPolls : ಶ್ರವಣಬೆಳಗೊಳದಲ್ಲಿ ಮದ್ಯ, ಮಾಂಸ ಸೇವಿಸಿ ಕ್ಷೇತ್ರದ ಪಾವಿತ್ಯತೆ ಹಾಳು ; ಶಾಸಕ ಪ್ರೀತಂಗೌಡ ವಿರುದ್ಧ ರೇವಣ್ಣ ವಾಗ್ದಾಳಿಮುಂದಿನ ನಾಲ್ಕು ದಿನ ಸರಿಯಾದ ಕ್ರಮಕ್ಕೆ ಮುಂದಾಗಲಿಲ್ಲ ಎಂದರೆ ನಾವು ಉಗ್ರ ಪ್ರತಿಭಟನೆ ಮಾಡುತ್ತೇವೆ. ನಾಲ್ಕು ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಮಾಜಿ ಪ್ರಧಾನಿ ದೇವೇಗೌಡರು ಸಹ ನಾಳೆಯ ಪ್ರತಿಭಟನೆ‌ ಮುಂದೂಡಲು ಹೇಳಿದ್ದಾರೆ. ಪೊಲೀಸರು ನಮ್ಮ ಮನವಿಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಪೋಲೀಸ್ ವರಿಷ್ಠಾಧಿಕಾರಿಗಳು ಮನವಿ‌ ಮಾಡಿಕೊಂಡಿದ್ದಾರೆ ಎಂದರು.
First published:December 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ