Football World Cup 2018
LIVE NOW

(Live) ಜಯನಗರ ಜಿದ್ದಾಜಿದ್ದಿ: ಬಿಜೆಪಿ ಭದ್ರಕೋಟೆ ಛಿದ್ರ - ಕಾಂಗ್ರೆಸ್​ನ ಸೌಮ್ಯಾ ರೆಡ್ಡಿಗೆ 2,886 ಮತಗಳಿಂದ ಗೆಲುವು

Kannada.news18.com | June 13, 2018, 1:12 PM IST
facebook Twitter google Linkedin
Last Updated June 13, 2018
auto-refresh
- ನ್ಯೂಸ್18 ಕನ್ನಡ

ಬೆಂಗಳೂರು: ಬಿ.ಎನ್. ವಿಜಯ್​ಕುಮಾರ್ ನಿಧನದಿಂದ ಮುಂದೂಡಲ್ಪಟ್ಟಿದ್ದ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಗೆಲುವಿನತ್ತ ದಾಪುಗಾಲಿಡುತ್ತಿದ್ದಾರೆ. ದಿವಂಗತ ವಿಜಯ್ ಕುಮಾರ್ ಸಹೋದರ ಹಾಗೂ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ಪ್ರಬಲ ಪೈಪೋಟಿ ಕೊಡುವ ನಿರೀಕ್ಷೆ ಈಡೇರುತ್ತಿಲ್ಲ. ಪಕ್ಷೇತರರಾಗಿ ಕಣಕ್ಕಿಳಿದ ರವಿಕೃಷ್ಣ ರೆಡ್ಡಿ ಠೇವಣಿ ಗಳಿಸುವುದೂ ಕಷ್ಟಕರವೆನಿಸಿದೆ.

ಜಯನಗರ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ನಿಮ್ಮ ನ್ಯೂಸ್​ 18 ಲೈವ್​ ಬ್ಲಾಗ್​ನಲ್ಲಿ...
12:35 pm (IST)

12:24 pm (IST)

ಜಯನಗರದಲ್ಲಿ ಸೌಮ್ಯಾ ರೆಡ್ಡಿ ಗೆಲುವಿಗೆ ಜೆಡಿಎಸ್ ಕಾರಣ?

ಜೆಡಿಎಸ್ ಕೃಪಾಕಟಾಕ್ಷದಿಂದ ಗೆದ್ದು ಬೀಗಿದ ರಾಮಲಿಂಗಾರೆಡ್ಡಿ

ಕೊನೇ ಗಳಿಗೆಯಲ್ಲಿ ಹೆಚ್​.ಡಿ.ದೇವೇಗೌಡ ಜೊತೆ ನಡೆದ ಒಪ್ಪಂದ

ಈ ಹಿನ್ನೆಲೆ ಜಯನಗರ ಕ್ಷೇತ್ರ ಕಣದಲ್ಲಿ‌ ತಟಸ್ಥರಾದ ಕಾಳೇಗೌಡ

ಕಾಳೇಗೌಡ, ಜಯನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ

ಜಯನಗರ ಕ್ಷೇತ್ರದಲ್ಲಿ‌ ತನ್ನದೇ ಆದ ಪ್ರಭಾವ ಹೊಂದಿದ್ದ ಕಾಳೇಗೌಡ

ದೇವೇಗೌಡರ ಸೂಚನೆ ಮೇರೆಗೆ ಕಾಂಗ್ರೆಸ್​ಗೆ ಬೆಂಬಲ

ತಟಸ್ಥವಾಗಿದ್ದ ಪರಿಣಾಮ‌ ಜೆಡಿಎಸ್ ಮತಗಳು ಕಾಂಗ್ರೆಸ್ ಬುಟ್ಟಿಗೆ

ತಟಸ್ಥವಾಗಿದ್ದರಿಂದ ಕೇವಲ‌ 781 ಮತ‌ ಪಡೆದ ಕಾಳೇಗೌಡ

ಕಾಳೇಗೌಡ ಕಣದಲ್ಲಿದ್ದರೆ 15 ಸಾವಿರಕ್ಕೂ ಹೆಚ್ಚು ಮತ ಪಡೀತಿದ್ರು

ಕಾಳೇಗೌಡ ಪಡೆಯಬೇಕಾಗಿದ್ದ ಮತಗಳು ಕಾಂಗ್ರೆಸ್ ಪಾಲಿಗೆ

ಕೊನೆಗೂ ಕಾಳೇಗೌಡರಿಂದ ಸೌಮ್ಯಾ ರೆಡ್ಡಿಗೆ ಗೆಲುವಿನ ಮಾಲೆ

Load More