ಪಕ್ಷ ಎದಿರುಹಾಕಿಕೊಂಡು ಬೆಳಗಾವಿಯಲ್ಲಿ ಶಕ್ತಿಪ್ರದರ್ಶನ ಮಾಡಿ ಗೆದ್ದ ಜಾರಕಿಹೊಳಿ ಬ್ರದರ್ಸ್

Belgaum Politics: ಪಕ್ಷದಿಂದ ಅಧಿಕೃತ ಅಭ್ಯರ್ಥಿ ಕಣದಲ್ಲಿದ್ದರೂ ತಮ್ಮ ಕಿರಿಯ ಸಹೋದರ ಲಖನ್ ಅವರನ್ನ ಕಣಕ್ಕಿಳಿಸಿದ್ದ ರಮೇಶ್ ಮತ್ತು ಬಾಲಚಂದ್ರ ಜಾರಕಿಹೊಳಿ ತಮ್ಮ ಪ್ರಯತ್ನದಲ್ಲಿ ಗೆದ್ದು ಶಕ್ತಿ ತೋರ್ಪಡಿಸಿದ್ದಾರೆ.

ಲಖನ್ ಜಾರಕಿಹೊಳಿ

ಲಖನ್ ಜಾರಕಿಹೊಳಿ

  • Share this:
ಬೆಳಗಾವಿ, ಡಿ. 15: ಬೆಳಗಾವಿ ಪರಿಷತ್ ಚುನಾವಣೆ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ರಾಜಕೀಯದಲ್ಲಿ ಹಲವು ಲೆಕ್ಕಾಚಾರಗಳಿವೆ ಕಾರಣವಾಗಿದೆ. ಜಿಲ್ಲೆಯ ಎರಡು ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ. ಪಕ್ಷದಲ್ಲಿ ಹಿನ್ನಡೆಯಾದ್ರು ಜಿಲ್ಲೆಯಲ್ಲಿ ತಮ್ಮ ಶಕ್ತಿ, ಸಾಮರ್ಥ್ಯ ತೋರಿಸುವಲ್ಲಿ ಜಾರಕಿಹೊಳಿ ಸಹೋದರರು (Jarkiholi Brothers) ಯಶಸ್ವಿಯಾಗಿದ್ದಾರೆ. ರಮೇಶ್ ಜಾರಕಿಹೊಳಿ (Ramesh Jarkiholi) ಮತ್ತು ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಅವರು ಬಿಜೆಪಿ ಪಕ್ಷದಲ್ಲಿ ಇದ್ದುಕೊಂಡು ಪಕ್ಷೇತರ ಅಭ್ಯರ್ಥಿಯಾಗಿದ್ದ ತಮ್ಮ ಕಿರಿಯ ಸಹೋದರ ಲಖನ್ ಜಾರಕಿಹೊಳಿ (Lakhan Jarkiholi) ಅವರನ್ನು ಗೆಲ್ಲಿಸಿದ್ದಾರೆ. ಬಿಜೆಪಿ ನಾಯಕರ ಕೆಂಗಣ್ಣಿಗೆ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಗುರಿಯಾಗೋ ಸಾಧ್ಯತೆ ಇದೆ. ಆದರೆ, ಪಕ್ಷ ಯಾವ ರೀತಿ ಇದನ್ನು ಯಾವ ರೀತಿ ಸ್ವೀಕಾರ ಮಾಡಲಿದೆ ಎಂಬುದು ಕಾದು ನೋಡಬೇಕು.

ಬೆಳಗಾವಿ ಜಿಲ್ಲೆಯ ರಾಜಕಾರಣ ವಿಭಿನ್ನ ಎಂಬುದು ಮತ್ತೊಮ್ಮೆ ಸಾಬೀತು ಆಗಿದೆ. ಕಳೆದ ಸಲ ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿದ್ದ ರಮೇಶ ಜಾರಕಿಹೊಳಿ ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಪಕ್ಷದಲ್ಲಿ ಹಿನ್ನಡೆಯಾದ್ರು ಜಿಲ್ಲೆಯಲ್ಲಿ ಪ್ರಭಾವವನ್ನು ಜಾರಕಿಹೊಳಿ ಸಹೋದರರು ಹೆಚ್ಚಿಸಿಕೊಂಡಿದ್ದಾರ. ರಾಜ್ಯದಲ್ಲಿ ಏಕೈಕ ಪಕ್ಷೇತರ ಅಭ್ಯರ್ಥಿಯಾಗಿ ಲಖನ ಜಾರಕಿಹೊಳಿ ಗೆಲವು ಸಾಧಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಮ್ಮೆ ತಮ್ಮ ಶಕ್ತಿ ಪ್ರದೇಶದ ಮಾಡಿದ್ದಾರೆ‌ ಜಾರಕಿಹೊಳಿ‌ ಸಹೋದರರು. ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಇಬ್ಬರೂ ಸದ್ಯ ಬಿಜೆಪಿಯಲ್ಲೇ ಇದ್ದಾರೆ. ಆದರೆ, ಬಿಜೆಪಿ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರು ಸೋಲು ಅನುಭವಿಸಿದ್ದಾರೆ.

ಲಖನ್ ಸ್ಪರ್ಧಿಸದೇ ಹೋಗಿದ್ದರೆ ಇಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ನಿಶ್ಚಿತವಾಗಿರುತ್ತಿತ್ತು. ಮೇಲ್ಮನೆಯಲ್ಲಿ ಬಿಜೆಪಿಗೆ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಬೀಳುವುದು ತಪ್ಪುತ್ತಿತ್ತು.

ಇದನ್ನೂ ಓದಿ: ಅಧಿವೇಶನದಲ್ಲಿ ಹಿಗ್ಗಾಮುಗ್ಗ ತರಾಟೆ ತಗೋರಿ ಎಂದ ಸಿದ್ದರಾಮಯ್ಯ; ಸುಮ್ನೆ ಬಿಟ್ಟಿಲ್ಲ ಎಂದ ಇಬ್ರಾಹಿಂ

ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರ ಸೋಲಿನ ಹೊಣೆಯನ್ನು ಜಾರಕಿಹೊಳಿ ಸಹೋದರರಿಗೆ ಕಟ್ಟಲು ಯತ್ನ ನಡೆದಿದೆ. ಇದಕ್ಕೆ ಪ್ರತ್ಯಾಸ್ತ್ರ ಸಿದ್ದ ಮಾಡಿಕೊಂಡಿರೋ ಸಹೋದರರು. ಜಿಲ್ಲೆಯಲ್ಲಿ ಇಬ್ಬರು ಸಚಿವರು, 11 ಜನ ಬಿಜೆಪಿ ಶಾಸಕರು ಇದ್ದಾರೆ. ಎಲ್ಲಾ ಕ್ಷೇತ್ರದಲ್ಲಿ ಹಿನ್ನಡೆಗೆ ನಾವು ಹೇಗೆ ಕಾರಣ ಎಂದು ಹೇಳಲು ತಯಾರಿ ಮಾಡಿಕೊಂಡಿದ್ದಾರೆ.

ಮುಂದೆ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಚುನಾವಣೆ ಟಾಸ್ಕ್ ಇದೆ. ದೊಡ್ಡ ಜಿಲ್ಲೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಬೇಕಿದೆ ರಮೇಶ ಜಾರಕಿಹೊಳಿ ಬಲ,ರಮೇಶ ಜಾರಕಿಹೊಳಿ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳೋದು ಸುಲಭ ಇಲ್ಲ.

ಇದನ್ನೂ ಓದಿ: ಜಿ.ಟಿ.ದೇವೇಗೌಡರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಸುಳಿವು ನೀಡಿದ ಸಾ.ರಾ.ಮಹೇಶ್?

ಇನ್ನು, ಕಾಂಗ್ರೆಸ್ ‌ಪಕ್ಷದ ಚನ್ನರಾಜ್ ಹಟ್ಟಿಹೊಳಿ ಅವರ ಗೆಲುವಿನಲ್ಲಿ ಸತೀಶ್ ಜಾರಕಿಹೊಳಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾಂಗ್ರೆಸ್ ಗೆಲ್ಲಿಸುವಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಾರ್ಯತಂತ್ರ ಮಾಡಿದ್ದರು. ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಪಕ್ಷದ ಮತ ಉಳಿಸಲು ಹೋರಾಟ ನಡೆಸಿದ್ದರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪ್ರತಿ ಹಂತದಲ್ಲಿ ಸತೀಶ ಜಾರಕಿಹೊಳಿ ಸಾಥ್  ನೀಡಿದ್ದರು. ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪಕ್ಷದಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಇಡೀ ಜಿಲ್ಲೆಯ ಜವಾಬ್ದಾರಿ ವಹಿಸಿಕೊಳ್ಳಲು ಸತೀಶ್ ಜಾರಕಿಹೊಳಿ ಸಿದ್ದತೆ ನಡೆಸಿದ್ದಾರೆ. ಇದೇನೇ ಇರಲಿ, ಜಾರಕಿಹೊಳಿ ಕುಟುಂಬದಲ್ಲಿ ಮೂರು ಜನರು ಶಾಸಕರಾಗಿದ್ದಾರೆ ಹಾಗೂ ಒಬ್ಬರು ಪರಿಷತ್ ಮೆಟ್ಟಿಲು ಏರಿದ್ದಾರೆ.

ವರದಿ: ಚಂದ್ರಕಾಂತ ಸುಗಂಧಿ
Published by:Vijayasarthy SN
First published: