Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:January 18, 2020, 6:21 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ನಿರ್ಭಯಾ ಅತ್ಯಾಚಾರಿಗಳನ್ನ ಮನ್ನಿಸಿ ಎಂದ ವಕೀಲೆ ಇಂದಿರಾ ಜೈಸಿಂಗ್ ವಿರುದ್ಧ ತಾಯಿ ಆಕ್ರೋಶ

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸುವುದು ವಿಳಂಬವಾಗುತ್ತಿದೆ ಎಂದು ಆಕೆಯ ತಾಯಿ ಪರಿತಪಿಸುತ್ತಿರುವ ಹೊತ್ತಲ್ಲೇ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಕ್ಷಮೆಯ ಸಲಹೆ ನೀಡಿದ್ಧಾರೆ. ರಾಜೀವ್ ಗಾಂಧಿ ಹಂತಕರನ್ನು ಸೋನಿಯಾ ಗಾಂಧಿ ಕ್ಷಮಿಸಿದ ರೀತಿಯಲ್ಲೇ ನಿರ್ಭಯಾ ಪ್ರಕರಣದಲ್ಲಿ ಅಪರಾಧಿಗಳನ್ನು ಮನ್ನಿಸಿ ಎಂದು ಆಕೆಯ ತಾಯಿ ಆಶಾ ದೇವಿ ಅವರಿಗೆ ಜೈಸಿಂಗ್ ಮನವಿ ಮಾಡಿದ್ಧಾರೆ. ಆದರೆ, ಹಿರಿಯ ವಕೀಲೆಯ ಈ ಸಲಹೆಗೆ ಆಶಾ ದೇವಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

2.ಕೇರಳಿಗರು ರಾಹುಲ್ ಗಾಂಧಿಯನ್ನು ಮತ್ತೊಮ್ಮೆ ಗೆಲ್ಲಿಸಿದರೆ ಮೋದಿಗೇ ಲಾಭ: ರಾಮಚಂದ್ರ ಗುಹಾ

ದೇಶದ ರಾಜಕಾರಣದ ಪ್ರಭಾವಶಾಲಿ ಕುಟುಂಬದ 5ನೇ ತಲೆಮಾರಿನವರಾದ ರಾಹುಲ್ ಗಾಂಧಿಯನ್ನು ಗೆಲ್ಲಿಸಿರುವುದು ಕೇರಳಿಗರು ಮಾಡಿರುವ ದೊಡ್ಡ ತಪ್ಪು. ಕುಟುಂಬದ ಹೆಸರು ಬಳಸಿಕೊಂಡು ರಾಜಕೀಯಕ್ಕೆ ಬಂದಿರುವ ರಾಹುಲ್ ಗಾಂಧಿ ಮತ್ತು ಸ್ವಂತ ಬಲದಿಂದ ಗೆಲುವು ಸಾಧಿಸಿರುವ ನರೇಂದ್ರ ಮೋದಿ ನಡುವೆ ಹೋಲಿಕೆ ಸಾಧ್ಯವಿಲ್ಲ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ಹೇಳಿದ್ದಾರೆ.

3. ಜಮ್ಮು-ಕಾಶ್ಮೀರದಲ್ಲಿ ಪ್ರಿಪೇಯ್ಡ್ ಮೊಬೈಲ್​ನ ಎಸ್​ಎಂಎಸ್​, ವಾಯ್ಸ್​ ಕಾಲ್ ಸೇವೆ ಶೀಘ್ರ ಮರುಆರಂಭ

ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧಿಸಲಾಗಿರುವ ಎಸ್​ಎಂಎಸ್​ ಸೇವೆ ಮತ್ತು ಪ್ರಿಪೇಯ್ಡ್ ಮೊಬೈಲ್​ ವಾಯ್ಸ್​ ಕಾಲ್​ ಸೌಲಭ್ಯವನ್ನು ಶೀಘ್ರದಲ್ಲಿಯೇ ಮರುಸ್ಥಾಪಿಸುವುದಾಗಿ ಸರ್ಕಾರದ ವಕ್ತಾರ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ.  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್, ಕಾಶ್ಮೀರ ನಿಗದಿತ ಪ್ರದೇಶಗಳಲ್ಲಿ ಪೋಸ್ಟ್​ಪೇಯ್ಡ್ ಮೊಬೈಲ್ ಬಳಕೆದಾರರಿಗೆ 2ಜಿ ಮೊಬೈಲ್ ಡಾಟಾ ಸೇವೆಯನ್ನು ವಿಸ್ತರಿಸಲಾಗಿದೆ. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

4.ಮಕ್ಕಳ ಶ್ಲೋಕ ಉಚ್ಛಾರಣೆಯಿಂದ ಮನಸು ಹಗುರವಾಯಿತು; ವಿವೇಕದೀಪಿನಿಯಲ್ಲಿ ಅಮಿತ್​ ಶಾ ಹರ್ಷಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ  ವಿವೇಕದೀಪಿನಿ ಮಹಾಸಮರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಕಾರ್ಯಕ್ರಮಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಗೆ ಶಂಕರಭಾರತೀ ಸ್ವಾಮೀಜಿಗಳು ಸ್ವಾಗತ ಕೋರಿದರು. ಅಮಿತ್​  ಶಾ ಅವರಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಮತ್ತಿತರರು ಜೊತೆಯಾಗಿದ್ದರು. ಶಾ ವೇದಿಕೆ ಮೇಲೆ ಬಂದ ಕೂಡಲೇ ಸಾವಿರಾರು ವಿದ್ಯಾರ್ಥಿಗಳು ಸಾಮೂಹಿಕವಾಗಿ ವಿವೇಕದೀಪಿನಿ ಶ್ಲೋಕ ಪಠಣ ಮಾಡಿದರು. ಶ್ಲೋಕದ ಮೂಲಕವೇ ಅಮಿತ್​ ಶಾ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದರು. ಬಳಿಕ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಾಷಣ ಆರಂಭಿಸಿದರು. ಮಕ್ಕಳಿಗೆ ವೇದ-ಉಪನಿಷತ್ತುಗಳ ಪ್ರಾಮುಖ್ಯತೆಯನ್ನು ಶಾ ಮನವರಿಕೆ ಮಾಡಿಕೊಟ್ಟರು

5.ಡಿಕೆಯೋ, ಎಂಬಿಯೋ? ಗೊಂದಲದಲ್ಲೇ ಕೈ ಹೈಕಮಾಂಡ್; ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಮತ್ತಷ್ಟು ವಿಳಂಬ

ಇನ್ನೇನು ಡಿಕೆ ಶಿವಕುಮಾರ್​ ಅವರು ಕೆಪಿಸಿಸಿ ಅಧ್ಯಕ್ಷರಾಗಲಿದ್ದು,  ಅಧಿಕೃತ ಘೋಷಣೆಯೊಂದೇ ಬಾಕಿ ಎನ್ನುವ ಸಮಯದಲ್ಲಿ ಮತ್ತೆ ಈ ವಿಚಾರದಲ್ಲಿ ಹೈ ಕಮಾಂಡ್​ ಗೊಂದಲಕ್ಕೆ ಒಳಗಾಗಿದೆ. ಇದರಿಂದ ಈ ಆಯ್ಕೆ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

6.ಸಿಎಎಗೆ ವಿರಾಮ ನೀಡಿ, ಬದುಕು ಕಳೆದುಕೊಂಡಿರುವ ಸಂತ್ರಸ್ತರ ಕಡೆ ಗಮನಕೊಡಿ; ಸಿದ್ದರಾಮಯ್ಯ

ದೇಶವನ್ನು ಒಡೆದು ಆಳುವ ನಿಮ್ಮ ಸಿಎಎ ನೀತಿ ಕುರಿತು ಜನರನ್ನು ಮರಳು ಮಾಡುವ ಬದಲು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮತ್ತೊಮ್ಮೆ ಭೇಟಿ ನೀಡಿ, ನೀವು ಕೊಟ್ಟಿರುವ ಪರಿಹಾರ ಸೂಕ್ತವಾಗಿದೆಯೇ ಎಂಬ ಕುರಿತು ಯಾಕೆ ಚಿಂತಿಸಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಸಲಹೆ ನೀಡಿದ್ದಾರೆ. 

7.ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ ಬಿಚ್ಚಿಟ್ಟ ಡಿಸಿಎಂ ಲಕ್ಷ್ಮಣ ಸವದಿ

ಉಪಚುನಾವಣೆ ಮುಗಿದು ತಿಂಗಳು ಕಳೆದರೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮಾತ್ರ ಕಾಲ ಕೂಡಿ ಬರುತ್ತಿಲ್ಲ. ಈ ಕುರಿತು ಹೈ ಕಮಾಂಡ್​ ಜೊತೆ ಚರ್ಚೆಗೆ ಎರಡು ಬಾರಿ ಸಿಎಂ ಮುಂದಾದರೂ ವಿಫಲವಾದರು. ಇಂದು ರಾಜ್ಯಕ್ಕೆ ಅಮಿತ್​ ಶಾ ಆಮಿಸಿದ್ದು, ಇಂದಾದರೂ ಈ ಕುರಿತು ಚರ್ಚೆ ನಡೆಯಲಿದೆಯಾ ಇಲ್ಲವಾ ಎಂಬ ಬಗ್ಗೆ ಕುತೂಹಲ ಮೂಡಿದೆ. ಈ ನಡುವೆ ಯಾಕೆ ಸಂಪುಟ ವಿಸ್ತರಣೆಗೆ ಅಡ್ಡಿಯಾಗುತ್ತಿದೆ. ಈ ವಿಳಂಬಕ್ಕೆ ಕಾರಣ ಏನು ಎಂಬ ಬಗ್ಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ  ಬಿಚ್ಚಿಟ್ಟಿದ್ದಾರೆ.

8.ತಸ್ನಿಮ್ ಹೊಸ ಇತಿಹಾಸ: ಮೈಸೂರು ಮೇಯರ್ ಗದ್ದುಗೆ ಏರಿದ ಮೊದಲ ಮುಸ್ಲಿಮ್ ಮಹಿಳೆ

ಮೈಸೂರು ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ ಮುಕ್ತಾಯವಾಗಿದ್ದು, ಒಪ್ಪಂದದಂತೆ ಮೈತ್ರಿ ಪಕ್ಷಗಳು ಮೇಯರ್ ಉಪಮೇಯರ್ ಸ್ಥಾನಕ್ಕೇರಿವೆ. ಇಂದು ಮೈಸೂರು ಪಾಲಿಕೆಯಲ್ಲಿ ಎರಡು ಅಪರೂಪದ ಘಟನೆ ನಡೆದಿದ್ದು, ವಿರೋಧವನ್ನೆ ವ್ಯಕ್ತಪಡಿಸದ ಬಿಜೆಪಿ ವಿಭಿನ್ನ ನಡೆ ಅನುಸರಿಸದರೆ. ಇತ್ತ ಮೈಸೂರು ಪಾಲಿಕೆ ಇತಿಹಾಸದಲ್ಲೇ ಮೊದಲ ಮುಸ್ಲಿಂ ಮಹಿಳಾ ಮೇಯರ್ ಆಗಿ ತಸ್ನಿಮ್ ಆಯ್ಕೆಯಾಗಿದ್ದು ಮೈಸೂರು ಪಾಲಿಕೆಗೆ ಹೊಸ ಭಾಷ್ಯ ಬರೆದಿದೆ.

9.ರಶ್ಮಿಕಾ ಮಂದಣ್ಣಗೆ ಐಟಿ ನೋಟಿಸ್​; ಮಂಗಳವಾರ ವಿಚಾರಣೆಗೆ ಹಾಜರಾಗಲು ಸೂಚನೆ

ರಶ್ಮಿಕಾ ಮಂದಣ್ಣ ನಟನೆಯ 'ಸರಿಲೇರು ನೀಕೆವ್ವರು ' ಸಿನಿಮಾಗೆ ಭಾರೀ ಮೆಚ್ಚುಗೆ ಕೇಳಿ ಬರುತ್ತಿರುವ ಮಧ್ಯೆಯೇ ಐಟಿ ಅಧಿಕಾರಿಗಳು ಅವರಿಗೆ ಶಾಕ್​ ನೀಡಿದ್ದಾರೆ.  ಕೊಡಗು ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರೀಶಿಲನೆ ನಡೆಸಿದ್ದರು. ಈಗ ಈ ಪ್ರಕರಣಕ್ಕೆ ಸಂಬಂಧಿಸಿ ರಶ್ಮಿಕಾಗೆ ನೋಟಿಸ್​ ಜಾರಿಯಾಗಿದೆ.

10. ಕೊಹ್ಲಿ-ಎಬಿಡಿ ಜೊತೆ ಈ ಬಾರಿ ಅಬ್ಬರಿಸಲಿದ್ದಾರೆ ಮತ್ತಿಬ್ಬರು ಆಟಗಾರರು; ಯಾರು ಗೊತ್ತಾ?

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ಇನ್ನು ಕೇಲವು ತಿಂಗಳುಗಳಷ್ಟೆ ಬಾಕಿ ಉಳಿದಿದೆ. ಈಗಾಗಲೇ ಬಿಸಿಸಿಐ ವೇಳಾಪಟ್ಟಿಯನ್ನು ತಯಾರು ಮಾಡುತ್ತಿದ್ದು, ಕ್ರೀಡಾಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಈ ಬಾರಿ ಪ್ರತಿ ತಂಡ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿಸಿದ್ದು, ಎಲ್ಲ ತಂಡ ಸ್ಟ್ರಾಂಗ್ ಆಗಿವೆ. ಅಂತೆಯೆ ರಾಯಲ್​​​ ಚಾಲೆಂಜರ್ಸ್​​ ಬೆಂಗಳೂರು ತಂಡದಲ್ಲಿ ಇಬ್ಬರು ಸ್ಟಾರ್ ಮ್ಯಾಚ್ ಫಿನಿಶರ್ ಆಟಗಾರರಿದ್ದಾರೆ. ಇವರು ಕೊಹ್ಲಿ- ಎಬಿಡಿ ಜೊತೆ ಅಬ್ಬರಿಸುವುದು ಖಚಿತ.
First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ