• Home
  • »
  • News
  • »
  • state
  • »
  • HDK Vs CPY: ಚನ್ನಪಟ್ಟಣದಲ್ಲಿ ಜೆಡಿಎಸ್ vs ಬಿಜೆಪಿ ವಾಕ್ಸಮರ; ಯೋಗೇಶ್ವರ್ ಕಾರ್​ಗೆ ಮೊಟ್ಟೆ

HDK Vs CPY: ಚನ್ನಪಟ್ಟಣದಲ್ಲಿ ಜೆಡಿಎಸ್ vs ಬಿಜೆಪಿ ವಾಕ್ಸಮರ; ಯೋಗೇಶ್ವರ್ ಕಾರ್​ಗೆ ಮೊಟ್ಟೆ

ಸಿಪಿ ಯೋಗೇಶ್ವರ್, ಮಾಜಿ ಸಚಿವ

ಸಿಪಿ ಯೋಗೇಶ್ವರ್, ಮಾಜಿ ಸಚಿವ

ಘಟನೆಯ ಕುರಿತು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದಿಂದ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಆಗಿತ್ತು. ಇದರ ಶಿಲಾನ್ಯಾಸ ಕಾರ್ಯಕ್ರಮ ಇತ್ತು. ಚನ್ನಪಟ್ಟಣ ಅಭಿವೃದ್ಧಿಗೆ ಕಾರ್ಯಕ್ರಮ ಇತ್ತು.

  • Share this:

ರಾಮನಗರ ಚನ್ನಪಟ್ಟಣದಲ್ಲಿ ಜೆಡಿಎಸ್ (JDS) ಮತ್ತು ಬಿಜೆಪಿ (BJP) ಕಾರ್ಯಕರ್ತರ ನಡುವೆ ವಾಕ್ಸಮರ ಏರ್ಪಟ್ಟಿದೆ. ಗಲಾಟೆಯಲ್ಲಿ ದಳ ಕಾರ್ಯಕರ್ತರು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (Former Minister CP Yogeshwar) ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಯೋಗೇಶ್ವರ್ ಕಾರ್ ಮೇಲೆ ಮೊಟ್ಟೆ (Egg) ಎಸೆಯಲಾಗಿದೆ. ಗಲಾಟೆ ಸಂಬಂಧ ಪೊಲೀಸರು 15ಕ್ಕೂ ಹೆಚ್ಚು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು (JDS Activist) ವಶಕ್ಕೆ ಪಡೆದುಕೊಂಡಿದ್ದಾರೆ. ಇಷ್ಟೆಲ್ಲಾ ಗದ್ದಲ ಗಲಾಟೆ ನಡುವೆ ಸಚಿವ ಸಿಎನ್ ಅಶ್ವಥ್ ನಾರಾಯಣ್ (Minister CN Ashwath Narayan) ಮತ್ತು ಸಿಪಿ ಯೋಗೇಶ್ವರ್ ಚನ್ನಪಟ್ಟಣ ತಾಲೂಕಿನ ರಾಂಪುರದಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.


ಜೆಡಿಎಸ್ ಕಾರ್ಯಕರ್ತರ ಗಲಾಟೆಗೆ ಕಾರಣ ಏನು?


ಸಿಪಿ ಯೋಗೇಶ್ವರ್ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ. ಈ ಹಿನ್ನೆಲೆ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 50 ಕೋಟಿ ಹಣ ತಂದಿರುವ ಯೋಗೇಶ್ವರ್ ಇಂದು ಕ್ಷೇತ್ರದ ಗ್ರಾಮೀಣ ರಸ್ತೆಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಆಯೋಜನೆ ಮಾಡಿದ್ದರು. ಕಾರ್ಯಕ್ರಮ ಹಿನ್ನೆಲೆ ರಾಂಪುರದಲ್ಲಿ ವೇದಿಕೆ ಸಹ ನಿರ್ಮಾಣ ಮಾಡಲಾಗಿತ್ತು.


ಆದ್ರೆ ಸ್ಥಳೀಯ ಶಾಸಕರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕಾರ್ಯಕ್ರಮಕ್ಕೆ ಕರೆಯದೇ ಕಡೆಗಣನೆ ಮಾಡಲಾಗಿದೆ. ಶಾಸಕರ ಗಮನಕ್ಕೆ ತರದೇ ಅನುದಾನ ತಂದು ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಸ್ಥಳೀಯ ಮುಖಂಡರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಪ್ರತಿಭಟನಾ ನಿರತ ಜೆಡಿಎಸ್ ಕಾರ್ಯಕರ್ತರು ಯೋಗೇಶ್ವರ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.


jds activist egg thrown on cp yogeshwar car in channaptna ramanagara mrq
ಕುಮಾರಸ್ವಾಮಿ, ಯೋಗೇಶ್ವರ್​


ಭೈರಾಪಟ್ಟಣ ಗ್ರಾಮದಲ್ಲಿ ಲಾಠಿ ಚಾರ್ಜ್


ಇನ್ನು ಭೈರಾಪಟ್ಟಣ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಕ್ಸಮರ ಏರ್ಪಟ್ಟಿತ್ತು. ಈ ವೇಳೆ ಬಂದ ಯೋಗೇಶ್ವರ್ ಕಾರ್ ಮೇಲೆ ಜೆಡಿಎಸ್ ಕಾರ್ಯಕರ್ತರು ಮೊಟ್ಟೆ ಎಸೆದರು. ಇದರಿಂದ ಜೆಡಿಎಸ್ ಮತ್ತು  ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.


ಈ ಸಂದರ್ಭದಲ್ಲಿ ಲಾಠಿ ಚಾರ್ಜ್ ನಡೆಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ದಳದ ಸುಮಾರು 15 ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಇತ್ತ ಯೋಗೇಶ್ವರ್ ಬಿಗಿ ಭದ್ರತೆಯಲ್ಲಿ ಅಲ್ಲಿಂದ ಹೊರಟರು.


ರವಿಕುಮಾರ್ ಪ್ರತಿಕ್ರಿಯೆ


ಘಟನೆಯ ಕುರಿತು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದಿಂದ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಆಗಿತ್ತು. ಇದರ ಶಿಲಾನ್ಯಾಸ ಕಾರ್ಯಕ್ರಮ ಇತ್ತು. ಚನ್ನಪಟ್ಟಣ ಅಭಿವೃದ್ಧಿಗೆ ಕಾರ್ಯಕ್ರಮ ಇತ್ತು.


ಇದನ್ನೂ ಓದಿ:  Davanagere: ಶಾಲೆಯಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ; ಶಿಕ್ಷಕನಿಗೆ ಧರ್ಮದೇಟು


ಸ್ಥಳೀಯ ಶಾಸಕರನ್ನು ಕರೆಯಬೇಕಿತ್ತು


ಶಿಷ್ಟಾಚಾರ ಪ್ರಕಾರ ಸ್ಥಳೀಯ ಶಾಸಕರನ್ನು ಕಾರ್ಯಕ್ರಮಕ್ಕೆ ಕರೆಯಬೇಕಿತ್ತು. ಸ್ಥಳೀಯ ಶಾಸಕ ಕರೆಯದ ವಿಚಾರದಲ್ಲಿ ಅಧಿಕಾರಿಗಳಿಂದ ತಪ್ಪಾಗಿದೆಯೋ ಯಾರಿಂದ ತಪ್ಪಾಗಿದೆಯೋ ಅಂತ ಗೊತ್ತಿಲ್ಲ. ಸ್ಥಳೀಯ ಶಾಸಕರನ್ನು ಕರೆಯಬೇಕಿತ್ತು, ಕರೆಯದಿರುವುದು ತಪ್ಪು.


jds activist egg thrown on cp yogeshwar car in channaptna ramanagara mrq
ಕುಮಾರಸ್ವಾಮಿ, ಯೋಗೇಶ್ವರ್​


ಹಾಗಂತ ಸಿಪಿ ಯೋಗೀಶ್ವರ್ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದು ತಪ್ಪು. ಅವರ ಕಾರಿಗೆ ಕಲ್ಲೆಸೆದಿದ್ದು ತಪ್ಪು. ಈ ತರಹದ ವರ್ತನೆಯನ್ನು ಜೆಡಿಎಸ್ ಕಾರ್ಯಕರ್ತರು ತೋರಬಾರದಿತ್ತು ಎಂದು ರವಿಕುಮಾರ್ ಅಸಮಾಧಾನ ಹೊರ ಹಾಕಿದರು.


ಸಚಿವ ನಾರಾಯಣ ಗೌಡ ಅಸಮಾಧಾನ


ಶಿವಮೊಗ್ಗ ಉಸ್ತುವಾರಿ ನೀಡಿದರ ಬಗ್ಗೆ ನಗು ನಗುತ್ತಲೇ ಸಚಿವ ನಾರಾಯಣಗೌಡ ಬೇಸರ ಹೊರ ಹಾಕಿದ್ದಾರೆ. ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿ ನನ್ನನ್ನು ಕಟ್ಟಿಹಾಕಲಾಗಿದೆ. ಶಿವಮೊಗ್ಗದಲ್ಲಿ ದೊಡ್ಡ ದೊಡ್ಡ ಹುಲಿಗಳಿವೆ, ಅಲ್ಲಿನ ಕೆಲಸ ಸುಲಭವಲ್ಲ. ಶಿವಮೊಗ್ಗ ಉಸ್ತುವಾರಿ ಮಾಡಿದ್ದಕ್ಕೆ BSYಗೆ ಸಾಷ್ಟಾಂಗ ನಮಸ್ಕಾರ. ಅಲ್ಲಿನ ಕೆಲಸಗಳನ್ನ ಬುಗುರಿಯ ರೀತಿ BSY, ಈಶ್ವರಪ್ಪ ಮಾಡ್ತಿದ್ದಾರೆ.


ಇದನ್ನೂ ಓದಿ:  PFI Training Centre: ಪಿಎಫ್ಐ ರಾಜ್ಯಮಟ್ಟದ ತರಬೇತಿ ಕೇಂದ್ರ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ಕ್ಲೋಸ್?


ಸುಮ್ಮನೆ ಉದ್ಘಾಟನೆ ಮಾಡೋದು, ಒಳ್ಳೆಯ ಊಟ ಕೊಡ್ತಾರೆ ತಿಂದ್ಕೊಂಡು ಬರೋದು ಅಷ್ಟೇ. ಭಾಷಣದ ವೇಳೆ ವೇದಿಕೆಯಲ್ಲಿ ಪರೋಕ್ಷವಾಗಿ ಮಂಡ್ತ ಉಸ್ತುವಾರಿಗೆ ಸಚಿವ ನಾರಾಯಣಗೌಡರು ಬೇಡಿಕೆ ಇರಿಸಿದರು.

Published by:Mahmadrafik K
First published: