ರಾಜ್ಯಸಭೆಗೆ ದೇವೇಗೌಡರ ಸ್ಪರ್ಧೆ: ಇಂದು ಜೆಡಿಎಸ್​ ಶಾಸಕಾಂಗ ಪಕ್ಷ ಸಭೆಯಲ್ಲಿ ಅಂತಿಮ ನಿರ್ಧಾರ

ಇಂದು ನಡೆಯುವ ಜೆಡಿಎಸ್​ ಸಭೆಯ ಬಳಿಕ ಗೌಡರ ರಾಜ್ಯಸಭೆ ಹಾದಿಯ ಬಗ್ಗೆ ಸ್ಪಷ್ಟತೆ ಸಿಗಲಿದೆ. ಆದರೆ ಖರ್ಗೆ ಪಾಲಿಗಿನ್ನೂ ರಾಜ್ಯಸಭೆಯ ಹಾದಿ ಸಂಪೂರ್ಣವಾಗಿ ತೆರೆದಿಲ್ಲ. ಈ ಬಗ್ಗೆ ಕಾಂಗ್ರೆಸ್​ ಹೈಕಮಾಂಡ್​ ನಿರ್ಧರಿಸಲಿದೆ

ದೇವೇಗೌಡ-ಮಲ್ಲಿಕಾರ್ಜುನ ಖರ್ಗೆ.

ದೇವೇಗೌಡ-ಮಲ್ಲಿಕಾರ್ಜುನ ಖರ್ಗೆ.

  • Share this:
ಬೆಂಗಳೂರು: ಜೂನ್ 19ರಂದು ರಾಜ್ಯಸಭೆ ಚುನಾವಣೆ ಹಿನ್ನೆಲೆ ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಬೆಂಗಳೂರಿನ ಜೆಪಿ ಭವನದಲ್ಲಿ ನಡೆಯಲಿದೆ. ಇದು ಮಹತ್ವದ ಸಭೆಯಾಗಿದ್ದು, ರಾಜ್ಯಸಭೆ ಮತ್ತು ಎಂಎಲ್​ಸಿ ಚುನಾವಣೆಯಲ್ಲಿ ಜೆಡಿಸ್ ಕೈಹಿಡಿಯಬೇಕೋ? ಇಲ್ಲವೇ ಕಮಲ ಮುಡಿಯಬೇಕೋ ಅನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗಾಗಲೇ ಕೆಲವು ಶಾಸಕರು ಬಿಜೆಪಿ ಬೆಂಬಲ ಪಡೆಯಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಇನ್ನು ಕೆಲವು  ಶಾಸಕರ ಚಿತ್ತ ಕಾಂಗ್ರೆಸ್ ಬೆಂಬಲ ಪಡೆಯುವ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಭೆ ನಡೆಯಲಿದೆ.

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಕುಮಾರಸ್ವಾಮಿ, ಪಕ್ಷದ ಶಾಸಕರು,  ಎಂಎಲ್​ ಸಿಗಳು ಮತ್ತು ಸಂಸದರ ಅಭಿಪ್ರಾಯ ಪಡೆಯಲಿದ್ದಾರೆ. ಈಗಾಗಲೇ ದೇವೇಗೌಡರ ಸ್ಪರ್ಧೆಗೆ ಜೆಡಿಎಸ್ ಶಾಸಕರು ಒತ್ತಡ ಹಾಕಿದ್ದಾರೆ, ಹೀಗಾಗಿ ಇಂದು ಶಾಸಕರ ಜೊತೆ ಚರ್ಚಿಸಿ ಸ್ಪರ್ಧೆ  ಬಗ್ಗೆ ಅಂತಿಮ ತೀರ್ಮಾನ ಮಾಡುವ ಸಾಧ್ಯತೆಯಿದೆ. ಜತೆಗೆ ರಾಜ್ಯಸಭೆ ಮತ್ತು ವಿಧಾನ ಪರಿಷತ್​ಗೆ ಬೇಕಿರುವ ಉಳಿದ ಮತಗಳನ್ನು ಯಾವ ಪಕ್ಷದಿಂದ ಪಡೆಯಬೇಕು ಎಂಬ ಬಗ್ಗೆಯೂ ಮಹತ್ವದ ಚರ್ಚೆಯಾಗಲಿದೆ. ಇನ್ನು  ಸ್ಪರ್ಧೆ ಬಗ್ಗೆ ಉತ್ಸುಕರಾಗಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ ಈ ಸಭೆ ಮಹತ್ವದಾಗಿದೆ.

ಕಾಂಗ್ರೆಸ್​​ನಲ್ಲೂ ರಾಜ್ಯಸಭೆ ಚುನಾವಣೆಯ ಟಿಕೆಟ್​ಗಾಗಿ ಭಾರೀ ಪೈಪೋಟಿ ಎದುರಾಗಿದೆ. ಒಂದೆಡೆ ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಮಲ್ಲಿಕಾರ್ಜುನ್​ ಖರ್ಗೆ ಅವರನ್ನು ರಾಜ್ಯಸಭೆಗೆ ಕಳಿಸಬೇಕು ಎಂಬ ಮಾತುಗಳು ಕೇಳಿ ಬಂದರೆ, ಇನ್ನೊಂದೆಡೆ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರಿಗಾಗಿ ತುಮಕೂರು ಕ್ಷೇತ್ರ ಬಿಟ್ಟುಕೊಟ್ಟಿದ್ದ ಮುದ್ದಹನುಮೇಗೌಡರ ಪರ ಲಾಬಿ ನಡೆಯುತ್ತಿದೆ.

ಇದನ್ನೂ ಓದಿ: ಗರ್ಭಿಣಿ ಆನೆ ಹತ್ಯೆ ಪ್ರಕರಣದಲ್ಲಿ ಓರ್ವ ಅರೆಸ್ಟ್​; ಅಷ್ಟಕ್ಕೂ ಈತ ಯಾರು ಗೊತ್ತಾ?

ಬಿ.ಕೆ. ಹರಿಪ್ರಸಾದ್​ ಮತ್ತು ಡಾ. ರಾಜೀವ್​ ಗೌಡ ಅವರ ರಾಜ್ಯಸಭಾ ಅವಧಿ ಮುಗಿದಿದ್ದು ಕಾಂಗ್ರೆಸ್​ ಇಬ್ಬರ ಜಾಗದಲ್ಲಿ ಒಬ್ಬರನ್ನು ಮಾತ್ರ ಕಳಿಸಲು ಶಕ್ತವಾಗಿದೆ. ರಾಜ್ಯಸಭಾ ಸದಸ್ಯತ್ವದ ಆಯ್ಕೆಗೆ 44 ಮತಗಳು ಬೇಕಿದ್ದು, ಕಾಂಗ್ರೆಸ್​ 68 ಶಾಸಕರನ್ನು ಹೊಂದಿದೆ. ಈ ಹಿನ್ನೆಲೆ, ಸೋನಿಯಾ ಗಾಂಧಿ ಅವರು ದೇವೇಗೌಡರನ್ನು ಕಣಕ್ಕೆ ಇಳಿಸುವ ನಿರ್ಧಾರ ಮಾಡಿದ್ದರು. ಜೆಡಿಎಸ್​ ಪ್ರಸ್ತುತ 34 ಶಾಸರಕರನ್ನು ಹೊಂದಿದ್ದು, ಗೆಲ್ಲಲು ಬೇಕಾದ ಮಿಕ್ಕ ಮತಗಳನ್ನು ಕಾಂಗ್ರೆಸ್​ ನೀಡುವುದಾಗಿ ಆಶ್ವಾಸನೆ ನೀಡಿದೆ.

ಇದನ್ನೂ ಓದಿ: ನವಜೋತ್ ಸಿಂಗ್ ಸಿಧು ಎಎಪಿ ಸೇರ್ಪಡೆಗೆ ಪ್ರಶಾಂತ್ ಕಿಶೋರ್ ಮಧ್ಯಸ್ಥಿಕೆ ಊಹಾಪೋಹದ ನಡುವೆ ಪಕ್ಷಕ್ಕೆ ಸ್ವಾಗತ ಕೋರಿದ ಸಿಎಂ ಕೇಜ್ರಿವಾಲ್

ಆದರೆ ಒಂದೇ ಒಂದು ಬಾರಿ ಕೂಡ ಪರೋಕ್ಷ ಚುನಾವಣೆಯಿಂದ ಆಯ್ಕೆಯಾಗದ ದೇವೇಗೌಡರು, ಇದು ತಮ್ಮ ಪ್ರತಿಷ್ಠೆಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದರು. 1962ರಿಂದ ನೇರ ಚುನಾವಣೆ ಮೂಲಕವೇ ವಿಧಾನಸಭೆ, ಲೋಕ ಸಭೆ ಪ್ರವೇಶಿಸಿರುವ ಗೌಡರು, ಈ ಬಾರಿ ರಾಜ್ಯಸಭೆಗೆ ಕಾಲಿಟ್ಟರೆ, ಮೊದಲ ಬಾರಿಗೆ ಪರೋಕ್ಷ ಚುನಾವಣೆಯಿಂದ ಆಯ್ಕೆಯಾದಂತಾಗುತ್ತದೆ.

ಇದನ್ನೂ ಓದಿ: Lunar Eclipse 2020: ಇಂದು ರಾತ್ರಿ ಸಂಭವಿಸಲಿದೆ ಅಪರೂಪದ ಸ್ಟ್ರಾಬೆರಿ ಚಂದ್ರಗ್ರಹಣ; ಭಾರತದಲ್ಲಿ ಗೋಚರವಿದೆಯೇ?

ಇನ್ನೂ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವನ್ನು ಧೈರ್ಯವಾಗಿ ಮತ್ತು ಸಮರ್ಥವಾಗಿ ಎದುರಿಸಬಲ್ಲ ನಾಯಕ ಮಲ್ಲಿಕಾರ್ಜುನ್​ ಖರ್ಗೆ. ಇದನ್ನು ಅವರು ಹಲವಾರು ಬಾರಿ ಸಾಭೀತುಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರು ಖರ್ಗೆ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಒಟ್ಟಿನಲ್ಲಿ ಇಂದು ನಡೆಯುವ ಜೆಡಿಎಸ್​ ಸಭೆಯ ಬಳಿಕ ಗೌಡರ ರಾಜ್ಯಸಭೆ ಹಾದಿಯ ಬಗ್ಗೆ ಸ್ಪಷ್ಟತೆ ಸಿಗಲಿದೆ. ಆದರೆ ಖರ್ಗೆ ಪಾಲಿಗಿನ್ನೂ ರಾಜ್ಯಸಭೆಯ ಹಾದಿ ಸಂಪೂರ್ಣವಾಗಿ ತೆರೆದಿಲ್ಲ. ಈ ಬಗ್ಗೆ ಕಾಂಗ್ರೆಸ್​ ಹೈಕಮಾಂಡ್​ ನಿರ್ಧರಿಸಲಿದೆ.
First published: