2A Reservation: ಮಕ್ಕಳೊಂದಿಗೆ ಹೋರಾಟದಲ್ಲಿ ಭಾಗಿಯಾಗುವಂತೆ ಜಯಮೃತ್ಯುಂಜಯ ಸ್ವಾಮೀಜಿ ಕರೆ

ಪೀಠಾಧಿಪತಿಗಳು ಸಮಾಜದ ಸೇವಕರು. ಇನ್ನೊಂದು ಪೀಠದ ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿರಬಹುದು. ನಾನು ಸಮಾಜದ ಮೀಸಲಾತಿಗೆ ಹೋರಾಟ ಮಾಡುತ್ತೇನೆ

ಜಯಮೃತ್ಯುಂಜಯ ಸ್ವಾಮೀಜಿ

ಜಯಮೃತ್ಯುಂಜಯ ಸ್ವಾಮೀಜಿ

  • Share this:
ಲಿಂಗಾಯತ ಪಂಚಮಸಾಲಿ (Lingayat Panchamasali) ಸಮುದಾಯಕ್ಕೆ 2ಎ ಮೀಸಲಾತಿ (2A Reservation) ಕೊಡುವ ಕುರಿತು ರಾಜ್ಯ ಸರ್ಕಾರ (Karnataka Govt) ನೀಡಿದ ಗಡುವು ಮೀರಿದೆ. ಹೀಗಾಗಿ ಮತ್ತೆ ಹೋರಾಟ ಪ್ರಾರಂಭ ಮಾಡಲಾಗುತ್ತಿದೆ. 2ಎ ಮೀಸಲಾತಿಗಾಗಿ ಐತಿಹಾಸಿಕ ಪಾದಯಾತ್ರೆಯ ಮೂಲಕ ಹೋರಾಟ ನಡೆಸಲಾಯಿತು. ಕೇವಲ ನಾಲ್ಕು ಜಿಲ್ಲೆಗಳಲ್ಲಿ ಸಮಾಜದ ಸರ್ವೇ (Survey) ಮಾಡಲಾಗಿದೆ ಎಂಬ ಮಾಹಿತಿ ಇದೆ. ಇನ್ನೂ 10 ಜಿಲ್ಲೆಗಳಲ್ಲಿ ಸರ್ವೆ ನಡೆಯಬೇಕು. ಅಧಿವೇಶನ(Session)ದಲ್ಲಿ ಸರ್ಕಾರ ನೀಡಿದ ಮಾತು ಇನ್ನೂ ಈಡೇರಿಲ್ಲ. ಏಪ್ರಿಲ್ 14 ರಂದು ಮೀಸಲಾತಿ ನೀಡುವಂತೆ  ಸರ್ಕಾರಕ್ಕೆ ಗಡುವು ನೀಡಲಾಗಿತ್ತು ಏಪ್ರಿಲ್ 21 ರಿಂದ ಕೂಡಲಸಂಗಮ(Koodalsangama)ದಲ್ಲಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಭವಾಗಲಿದೆ ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ (Jaya mruthyunjaya swamiji) ಹೇಳಿದ್ದಾರೆ.

ಸಿಎಂ‌ ಬಸವರಾಜ ಬೊಮ್ಮಾಯಿಯವರ ಬಗ್ಗೆ ನಮಗೆ ನಂಬಿಕೆ ಇದೆ. ಹೋರಾಟವನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು. ಸಮಾಜಬಾಂಧವರು ತಮ್ಮ ಮಕ್ಕಳೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ನಮ್ಮ ಪಾಲನ್ನು ಕೇಳಲು ನಮಗೆ ಹಕ್ಕಿದೆ

ಬೇರೆ ಸಮಾಜಕ್ಕೆ ಮೀಸಲಾತಿ ಕೇಳಿದಾಗ ಸರ್ವೆ ಮಾಡದೆ ನೀಡದೇ ನೀಡಲಾಗಿದೆ. ಆದರೆ ನಮ್ಮ ಸಮಾಜಕ್ಕೆ ಮೀಸಲಾತಿ ಕೇಳಿದಾಗ ಹಿಂದುಳಿದ ವರ್ಗಗಳ ಆಯೋಗದ ವರದಿ ಬೇಕು ಎಂದು ಸರ್ಕಾರ ಹೇಳಿತು. ಕಾನೂನಿನ ಮೇಲೆ ನಮಗೆ ಗೌರವವಿದೆ. ಕುಲಶಾಸ್ತ್ರ ಅಧ್ಯಯನ ದಲಿತ, ಅಲೆಮಾರಿ ಸಮುದಾಯಗಳ ಮೀಸಲಾತಿಗೆ ಬೇಕು. ನಮ್ಮ ಪಾಲನ್ನು ಕೇಳಲು ನಮಗೆ ಹಕ್ಕಿದೆ. ಸಾಮಜದ ಜನರು ಗೊಂದಲಕ್ಕೊಳಗಾಗಬಾರದು ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Basanagowda Patil Yatnal: ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್ ಗೃಹ ಸಚಿವರು ಬೇಕಾಗಿದ್ದಾರೆ ಎಂದು ಜಾಹಿರಾತು ನೀಡ್ಬೇಕು-ಯತ್ನಾಳ್

ಪೀಠಾಧಿಪತಿಗಳು ಸಮಾಜದ ಸೇವಕರು. ಇನ್ನೊಂದು ಪೀಠದ ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿರಬಹುದು. ನಾನು ಸಮಾಜದ ಮೀಸಲಾತಿಗೆ ಹೋರಾಟ ಮಾಡುತ್ತೇನೆ ನಮ್ಮ ಕಾರ್ಯವನ್ನು ಸಹಿಸಲಾಗದೆ ಕೆಲವರು ಊಹಾಪೋಹ ಸೃಷ್ಠಿಸುತ್ತಾರೆ ಎಂದು ಬೇಸರ ಹೊರ ಹಾಕಿದರು.

2ಎ ಸಿಕ್ರೆ ಸಾಕು, ಸದ್ಯಕ್ಕೆ ಅನುದಾನ ಬೇಕಿಲ್ಲ

ಚುನಾವಣೆ ರಾಜಕಾರಣಕ್ಕೂ, ಮೀಸಲಾತಿ ಹೋರಾಟಕ್ಕೂ ಸಂಬಂಧ ಕಲ್ಪಿಸುವುದಿಲ್ಲ. ಸರ್ಕಾರ ಜನಸಮುದಾಯದ ಮಾತನ್ನು ಕೇಳಲಿ. ನಮ್ಮ ಸಮುದಾಯದ ಮೀಸಲಾತಿಗೆ ನಮ್ಮ ಸಮುದಾಯದ ಜನ ಪ್ರತಿನಿಧಿಗಳು ಪ್ರತ್ಯಕ್ಷ, ಪರೋಕ್ಷವಾಗಿ ಬೆಂಬಲಿಸುತ್ತಿರಬಹುದು. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಲ್ಲರ ಧ್ವನಿಯಾಗಿ ಸದನದೊಳಗೆ ಹೋರಾಟ ಮಾಡುತ್ತಿದ್ದಾರೆ ಎಂದರು.

ನ್ಯಾಯ ಸಿಗುವವರೆಗೂ ಹೋರಾಟವನ್ನು ಮಾಡುತ್ತೇವೆ. 2ಎ ಸಿಕ್ಕರೆ ಸಾಕು, ಸದ್ಯಕ್ಕೆ ಯಾವುದೇ ಅನುದಾನ ಬೇಕಿಲ್ಲ. ನಿರಾಣಿಯವರು ನಮ್ಮವರೆ ಇದ್ದಾರೆ. ಅವರ ಬಗ್ಗೆ ಏನೂ ಮಾತನಾಡುವುದಿಲ್ಲ. ಸಮುದಾಯದ ನ್ಯಾಯಯುತ ಹೋರಾಟದ ಕೆಲಸ ಮಾಡಲಿ ಎಂದು ಸ್ವಾಮೀಜಿಗಳು ಒತ್ತಾಯಿಸಿದರು.

ಕರ್ನಾಟಕ ಸರ್ವಧರ್ಮದ ಶಾಂತಿಯ ತೋಟ

ಕರ್ನಾಟಕ ಸರ್ವಧರ್ಮದ ಶಾಂತಿಯ ತೋಟ. ಎಲ್ಲ ಸಮುದಾಯದಲ್ಲೂ ಒಳ್ಳೆಯವರು, ಕೆಟ್ಟವರು ಇರುತ್ತಾರೆ.  ಯಾವುದೇ ಧರ್ಮದ ಅಮಾಯಕರಿಗೆ ಅನ್ಯಾಯವಾಗಬಾರದು. ನಮ್ಮ ಧರ್ಮಗಳು ಆತ್ಮವಿಕಾಸಕ್ಕೆ, ಶಿಕ್ಷಣ ನಮ್ಮ ಬೆಳವಣಿಗೆಗೆ. ಈ ಬಗ್ಗೆ ಆಯಾ ಧರ್ಮ ಗುರುಗಳು ಮನವರಿಕೆ ಮಾಡುವ ಕೆಲಸ ಮಾಡಲಿ. ಕರ್ನಾಟಕದಲ್ಲಿ ಶಾಂತಿಯನ್ನು ಬಯಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:  Bagalkot: ಮಠಗಳಿಗೆ ಬಿಡುಗಡೆ ಮಾಡುವ ಅನುದಾನದಲ್ಲಿ ಶೇ.30 ಕಮಿಷನ್ ಕೊಡಬೇಕು: ದಿಂಗಾಲೇಶ್ವರ ಸ್ವಾಮೀಜಿ

ಅನುದಾನ ಬಿಡುಗಡೆಗೆ ನಾನು ಯಾರಿಗೂ ಏನೂ ಕೊಟ್ಟಿಲ್ಲ

ಮಠಗಳಿಗಳಿಂದಲೂ 30 % ಕೊಡಬೇಕು ಎಂಬ ದಿಂಗಾಲೇಶ್ವರ ಸ್ವಾಮಿಜಿಗಳ ಹೇಳಿಕೆಗೆ ಪ್ರತಿಕ್ರಿಯಿಸಲು ಜಯಮೃತ್ಯುಂಜಯ ಸ್ವಾಮೀಜಿ ನಿರಾಕರಿಸಿದರು. ಈ ಬಗ್ಗೆ ನನಗೇನೂ ಗೊತ್ತಿಲ್ಲ.. ಅನುದಾನ ಬಿಡುಗಡೆಗೆ ನಾನು ಯಾರಿಗೂ ಏನೂ ಕೊಟ್ಟಿಲ್ಲ. ಯಡಿಯೂರಪ್ಪ ಹಾಗೂ ಸದಾನಂದಗೌಡರ ಅವಧಿಯಲ್ಲಿ ಮಠಕ್ಕೆ ಅನುದಾನ ನೀಡಿದ್ದರು. 2a ಮೀಸಲಾತಿ ಬೇಡಿಕೆಯಿಂದ ಅನುದಾನವನ್ನು ವಾಪಾಸ್ ಮಾಡಿದ್ದೇವೆ. ಸ್ವಾಮೀಜಿಗಳಿಂದ ಕಮಿಷನ್ ಕೇಳುವುದಿಲ್ಲ. ಸ್ವಾಮೀಗಳಿಗೆ ದಕ್ಷಿಣೆ ನೀಡುವ ಸಂಸ್ಕೃತಿ ಇದೆ ಎಂದರು.
Published by:Mahmadrafik K
First published: