ಯಡಿಯೂರಪ್ಪ ಅವರಿಗೆ ಮೈತ್ರಿ ಸರ್ಕಾರ ಬೀಳಿಸಲು ಸಾಧ್ಯವಿಲ್ಲ: ಮಧು ಬಂಗಾರಪ್ಪ

ಸೊರಬ ಶಾಸಕರನ್ನು ರಾಜಕೀಯವಾಗಿ ಬಿಟ್ಟು ಬೇರೆ ರೀತಿ ಬಳಸಿಕೊಂಡರು. ಕುಮಾರ್ ಬಂಗಾರಪ್ಪ ಬಿಜೆಪಿಯವರಿಗೆ ಒಳ್ಳೆಯ ಪಿಆರ್​ಓ ಆಗಿದ್ದಾರೆ ಅಷ್ಟೇ. ಕುಮಾರ್‌ ಬಂಗಾರಪ್ಪ ಅವರಿಂದ ಒಗ್ಗಟ್ಟಾಗಿರುವ ಹೆಚ್ಚಿನ ಮತಗಳು ನನಗೆ ಬರುತ್ತವೆ. ಮಧು ಒಬ್ಬ ಹೋರಾಟಗಾರ ಎಂಬುದು ಜನರಿಗೆ ಈ ಬಾರಿಯ ಚುನಾವಣೆಯಲ್ಲಿ ತಿಳಿದಿದೆ.

G Hareeshkumar | news18
Updated:April 24, 2019, 4:32 PM IST
ಯಡಿಯೂರಪ್ಪ ಅವರಿಗೆ ಮೈತ್ರಿ ಸರ್ಕಾರ ಬೀಳಿಸಲು ಸಾಧ್ಯವಿಲ್ಲ: ಮಧು ಬಂಗಾರಪ್ಪ
ಮಧು ಬಂಗಾರಪ್ಪ
G Hareeshkumar | news18
Updated: April 24, 2019, 4:32 PM IST
ಶಿವಮೊಗ್ಗ(ಏ. 24):  ಈ ಜನ್ಮದಲ್ಲಿ ಯಡಿಯೂರಪ್ಪ ಅವರಿಗೆ ಕುಮಾರಸ್ವಾಮಿ‌ ನೇತೃತ್ವದ ಮೈತ್ರಿ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ. ಬಿಜೆಪಿಯವರೇ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲಿದ್ದಾರೆ. ಬಿಜೆಪಿ ಮುಖಂಡರೇ ನನಗೆ ಸಹಾಯ ಮಾಡಿಕೊಟ್ಟಿದ್ದಾರೆ. ಯಡಿಯೂರಪ್ಪ‌ ಅವರು ಮೇ 23 ರ ಬಳಿಕ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಾರೆ. ಮೇ 23 ರ ಬಳಿಕ‌ ಸರ್ಕಾರ ಬೀಳುವುದು ಖಚಿತ. ಆದರೆ ರಾಜ್ಯ ಸರ್ಕಾರವಲ್ಲ. ಬದಲಿಗೆ ಕೇಂದ್ರ ಸರ್ಕಾರ ಎಂದು ಶಿವಮೊಗ್ಗದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಜೀವನದಲ್ಲಿ ಅತ್ಯಂತ ಸಂಘಟಿತವಾಗಿ ಎದುರಿಸಿದ ಚುನಾವಣೆ ಇದಾಗಿದೆ. ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲೂ ಹೆಚ್ಚಿನ ಲೀಡ್ ಪಡೆಯಲಿದ್ದೇವೆ. ಬಿಜೆಪಿಯವರಿಗೆ ಮಧು ಬಂಗಾರಪ್ಪ ಅವರ ಬಗ್ಗೆ ಯೋಚನೆ ಇತ್ತೇ ಹೊರತು ಹತ್ತು ವರ್ಷದಲ್ಲಿ ತಾವೇನು ಸಾಧನೆ ಮಾಡಿದ್ದೇವೆ ಎಂದು ಹೇಳಲಿಲ್ಲ. ಹೇಳಿಕೊಳ್ಳಲು ಬಿಜೆಪಿ ಬಳಿ ಸಾಧನೆ ಇಲ್ಲ. 2009 ರಲ್ಲಿ ಅಡ್ಡದಾರಿಯ ಮೂಲಕವೇ ಯಡಿಯೂರಪ್ಪ‌ ಅವರು ಬಂಗಾರಪ್ಪ ವಿರುದ್ಧ ತಮ್ಮ ಮಗನನ್ನು ಗೆಲ್ಲಿಸಿಕೊಂಡಿದ್ದರು. ಈಗ ನಾವು ಪ್ರಾಮಾಣಿಕವಾಗಿ ಮತಯಾಚನೆ ನಡೆಸಿದ್ದೇವೆ. ಗೆಲ್ಲುವ ವಿಶ್ವಾಸವಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಕುಮಾರ್ ಬಂಗಾರಪ್ಪ ಬಿಜೆಪಿಯವರಿಗೆ ಒಳ್ಳೆಯ ಪಿಆರ್​ಓ: 

ಸೊರಬ ಶಾಸಕರನ್ನು ರಾಜಕೀಯವಾಗಿ ಬಿಟ್ಟು ಬೇರೆ ರೀತಿ ಬಳಸಿಕೊಂಡರು. ಕುಮಾರ್ ಬಂಗಾರಪ್ಪ ಬಿಜೆಪಿಯವರಿಗೆ ಒಳ್ಳೆಯ ಪಿಆರ್​ಓ ಆಗಿದ್ದಾರೆ ಅಷ್ಟೇ. ಕುಮಾರ್‌ ಬಂಗಾರಪ್ಪ ಅವರಿಂದ ಒಗ್ಗಟ್ಟಾಗಿರುವ ಹೆಚ್ಚಿನ ಮತಗಳು ನನಗೆ ಬರುತ್ತವೆ. ಮಧು ಒಬ್ಬ ಹೋರಾಟಗಾರ ಎಂಬುದು ಜನರಿಗೆ ಈ ಬಾರಿಯ ಚುನಾವಣೆಯಲ್ಲಿ ತಿಳಿದಿದೆ. ಬಿ.ವೈ. ರಾಘವೇಂದ್ರ‌ ಹಾಗೂ ಯಡಿಯೂರಪ್ಪ ಅವರು ಜನಪ್ರತಿನಿಧಿಯಾಗುವ ಯೋಗ್ಯತೆಯನ್ನ ಕಳೆದುಕೊಂಡಿದ್ದಾರೆ ಎಂದು ಮಧು ಬಂಗಾರಪ್ಪ ವ್ಯಂಗ್ಯವಾಡಿದರು.

ಇದನ್ನೂ ಓದಿ: ಮಧು ಬಂಗಾರಪ್ಪ ಗೆಲ್ಲಿಸಿದ್ರೆ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ; ಶಿವಮೊಗ್ಗ ಜನತೆಗೆ ಸಿಎಂ ಭರವಸೆ

ಹೋರಾಟ ಮಾಡುವುದು ಮುಖ್ಯವಲ್ಲ ಹೋರಾಟದಿಂದ ಸಿಕ್ಕ ಫಲ ಏನು ಎಂಬುದು ಮುಖ್ಯ. ವೈಯಕ್ತಿಕ ವಿಷಯ ತೆಗೆದು ಈ ಬಾರಿ ಚುನಾವಣೆ ವೇಳೆ ನನ್ನ ಬಗ್ಗೆ ಟೀಕೆ ಮಾಡಿದರು. ಅನಾವಶ್ಯಕವಾಗಿ ನಟ ಡಾ. ಶಿವರಾಜ್ ಕುಮಾರ್ ಹೆಸರನ್ನು ಎಳೆದು ತರಲಾಯಿತು. ಚುನಾವಣೆ ಸಮಯದಲ್ಲಿ ನಾನು ಟೀಕೆಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಸುಮ್ಮನಿದ್ದೆ. ಇನ್ನು ಸುಮ್ಮನಿರುವುದಿಲ್ಲ ಎಂದು ಮಧು ಬಂಗಾರಪ್ಪ ಆಕ್ರೊಶ ವ್ಯಕ್ತಪಡಿಸಿದರು.
Loading...

ಪ್ರಧಾನಿ ನರೇಂದ್ರ ಮೋದಿ ಅಲೆ ಇಲ್ಲ:

ಶಿಕಾರಿಪುರ ಕ್ಷೇತ್ರದಲ್ಲೂ ಈ ಬಾರಿ ಲೀಡ್ ಬರುವ ವಿಶ್ವಾಸವಿದ್ದು, ಪ್ರಧಾನಿ ನರೇಂದ್ರ  ಮೋದಿ ಅಲೆ ಇಲ್ಲವೇ ಇಲ್ಲ. ಕೆಲವೆಡೆ ಯುವಕರು ಮೋದಿ ಮೋದಿ ಎಂದು ಕೂಗುತ್ತಾರೆ. ಅವರಿಗೆ ಮೋದಿ ಏನು ಮಾಡಿಕೊಟ್ಟಿದ್ದಾರೋ ಗೊತ್ತಿಲ್ಲ. ಮೋದಿ ಎಂದು ಕೂಗುವ ಯುವಕರು ತಮ್ಮ ಭವಿಷ್ಯದ ಮೇಲೆ ತಾವೇ ಚಪ್ಪಡಿ ಎಳೆದುಕೊಳ್ಳುತ್ತಾರೆ. ದೇಶದಲ್ಲಿ ಐಟಿ ಹಾಗೂ ಇಲಾಖೆ ದುರುಪಯೋಗಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ :  ದೇಶವನ್ನು ಬಿಜೆಪಿ ಮುಕ್ತ ಮಾಡಲು ಜನರ ತೀರ್ಮಾನ ; ಮಧು ಬಂಗಾರಪ್ಪ

ಮಂಡ್ಯದಲ್ಲಿ ಚುನಾವಣೆ ಸಮಯದಲ್ಲಿ ಐಟಿ ದಾಳಿ‌ನಡೆಸಿದರು. ಅದೇ ಐಟಿ ತಂಡವನ್ನು ಶಿವಮೊಗ್ಗಕ್ಕೆ ಕರೆತಂದರು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್ ಅವರು ಸಿಎಂ ಭೇಟಿ ಮಾಡಿದರು ಎಂಬ ಕಾರಣಕ್ಕೆ ಐದು ಗಂಟೆ ಐಟಿಯವರು ವಿಚಾರಣೆಗೊಳಪಡಿಸಿದರು. ಮಾನಸಿಕವಾಗಿ ಐಟಿಯವರ ಮೂಲಕ ಒತ್ತಡ ಹಾಕಿಸುವ ಕೆಲಸವನ್ನು ಬಿಜೆಪಿಯವರು ಮಾಡಿದ್ದಾರೆ ಎಂದು ಮಧು ಬಂಗಾರಪ್ಪ ಆರೋಪ ಮಾಡಿದರು.

First published:April 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626