ಅಭಿಮಾನಿ ಎದೆಯ ಮೇಲೆ ಜಾರಕಿಹೊಳಿ..! ಕುಂದಾ ನಗರಿಯಲ್ಲಿ ಟ್ಯಾಟೋ ಟ್ರೆಂಡ್...!


Updated:March 11, 2018, 11:41 AM IST
ಅಭಿಮಾನಿ ಎದೆಯ ಮೇಲೆ ಜಾರಕಿಹೊಳಿ..! ಕುಂದಾ ನಗರಿಯಲ್ಲಿ ಟ್ಯಾಟೋ ಟ್ರೆಂಡ್...!
  • Share this:
ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ

ಬೆಳಗಾವಿ(ಮಾ.11): ಚಿತ್ರ ನಟರಿಗೆ ಅಭಿಮಾನಿಗಳು ಇರೋದು ಸಹಜ. ಅವರು ವಿವಿಧ ರೀತಿಯಲ್ಲಿ ತಮ್ಮ ಅಭಿಮಾನ ಪ್ರದರ್ಶಿಸುವುದು ಕಾಮನ್. ಆದರೆ ಇಲ್ಲೋಬ್ಬ ಅಭಿಮಾನಿ ತನ್ನ ನೆಚ್ಚಿನ ರಾಜಕಾರಣಿಯ ಫೋಟೋ ತನ್ನ ಎದೆಯ ಮೇಲೆ ಅಚ್ಚು ಹಾಕಿಸಿಕೋಳ್ಳುವ ಮೂಲಕ ಅಭಿಮಾನ ಮೆರೆದಿದ್ದಾನೆ.

ಅಭಿಮಾನಿಯ ಎದೆಯ ಮೇಲೆ ಬೆಳಗಾವಿಯ ಪ್ರಭಾವಿ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರ ಟ್ಯಾಟೋ. ಹೀಗೆ ಟ್ಯಾಟೋ ಹಾಕಿಸಿಕೊಂಡಿರುವ ವ್ಯಕ್ತಿಯ ಹೆಸರು ವಿಜಯ ತಳವಾರ. ವಿಜಯ ತಳವಾರ್ ಬೆಳಗಾವಿಯ ಟಿಳಕವಾಡಿ ನಿವಾಸಿಯಾಗಿದ್ದು ಕಳೆದ ಅನೇಕ ವರ್ಷಗಳಿಂದ ಸತೀಶ್ ಜಾರಕಿಹೊಳಿ ಅಭಿಮಾನಿಯಾಗಿದ್ದಾರೆ. ಇದೀಗ ತಮ್ಮ ಬಲಭಾಗದ ಎದೆಯ ಮೇಲೆ ಸತೀಶ್ ಜಾರಕಿಹೊಳಿ ಟ್ಯಾಟೋ ಹಾಕಿಸಿಕೊಳ್ಳುವ ಮೂಲಕ ಮತ್ತೊಮ್ಮೆ ತಮ್ಮ ಅಭಿಮಾನ ತೆರಿಸಿದ್ದಾರೆ.

ಕಳೆದ ಮಾರ್ಚ್ 4 ರಂದು ರಾತ್ರಿ 7:30ರಿಂದ ತಡರಾತ್ರಿ 3:30ರವರೆಗೆ ಹಚ್ಚೆ ಕಲಾವಿದ ಸ್ನೇಹಲ್ ಚೌಧರಿ ಹಚ್ಚೆ ಬಿಡಿಸಿದ್ದಾರೆ. ಇನ್ನೂ ಸ್ನೇಹಲ್ ಕೂಡ ಸಾಹುಕಾರನ ಅಭಿಮಾನಿಯಾಗಿದ್ದು, ಸತೀಶ್ ಜಾರಿಕಿಹೊಳಿಯ ಭಾವಚಿತ್ರಕ್ಕೆ ಸ್ವಲ್ಪವೂ ವ್ಯತ್ಯಾಸ ಆಗದಂತೆ ಚಿತ್ರ ಬಿಡಿಸಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯ ರಾಜ್ಯಧ್ಯಕ್ಷನಾಗಿರುವ ವಿಜಯ್ ತಳವಾರಗೆ ಸತೀಶ್ ಸಾಹುಕಾರ ಎಂದರೆ ಪಂಚಪ್ರಾಣ ಅಷ್ಟೇ ಅಲ್ಲಾ ಸತೀಶ್ ಜಾರಕಿಹೊಳಿಯವರ ಸಂಘಟನೆಯಲ್ಲಿ ಕೆಲಸ ಮಾಡುತಿದ್ದಾನೆ. ವಿಜಯ ತಳವಾರ್ ಹೊಸ ಸಾಹಸಕ್ಕೆ ಅವರ ಸ್ನೇಹಿತರು ಸೈ ಎಂದಿದ್ದಾರೆ.

ಒಟ್ಟಾರೆಯಾಗಿ ದೇವರು, ಸಿನಿಮಾ ನಟರ ಟ್ಯಾಟೋಗಳು ಅಭಿಮಾನಿಗಳು ಹಾಕಿಸಿಕೊಳ್ಳುವುದು ಸಹಜ. ಆದರೇ ಇದೀಗ ಸತೀಶ್ ಜಾರಕಿಹೊಳಿ ಅಭಿಮಾನಿಗಳು ತಮ್ಮ ಎದೆಯ ಮೇಲೆ ಟ್ಯಾಟೋ ಹಾಕಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾನೆ. ಇದನ್ನು ಹೊಸ ಟ್ರೆಂಡ್ ಆಗಿದ್ದು ಮತ್ಯಾವ ರಾಜಕಾರಣಿಗಳು ಅಭಿಮಾನಿಗಳು ಇದನ್ನು ಫಾಲೋ ಮಾಡಲಿದ್ದಾರೆ ಎಂಬುದು ಇದೀಗ ಕಾದು ನೋಡಬೇಕಿದೆ.
First published:March 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ