ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ ಯೋಗ ಪೋರಿ ಜಯಲಕ್ಷ್ಮಿ

news18
Updated:June 21, 2018, 7:27 AM IST
ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ ಯೋಗ ಪೋರಿ ಜಯಲಕ್ಷ್ಮಿ
news18
Updated: June 21, 2018, 7:27 AM IST
- ಸಂಕನಗೌಡ ಎಂ ದೇವಿಕೊಪ್ಪ, ನ್ಯೂಸ್ 18 ಕನ್ನಡ

ಹಾವೇರಿ ( ಜೂನ್ 21) :  ಎಲ್ಲ ಮಕ್ಕಳಲ್ಲೂ ಒಂದೊಂದು ಪ್ರತಿಭೇ ಇದ್ದೇ ಇರುತ್ತೆ. ಆ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹ ನೀಡಿ ಬೆಳೆಸುವುದು ಹೆತ್ತವರ ಕರ್ತವ್ಯ, ಸೂಕ್ತ ಪ್ರೋತ್ಸಾಹ ಸಿಕ್ಕಿದಾಗಲೇ ಮಕ್ಕಳು ಸಾಧನೆಯ ಶಿಖರವನ್ನೇರಲು ಸಾಧ್ಯ. ಹೆತ್ತವರು ಹಾಗೂ ಅಣ್ಣನ ಪ್ರೋತ್ಸಾಹದಿಂದ ಗ್ರಾಮೀಣ ಭಾಗದ ಪುಟ್ಟ ಪೋರಿ ಯೋಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ .

ಪುಟ್ಟ ಪೋರಿಯ ಹೆಸರು  ಜಯಲಕ್ಷ್ಮಿ ಕರಿಗೌಡರ್. ಗೀರಿಜಾಗೌರಿಶಂಕರ ಹಾಗೂ ಸರೋಜಾ ಕರಿಗೌಡರ ದಂಪತಿಗಳ ಮುದ್ದು ಮಗಳು ವಯಸ್ಸು ಇನ್ನೂ ಕೇವಲ ಎಂಟು ವರ್ಷ ಹಾವೇರಿ ಜಿಲ್ಲೆಯ ಕನಕಾಪುರ ಗ್ರಾಮದಲ್ಲಿ ವಾಸವಾಗಿದ್ದಾರೆ. ಅದೇ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಾಳೆ.  ಈ ಪೋರಿ ಯೋಗ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದಾಳೆ. ಎಳೆ ಪ್ರಾಯದಲ್ಲಿಯೇ ಕಷ್ಟಕರವಾದ ಆಸನಗಳನ್ನು ಮಾಡಿ ಹೊಸ ಭರವಸೆಯನ್ನು ಮೂಡಿಸಿದ್ದಾಳೆ.

ಈ ಬಾಲಕಿಯ ಯೋಗ ಪ್ರತಿಭೆಗಾಗಿ ಹಲವಾರು ಬಹುಮಾನಗಳು ಮತ್ತು ಪುರಸ್ಕಾರಗಳು ಸಂದಿವೆ. ರಾಜ್ಯ, ರಾಷ್ಟ್ರ, ಮಟ್ಟದಲ್ಲಿ ಸಾಕಷ್ಟು ಸಾಧನೆ ಮಾಡಿ ಹೆತ್ತವರ ಪ್ರೀತಿಗೆ ಪಾತ್ರರಾಗಿದ್ದಾಳೆ. ಅತ್ಯಂತ ಕ್ಲಿಷ್ಟಕರ ಆಸನಗಳನ್ನೂ ಲೀಲಾಜಾಲವಾಗಿ ಮಾಡುತ್ತಿದ್ದಾಳೆ. ಶೀರ್ಷಾಸನ, ಚಕ್ರಾಸನ, ಗೋಮುಖಾಸನ, ಗರುಡಾಸನ, ತಾಡಾಸನ ಮುಂತಾದ ಆಸನಗಳನ್ನು ಈಕೆ ತುಂಬಾ ಸೊಗಸಾಗಿ ಮಾಡುತ್ತಾಳೆ.

ಇನ್ನೂ ಈಕೆಯ ಅಣ್ಣ ಯಶವಂತ ಕರಿಗೌಡರ್ ಹಾವೇರಿ ಜಿಲ್ಲಾ ಯೋಗ ತರಬೇತಿ ಕೇಂದ್ರದಲ್ಲಿ ಕಳೆದ ಆರು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದು ಹಲವಾರು ಮಕ್ಕಳಿಗೆ ಯೋಗ ಹೇಳಿಕೊಡುತಿದ್ದಾನೆ. ಈತ ಮನೆಯಲ್ಲಿ ಯೋಗಾಭ್ಯಾಸ ಮಡುವದನ್ನು ನೋಡುತ್ತಾ ಬೆಳೆದ ಜಯಲಕ್ಷ್ಮಿ ತಾನು ಕೂಡ ಯೋಗ ಮಾಡಬೇಕು ಅಂತಾ ಚಿಕ್ಕ ವಯಸ್ಸಿನಲ್ಲಿ ಆಸಕ್ತಿ ಬೆಳೆಸಿಕೊಂಡು ಹಲವಾರು ಪ್ರಶಸ್ತಿಗಳನ್ನು ಮೂಡಿಗೆರಿಸಿಕೊಂಡಿದ್ದಾಳೆ.

ಇನ್ನೂ ಈ ಪೋರಿ ಹಗರಿ ಬೊಮ್ಮನಹಳ್ಳಿ ನಡೆದ ಕರ್ನಾಟಕ ಸ್ಟೇಟ್ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಹರಿಹರದಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ನ್ಯಾಷನಲ್ ಚಾಂಪಿಯನ್ ಆಗಿ ಹೋರಹೊಮ್ಮಿದ್ದಾಳೆ. ಇನ್ನೂ ಈಕೆಯ ಪೋಷಕರು ಹಾಗೂ ಕುಟುಂಬದವರು ಸಹ ಪ್ರತಿನಿತ್ಯ ಎರಡೂ ಗಂಟೆಗಳ ಹೆಚ್ಚು ಕಾಲ ಯೋಗಾಭ್ಯಾಸ ಮಾಡುತ್ತಾರೆ.

ದೇಹ ಹಾಗೂ ಮನಸ್ಸಿನ ಆರೋಗ್ಯ ಹೆಚ್ಚಿಸುವ ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ. ದಿನದಿಂದ ದಿನಕ್ಕೆ ಯೋಗ ಸಾಧಕರು ಹೆಚ್ಚುತ್ತಿದ್ದಾರೆ. ಆದರೆ ಈ ಯೋಗ ಕಲೆ ಎಲ್ಲರಿಗೂ ಸುಲಭವಾಗಿ ಒಲಿಯುವುದಿಲ್ಲ. ಅದಕ್ಕೆ ಸಾಕಷ್ಟು ಪರಿಶ್ರಮ ಮತ್ತು ಏಕಾಗ್ರತೆ ಅತ್ಯಗತ್ಯ.ಇನ್ನೂ ತಮ್ಮ ಮಗಳು ಒಲಿಂಪಿಕ್ ನಲ್ಲಿ ಜಿಮ್ನಾಸ್ಟಿಕ್ಸ್ ವಿಭಾಗದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಬೇಕು ಎಂಬುದು ಪೋಷಕರ ಮಹಾದಾಸೆ
Loading...

ಯೋಗದಿಂದ ದೂರ ರೋಗ ಎಂಬ ಮಾತೂ ರೂಢಿಯಲ್ಲಿ ಬಂದಿದೆ. ಈ ಕಾರಣ ಜನರು ಯೋಗಾಭ್ಯಾಸದ ಬಗ್ಗೆ ಇನ್ನಿಲ್ಲದ ಆಸಕ್ತಿ ತೋರುತ್ತಿದ್ದಾರೆ. ಈ ರೀತಿ ಯೋಗದಲ್ಲಿ ಕಠಿಣ ಪರಿಶ್ರಮ, ಪ್ರತಿದಿನ ಅಭ್ಯಾಸ, ಶ್ರದ್ಧೆಯಿಂದ ಯೋಗವನ್ನು ಕರಗತ ಮಾಡಿಕೊಂಡು ವಿಶೇಷ ಸಾಧನೆ ಮಾಡಿರುವ ಈ ಬಾಲಕಿ ಇನ್ನೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಎನ್ನುವುದು ನಮ್ಮ ಆಶಯ.

 
First published:June 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...