2A Reservation: ಸರ್ಕಾರಕ್ಕೆ ಗಡುವು ನೀಡಿದ ಜಯಮೃತ್ಯುಂಜಯ ಸ್ವಾಮೀಜಿ

ಬಸವಜಯ ಮೃತ್ಯುಂಜಯ ಸ್ವಾಮೀಜಿ

ಬಸವಜಯ ಮೃತ್ಯುಂಜಯ ಸ್ವಾಮೀಜಿ

ಮೇ. 5 ರಿಂದ ಇಲ್ಲಿಯವರೆಗೂ ಹೋರಾಟ ಶುರುವಾಗಿದೆ. ಜೂನ್ 27 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿರುವ ಸಿಎಂ ಮನೆ ಎದುರು ಸತ್ಯಾಗ್ರಹ ಮಾಡಲಾಗುವುದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

  • Share this:

ರಾಜ್ಯದಲ್ಲಿ ಮತ್ತೆ ಲಿಂಗಾಯತ ಪಂಚಮಸಾಲಿ ಮೀಸಲಾತಿ (Lingayat Panchamasali Reservation) ಹೋರಾಟಕ್ಕೆ ಮುನ್ನಲೆಗೆ ಬಂದಿದೆ. ಇಂದು ಮಾಜಿ ಶಾಸಕ ವಿಜಯ್ ಕಾಶಪ್ಪನವರ್ (Ex MLA Vijayanad Kashappanavar) ಮತ್ತು ಜಯಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಒಬಿಸಿ ಮೀಸಲಾತಿಗೆ (OBC Reservation) ಹೋರಾಟ ಮಾಡುತ್ತಾ ಬಂದಿದ್ದೇವೆ. ಸರ್ಕಾರಕ್ಕೆ ನಾವು ಕೊಟ್ಟ ಗಡುವು ಮುಗಿದಿದೆ. ಇದರ ಹೋರಾಟ ಕೂಡಾ ಶುರುವಾಗಿದೆ. ಮೇ. 5 ರಿಂದ ಇಲ್ಲಿಯವರೆಗೂ ಹೋರಾಟ ಶುರುವಾಗಿದೆ. ಜೂನ್ 27 ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿರುವ ಸಿಎಂ ಮನೆ ಎದುರು ಸತ್ಯಾಗ್ರಹ ಮಾಡಲಾಗುವುದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


ಯಡಿಯೂರಪ್ಪನವರನ್ನು ಈ ಸಮಾಜ ನಂಬಿತ್ತು. ಆ ಬೇಡಿಕೆ ಈಡೇರಿಸುವ ಅಷ್ಟರಲ್ಲಿ ಅವರು ನಿರ್ಗಮಿತರಾದ್ರು. ಆಗ ಅನೇಕ ಸಭೆಗಳಲ್ಲಿ ಮಾತನಾಡಿದ್ರು ಮೂರು ಬಾರಿ ಮಾತು ತಪ್ಪಿದ್ರು. ಬಜೆಟ್ ಅಧಿವೇಶನ ಅಷ್ಟರಲ್ಲಿ ನಮ್ಮ ಬೇಡಿಕೆ‌ ಈಡೇರಿಸುತ್ತೇವೆ ಎಂದಿದ್ರು. ಆದ್ರೆ ಅದು ಕೂಡಾ ನೆರವೇರಿಲ್ಲ ಎಂದು ಬೇಸರ ಹೊರ ಹಾಕಿದರು.


ಜೂನ್ 27ರೊಳಗೆ ಅಂತಿಮ ನಿರ್ಧಾರ ತಿಳಿಸಿ


ಮುಖ್ಯಮಂತ್ರಿಗಳಿಗೆ ಅಂತಿಮವಾದ ಪತ್ರ ಬರೆಯುತ್ತಿದ್ದೇವೆ. ಇಡೀ ನಮ್ಮ‌ ಹೋರಾಟದ ಕುರಿತು ಪತ್ರ ಬರೆಯುತ್ತಿದ್ದೇವೆ. ನಮ್ಮ ಜೊತೆಗೆ ಅಂತಿಮ ಮಾತುಕತೆಯನ್ನು ಮಾಡಬೇಕು. ಜೂನ್ 27 ರ ಒಳಗೆ ಅವ್ರ ಅಂತಿಮ ನಿರ್ಧಾರ ಹೇಳಬೇಕು ಎಂದು ಆಗ್ರಹಿಸಬೇಕು.


ಅಂದು ಪಾದಯಾತ್ರೆಗೆ ಬೆಂಬಲಿಸಿದ್ದು ನೋಡಿ ನಮಗೆ ಭರವಸೆ ಇತ್ತು. ಆದ್ರೆ ಅದು ಆಗಲಿಲ್ಲ. ಒಂದು ಸರ್ಕಾರ ಒಂದು ಆಯೋಗ ರಚನೆ ಮಾಡಿ ವರದಿ ಪಡೆಯಲು ಎಷ್ಟು ಸಮಯ ಬೇಕು? ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಾಡಲು ನಿರ್ಧಾರ ಆಗಿದೆ. ಕನಿಷಷ್ಠ 25-30 ಸಾವಿರ ಜನ ಶಿಗ್ಗಾವಿಯಲ್ಲಿ ಪ್ರತಿಭಟನೆ ಮಾಡುತ್ತೇವೆ.


ಇದನ್ನೂ ಓದಿ:  Chitradurga: ಕಾಂಗ್ರೆಸ್ ನವರೇನು ಸ್ವಾತಂತ್ರ್ಯ ಹೋರಾಟಗಾರರೇ? ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಪ್ರಶ್ನೆ


ನಾನು ಶಿಗ್ಗಾವಿಗೆ ಬಂದ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ್ರಿ. ಅದರ ಋಣ ನಿಮ್ಮ ಮೇಲೆ ಇದೆ. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.


ಅಂತಿಮ ಸುತ್ತಿನ ಮಾತುಕತೆಗೆ ಕರೆಯಿರಿ


ಅಂತಿಮ ಸುತ್ತಿನ ಮಾತುಕತೆಗೆ ನಮ್ಮನ್ನು ಕರೆಯಬೇಕು. ತಮ್ಮ ನಿಲುವು  ಹೇಳದೆ ಇದ್ದರೆ ಪಂಚಮಸಾಲಿಗಳನ್ನು ಅರಮನೆಯಲ್ಲಿ ಕೂರಿಸಿ ಹೋರಾಟ ಶುರು ಮಾಡುತ್ತೇವೆ. ಕೊನೆ ನಿರ್ಣಯ ಅಂದೇ ಹೇಳಲು ನಿರ್ಧರಿಸಿದ್ದೇವೆ ಎಂದರು


ಚುನಾವಣೆ ನೆಪ ಮಾಡಿ ಮುಂದಕ್ಕೆ ಹಾಕಬೇಡಿ. ಚುನಾವಣೆಗೆ ಆರು ತಿಂಗಳು ಮಾತ್ರ ಇದೆ. ಸಾಲು ಸಾಲು ಚುನಾವಣೆಗಳು ಬರ್ತಿವೆ. ಹಾಗಾಗಿ ನೆಪ ಕೊಡದೆ ನಿರ್ಧಾರ ಮಾಡಿ ಎಂದು ಸರ್ಕಾರಕ್ಕೆ ಜೂನ್ 27ರ ಗಡುವು ನೀಡಿದರು.


ಜೂನ್ 27ರಂದು ಉಗ್ರ ಹೋರಾಟ


ಈ ವೇಳೆ ಮಾತನಾಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಜೂನ್ 27 ರಂದು ಉಗ್ರ ಹೋರಾಟ ಮಾಡ್ತೇವೆ. ಇದು ನಮ್ಮ ಸಮುದಾಯದ ಕೊನೆಯ ಹೋರಾಟ. ಮಾಡು ಇಲ್ಲವೇ ಮಡಿ ಹೋರಾಟ. ಅಂತಿಮ ನಿರ್ಧಾರಕ್ಕೆ ನಾವು ಬಂದಿದ್ದೇವೆ ಎಂದು ಹೇಳಿದರು.


ಬೆಳಗಾವಿ ಅಧಿವೇಶನದಲ್ಲೂ ಭರವಸೆ ಕೊಟ್ರು. ಹಲವು‌ಭಾರಿ ಅವರು ಭರವಸೆ ಕೊಟ್ರು. ಆದರೆ ಇಲ್ಲಿಯವರೆಗೆ ಭರವಸೆ ಈಡೇರಿಸಿಲ್ಲ. ನಾವು ಅವರ ಮಾತಿನ ಮೇಲೆ ಭರವಸೆ ಇಟ್ಟಿದ್ದೇವು. ಎಲ್ಲಾ ಭಾಗಗಳಲ್ಲಿ ಜಾಗೃತ ಸಭೆ ನಡೆಸಿದ್ದೇವೆ. ಸಮುದಾಯದ ಎಲ್ಲಾ ಪಂಗಡಗಳ ಮುಖಂಡರು ಸಭೆ ನಡೆಸಿದ್ದೇವೆ. ಹಿಂದುಳಿದ ವರ್ಗಗಳ ಸಮಿತಿ ವರದಿ ಪಡೆಯಬೇಕು. ವರದಿ ಪಡೆದು ಒಂದು ಸ್ಪಷ್ಟ ನಿರ್ಧಾರ ತಿಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.


ಶಿಕ್ಷಣ, ಉದ್ಯೋಗಕ್ಕಾಗಿ ಈ ಹೋರಾಟ


ನಮ್ಮ ತಾಳ್ಮೆಯ ಜೊತೆ ಸರ್ಕಾರ ಆಟವಾಡ್ತಿದೆ. ಕೊಡ್ತಿರೋ ಇಲ್ವೋ ಸ್ಪಷ್ಟ ಪಡಿಸಬೇಕು. ನಮ್ಮ ಬಡ ಮಕ್ಕಳ ಶಿಕ್ಷಣ,ಉದ್ಯೋಗಕ್ಕಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.


ಮೊದಲು ಶಿಗ್ಗಾಂವಿ ನಿವಾಸದ ಮುಂದೆ ಮಾಡ್ತೇವೆ. ನಂತರ ಬೆಂಗಳೂರು ನಿವಾಸದ ಮುಂದೆ ಮಾಡ್ತೇವೆ. ಮೊದಲು ಅವರು ಸ್ಪಷ್ಟ ನಿರ್ಧಾರ ತಿಳಿಸಲಿ. ಆಗುತ್ತೋ ಇಲ್ವೋ ಅಂತ ತಿಳಿಸಿ. ನಾವು ನಮ್ಮ ನಿರ್ಧಾರ ತಿಳಿಸ್ತೇವೆ. ಮುಂದೆ ಹೊಸ ಸರ್ಕಾರ ಬಂದಾಗ ಪಡೆದುಕೊಳ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.


ಇದನ್ನೂ ಓದಿ:  Covid19: 2-3 ವಾರಗಳಲ್ಲಿ ರಾಜ್ಯಕ್ಕೆ ಕೋವಿಡ್ 4ನೇ ಅಲೆ ಎಂಟ್ರಿ!? ಕೊರೊನಾ ರೂಲ್ಸ್​ ಮರೆಯದಿರಿ


ನಮ್ಮಲ್ಲೇ ಹಿತಶತ್ರುಗಳು ಇದ್ದಾರೆ


ಮೀಸಲಾತಿ ವಿಚಾರವಾಗಿ ನಮ್ಮಲ್ಲೇ ಹಿತಶತ್ರುಗಳು ಇದ್ದಾರೆ. ಮೀಸಲಾತಿ ಬೇಡ ಅಂತ ನಮ್ಮವರೇ ಒಬ್ರು ಸಿಎಂ ಕಿವಿ ಚುಚ್ಚುತ್ತಿದ್ದಾರೆ. ನಾವು ಮೀಸಲಾತಿ ಬೇಕು ಅಂದ್ರೆ, ನಮ್ಮವರೇ ಇಬ್ರು ಮೀಸಲಾತಿ ಬೇಡ ಅಂತಾರೆ. ಉತ್ತರ ಕರ್ನಾಟಕದಲ್ಲಿ ಒಬ್ರು ಒಳ ಹಿತಶತ್ರು ಇದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಒಬ್ರು ಶತ್ರು ಈ ಮೀಸಲಾತಿಗೆ ಇದ್ದಾರೆ. ನಮ್ಮ ಸಮುದಾಯದ ರಾಜಕೀಯ ನಾಯಕರೇ ನಮಗೆ ಶತ್ರುಗಳಾಗಿದ್ದಾರೆ ಎಂದು ಸ್ವಾಮೀಜಿ ಗಂಭೀರ ಆರೋಪ ಮಾಡಿದರು.

top videos
    First published: