ಹಿರೇಕೆರೂರು ಜೆಡಿಎಸ್ ಅಭ್ಯರ್ಥಿ ಶಿವಾಚಾರ್ಯ ಸ್ವಾಮೀಜಿ ಸ್ಪರ್ಧೆಯ ಸುತ್ತ ಅನುಮಾನದ ಹುತ್ತ

ಸ್ವಾಮೀಜಿ ನಾಮಪತ್ರ ಸಲ್ಲಿಕೆಯಿಂದ ಭಕ್ತರಲ್ಲಿ ಪರ-ವಿರೋಧಗಳು ವ್ಯಕ್ತವಾಗಿದ್ದವು. ಅಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಮೀಜಿಗೆ  ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದರು.  

Latha CG | news18-kannada
Updated:November 19, 2019, 10:04 PM IST
ಹಿರೇಕೆರೂರು ಜೆಡಿಎಸ್ ಅಭ್ಯರ್ಥಿ ಶಿವಾಚಾರ್ಯ ಸ್ವಾಮೀಜಿ ಸ್ಪರ್ಧೆಯ ಸುತ್ತ ಅನುಮಾನದ ಹುತ್ತ
ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ
  • Share this:
ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿವಲಿಂಗ  ಶಿವಾಚಾರ್ಯ ಸ್ವಾಮೀಜಿ ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧಾರ ಮಾಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ನಾಳೆ ನಾಮಪತ್ರ ಹಿಂಪಡೆಯುತ್ತೇನೆ. ಹಲವು ಮಠಾಧೀಶರ ಸಲಹೆ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಸ್ವಾಮೀಜಿ ಹೇಳಿದ್ದಾರೆ ಎನ್ನಲಾಗಿದೆ.

ಆದರೆ ಇನ್ನೊಂದೆಡೆ, ಲಿಂಗಾಯತ ಮತ ವಿಭಜನೆ ಆರೋಪ ಹಿನ್ನೆಲೆ, ಸ್ವಾಮೀಜಿ ಸ್ಪರ್ಧೆಯಿಂದ ಹಿಂದೆ ಸರಿಯಲು ಕುಮಾರಸ್ವಾಮಿ ಮನವಿ ಮಾಡಿದ್ದರು.  ಪಟ್ಟುಬಿಡದೆ ಅಜ್ಞಾತ ಸ್ಥಳದಲ್ಲಿ ಇರುವ ಸ್ವಾಮೀಜಿಗಳು, ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅನರ್ಹ ಶಾಸಕ ಬಿ ಸಿ ಪಾಟೀಲ್​ ಅವರನ್ನು ಸೋಲಿಸಲು ಮಾಜಿ ಪ್ರಧಾನಿ ಎಚ್​​. ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಮಾಸ್ಟರ್​ ಪ್ಲಾನ್​ ಮಾಡಿದ್ದರು.  ಈ ದಳಪತಿಗಳು ಕೊನೆಯ ಕ್ಷಣದಲ್ಲಿ ಜೆಡಿಎಸ್ ಟಿಕೆಟ್ ಬದಲಾವಣೆ ಮಾಡಿ, ಶಿವಾಚಾರ್ಯ ಸ್ವಾಮೀಜಿಗಳ ಮೊರೆ ಹೋಗಿದ್ದರು. ರಟ್ಟಿಹಳ್ಳಿಯ ಕಬ್ಬಿನ ಕಥಿಮಠದ ಶಿವಲಿಂಗ ಶಿವಾಚಾರ್ಯ ಜೆಡಿಎಸ್​​ನಿಂದ ಸ್ಪರ್ಧೆ ಮಾಡುತ್ತಾರೆ ಎಂದು ಘೋಷಿಸಿದ್ದರು.

ಲಕ್ಷ್ಮಣ್ ಸವದಿ- ಉಮೇಶ್ ಕತ್ತಿ ಜತೆಗಿನ ಸಿಎಂ ಸಂಧಾನ ಯಶಸ್ವಿ; ಒಟ್ಟಿಗೆ ಕೆಲಸ ಮಾಡಲು ಒಪ್ಪಿಕೊಂಡ ಉಭಯ ನಾಯಕರು

ಸ್ವಾಮೀಜಿ ನಾಮಪತ್ರ ಸಲ್ಲಿಕೆಯಿಂದ ಭಕ್ತರಲ್ಲಿ ಪರ-ವಿರೋಧಗಳು ವ್ಯಕ್ತವಾಗಿದ್ದವು. ಅಷ್ಟೇ ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಮೀಜಿಗೆ  ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದರು.  ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪಂಚಪೀಠ ಸ್ವಾಮೀಜಿಗಳಿಂದ ಶಿವಾಚಾರ್ಯ ಅವರಿಗೆ ಮನವೊಲಿಸಲು ಬಾರಿ ಕಸರತ್ತು ನಡೆದಿತ್ತು. ಹೀಗಾಗಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಜೆಡಿಎಸ್ ಮುಖಂಡ ಎನ್.ಎಚ್. ಕೋನರೆಡ್ಡಿ, "ಈಗಾಗಲೇ ನಾನು ರಟ್ಟಿಹಳ್ಳಿಗೆ ಹೋಗಿ ಬಂದಿದ್ದೇನೆ. ಶಿವಾಚಾರ್ಯ ಸ್ವಾಮೀಜಿ‌ ನಮ್ಮ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಪಂಚಪೀಠದ ಜಗದ್ಗುರುಗಳಿಂದ  ಚುನಾವಣೆಗೆ ನಿಲ್ಲದಂತೆ ಸ್ವಾಮೀಜಿಗಳಿಗೆ ಒತ್ತಡ ಬಂತು.  ಮಾನಸಿಕವಾಗಿ ಸ್ವಾಮೀಜಿಗೆ ತೊಂದರೆಯಾಗಬಾರದು. ಇದೇ ಕಾರಣಕ್ಕೆ ಎಚ್​​ಡಿಕೆ ಸ್ವಾಮೀಜಿಗೆ ಸ್ಪರ್ಧಿಸದಂತೆ ಮನವಿ ಮಾಡಿಕೊಂಡಿದ್ದಾರೆ. ಧರ್ಮದಲ್ಲಿ ರಾಜಕಾರಣವನ್ನು ಜೆಡಿಎಸ್ ಬಯಸುವುದಿಲ್ಲ. ಇದು ಕುಮಾರಸ್ವಾಮಿ ಅವರ ನಂಬಿಕೆ. ನೀವು ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು ಅಂತಾನೂ ಹೇಳಿದ್ದಾರೆ. ಬಿಜೆಪಿಗೆ ಸೋಲಿನ ಭೀತಿಯಿದೆಯೇನೋ? ಅದೇ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ. ಸ್ವಾಮೀಜಿ ನಿರ್ಧಾರಕ್ಕೆ ನಮ್ಮ ಪಕ್ಷ ಬದ್ಧ," ಎಂದು ಹೇಳಿದರು.

ಗೊಟಬಯ ರಾಜಪಕ್ಸರನ್ನು ಭೇಟಿ ಮಾಡಿದ ವಿದೇಶಾಂಗ ಸಚಿವ ಜೈಶಂಕರ್; ನ.29ರಂದು ಭಾರತಕ್ಕೆ ಶ್ರೀಲಂಕಾ ನೂತನ ಅಧ್ಯಕ್ಷಭಕ್ತನೊಂದಿಗೆ ಸ್ವಾಮೀಜಿ ಮಾತಾಡಿದ ಆಡಿಯೋ ವಿಚಾರವಾಗಿ, ನಾಮಪತ್ರ ಸಲ್ಲಿಸಿದ ದಿನವೇ ಸ್ವಾಮೀಜಿ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಬಹುದಾದರೆ ನಾನ್ಯಾಕೆ ಸ್ಪರ್ಧಿಸಬಾರದು ಅಂದಿದ್ದಾರೆ. ಅದನ್ನು ನಾವು ಗೌರವಿಸುತ್ತೇವೆ. ಆದರೆ ನಮ್ಮ ಪಕ್ಷದಿಂದ ಒತ್ತಡ ಹಾಕುವುದಿಲ್ಲ. ನಮ್ಮ ಪಕ್ಷದಿಂದ ಬೇರೆಯವರಿಗೆ ಟಿಕೆಟ್ ಫೈನಲ್ ಆಗಿತ್ತು ಆದರೆ ಮಧ್ಯರಾತ್ರಿ ಸ್ವಾಮೀಜಿ ನಿಲ್ಲುವುದು ಗೊತ್ತಾಯಿತು. ಜನರು ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು ಹೀಗಾಗಿ ನಾವು ಅಭ್ಯರ್ಥಿ ಬದಲಾಯಿಸಿದೆವು. ಒಂದು ವೇಳೆ ಅವರು ನಿಲ್ಲಲು ಬಯಸಿದರೆ ನಾವು ಬೆಂಬಲಿಸುತ್ತೇವೆ. ಆದರೆ ಅವರಿಗೆ ಏನೂ ತೊಂದರೆಯಾಗಬಾರದು. ಅದೇ‌ ನಮ್ಮ ಕಾಳಜಿ ಎಂದು ಕೋನರೆಡ್ಡಿ ತಿಳಿಸಿದರು.

First published:November 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ