HOME » NEWS » State » JARAKIHOLI BROTHERS ABSENCE DURING BSY TOUR TO BELAGAVI GIVING TO SPECULATION OF DISSATISFACTION SNVS

ಸಿಎಂ ಕಾರ್ಯಕ್ರಮಗಳಿಗೆ ಜಾರಕಿಹೊಳಿ ಬ್ರದರ್ಸ್ ಗೈರು; ಮುನಿಸಾ ಅಥವಾ ಬ್ಲ್ಯಾಕ್​ಮೇಲ್ ತಂತ್ರವಾ?

ರಮೇಶ್ ಜಾರಕಿಹೊಳಿ ಅವರು ಮಂತ್ರಿ ಪದವಿಯೊಂದಿಗೇ ಬೆಳಗಾವಿ ಜಿಲ್ಲೆಗೆ ಕಾಲಿಡುವ ಸಂಕಲ್ಪ ತೊಟ್ಟಿದ್ಧಾರೆ. ಅದೇ ಕಾರಣಕ್ಕೆ ಅವರು ಯಡಿಯೂರಪ್ಪ ಜೊತೆ ಬೆಳಗಾವಿಗೆ ಹೋಗದಿರಲು ನಿರ್ಧರಿಸಿದ್ದು ಎಂಬ ಮಾತು ಕೇಳಿಬರುತ್ತಿದೆ.

news18
Updated:January 29, 2020, 12:57 PM IST
ಸಿಎಂ ಕಾರ್ಯಕ್ರಮಗಳಿಗೆ ಜಾರಕಿಹೊಳಿ ಬ್ರದರ್ಸ್ ಗೈರು; ಮುನಿಸಾ ಅಥವಾ ಬ್ಲ್ಯಾಕ್​ಮೇಲ್ ತಂತ್ರವಾ?
ರಮೇಶ್ ಜಾರಕಿಹೊಳಿ
  • News18
  • Last Updated: January 29, 2020, 12:57 PM IST
  • Share this:
ಬೆಂಗಳೂರು(ಜ. 29): ಸಿಎಂ ಯಡಿಯೂರಪ್ಪ ಅತ್ತ ಬೆಳಗಾವಿ ಪ್ರವಾಸಕ್ಕೆ ಹೋದರೆ, ಇತ್ತ ಬೆಳಗಾವಿಯ ಸಾಹುಕಾರ್​ಗಳು ಮಾತ್ರ ಬೆಂಗಳೂರಿನಲ್ಲೇ ಇರಲು ನಿರ್ಧರಿಸಿದ್ಧಾರೆ. ಬೆಳಗಾವಿಯಲ್ಲಿ ಬಿಎಸ್​ವೈ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ, ಬೆಳಗಾವಿಯವರೇ ಆದ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಇಬ್ಬರೂ ಸ್ವಂತ ಜಿಲ್ಲೆಯಲ್ಲಿ ಯಡಿಯೂರಪ್ಪ ಜೊತೆ ಇರುವುದು ಬಿಟ್ಟು ಬೆಂಗಳೂರಿನಲ್ಲೇ ಇರುತ್ತಿರುವುದು ಕುತೂಹಲ ಮೂಡಿಸಿದೆ. ಬೆಂಗಳೂರಿನಲ್ಲಿ ಮಾಡಲು ಮುಖ್ಯ ಕೆಲಸ ಇಲ್ಲದೇ ಇದ್ದರೂ ಜಾರಕಿಹೊಳಿ ಸಹೋದರರು ಬೆಳಗಾವಿಗೆ ಯಾಕೆ ಹೋಗಲಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.

ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಪಕ್ಷಾಂತರಿ ಶಾಸಕರ ಜೊತೆ ಇದ್ದಾರೆ. ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಖಾಸಗಿ ಹೋಟೆಲ್​ನಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ಧಾರೆ. ಒಂದು ಮೂಲದ ಪ್ರಕಾರ, ಜಾರಕಿಹೊಳಿ ಬ್ರದರ್ಸ್ ಉದ್ದೇಶಪೂರ್ವಕವಾಗಿಯೇ ಸಿಎಂ ಕಾರ್ಯಕ್ರಮದಿಂದ ದೂರ ಉಳಿದುಕೊಂಡಿದ್ಧಾರೆ. ಸಂಪುಟ ವಿಸ್ತರಣೆ ಪದೇ ಪದೇ ವಿಳಂಬವಾಗುತ್ತಿರುವುದು ಇವರಿಗೆ ಅತೀವ ಬೇಸರ ಉಂಟು ಮಾಡಿದೆ. ಇದೇ ಕಾರಣಕ್ಕೆ ಇವರು ಸಿಎಂ ಮೇಲೆ ಮುನಿಸಿಕೊಂಡಿದ್ದಾರೆನ್ನಲಾಗುತ್ತಿದೆ.

ಇನ್ನೊಂದು ಮೂಲದ ಪ್ರಕಾರ, ರಮೇಶ್ ಜಾರಕಿಹೊಳಿ ಅವರು ಮಂತ್ರಿ ಪದವಿಯೊಂದಿಗೇ ಬೆಳಗಾವಿ ಜಿಲ್ಲೆಗೆ ಕಾಲಿಡುವ ಸಂಕಲ್ಪ ತೊಟ್ಟಿದ್ಧಾರೆ. ಅದೇ ಕಾರಣಕ್ಕೆ ಅವರು ಯಡಿಯೂರಪ್ಪ ಜೊತೆ ಬೆಳಗಾವಿಗೆ ಹೋಗದಿರಲು ನಿರ್ಧರಿಸಿದ್ದು ಎಂಬ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ: ಸಂಪುಟ ವಿಸ್ತರಣೆಯಾಗಲಿ ಆಗ ಗೊತ್ತಾಗುತ್ತೆ ಬಿಜೆಪಿಯಲ್ಲಿ ಯಾರು ಸಿಡೀತಾರೆ, ಯಾರು ತಣ್ಣಗಾಗ್ತಾರೆ? ಅಂತ; ಜಿ. ಪರಮೇಶ್ವರ್ ವ್ಯಂಗ್ಯ

ಆದರೆ, ತಾವೆಲ್ಲರೂ ಯಡಿಯೂರಪ್ಪ  ಜೊತೆ ಸಂಪರ್ಕದಲ್ಲೇ ಇದ್ದೇವೆ. ಅವರೊಂದಿಗೆ ಮುನಿಸಿಕೊಂಡಿಲ್ಲ ಎಂದು ರಮೇಶ್ ಜಾರಕಿಹೊಳಿ ಹಾಗೂ ಇತರ ಪಕ್ಷಾಂತರಿ ಶಾಸಕರುಗಳು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಸಂಪುಟ ವಿಸ್ತರಣೆ ಆಗಿಲ್ಲ ಎಂಬುದಾಗಲೀ ಅಥವಾ ಜಾರಕಿಹೊಳಿಗೆ ಡಿಸಿಎಂ ಸ್ಥಾನ ಕೊಡಲಿಲ್ಲ ಎಂಬುದಾಗಲೀ ನಮಗೆ ಅಸಮಾಧಾನ ತಂದಿಲ್ಲ. ಯಾರೂ ಯಾವ ಸ್ಥಾನಕ್ಕೂ ಸ್ಪರ್ಧಿಗಳಲ್ಲ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಈ ಬಂಡಾಯ ಶಾಸಕರ ಬಣ ಹೇಳಿಕೊಂಡಿದೆ.

ಸೋತವರಿಗೆ ಸಚಿವ ಸ್ಥಾನ ಕೊಡಬೇಕೋ ಬೇಡವೋ ಎಂಬುದನ್ನು ಬಿಜೆಪಿ ನಾಯಕರು ನೋಡಿಕೊಳ್ಳುತ್ತಾರೆ. ಅವರಿಗೆ ನಮ್ಮ ಸಹಕಾರ ಇರುತ್ತದೆ. ಜಂಟಿ ಅಧಿವೇಶನ ನಡೆಯುವ ಹೊತ್ತಿಗೆ ಸಚಿವರಾಗೇ ನಾವು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಂಥ ಅವಕಾಶ ಸಿಕ್ಕರೆ ಸಚಿವರಾಗಿಯೇ ಅಧಿವೇಶನಕ್ಕೆ ಬರುತ್ತೇವೆ ಎಂದು ಈ ಶಾಸಕರು ತಿಳಿಸಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: January 29, 2020, 12:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories