ಬೆಳಗಾವಿ: ರಾಜ್ಯದಲ್ಲಿ 2A ಮೀಸಲಾತಿ ಹೋರಾಟ (2A Reservation) ಮತ್ತಷ್ಟು ಚುರುಕುಗೊಂಡಿದ್ದು, ಇದೇ ಡಿಸೆಂಬರ್ 5 ರಂದು ಬೈಲಹೊಂಗಲದಲ್ಲಿ (Bylahongala) ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಮೀಸಲಾತಿ ನೀಡಲು ರಾಜ್ಯ ಸರ್ಕಾರಕ್ಕೆ (Karnataka Government) ಡಿಸೆಂಬರ್ 19ರ ಅಂತಿಮ ಗಡುವು ನೀಡಿದ್ದು, ಬೇಡಿಕೆ ಈಡೇರಿಕೆಗೆ ಆಗದೇ ಇದ್ದರೆ ಡಿಸೆಂಬರ್ 22 ರಂದು ಸುವರ್ಣ ಸೌಧದ (Suvarna Soudha) ಮುಂದೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ. ನಿರ್ಣಾಯಕ ಹೋರಾಟದ ರೂಪರೇಷು ಸಿದ್ಧಪಡಿಗುತ್ತಿದೆ. ಹೋರಾಟದಲ್ಲಿ ಸಮಾಜದ ಜನ ಹೆಚ್ಚು ಭಾಗವಹಿಸಿ ಬೆಂಬಲಿಸಬೇಕು ಎಂದು ಬೆಳಗಾವಿಯಲ್ಲಿ ಪಂಚಮಸಾಲಿ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಹೇಳಿದ್ದಾರೆ.
ಬೆಳಗಾವಿ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಬದಲು ಹಿಂದು ಪಂಚಮಸಾಲಿ ಇದ್ದರೆ ಬೇಗ ಮೀಸಲಾತಿ ಸಿಗುತ್ತಿತ್ತು ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ರು.
ಇವರಿಗೆ ನಮ್ಮ ಸಮಾಜಕ್ಕೆ ಒಗ್ಗಲಿಕಗರು ಅಂತಿದ್ರು. ಯಾವ ಜನಾಂಗ ಅಂದ್ರೆ ಲಿಂಗಾಯತ ಅಂತಿದ್ರು. ಪಂಚಮಸಾಲಿ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಉಳಿದ ಲಿಂಗಾಯತ ಒಳಪಂಗಡದವರು ಕೇವಲ ಒಳಪಂಗಡದ ಹೆಸರು ಹೇಳುತ್ತಿದ್ರು. ಹೀಗಾಗಿ ಮೀಸಲಾತಿ ಸೌಲಭ್ಯ ಪಡೆದುಕೊಂಡಿದ್ದಾರೆ. ಮೀಸಲಾತಿಗಾಗಿ ನಮ್ಮ ಪವಿತ್ರ ಲಿಂಗಾಯತ ಶಬ್ದವನ್ನು ಅನಿವಾರ್ಯವಾಗಿ ಬಿಟ್ಟಿದ್ದಾರೆ.
ಶಬ್ದ ಬಿಟ್ಟು ಮೀಸಲಾತಿ ಪಡೆದುಕೊಂಡಿದ್ದಾರೆ. ಪಂಚಮಸಾಲಿ ಹೆಸರಿನಲ್ಲಿ ಮೀಸಲಾತಿ ಪಡೆಯಲು ಹೋರಾಟ ಬೇಸರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಿ ಎಂದು ಯತ್ನಾಳ್ ಹೇಳಿದ್ದಾರೆ ಎಂದರು.
ಸಿದ್ದರಾಮ ಸ್ವಾಮೀಜಿ ಹೇಳಿಕೆ
ಲಿಂಗಾಯತರು ಹಿಂದೂಗಳು ಅಲ್ಲ ಸಿದ್ದರಾಮ ಸ್ವಾಮೀಜಿ ಹೇಳಿಕೆ ವಿಚಾರದ ಬಗ್ಗೆ ಹೆಚ್ಚು ಮಾತನಾಡಲ್ಲ. ನಾನು ಮೀಸಲಾತಿ ಹೋರಾಟದಲ್ಲಿ ಇದ್ದೇನೆ. ನಮ್ಮ ಸಮಾಜದಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಸಮಾಜದವರಿಗೆ ಗೊತ್ತಿದೆ, ನಮ್ಮ ಜಾತಿ, ಧರ್ಮ ಯಾವುದು ಅಂತ. ಪಂಚಮಸಾಲಿ ಎಂಬುದು ಅನೇಕರಿಗೆ ಗೊತ್ತಿಲ್ಲ. ಅದಕ್ಕಾಗಿ ಇಷ್ಟು ಹೋರಾಟ ಮಾಡೋ ಸ್ಥಿತಿ ನಿರ್ಮಾಣ ಆಗಿದೆ ಎಂದು ಹೇಳಿದರು.
ಇದನ್ನೂ ಓದಿ: Veer Savarkarಗೆ ಅಪಮಾನ ಮಾಡೋರು ರೌರವ ನರಕಕ್ಕೆ ಹೋಗ್ತಾರೆ: ಬಿ ಎಲ್ ಸಂತೋಷ್
ಸಮಾಜದ ಜನ ಜಾಗೃತರಾಗಿದ್ದಾರೆ
ಬೆಂಗಳೂರಿನ ಸಮಾವೇಶ ಪಂಚಮಸಾಲಿ ಶಕ್ತಿ ಕೇಂದ್ರ, ರಾಜ್ಯ ಸರ್ಕಾರಕ್ಕೆ ಗೊತ್ತಾಗಿದೆ. ನಮ್ಮ ಸಮಾಜದ ವಿಡಿಯೋ, ಫೋಟೋ ತೋರಿಸಿ. ಎಲ್ಲರಿಗೂ ನಾವೇ ನಾಯಕ ಎಂದು ಹೇಳಿ ಅನೇಕರು ಬೆಳೆದ್ರು. ಉತ್ತರ ಕರ್ನಾಟಕ ಬಹುಸಂಖ್ಯಾತ ಪಂಚಮಸಾಲಿಗಳನ್ನು ತೋರಿಸಿ. ಕಡಿಮೆ ಸಂಖ್ಯೆ ಇರೋ ನಾಯಕರು ನಮ್ಮನ್ನು ಆಳಿದರು. ಹಣೆಯ ಮೇಲೆ ವಿಭೂತಿ, ಕೊರಳಲಿ ಲಿಂಗ ನೋಡಿ ನಾವು ನಂಬಿ ಬೆಳಸಿದ್ವಿ. ಬೆಳೆದ ಮೇಲೆ ನಮಗೆ ನ್ಯಾಯ ಕೊಡಿಸಲಿಲ್ಲ. ಸಮಾಜದ ಮಕ್ಕಳಿಗೆ ಶಾಲೆ, ಹಾಸ್ಟೆಲ್ ಸೇರಿ ಸೌಲಭ್ಯ ಒದಗಿಸಲಿಲ್ಲ. ನಮ್ಮ ಸಮಾಜದ ಜನ ಜಾಗೃತರಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎ ಬಿ ಪಾಟೀಲ್, ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಸೇರಿ ಅನೇಕ ಮುಖಂಡರು ಪಾಲ್ಗೊಂಡಿದ್ದಾರೆ.‘
ಮುಸ್ಲಿಮರ ಅಲ್ಪಸಂಖ್ಯಾತರ ಮೀಸಲಾತಿ ತೆಗೆಯಲು ಚಿಂತನೆ
ಮುಸ್ಲಿಮರ 2ಎ ಮೀಸಲಾತಿ (2A Reservation) ತೆಗೆಯುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ (BJP MLA Aravind Bellad) ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ (BJP MLA Basanagowda Patil Yatnal) ಹೇಳಿಕೆ ನೀಡಿದ್ದಾರೆ. ಮುಸ್ಲಿಮರು ಅಲ್ಪಸಂಖ್ಯಾತ (Minority) ಹಾಗೂ 2ಎ ಎರಡೆರೆಡು ಮೀಸಲಾತಿ ಲಾಭ ಪಡೆಯುತ್ತಿದ್ದಾರೆ. ಆದ್ದರಿಂದ 2ಎ ಮೀಸಲಾತಿಯಿಂದ ತೆಗೆದು ಹಾಕಲು ತಯಾರಿ ನಡೆದಿದೆ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ಇದನ್ನೂ ಓದಿ: SC-ST ಸಮುದಾಯವನ್ನು BJP ತಪ್ಪು ದಾರಿಗೆಳೆಯುತ್ತಿದೆ; ಮೀಸಲಾತಿ ಹೆಚ್ಚಳ ಬಗ್ಗೆ ಸ್ಪಷ್ಟನೆ ಕೇಳಿದ ಸಿದ್ದರಾಮಯ್ಯ!
ಅಲ್ಪಸಂಖ್ಯಾತ ಮತ್ತು ಕೆಲ ಮುಸ್ಲಿಂ ಒಳಪಂಗಡಗಳು 2ಎ ಮೀಸಲಾತಿಯ ಲಾಭ ಸಹ ಪಡೆಯುತ್ತಿವೆ ಎಂದು ಬೆಲ್ಲದ್ ಹೇಳಿದರು. ಇತ್ತ ಬಸನಗೌಡ ಪಾಟೀಲ್ ಯತ್ನಾಳ್ ಸಹ ಬ್ರಾಹ್ಮಣರು ನಿಜವಾದ ಅಲ್ಪಸಂಖ್ಯಾತರು ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ