ಕರ್ನಾಟಕ ಉಪಚುನಾವಣೆ: 10 ಕ್ಷೇತ್ರಗಳಿಗೆ ಜೆಡಿಎಸ್​ ಅಭ್ಯರ್ಥಿ ಪಟ್ಟಿ ಪ್ರಕಟ

ಸುಪ್ರೀಂ ಕೋರ್ಟ್​ ತೀರ್ಪಿಗಾಗಿ ಕಾದು ಕುಳಿತಿದ್ದ ಜೆಡಿಎಸ್​, ತೀರ್ಪಿನ ಬಳಿಕ ಇಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, 10 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಹೊಸಕೋಟೆಯಲ್ಲಿ ಶರತ್​ ಬಚ್ಚೇಗೌಡಗೆ ಬೆಂಬಲಿಸಲಿದ್ದು, ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ನಾಳೆ ಘೋಷಿಸುವುದಾಗಿ ತಿಳಿಸಿದೆ. 

Seema.R | news18-kannada
Updated:November 14, 2019, 1:59 PM IST
ಕರ್ನಾಟಕ ಉಪಚುನಾವಣೆ: 10 ಕ್ಷೇತ್ರಗಳಿಗೆ ಜೆಡಿಎಸ್​ ಅಭ್ಯರ್ಥಿ ಪಟ್ಟಿ ಪ್ರಕಟ
ಮಾಜಿ ಸಿಎಂ ಕುಮಾರಸ್ವಾಮಿ
 • Share this:
ಬೆಂಗಳೂರು (ನ.14): ಈ ಬಾರಿ ಉಪಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದ ಜೆಡಿಎಸ್​ 15 ಕ್ಷೇತ್ರಗಳಿಗೆ ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 

ಸುಪ್ರೀಂ ಕೋರ್ಟ್​ ತೀರ್ಪಿಗಾಗಿ ಕಾದು ಕುಳಿತಿದ್ದ ಜೆಡಿಎಸ್​, ತೀರ್ಪಿನ ಬಳಿಕ ಇಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, 10 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಹೊಸಕೋಟೆಯಲ್ಲಿ ಶರತ್​ ಬಚ್ಚೇಗೌಡಗೆ ಬೆಂಬಲಿಸಲಿದ್ದು, ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ನಾಳೆ ಘೋಷಿಸುವುದಾಗಿ ತಿಳಿಸಿದೆ.

ಅಭ್ಯರ್ಥಿಗಳ ಪಟ್ಟಿ 

 • ಯಲ್ಲಾಪುರ - ಚೈತ್ರಾ ಗೌಡ

 • ಹಿರೇಕೆರೂರು -ಉಜನಪ್ಪ ಜಟ್ಟೆಪ್ಪ ಕೋಡಿಹಳ್ಳಿ

 • ರಾಣೆ ಬೆನ್ನೂರು - ಮಲ್ಲಿಕಾರ್ಜುನ ಹಲಗೇರಿ
 • ವಿಜಯನಗರ - ಎನ್.ಎಂ.ನಬಿ

 • ಚಿಕ್ಕಬಳ್ಳಾಪುರ - ಕೆ.ಪಿ.ಬಚ್ಚೇಗೌಡ

 • ಕೆ.ಆರ್ ಪುರಂ - ಸಿ.ಕೃಷ್ಣಮೂರ್ತಿ

 • ಯಶವಂತಪುರ - ಟಿ.ಎನ್ ಜವರಾಯಿಗೌಡ

 • ಶಿವಾಜಿನಗರ - ತನ್ವೀರ್ ಅಹ್ಮದ್​​ವುಲ್ಲಾ

 • ಹೊಸಕೋಟೆ - ಪಕ್ಷೇತರ ಅಭ್ಯರ್ಥಿಗೆ ಬೆಂಬಲ

 • ಕೆ.ಆರ್.ಪೇಟೆ - ದೇವರಾಜ್ ಬಿ.ಎಲ್

 • ಹುಣಸೂರು - ಸೋಮಶೇಖರ್

 • ಶಿವಾಜಿನಗರ - ತನ್ವೀರ್ ಅಹ್ಮದ್ ವುಲ್ಲಾ


ಜೆಡಿಎಸ್​ ಅಭ್ಯರ್ಥಿ ಪಟ್ಟಿ ಬಿಡುಗಡೆಗೊಳಿಸಿದ ಸುದ್ದಿಗೋಷ್ಠಿ ಮಾತನಾಡಿದ ಅವರು, ದೇವೇಗೌಡರು ನಿನ್ನೆ ಬಿಜೆಪಿಗೆ ಬಹುಮತ ಬರಲಿದೆ ಎಂದಿದ್ದಾರೆ. ಹಾಗೆಂದ ಮಾತ್ರಕ್ಕೆ ನಾವು ಬಿಜೆಪಿಗೆ ಶರಣಾಗಿದ್ದೇವೆ ಎಂದಲ್ಲ. ಅವರು ರಾಜಕೀಯ ವಿಶ್ಲೇಷಣೆ ಮಾಡಿದ್ದಾರೆ ಅಷ್ಟೇ. ನಾವು ಯಾವುದೇ ಪಕ್ಷದೊಂದಿಗೆ ರಾಜಿ  ಶರಣಾಗುವ ಪ್ರಶ್ನೆ ಇಲ್ಲ. ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳದೇ, ಎಲ್ಲಾ ಕ್ಷೇತ್ರಗಳಲ್ಲಿಯೂ ನಾವು ಸ್ಪರ್ಧಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕೆ.ಆರ್.ಪೇಟೆ , ಹುಣಸೂರು ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಒಳಗೊಂಡಂತೆ. ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ನಾವು ಪ್ರಯತ್ನ ಮಾಡುತ್ತಿದ್ದೆವೆ. ಚುನಾವಣಾ ಅಖಾಡಕ್ಕೆ ನಾಳೆಯಿಂದ ಇಳಿಯುತ್ತೇವೆ. ನಾನು ಸುಮ್ಮನೆ ಬಂದಿಲ್ಲ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಯಾವ ಪಕ್ಷದವರು ಏನು ಮಾಡಿದ್ದಾರೆ ಎಂದು ಚರ್ಚೆ ನಡೆಸೋಣ. ನಮ್ಮದು ಸಣ್ಣ ಪಕ್ಷ ಇರಬಹುದು. ಆದರೆ ಆದ್ರೆ ನಮ್ಮ ಪಕ್ಷವನ್ಬು ಬುಡಸಮೇತ ಕೀಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಮೈತ್ರಿ ಸರ್ಕಾರ ಬೀಳಲು ಮೂಲ ಕಾರಣನೇ ಸುಧಾಕರ್​

ನನಗೆ ಕಾಂಗ್ರೆಸ್​ ಪಕ್ಷದ ಮೇಲೆ ಸಿಟ್ಟಿದೆ. ಕುಮಾರಸ್ವಾಮಿ ಬಗ್ಗೆ ಇಲ್ಲ. ಅವರು ಒಳ್ಳೆಯವರು ಎಂಬ ಸುಧಾಕರ್​ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಡಾ ಸುಧಾಕರ್ ಈಗ ನನ್ನ ಮೇಲೆ ಪ್ರೀತಿ ಬಂದಿದೆ. ನನ್ನ ಸರ್ಕಾರ ಬೀಳಲು ಮೂಲ ಕಾರಣವೇ ಸುಧಾಕರ್​. ಅವರು ನನ್ನ ಭೇಟಿ ಮಾಡಲು ಕೂಡ ಪ್ರಯತ್ನಿಸುತ್ತಿದ್ದಾರೆ. ಚುನಾವಣೆಗೋಸ್ಕರ ಗೆಲ್ಲಲು ಜನರಿಗೆ ಟೋಪಿ ಹಾಕುತ್ತಿದ್ದಾರೆ ಎಂದು ಟೀಕಿಸಿದರು.

ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ದುಡ್ಡು ಎಷ್ಟು ಇಟ್ಟಿದ್ದಾರೆ.  ಟೆಂಡರ್ ಆಗಿದೆಯಾ ಅದು ಯಾವುದು ಗೊತ್ತಿಲ್ಲ. ಪಾಪ ಯಡಿಯೂರಪ್ಪ ಹೋಗಿ ಗುದ್ದಲಿ ಪೂಜೆ ಮಾಡಿದರು. ಜನರಿಗೆ ಸರಿಯಾಗಿ ಟೋಪಿ ಹಾಕುತ್ತಿದ್ದಾರೆ. ನನಗೆ ಸಿದ್ದರಾಮಯ್ಯ ಮೇಲೆ ಸಿಟ್ಟಿದೆ ಕುಮಾರಸ್ವಾಮಿ ಮೇಲೆ ಅಲ್ಲ ಅಂತಾರೆ. ಆದರೆ ಇದೇ ಸುಧಾಕರ್​ ಅಂದು ಸಿದ್ದರಾಮಯ್ಯ ಅವರಂಥ ಸಿಎಂ ಇಲ್ಲ ಎಂದು ಬಹುಪರಾಕ್​ ಹಾಡಿದ್ದರು ಎಂದರು.

 

 

 

 
First published: November 14, 2019, 1:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading