ಗಡುವಿನ ಒಳಗೆ ಸರ್ಕಾರ ಪಂಚಮಸಾಲಿಗೆ 2ಎ ಮೀಸಲಾತಿ ನೀಡಬೇಕು; ಜಯಮೃತ್ಯುಂಜಯ ಶ್ರೀ

ನಮ್ಮವರೇ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ತೀವ್ರತೆಯನ್ನ ಸರ್ಕಾರಕ್ಕೆ ಮನವರಿಕೆ ಮಾಡಿ ತಿಳಿಸುವಲ್ಲಿ ವಿಫಲವಾದರು ಎಂದು ಸಿಸಿ ಪಾಟೀಲ್, ಮುರುಗೇಶ್ ನಿರಾಣಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.

ಜಯಮೃತ್ಯುಂಜಯ ಶ್ರೀ

ಜಯಮೃತ್ಯುಂಜಯ ಶ್ರೀ

  • Share this:
ಚಿತ್ರದುರ್ಗ(ಮಾ.27): ನಮ್ಮವರೇ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ತೀವ್ರತೆಯನ್ನ ಸರ್ಕಾರಕ್ಕೆ ಮನವರಿಕೆ ಮಾಡಿ ತಿಳಿಸುವಲ್ಲಿ ವಿಫಲವಾದರು. ಸರ್ಕಾರದ ಮನವಿಗೆ ಸ್ಪಂದಿಸಿ ಧರಣಿಗೆ ವಿರಾಮ ನೀಡಿದ್ದೇವೆ. ಆದರೆ ಹೋರಾಟ ನಿರಂತರವಾಗಿರುತ್ತದೆ ಎಂದು ಚಿತ್ರದುರ್ಗದಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಚಿತ್ರದುರ್ಗ ನಗರದಲ್ಲಿ ಸುದ್ದಿಘೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ಭಾರತದ ಇತಿಹಾಸದಲ್ಲಿ ಮೀಸಲಾತಿಗಾಗಿ ಪಂಚಮಸಾಲಿ ಸಮಾಜ ಮಾಡಿದ ಪಾದಯಾತ್ರೆ ಮೊಟ್ಟ ಮೊದಲನೆಯದು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾವೇಶ ವಿಶ್ವದ ಪಂಚಮಸಾಲಿ ಜನರನ್ನ ಒಗ್ಗೂಡಿಸಿದೆ. ನಿರಂತರ ಹೋರಾಟದ ಫಲವಾಗಿ ಕಾಲಮಿತಿ ಒಳಗೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುತ್ತೇವೆ ಎಂದು ವಿಧಾನ ಸೌಧದಲ್ಲಿ  ಹೇಳಿದ್ದಾರೆ. ನಿರಂತರ ಪಾದಯಾತ್ರೆ ಹಾಗೂ ಬೆಂಗಳೂರಲ್ಲಿ ಹತ್ತು ಲಕ್ಷಕ್ಕು ಹೆಚ್ಚು ಜನರನ್ನ ಕೂಡಿಸಿ ವಿಶ್ವವೇ ನಿಬ್ಬೆರಗಾಗುವಂತೆ ಪಂಚಮಸಾಲಿ ಲಿಂಗಾಯತರ ಒಗ್ಗಟ್ಟಿನ ಶಕ್ತಿ ಪ್ರದರ್ಶನ ಮಾಡಿದ್ದೇವೆ. 23 ದಿನಗಳ ಕಾಲ ನಡೆದ ಧರಣಿ ಸತ್ಯಾಗ್ರಹ ಸೇರಿದಂತೆ ಎಲ್ಲದಕ್ಕೂ ತನು ಮನ ಧನ ಅರ್ಪಿಸಿದ ಈನಾಡಿನ ಜನರಿಗೆ ಶರಣು ಶರಣಾರ್ಥಿ ಸಲ್ಲಿಸುತ್ತೇನೆ ಎಂದರು.

Astrology: ಹಣದ ಹೂಡಿಕೆ ಮಾಡಲು ಕಟಕರಾಶಿಯವರಿಗೆ ಈ ದಿನ ಸುದಿನ: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಮಾರ್ಚ್ 23 ರಿಂದ ಏಪ್ರಿಲ್ 16ರ ವರೆಗೆ ರಾಜ್ಯದ 16 ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯಾದ್ಯಂತ ಶರಣು ಶರಣಾರ್ಥಿ ಸಂದೇಶ ಜಾಥ ಹಮ್ಮಿಕೊಳ್ಳಲಾಗಿದೆ. 2 ಎ ಮೀಸಲಾತಿಗಾಗಿ ನಡೆದ ಹೋರಾಟದಲ್ಲಿ ಕಾಲ ಮಿತಿಯೊಳಗೆ ವಿಧಾನಸಭೆ ಅಧಿವೇಶನ ಮುಗಿಯುವುದರ ಒಳಗೆ ಸರ್ಕಾರ ಮೀಸಲಾತಿ ಕೊಡಬೇಕು ಎಂಬ ಒತ್ತಾಯವಿತ್ತು. ಸರ್ಕಾರ ನಮಗೆ ಗಡುವು ಕೊಡಬೇಕು ಎಂದು ಕೇಳಿತ್ತು. ಹೀಗೆ ಸರ್ಕಾರ ಮತ್ತು ನಮ್ಮ ನಡುವೆ ಸಂವಾದ, ಸಂಧಾನಗಳು ನಡೆದವು.

ಬಳಿಕ ವಿಜಯಪುರ ಶಾಸಕರಾದ ಬಸನ ಗೌಡ ಯತ್ನಾಳ್ ರ ಸದನದ ಒಳಗಿನ ಹೋರಾಟ  ಫಲವಾಗಿ ಹಿಂದುಳಿದ ವರ್ಗಗಳ ಆಯೋಗದ ವರದಿ ತರಿಸಿಕೊಂಡು, ಆದಷ್ಟು ಬೇಗ ಮೀಸಲಾತಿ ನೀಡುತ್ತೇವೆ ಎಂದು ಸರ್ಕಾರ ಹಾಗೂ ಸಿಎಂ ಘೋಷಣೆ ಮಾಡಿದ್ದಾರೆ. ಆದ್ದರಿಂದ ಅದು ವಿಧಾನ ಸಭೆಯ ಕಡತದಲ್ಲಿ ಉಳಿದಿದೆ. ನಮ್ಮ ಹೋರಾಟಕ್ಕೆ ಪ್ರಥಮ ಜಯ ಸಿಕ್ಕಿದೆ ಎಂಬ ಅಭಿಮಾನದ ಮಾತುಗಳನ್ನ ಹೇಳಲು ಇಚ್ಚಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ನಮ್ಮವರೇ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ತೀವ್ರತೆಯನ್ನ ಸರ್ಕಾರಕ್ಕೆ ಮನವರಿಕೆ ಮಾಡಿ ತಿಳಿಸುವಲ್ಲಿ ವಿಫಲವಾದರು ಎಂದು ಸಿಸಿ ಪಾಟೀಲ್, ಮುರುಗೇಶ್ ನಿರಾಣಿ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ನಮ್ಮ ಹೋರಾಟದ ಮುಂದುವರಿದ ಭಾಗವಾಗಿ ವಿಧಾನಸಭೆಯಲ್ಲಿ ನಾಲ್ಕೈದು ದಿವಸಗಳ ಕಾಲ ಚರ್ಚೆ ನಡೆದಿದೆ. ಈಗ ರಾಜ್ಯಾದ್ಯಂತ ಶರಣು ಶರಣಾರ್ಥಿ ಸಂದೇಶ ಜಾಥ ನಾಲ್ಕನೆ ದಿವಸಕ್ಕೆ ಬಂದಿದೆ. ನಾವು ಸರ್ಕಾರಕ್ಕೆ ಕೇಳುವುದಿಷ್ಟೆ, ಮನವಿಗೆ ಸ್ಪಂದಿಸಿ ನಮ್ಮ ಧರಣಿ ಸತ್ಯಾಗ್ರಹವನ್ನ ಸೆಪ್ಟಂಬರ್ 5 ಕ್ಕೆ ಮುಂದೂಡಲಾಗಿದೆ. ಅಷ್ಟರಲ್ಲಿ ಸರ್ಕಾರ ಮೀಸಲಾತಿ ಘೋಷಣೆ ಮಾಡಬೇಕು ತಡವಾದರೆ ಮತ್ತೆ ಧರಣಿ ಸತ್ಯಾಗ್ರಹ ಮುಂದುವರೆಯುತ್ತದೆ. ಸದ್ಯ ಧರಣಿ ಸತ್ಯಾಗ್ರಹಕ್ಕೆ ಅಲ್ಪ ವಿರಾಮ ನೀಡಿದ್ದೇವೆ. ಹೋರಾಟ ನಿರಂತರವಾಗಿತ್ತದೆ ಎಂದು ಹೇಳಿರುವ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಗಡುವಿನ ಎಚ್ಚರಿಕೆ ನೀಡಿದ್ದಾರೆ.
Published by:Latha CG
First published: