ಗೋಕಾಕ್​​​ನಲ್ಲಿ ಪ್ರಾಮಾಣಿಕರಿಗೆ ಕಾಲವಿಲ್ಲ- ಗಾಂಧೀನೇ ಬಂದ್ರೂ ಗೆಲ್ಲೋಕೆ ಸಾಧ್ಯವಿಲ್ಲ ; ಅಶೋಕ್ ಪೂಜಾರಿ

ಕಳೆದ ಮೂರು ಚುನಾವಣೆಯಲ್ಲಿ ಸೋತಿದ್ದು ನಾನಲ್ಲ. ಸರ್ಕಾರಿ ಯಂತ್ರ, ಚುನಾವಣೆ ಆಯೋಗ ಸೋತಿದೆ. ಕೊನೆಯ ಎರಡು ದಿನದ ವರೆಗೆ ಪೂಜಾರಿ ಗೆಲುವು  ನಂತರ ಜಾರಕಿಹೊಳಿ‌ ಚುನಾವಣೆಯಲ್ಲಿ ಗೆಲುವು ಎಂದರು.

news18-kannada
Updated:November 30, 2019, 8:56 PM IST
ಗೋಕಾಕ್​​​ನಲ್ಲಿ ಪ್ರಾಮಾಣಿಕರಿಗೆ ಕಾಲವಿಲ್ಲ- ಗಾಂಧೀನೇ ಬಂದ್ರೂ ಗೆಲ್ಲೋಕೆ ಸಾಧ್ಯವಿಲ್ಲ ; ಅಶೋಕ್ ಪೂಜಾರಿ
ಅಶೋಕ್ ಪೂಜಾರಿ
  • Share this:
ಬೆಳಗಾವಿ(ನ.30): ಗೋಕಾಕ್ ನಲ್ಲಿ ಪ್ರಮಾಣಿಕರಿಗೆ ಕಾಲವಿಲ್ಲ. ಮಹಾತ್ಮಗಾಂಧಿ ಬಂದ್ರು ಚುನಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್, ಬಿಜೆಪಿ ಜಾರಕಿಹೊಳಿ‌ ಕುಟುಂಬಕ್ಕೆ ಟಿಕೆಟ್ ಕೊಟ್ಟರು. ಹೀಗಾಗಿ ಮತ್ತೆ ಹೋರಾಟ ದುಮಕ್ಕಿದ್ದೇನೆ. ಮನಸಾಕ್ಷಿ ಅನುಸಾರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ ಎಂದು ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಹೇಳಿದರು.

ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರು ಚುನಾವಣೆಯಲ್ಲಿ ಸೋತಿದ್ದು ನಾನಲ್ಲ. ಸರ್ಕಾರಿ ಯಂತ್ರ, ಚುನಾವಣೆ ಆಯೋಗ ಸೋತಿದೆ. ಕೊನೆಯ ಎರಡು ದಿನದ ವರೆಗೆ ಪೂಜಾರಿ ಗೆಲುವು  ನಂತರ ಜಾರಕಿಹೊಳಿ‌ ಚುನಾವಣೆಯಲ್ಲಿ ಗೆಲುವು ಎಂದರು.

ಬಿಜೆಪಿಯಿಂದ ಸ್ಪರ್ಧಿಸಿದ ಸಂದರ್ಭದಲ್ಲಿ ನಮ್ಮವರೇ ನಮಗೆ ಕೈ ಕೊಟ್ಟರು. ಈ ಭಾರೀ ಗೋಕಾಕ್ ಕ್ಷೇತ್ರದ ಜನರೇ ಚುನಾವಣೆ ಮಾಡಲು ಸಿದ್ದರಾಗಿದ್ದಾರೆ. ಹಣ, ಗುಂಡಾಗಿರಿಯಿಂದ ಮೆರೆಯುವರಿಗೆ ವಾಸ್ತವ ಸ್ಥಿತಿಯ ತಿಳಿಸಬೇಕಿದೆ. ನಾನು ಹುಟ್ಟಾ ಜಂಗಮ. ನನ್ನ ಜಂಗಮ ಜೋಳಿಗೆ ವಿರುದ್ಧ ನೋಟಿಸ್ ಬಂದಿವೆ ಎಂದು ತಿಳಿಸಿದರು.

ಇದನ್ನೂ ಓದಿ :  ನಾನೇನು ಮಲಗಿ ಮುಖ್ಯಮಂತ್ರಿಯಾಗಿಲ್ಲ - ದಿನಕ್ಕೆ 20 ಗಂಟೆ ಕೆಲಸ ಮಾಡಿ ಸಿಎಂ ಆಗಿದ್ದೇನೆ ; ಕುಮಾರಸ್ವಾಮಿ

ರಮೇಶ ಜಾರಕಿಹೊಳಿ‌ ಗೋಕಾಕ್ ಅಭಿವೃದ್ಧಿಗೆ ರಾಜೀನಾಮೆ ಕೊಟ್ಟಿಲ್ಲ. ನೀರಾವರಿ ಖಾತೆ ಪಡೆದು ಹಣ ಮಾಡಿ ಸರ್ಕಾರ ಕ ಉರುಳಿಸಲು ರಾಜೀನಾಮೆ ಕೊಟ್ಟಿದ್ದಾರೆ ಎಂದರು.
First published:November 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ