100 ಎಲ್​ಸಿಡಿ ವಾಹನಗಳ ಮೂಲಕ ಜೆಡಿಎಸ್ ಪ್ರಚಾರ, ಫೆ.17ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ರಾಷ್ಟ್ರೀಯ ಪಕ್ಷಗಳಿಗೆ ಕುಮಾರಸ್ವಾಮಿ ಸೆಡ್ಡು


Updated:February 13, 2018, 2:55 PM IST
100 ಎಲ್​ಸಿಡಿ ವಾಹನಗಳ ಮೂಲಕ ಜೆಡಿಎಸ್ ಪ್ರಚಾರ, ಫೆ.17ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ರಾಷ್ಟ್ರೀಯ ಪಕ್ಷಗಳಿಗೆ ಕುಮಾರಸ್ವಾಮಿ ಸೆಡ್ಡು

Updated: February 13, 2018, 2:55 PM IST
- ಜನಾರ್ದನ್ ಹೆಬ್ಬಾರ್, ನ್ಯೂಸ್ 18 ಕನ್ನಡ

ಬೆಂಗಳೂರು(ಫೆ.13): ರಾಜ್ಯದಲ್ಲಿ ಈ ಬಾರಿ ಸಮ್ಮಿಶ್ರ ಸರ್ಕರ ಬರುವುದೆಂಬ ಭಾವನೆ ಎಲ್ಲೆಡೆ ಇದೆ. ಆದರೆ, ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತಿದ್ದೇವೆ. ಈ ಹಿಂದೆ ಹೇಳಿದಂತೆ ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ಫೆ. 17ರಂದು ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ಧಾರೆ.

ಇದೇವೇಳೆ, ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಸಮಾವೇಶಗಳ ಬಗ್ಗೆ ವ್ಯಂಗ್ಯ ಮಾಡಿದ ಕುಮಾರಸ್ವಾಮಿ, ಇಬ್ಬರೂ ನಾಯಕರಿಗೆ ದೊರೆತ ಬೆಂಬಲ ಎಷ್ಟು ಅಂತ ಅರಿತಿದ್ದೇನೆ. ಲಕ್ಷ ಲಕ್ಷ ಜನ ಸೇರಿದ್ದರು ಎಂದು ಹೇಳುತ್ತಿದ್ದಾರೆ. ಅವನ್ನೆಲ್ಲ ಗಮನಿಸಿದ್ದೇನೆ. ಫೆ.17ರಂದು ಯಲಹಂಕದಲ್ಲಿ ನಡೆಸಲು ಉದ್ದೇಶಿಸಿರುವ ಜೆಡಿಎಸ್ ಸಮಾವೇಶದಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರು ನಗರದ ಜನತೆಗೆ ತೊಂದರೆಯಾಗಬಾರದೆಂದು ಯಲಹಂಕದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಕನಿಷ್ಠ 10 ಲಕ್ಷ ಜನ ಸೇರುತ್ತಾರೆ ಎಂಬ ವಿಶ್ವಾಸ ಇದೆ. ಅವರಿಗೆ ನಿರಂತರ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಕಳೆದ 10 ವರ್ಷದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಾಡಿದ ಅನಾಹುತಗಳ ಬಗ್ಗೆ ಬಹಿರಂಗ ಮಾಡುತ್ತೇವೆ. ಸಮ್ಮಿಶ್ರ ಸರ್ಕಾರ ಬರಬಹುದು ಎಂಬ ಭಾವನೆ ನಾಳಿನ ಜೆಡಿಎಸ್ ಕಾರ್ಯಕ್ರಮದಿಂದ ದೂರವಾಗಲಿದೆ. ಯಾವುದೇ ಸಮಸ್ಯೆಗೆ ಕಾಲಾವಧಿ ನಿಗದಿಪಡಿಸಿ ಪರಿಹಾರ ಕೊಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಇದೇವೇಳೆ, ರಾಹುಲ್ ಗಾಂಧಿ, ನರೇಂದ್ರ ಮೋದಿಯವರಿಗೆ ಉತ್ತರ ಕೊಡಲು ಈ ಕಾರ್ಯಕ್ರಮ ಮಾಡುತ್ತಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಹಾಲಿ ಶಾಸಕರಿಗೆ ಟಿಕೆಟ್ ಕೊಡುವ ಬಗ್ಗೆ ತಿಳಿಸಿದ ಕುಮಾರಸ್ವಾಮಿ, ಹಾಲಿ ಶಾಸಕರೆಲ್ಲರಿಗೂ ಟಿಕೆಟ್ ಕೊಡುವ ಆಶಯ ಇತ್ತು. ಕೆಲ ಶಾಸಕರು ವೈಯಕ್ತಿಕ ಕಾರಣ ನೀಡಿ, ಬೇರೆಯವರಿಗೆ ಟಿಕೆಟ್ ನೀಡಿ ಎಂದು ಅವರೇ ಹೇಳುತ್ತಿದ್ದಾರೆ. ಆದರೂ ಅವರಿಗೇ ನಿಲ್ಲುವಂತೆ ಒತ್ತಾಯ ಮಾಡಿದ್ದೇನೆ. ಜನ ಮತ್ತು ಜನಪ್ರತಿನಿಧಿಗಳ ಮಧ್ಯೆ ಪರಸ್ಪರ ವಿಶ್ವಾಸ ಮೂಡಬೇಕು. ಅದಕ್ಕಾಗಿ ನಾವು ಜನಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸುತ್ತೇವೆ. ಸಮಾಜದ ಹಿರಿಯ ಗೌರವಾನ್ವಿತ ವ್ಯಕ್ತಿಯೊಬ್ಬರು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸಮಾವೇಶದಂದು ಸುಮಾರು 100 ಎಲ್​ಸಿ ಡಿ ವಾಹನಗಳು ಅಂದು ಚಾಲನೆಗೊಳ್ಳಲಿವೆ. ಜೆಡಿಎಸ್ ಪಕ್ಷದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಈ ವಾಹನಗಳು ಸಂಚರಿಸಲಿವೆ. ಅರ್ಧ ಚುನಾವಣೆ ಹದಿನೇಳನೇ ತಾರೀಕೇ ಮುಗಿಯಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ