ಉತ್ತರ ಕನ್ನಡದಲ್ಲಿ ಹೆಗಡೆ ಸೋಲಿಸಲು ಹಿಂದುತ್ವ ಮಂತ್ರ ಜಪಿಸುತ್ತಿರುವ ಜೆಡಿಎಸ್ ಅಭ್ಯರ್ಥಿ

ಕೇಸರಿ ಶಾಲು ಹಾಕಿ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದ ಮೈತ್ರಿ ಅಭ್ಯರ್ಥಿ ಆನಂದ್​​ ಅಸ್ನೋಟಿಕರ್ ಹಿಂದುಗಳ ಮನಸೆಳೆಯಲು ಮುಂದಾಗಿರೋದು ಎಲ್ಲರ ಗಮನ ಸೆಳೆದಿದೆ.

G Hareeshkumar | news18
Updated:April 18, 2019, 8:50 AM IST
ಉತ್ತರ ಕನ್ನಡದಲ್ಲಿ ಹೆಗಡೆ ಸೋಲಿಸಲು ಹಿಂದುತ್ವ ಮಂತ್ರ ಜಪಿಸುತ್ತಿರುವ ಜೆಡಿಎಸ್ ಅಭ್ಯರ್ಥಿ
ಕೇಸರಿ ಶಾಲು ಹಾಕಿ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದ ಮೈತ್ರಿ ಅಭ್ಯರ್ಥಿ ಆನಂದ್​​ ಅಸ್ನೋಟಿಕರ್ ಹಿಂದುಗಳ ಮನಸೆಳೆಯಲು ಮುಂದಾಗಿರೋದು ಎಲ್ಲರ ಗಮನ ಸೆಳೆದಿದೆ.
G Hareeshkumar | news18
Updated: April 18, 2019, 8:50 AM IST
ಕಾರವಾರ(ಏ. 17): ಎಲ್ಲ ರಾಜಕೀಯ ಪಕ್ಷಗಳಿಗೂ ಒಂದೊಂದು ಸಿದ್ದಾಂತ ಇರುತ್ತದೆ. ಕಾಂಗ್ರೆಸ್ ಜಾತ್ಯತೀತ ಪಕ್ಷವಾದರೆ, ಬಿಜೆಪಿಯನ್ನು ಹಿಂದುತ್ವವಾದಿ ಪಕ್ಷ ಎಂದೇ ಗುರುತಿಸಲಾಗುತ್ತೆ. ಚುನಾವಣೆಯಲ್ಲಿ ಇದೇ ಆ ಪಕ್ಷಗಳ ಬಂಡವಾಳ ಸಹ. ಆದರೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ತನ್ನ ಸಿದ್ಧಾಂತ ಬದಲಿಸಿದ್ದು, ಹಿಂದುತ್ವ ಮಂತ್ರ ಜಪಿಸಲು ಆರಂಭಿಸಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ಹೆಗಡೆ ಮತ್ತು ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ನಡುವೆ ನೇರ ಹಣಾಹಣಿ ಇದೆ. ಆದರೆ ಹಿಂದುತ್ವದ ಫೈರ್ ಬ್ರ್ಯಾಂಡ್ ಅನಂತ ಕುಮಾರ್ ಹೆಗಡೆ ಅವರನ್ನು ಮಣಿಸುವುದು ಸುಲಭ ಅಲ್ಲ. ಇದನ್ನರಿತ ಕಾಂಗ್ರೆಸ್ ಹಾಗೂ ಜೆಡಿಎಸ್ ಅದೇ ಹಿಂದುತ್ವದ  ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ

ಇದನ್ನೂ ಓದಿ : ಉತ್ತರ ಕನ್ನಡದ ಪ್ರಬಲ ಬಿಜೆಪಿ ಕೋಟೆ ಛಿದ್ರಗೊಳಿಸಲು ನೊಗ ಹೊತ್ತಿವೆ 'ಜೋಡೆತ್ತು'ಗಳು

ಶಿರಸಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ವಿಧಾನ ಪರಿಷತ್​​ ಸದಸ್ಯ ಎಸ್.ಎಲ್ ಘೋಟ್ನೇಕರ್, ಬಿಜೆಪಿಯವರೇನು ಮಾಡ್ತಾರೆ? ನಾವೂ ರಾಮಮಂದಿರ ಕಟ್ತೀವಿ ಎಂದು ಗುಡುಗಿದರು. ಇದಕ್ಕೆ ಸಾಥ್ ನೀಡಿದ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಸಹ ರಾಮಮಂದಿರ ಆಗಲೇ ಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದರು.

ಇದಲ್ಲದೇ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್, ಎಲ್ಲ ಕಡೆ ನಾವೂ ಹಿಂದುಗಳೇ, ಅನಂತ ಕುಮಾರ್ ಡೋಂಗಿ ಹಿಂದು ಎಂದು ಆರೋಪಿಸುತ್ತಿದ್ದಾರೆ. ಅವರು ಟೆಂಪಲ್ ರನ್ ನಡೆಸಿದ್ದು, ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಕೇಸರಿ ಶಾಲು ಹಾಕಿ ಶೋಭಾ ಯಾತ್ರೆಯಲ್ಲಿ ಹೆಜ್ಜೆ ಹಾಕಿ ಅವರು ಹಿಂದುಗಳ ಮನಸೆಳೆಯಲು ಮುಂದಾಗಿರೋದು ಎಲ್ಲರ ಗಮನ ಸೆಳೆದಿದೆ.

ಇದನ್ನು ಓದಿ: ಉತ್ತರ ಕನ್ನಡದಲ್ಲಿ ಅನಂತಕುಮಾರ್ ಹೆಗಡೆಯ ಶಕ್ತಿ ತಡೆಯಲು ಜೆಡಿಎಸ್​ಗೆ ಇರುವ ತಡೆಗಳೇನು?
Loading...

ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಗೆಲುವಿಗಾಗಿ ತನ್ನ ಸಿದ್ದಾಂತವನ್ನೇ ಬದಲಿಸಿಕೊಂಡಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಜನರು ಇವರನ್ನು ಕೈ ಹಿಡಿಯುತಾರಾ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕು.

First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626