ಶ್ರೀಗಳ ಚಿಕಿತ್ಸೆಯಲ್ಲಿ ಯಶಸ್ವಿಯಾಗುತ್ತೇವೆ ಎಂಬ ಆಶಾಭಾವ ಇದೆ; ಡಾ. ಮಂಜುನಾಥ್​

ಸಿಎಂ ಸೂಚನೆ ಹಿನ್ನಲೆ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡಲು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್​​ ನೇತೃತ್ವದ ನಾಲ್ವರು ವೈದ್ಯರ ತಂಡ ಆಗಮಿಸಲಿದೆ.

Seema.R | news18
Updated:January 11, 2019, 1:14 PM IST
ಶ್ರೀಗಳ ಚಿಕಿತ್ಸೆಯಲ್ಲಿ ಯಶಸ್ವಿಯಾಗುತ್ತೇವೆ ಎಂಬ ಆಶಾಭಾವ ಇದೆ; ಡಾ. ಮಂಜುನಾಥ್​
siddahganga sri
Seema.R | news18
Updated: January 11, 2019, 1:14 PM IST
ಬೆಂಗಳೂರು (ಜ.11): ಸಿಎಂ ಸೂಚನೆ ಮೇರೆಗೆ ನಾವು ಚಿಕಿತ್ಸೆಯನ್ನು ಆರಂಭಿಸಿದ್ದು, ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ಆಶಾಭಾವ ಇದೆ ಎಂದು ಜಯದೇವ ನಿರ್ದೇಶಕ ಡಾ.ಮಂಜುನಾಥ್ ತಿಳಿಸಿದ್ದರು

ಸಿದ್ದಗಂಗಾ ಶ್ರೀಗಳ ಆರೋಗ್ಯ ನೀರಿಕ್ಷಿಸಿದಷ್ಟು ಮಟ್ಟಕ್ಕೆ  ಚೇತರಿಕೆ ಕಂಡಿಲ್ಲ ಎಂದು ಶ್ರೀಗಳ  ಆಪ್ತ ವೈದ್ಯರು  ತಿಳಿಸಿದ ಬೆನ್ನಲ್ಲೆ  ಅವರ ಆರೋಗ್ಯ ತಪಾಸಣೆಗೆ ಸಿಎಂ ಕುಮಾರಸ್ವಾಮಿ ಜಯದೇವ  ವೈದ್ಯರ ತಂಡಕ್ಕೆ ಸೂಚನೆ ನೀಡಿದ್ದರು.

ಸಿಎಂ ಸೂಚನೆ ಹಿನ್ನಲೆ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡಲು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್​​ ನೇತೃತ್ವದ ನಾಲ್ವರು ವೈದ್ಯರ ತಂಡ ಆಗಮಿಸಿದೆ.

ಶ್ರೀಗಳನ್ನು ಪರೀಕ್ಷಿಸಿ ಮಾತನಾಡಿದ ಜಯದೇವ ನಿರ್ದೇಶಕ ಡಾ.ಮಂಜುನಾಥ್,  ಚಿಕಿತ್ಸೆಯಲ್ಲಿ ಯಶಸ್ವಿಯಾಗುತ್ತೇವೆಂಬ ಆಶಾಭಾವ ಇದೆ. ಎಲ್ಲ ತಜ್ಞ ವೈದ್ಯರ ನೆರವಿನಲ್ಲಿ ಚಿಕಿತ್ಸೆ ಮುಂದುವರೆಸುತ್ತೇವೆ. ಶ್ರೀಗಳನ್ನು ಬೇರೆ ಕಡೆ ಶಿಫ್ಟ್​ ಮಾಡುವುದಿಲ್ಲ. ಇಲ್ಲಿಯೇ ಚಿಕಿತ್ಸೆ ನೀಡುತ್ತೇವೆ. ಶ್ರೀಗಳಿಗೆ ಉಸಿರಾಟದ ಶಕ್ತಿ ಕಡಿಮೆಯಾಗಿದೆ. ಸೋಂಕು ಕಡಿಮೆ, ಉಸಿರಾಟದ ಶಕ್ತಿ ಕಡಿಮೆಯಾಗಿದೆ. ಇದಕ್ಕಾಗಿ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗುವುದು. ಅವರು ಯಾವ ರೀತಿ ಸ್ಪಂದಿಸಲಿದ್ದಾರೆ ಎನ್ನುವುದನ್ನು ಎಂಬ ಬಗ್ಗೆ ಕಾಲವೇ ನಿರ್ಧರಿಸಲಿದೆ ಎಂದರು

ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ಶ್ರೀಗಳಿಗೆ ತಪಾಸಣೆ ಮುಂದುವರೆಸಲಾಗಿದೆ. ಆಸ್ಪತ್ರೆಯ ನಿಗಾ ಘಟಕದಲ್ಲಿ ಶ್ರೀಗಳಿಗೆ ತಜ್ಞರ ತಂಡ ಚಿಕಿತ್ಸೆ ನಡೆಸಲಿದೆ. ಚೆನ್ನೈನಲ್ಲಿ ಶಸ್ತ್ರ ಚಿಕಿತ್ಸೆ ಬಳಿಕ ಶ್ರೀಗಳ ಆರೋಗ್ಯದಲ್ಲಿ ಸ್ಪಲ್ಪ ಮಟ್ಟಿದೆ ಚೇತರಿಕೆ ಕಂಡು ಬರುತ್ತಿದೆ. ಆದರೆ ಈ ಚೇತರಿಗೆ ತೃಪ್ತಿದಾಯಕವಾಗಿಲ್ಲ ಎಂದು ಡಾ. ಪರಮೇಶ್ವರ್​ ತಿಳಿಸಿದ್ದರು.

ಇದನ್ನು ಓದಿ: ಬಸ್ ಚಾಲಕನ ಸಮಯಪ್ರಜ್ಞೆ; ರೈಲ್ವೆ ಗೇಟ್​ನಲ್ಲಿ ತಪ್ಪಿದ ಭಾರೀ ಅನಾಹುತ
Loading...

ಶ್ರೀಗಳ ಆರೋಗ್ಯ ವಿಚಾರದಲ್ಲಿ ವೈದ್ಯರೊಂದಿಗೆ ಸದಾ ಸಂಪರ್ಕದಲ್ಲಿರುವ ಮುಖ್ಯಮಂತ್ರಿಗಳು ಜಯದೇವ ತಜ್ಞರಿಗೆ ಒಮ್ಮೆ ತಪಾಸಣೆ ಮಾಡುವಂತೆ ಸೂಚನೆ ನೀಡಿದ್ದಾರೆ. ಶ್ರೀಗಳು ಆಲ್ಬುಮಿನ್​ ಅಂಶ ಕಡಿಮೆಯಾಗುತ್ತಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದರು.

 

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...