ನೆರೆ ಸಂಬಂಧ ಬೇಕಾಬಿಟ್ಟಿ ಹಣ ಕೊಡಲು ನೋಟ್​ ಪ್ರಿಂಟ್​ ಮಾಡಲ್ಲ ಎಂಬ ಸಿಎಂ ಹೇಳಿಕೆಗೆ ಜೆಡಿಎಸ್ ಖಂಡನೆ​

ಶಿವಮೊಗ್ಗದಲ್ಲಿ ಪ್ರವಾಹ ಪರಿಶೀಲನೆ ಬಳಿಕ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಬಿಎಸ್​ ಯಡಿಯೂರಪ್ಪ, ಬೆಳೆ ಹಾನಿ ಕುರಿತು ಕೂಲಂಕುಷ ಅಧ್ಯಯನ ನಡೆಸಿ. ಅವಸರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವುದು ಬೇಡ. 8-10ದಿನ ಆದರೂ ಪರವಾಗಿಲ್ಲ. ಕೇಳಿದಷ್ಟು ಹಣ ನೀಡಲು ನೋಟ್​ ಪ್ರಿಂಟ್​ ಮಾಡುವ ಯಂತ್ರ ವಿಲ್ಲ ಎಂಬ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ

Seema.R | news18-kannada
Updated:August 14, 2019, 12:18 PM IST
ನೆರೆ ಸಂಬಂಧ ಬೇಕಾಬಿಟ್ಟಿ ಹಣ ಕೊಡಲು ನೋಟ್​ ಪ್ರಿಂಟ್​ ಮಾಡಲ್ಲ ಎಂಬ ಸಿಎಂ ಹೇಳಿಕೆಗೆ ಜೆಡಿಎಸ್ ಖಂಡನೆ​
ಸಿಎಂ ಬಿ.ಎಸ್.ಯಡಿಯೂರಪ್ಪ
  • Share this:
ಬೆಂಗಳೂರು (ಆ.14): ಪ್ರವಾಹ ಹಾನಿ ಕುರಿತು ಕೇಳಿದಷ್ಟು ಹಣ ಕೊಡಲು ಇಲ್ಲಿ ನೋಟ್​ ಪ್ರಿಂಟ್​ ಮಾಡಲಾಗುವುದಿಲ್ಲ ಎಂಬ ಸಿಎಂ ಬಿಎಸ್​ ಯಡಿಯೂರಪ್ಪ ಹೇಳಿಕೆಗೆ ಕಿಡಿಕಾರಿರುವ ಜೆಡಿಎಸ್​, ಅನರ್ಹ ಶಾಸಕರಿಗೆ ವಿಶೇಷ ವಿಮಾನ, ಸ್ಟಾರ್ ಹೋಟೆಲ್ ವಾಸ್ತವ್ಯ ಕಲ್ಪಿಸಲು ನೋಟ್ ಪ್ರಿಂಟ್ ಮಾಡಿಕೊಟ್ಟವರು ಯಾರು? ಎಂದು ಪ್ರಶ್ನಿಸಿದೆ.

ಶಿವಮೊಗ್ಗದಲ್ಲಿ ಪ್ರವಾಹ ಪರಿಶೀಲನೆ ಬಳಿಕ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಬಿಎಸ್​ ಯಡಿಯೂರಪ್ಪ, ಬೆಳೆ ಹಾನಿ ಕುರಿತು ಕೂಲಂಕುಷ ಅಧ್ಯಯನ ನಡೆಸಿ. ಅವಸರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವುದು ಬೇಡ. 8-10ದಿನ ಆದರೂ ಪರವಾಗಿಲ್ಲ. ಕೇಳಿದಷ್ಟು ಹಣ ನೀಡಲು ನೋಟ್​ ಪ್ರಿಂಟ್​ ಮಾಡುವ ಯಂತ್ರ ವಿಲ್ಲ ಎಂಬ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಬೆಳೆ ಹಾನಿಯನ್ನು ನಿಖರವಾಗಿ ಅಂದಾಜು ಮಾಡಿ ನೀಡಿ. ಸುಖಾಸುಮ್ಮನೆ ಬೆಳೆ ಹಾನಿ ಕುರಿತು ವರದಿ ನೀಡಬೇಡಿ ಎನ್ನುವುದ ಅವರ ಮಾತಿನ ಒಳಅರ್ಥವಾಗಿತ್ತು. ಆದರೆ, ಮಾತಿನ ಭರದಲ್ಲಿ ಅವರು ಆಡಿದ ಮಾತು ಈಗ ವಿವಾದಕ್ಕೆ ಗುರಿಯಾಗಿದೆ.

ಜೆಡಿಎಸ್​ ಟ್ವೀಟ್​​


ಸಿಎಂ ಮಾತಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಜೆಡಿಎಸ್​, ಸರ್ಕಾರಕ್ಕೆ ನೆರೆ ಸಂತ್ರಸ್ತರಿಗೆ ನೆರವು ನೀಡಲು ಹಣ ವಿರುವುದಿಲ್ಲ. ಆದರೆ, ಅನರ್ಹ ಶಾಸಕರನ್ನು ಸೆಳೆದು ಅವರಿಗೆ ಐಷಾರಾಮಿ ಕಲ್ಪಿಸಿದರು. ಅವರಿಗಾಗಿ ವಿಶೇಷ ವಿಮಾನ ಹಾಗೂ ವಾರಗಟ್ಟಲೆ ಸ್ಟಾರ್​ ಹೋಟೆಲ್​ನಲ್ಲಿ ವಾಸ್ತವ್ಯ ಕಲ್ಪಿಸಲು ಅಷ್ಟೊಂದು ಹಣ ಎಲ್ಲಿತ್ತು ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್​ ಟ್ವೀಟ್​


ಇನ್ನು ಕಾಂಗ್ರೆಸ್​ ಕೂಡ ಸಿಎಂ ಹೇಳಿಕೆಗೆ ಖಂಡಿಸಿದ್ದು, ಏಕಾಧಿಪತ್ಯದ ಆಡಳಿತ ನಡೆಸುತ್ತಿರುವ ಬಿಎಸ್​ ಯಡಿಯೂರಪ್ಪ ಸರ್ವಾಧಿಕಾರಿಯಂತೆ ವರ್ತಿಸುವುದು ಸರಿಯಲ್ಲ. ಸಂತ್ರಸ್ತರಿಗೆ ನೀಡುವ ನೆರೆ ಪರಿಹಾರ ಜನರ ತೆರಿಗೆ ಹಣ ಹೊರತು. ನಿಮ್ಮ ಸ್ವಂತ ದುಡ್ಡಲ್ಲ ಎಂದು ಟೀಕಿಸಿದ್ದಾರೆ.ಇದನ್ನು ಓದಿ: ಪಾಕ್​ ಸೆರೆಯಿಂದ ಬಿಡುಗಡೆಯಾಗಿದ್ದ ವಿಂಗ್​ ಕಮಾಂಡರ್​ ಅಭಿನಂದನ್​​ಗೆ ವೀರ ಚಕ್ರ ಪ್ರಶಸ್ತಿ

ಈ ಹಿಂದೆ  2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕೂಡ ಯಡಿಯೂರಪ್ಪ ಇದೇ ರೀತಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಸಾಲಮನ್ನಾ ಕುರಿತು ಬೇಡಿಕೆ ಹೆಚ್ಚಾದಾಗ ನಾವಿಲ್ಲಿ ನೋಟ್​ ಪ್ರಿಂಟ್​ ಮಾಡುತ್ತಿಲ್ಲ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದರು.

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ