ಬೆಳಗಾವಿ: ಪಂಚಮಸಾಲಿ ಸಮುದಾಯದ (Panchamasali Reservation) ಮೀಸಲಾತಿಗೆ ಕೆಲ ಸ್ವಾಮೀಜಿಗಳು ಪರೋಕ್ಷ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಮಾತಾಡಿರೋ (Belagavi) ಬಸವ ಜಯಮೃತ್ಯುಂಜಯ ಸ್ವಾಮೀಜಿ (Basava Jaya Mruthyunjaya Swamiji), ಎಲ್ಲರಿಗೂ ಹೊಟ್ಟೆಕಿಚ್ಚು ಇದ್ದೇ ಇರುತ್ತೆ. ನಾನು ಪ್ರಬಲ ಸ್ವಾಮೀಜಿ ಆಗಬೇಕೆಂಬ ಆಕಾಂಕ್ಷೆ ಇಟ್ಟು ಹೋರಾಟ ಮಾಡ್ತಿಲ್ಲ. ಸಮಾಜದ ಋಣ ತೀರಿಸಬೇಕೆಂದು ಹೋರಾಟ ಮಾಡ್ತಿದ್ದೇನೆ ಎಂದಿದ್ದಾರೆ ಎಂದು ಹೇಳಿದ್ದಾರೆ.
ಇಂದು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿಗಳು, ಎಲ್ಲರಿಗೂ ಹೊಟ್ಟೆಕಿಚ್ಚು ಇದ್ದೇ ಇರುತ್ತೆ. ನಾನು ಪ್ರಬಲ ಸ್ವಾಮೀಜಿ ಆಗಬೇಕೆಂಬ ಆಕಾಂಕ್ಷೆ ಇಟ್ಟು ಹೋರಾಟ ಮಾಡ್ತಿಲ್ಲ ಎಂದರು.
ಅಲ್ಲದೇ ನಾನು ಈ ಸಮಾಜದಲ್ಲಿ ಹುಟ್ಟಿದ್ದೇನೆ. ಸಮಾಜದ ಋಣ ತೀರಿಸಬೇಕೆಂದು ಹೋರಾಟ ಮಾಡ್ತಿದ್ದೇನೆ. ನನಗೆ ಬೇಡಿ ಅಭ್ಯಾಸ ಇಲ್ಲ, ನನಗೆ ಬೇಡೋಕು ಬರಲ್ಲ. ದೇವರು ಕೊಟ್ಟ ಶಕ್ತಿ, ಹೋರಾಟ ಗುಣದಿಂದ ಸಮಾಜಕ್ಕೆ ಒಳ್ಳೆಯದಾಗಲಿ ಅಂತಾ ಹೋರಾಟ ಮಾಡ್ತಿದ್ದೀನಿ.
ಪ್ರಬಲ ಆಗೋದು, ದುರ್ಬಲ ಆಗೋದು ಭಗವಂತ ಬಳಿ ಇರುವಂತದ್ದು. ನೀವು ಪ್ರಬಲ ಆಗ್ತೀರಿ ಅಂತಾ ಕೆಲ ಸ್ವಾಮೀಜಿಗಳಿಗೆ ಭಯ ಕಾಡ್ತಿದೆಯಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿಗಳು, ಎಲ್ಲರಿಗೂ ಆ ಭಯ ಕಾಡುತ್ತಿದೆ.
ಎಲ್ಲರಿಗೂ ಏನಾಗಿದೆ ಅಂದ್ರೆ ಇಷ್ಟು ದಿನ ಪಂಚಮಸಾಲಿ ಸಮಾಜಕ್ಕೆ ಚೆನ್ನಾಗಿ ಶೋಷಣೆ ಮಾಡ್ತಾ ಬಂದಿದ್ದೇವು. ಈ ಜನಕ್ಕೆ ಪೂಜೆ, ಧರ್ಮ, ಪ್ರವಚನ, ಉತ್ಸವ ಮೂಲಕ ಈ ಜನಾಂಗ ಶೋಷಣೆ ಮಾಡುತ್ತಾ ಬಂದಿದ್ದೇವು. ಏನಪ್ಪಾ ಪಂಚಮಸಾಲಿ ಶ್ರೀಗಳು ಬಂದು ಜನರ ಜಾಗೃತಿ ಉಂಟು ಮಾಡಿದ್ದರು. ಈ ಜನ ಮತ್ತೆ ಜಾಗೃತಿಯಾದರೂ, ಬುದ್ದಿವಂತರಾದರೂ, ಪ್ರಶ್ನೆ ಮಾಡಲು ಶುರುಮಾಡಿದರು ಅಂತ ಅಸೂಯೆ.
ಕೆಲವು ಧರ್ಮಗುರುಗಳಲ್ಲಿ ಈ ಅಸೂಯೆ ಕಾಡುತ್ತಿರೋದು ಸಹಜ. ನಮ್ಮನ್ನ ಅಂಧಕಾರ, ಅಜ್ಞಾನದಲ್ಲಿ ಶತಮಾನಗಳ ಕಾಲ ಶೋಷಣೆಗೆ ಒಳಪಡಿಸಿದ್ದರು. ಈ ಸಮಾಜ ಹೊರಬಂದಿದ್ದು ಕೆಲವರಿಗೆ ಕಾಡುತ್ತಿದೆ. ಶೇಕಡಾ 90ರಷ್ಟು ಮಠಾಧೀಶರು ನಮ್ಮ ಪರ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ.
ಇದನ್ನೂ ಓದಿ: KMF-Amul Cooperation: ಅಮಿತ್ ಶಾ ಹೇಳಿಕೆಯನ್ನ ತಪ್ಪಾಗಿ ಆರ್ಥೈಸಲಾಗಿದೆ, ನಂದಿನಿ ಶಾಶ್ವತವಾಗಿ ಇರಲಿದೆ; ಸಿಎಂ ಬೊಮ್ಮಾಯಿ
ಇನ್ನು ಕೆಲವರದ್ದು ಸಹಜವಾಗಿ ಬಸವಣ್ಣನವರ ಕಾಲದಿಂದ ಇದ್ದೇ ಇದೆ. ಸುಧಾರಣೆ ಬಯಸುವ ಸಂದರ್ಭದಲ್ಲಿ ಅಸೂಯೆಗೊಳ್ಳುವುದು ಸಹಜ. ಯಾವತ್ತೂ ಈ ಜನ ಹಿಂಬಾಲಕರಾಗಿಬೇಕು, ಧಾರ್ಮಿಕ ಗುಲಾಮರಾಗಬೇಕು ಅಂತಾ ಬಯಸುತ್ತಾರೆ. ಈ ಜನಾಂಗದವರು ನಾಯಕರಾಗಿ ಬೆಳೆಯಬಾರದು ಅಂತಾ ಇದ್ದೇ ಇರುತ್ತೆ. ನಾವು ಮಾಡುವ ಒಳ್ಳೆಯ ಕಾರ್ಯ ಮೇಲೆ ಅದು ಅವಲಂಬಿತ ಆಗುತ್ತೆ ಎಂದು ಹೇಳಿದರು.
ಗೆದ್ದು ತೋರಿಸಿ ಎಂದು ಯತ್ನಾಳ್ಗೆ ನಿರಾಣಿ ಸವಾಲು
ಇನ್ನೂ, ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಚಿವ ಮುರುಗೇಶ್ ನಿರಾಣಿ, ಯತ್ನಾಳ್ ಮಧ್ಯೆ ಮಾತಿನ ಸಮರ ನಡೆಯುತ್ತಿದೆ. ಬಚ್ಚಾ ಅನ್ನೋ ನೀವು ಅತೀ ಬುದ್ದಿವಂತ ಇದ್ದೀರಲ್ಲಾ, ನೀವು ನಮಗೆ ಗೈಡ್ ಮಾಡಿ. ಯಾರಿಗೆ ಮಾತಾಡ್ತಿದ್ದೀರಿ, ಯಾವ ಪಕ್ಷದಲ್ಲಿದ್ದೀರಿ ಎಂಬುದನ್ನು ತಿಳಿದುಕೊಳ್ಳಿ.
ನನಗೆ ನನ್ನ ಬಿಜೆಪಿ ಪಕ್ಷ ತಾಯಿ ಸಮಾನ. ನಿಮ್ಮ ಥರ ಒಂದು ಪಾರ್ಟಿಗೆ ಹೋದಾಗ ಒಂದು ತರಹ ಮಾತಾಡಲ್ಲ. ನಿಂಗೆ ತಾಕತ್ ಇದ್ರೆ ನಿನ್ನ ಎಲೆಕ್ಷನ್ನಲ್ಲಿ ತೋರಿಸು, ನಾನು ನನ್ನ ಎಲೆಕ್ಷನ್ ಗೆದ್ದು ತೋರಿಸುತ್ತೇನೆ. ನೋಡ್ತಿರು ವಿಜಯಪುರ ಜನ ನಿನಗೆ 2023ರಲ್ಲಿ ನಿನಗೆ ಪಾಠ ಕಲಿಸ್ತಾರೆ ಎಂದು ನಿರಾಣಿ ಗುಡುಗಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ