ಚಿತ್ರದುರ್ಗ: ದಾಳಿ ಬಳಿಕ ನೋಟಿಸ್ (Notice) ಪಡೆಯುವ ವೇಳೆ ಜೆಡಿಎಸ್ ಅಭ್ಯರ್ಥಿ (JDS Candidate) ರಘು ಆಚಾರ್ (Raghu Achar) ಐಟಿ ಅಧಿಕಾರಿಗಳಿಗೆ ಅವಾಜ್ ಹಾಕಿರುವ ಮಾಹಿತಿ ಲಭ್ಯವಾಗಿದೆ. ನಮ್ಮ ಸರ್ಕಾರ ಬರಲಿ ಆಗ ಹೇಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳವಾರ ರಘು ಆಚಾರ್ ಅವರ ಕ್ಯಾದಿಗ್ಗೆರೆ ಗ್ರಾಮದ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ದಾಳಿ ವೇಳೆ 58 ಲಕ್ಷ 83 ಸಾವಿರ ರೂಪಾಯಿ ನಗದು (Cash) ಮತ್ತು 239 ಲೀಟರ್ ಬಿಯರ್ ಮತ್ತು 9 ಲೀಟರ್ ಮದ್ಯ (Liquor) ಸಿಕ್ಕಿದ್ದು, ಜಪ್ತಿ ಮಾಡಲಾಗಿದೆ. ದಾಳಿ ಅಂತ್ಯಗೊಂಡ ಬಳಿಕ ಅಧಿಕಾರಿಗಳು ನೋಟಿಸ್ ನೀಡುತ್ತಿರುವಾಗ ಬೆದರಿಕೆ ಹಾಕಿದ್ದಾರೆ.
ಹಿರಿಯೂರು ಜೆಡಿಎಸ್ ಅಭ್ಯರ್ಥಿ ಮನೆ ಮೇಲೆಯೂ ದಾಳಿ
ಹಿರಿಯೂರು ಜೆಡಿಎಸ್ ಅಭ್ಯರ್ಥಿ ಎಂ. ರವೀಂದ್ರಪ್ಪ ಅವರ ಹಿರಿಯೂರಿನಲ್ಲಿರುವ ಮನೆ ಮೇಲೆ 6 ಜನ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು.
ರವೀಂದ್ರಪ್ಪ ಪತ್ನಿ ಲತಾ ಅವರನ್ನು ಐಟಿ ವಶಕ್ಕೆ ಪಡೆದಿದೆ. ಸೊಸೆ ಶ್ವೇತಾರನ್ನು ಅಧಿಕಾರಿಗಳು ವಿಚಾರಣೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಶೋಕ್ ಖೇಣಿ ಸೋದರನ ಕಾರ್ ಅಪಘಾತ
ಇಂದು ಬೆಳಗಿನ ಜಾವ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ (Congress Candidate Ashok Kheny) ಸಹೋದರ ಸಂಜಯ್ ಖೇಣಿ (Sanjay Kheny) ಅವರ ಕಾರ್ ಅಪಘಾತಕ್ಕೊಳಗಾಗಿದೆ.
ಇದನ್ನೂ ಓದಿ: Karnataka Election Voting 2023 LIVE: ಕರ್ನಾಟಕ ವಿಧಾನಸಭಾ ಚುನಾವಣೆ - ಗ್ರೀನ್ ಕಾರ್ಪೆಟ್ ಹಾಸಿ ಖರ್ಗೆಗೆ ಸ್ವಾಗತ
ಬೀದರ್ ಜಿಲ್ಲೆಯ ಹಳ್ಳಿಖೇಡ್ (Hallikhed, Bidar) ಬಳಿ ಕಾರ್ ಪಲ್ಟಿಯಾಗಿದ್ದು, ಗಾಯಾಳು ಸಂಜಯ್ ಖೇಣಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂಜಯ್ ಖೇಣಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಜಯ್ ಖೇಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ