Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:January 17, 2020, 6:19 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.2020ರಲ್ಲಿ ಇಸ್ರೊ ಶುಭಾರಂಭ: ಜಿ-ಸ್ಯಾಟ್ ಸಂಪರ್ಕ ಉಪಗ್ರಹ ಯಶಸ್ವಿ ಉಡಾವಣೆ

ಭಾರತ 2020ನೇ ವರ್ಷದ ಮೊದಲ ಉಪಗ್ರಹವನ್ನು ಫ್ರಾನ್ಸ್​​​ನ ಫ್ರೆಂಚ್​​ ಗಯಾನದಿಂದ ನಸುಕಿನಲ್ಲಿ ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಇಂದು ಉಡಾವಣೆಗೊಂಡ ಜಿ-ಸ್ಯಾಟ್ ಸಂಪರ್ಕ ಉಪಗ್ರಹ ನಿಗದಿತ ಕಕ್ಷೆ ಸೇರುವಲ್ಲಿ ಸಫಲವಾಗಲಿದೆ. ಈ ಮೂಲಕ ಭಾರತವೂ ಸಂಪರ್ಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ತಲುಪಿದೆ.

2.ಸರ್ಕಾರ ನಮಗಲ್ಲ, ಅಪರಾಧಿಗಳಿಗೆ ಸಹಾಯ ಮಾಡುತ್ತಿದೆ; ನಿರ್ಭಯಾ ತಾಯಿಯಿಂದ ಗಂಭೀರ ಆರೋಪ

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಮತ್ತೆ ವಿಳಂಬವಾಗುತ್ತಿರುವ ಬಗ್ಗೆ ಸಂತ್ರಸ್ತೆಯ ತಾಯಿ ಆಶಾ ದೇವಿ ಕಣ್ಣೀರಿಟ್ಟಿದ್ದಾರೆ. ಸರ್ಕಾರ ಸಂತ್ರಸ್ತ ಕುಟುಂಬಕ್ಕಲ್ಲ, ಆರೋಪಿಗಳಿಗೆ ಸಹಾಯ ಮಾಡುತ್ತಿದೆ ಎನ್ನುವ ಗಂಭೀರ ಆರೋಪವನ್ನೂ ಮಾಡಿದ್ದಾರೆ.

3.ದೀಪಿಕಾ ಪಡುಕೋಣೆ ಬಗ್ಗೆ ಏನೂ ಹೇಳಲ್ಲ; ನಾನಂತೂ ತುಕಡೆ ಗ್ಯಾಂಗ್ ಜೊತೆ ನಿಲ್ಲಲ್ಲ: ಕಂಗನಾ ರಾಣಾವತ್

ಜೆಎನ್​ಯು ಹಿಂಸಾಚಾರ ಘಟನೆ ಬೆನ್ನಲ್ಲೇ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳನ್ನು ಭೇಟಿಯಾದ ಪ್ರಕರಣ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ತಂದಿದೆ. ಈ ವಿಚಾರದ ಬಗ್ಗೆ ಮತ್ತೊಬ್ಬ ನಟಿ ಕಂಗನಾ ರಾಣಾವತ್ ಪ್ರತಿಕ್ರಿಯಿಸಿದ್ಧಾರೆ. ದೀಪಿಕಾ ಹೋಗಿದ್ದು ಅವರ ವೈಯಕ್ತಿಕ ವಿಚಾರ. ಆದರೆ, ನಾನಂತೂ ತುಕಡೆ ಗ್ಯಾಂಗ್ ಜೊತೆ ಹೋಗಿ ನಿಲ್ಲಲಾರೆ ಎಂದು ಕಂಗನಾ ಸ್ಪಷ್ಟಪಡಿಸಿದ್ದಾರೆ. ಸ್ಪಾಟ್ ಬೋಯೆ ಎಂಬ ಜಾಲತಾಣದ ಜೊತೆಗಿನ ಸಂದರ್ಶನದಲ್ಲಿ ಕಂಗನಾ ಅವರು, ದೇಶ ಒಡೆಯುವವರನ್ನು ತಾನು ಯಾವತ್ತೂ ಬೆಂಬಲಿಸುವುದಿಲ್ಲ ಎಂದು ಹೇಳಿದ್ಧಾರೆ.

4.ಆಂಧ್ರದಲ್ಲಿ ಬಿಜೆಪಿ-ಜನಸೇನಾ ಮೈತ್ರಿ; ಅಧಿಕೃತ ಘೋಷಣೆಆಂಧ್ರದಲ್ಲಿ ಮತ್ತೊಮ್ಮೆ ರಾಜಕೀಯ ಧ್ರುವೀಕರಣ ಆಗಿದೆ. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಮೂರು ವರ್ಷಗಳ ನಂತರ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ನಿನ್ನೆಯೇ ಈ ಮೈತ್ರಿಯ ಸುದ್ದಿ ಇತ್ತಾದರೂ ಇವತ್ತು ಅಧಿಕೃತವಾಗಿ ಘೋಷಿಸಲಾಗಿದೆ. ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಮತ್ತು ಆಂಧ್ರ ಬಿಜೆಪಿ ಅಧ್ಯಕ್ಷ ಕಣ್ಣ ಲಕ್ಷ್ಮೀ ನಾರಾಯಣ ಅವರು ಎರಡೂ ಪಕ್ಷಗಳ ಮೈತ್ರಿಯನ್ನು ಪ್ರಕಟಿಸಿದ್ದಾರೆ.

5.ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಜಾಮಾ ಮಸೀದಿಯಲ್ಲಿ ಸಂವಿಧಾನ ಓದಿದ ಆಜಾದ್

ನ್ಯಾಯಾಲಯದ ಸೂಚನೆಯಂತೆ ದೆಹಲಿ ತೊರೆಯುವ ಮುನ್ನ ಜಾಮಾ ಮಸೀದಿಗೆ ಆಗಮಿಸಿದ ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಆಜಾದ್​ ಸಂವಿಧಾನದ ಪ್ರಸ್ತಾವನೆಯನ್ನು ಓದಿದ್ದಾರೆ. ಸಿಎಎ ಹಾಗೂ ಎನ್​ಆರ್​ಸಿ ವಿರುದ್ಧ ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ್ದ ಚಂದ್ರಶೇಖರ್​ ಆಜಾದ್​ಗೆ, ದೆಹಲಿಯಿಂದ ಗಡಿಪಾರು ಸೇರಿದಂತೆ ಅನೇಕ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಜಾಮೀನು ನೀಡಿತ್ತು. ಇಂದು ದೆಹಲಿ ತೊರೆಯಲು ಇನ್ನೇನು ಕೆಲವೇ ಗಂಟೆ ಬಾಕಿ ಇದೆ ಎನ್ನುವ ವೇಳೆ ಜಾಮಾ ಮಸೀದಿಗೆ ಬಂದ ಅವರು, ಮಸೀದಿ ಹೊರಗೆ ಧ್ವನಿವರ್ಧಕ ಬಳಸಿ ಸಂವಿಧಾನದ ಪ್ರಸ್ತಾವನೆ ಓದಿದ್ದಾರೆ.

6.ಎಂ.ಎಂ.ಕಲ್ಬುರ್ಗಿ ಕೊಲೆ ಪ್ರಕರಣ; ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದ ಸುಪ್ರೀಂಕೋರ್ಟ್

ವಿಚಾರವಾದಿ ಪ್ರೊ. ಎಂ.ಎಂ. ಕಲ್ಬುರ್ಗಿ ಕೊಲೆ ಪ್ರಕರಣವನ್ನು  ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇತ್ಯರ್ಥಪಡಿಸಿದೆ. ವಿಚಾರವಾದಿ ಪ್ರೊ. ಎಂ.ಎಂ. ಕಲ್ಬುರ್ಗಿ ಕೊಲೆ ಪ್ರಕರಣವನ್ನು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಕೋರಿ ಕಲ್ಬುರ್ಗಿ ಹೆಂಡತಿ ಉಮಾದೇವಿ ಅವರು ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

7.ನ್ಯಾಯಮೂರ್ತಿಗಳಿಗೆ ಕರ್ನಾಟಕ ಸರ್ಕಾರ ಲಂಚ ಕೊಟ್ಟು ವರದಿ ಮೇಲೆ ಪರಿಣಾಮ ಬೀರಿದೆ ; ಠಾಕೂರು ವಿವಾದಾತ್ಮಕ ಹೇಳಿಕೆ

ಗಡಿ ವಿಚಾರದಲ್ಲಿ ನ್ಯಾ. ಮೆಹರ್ ಚಂದ್ ಮಹಾಜನ್ ವರದಿ ಅಂತಿಯ ಎಂದು ಕರ್ನಾಟಕ ಪದೇ ಪದೇ ಹೇಳುತ್ತದೆ. ಆದರೇ ನ್ಯಾ. ಮಹಾಜನ್ ಲಂಚ ಪಡೆದು ಕರ್ನಾಟಕ ಪರ ವರದಿ ನೀಡಿದ್ದಾರೆ. ನ್ಯಾಯಮೂರ್ತಿಗಳಿಗೆ ಕರ್ನಾಟಕ ಸರ್ಕಾರ ಬ್ಯಾಗ್, ಬಂಗಲೆ ಕೊಟ್ಟಿದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ಎಂಇಎಸ್ ಮುಖಂಡ ಕಿರಣ್ ಠಾಕೂರ್ ನೀಡಿದ್ದಾರೆ.

8.ಪ್ರಜ್ವಲ್ ರೇವಣ್ಣ ವಿರುದ್ಧ ಸುಳ್ಳು ಪ್ರಮಾಣಪತ್ರ ಸಲ್ಲಿಕೆ ಆರೋಪ: ಹೈಕೋರ್ಟ್​ನಲ್ಲಿ ಪ್ರಕರಣ ವಜಾ

ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಪ್ರಜ್ವಲ್​ ರೇವಣ್ಣ ಸುಳ್ಳು ಪ್ರಮಾಣ ಪತ್ರ ನೀಡಿದರೆನ್ನಲಾದ ಪ್ರಕರಣವನ್ನು ಹೈ ಕೋರ್ಟ್​ ವಜಾಗೊಳಿಸಿದ್ದು, ಈ ಮೂಲಕ ಹಾಸನ ಸಂಸದರಿಗೆ ಬಿಗ್​ ರಿಲೀಫ್​ ದೊರಕಿದೆ.  ಪ್ರಜ್ವಲ್​ ರೇವಣ್ಣ ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು ಆರೋಪಿಸಿದ್ದರು. ಜೊತೆಗೆ ಅವರ ಗೆಲುವನ್ನು ಅನೂರ್ಜಿತಗೊಳಿಸುವಂತೆ ಕೂಡ ಮನವಿ ಮಾಡಿದ್ದರು.

9.ಮಾಜಿ ಲವರ್ ಕಾರ್ತಿಕ್ ಆರ್ಯನ್ ಜೊತೆ ಸಾರಾ ಅಲಿ ಖಾನ್ ಲಿಪ್ ಲಾಕ್; ವಿಡಿಯೋ ವೈರಲ್

ಸ್ಟಾರ್​ ನಟಿಯ ಮಕ್ಕಳ ಪ್ರೇಮ ಕಹಾನಿ ವಿಚಾರ ಆಗಾಗ ಸುದ್ದಿಯಾಗುತ್ತವೆ. ಸೈಫ್​ ಅಲಿ ಖಾನ್​ ಮಗಳು ಸಾರಾ ಅಲಿ ಖಾನ್​ ಪ್ರೇಮ ಪುರಾಣವೂ ಭಾರೀ ಸುದ್ದಿಯಾಗಿತ್ತು. ನಟ ಕಾರ್ತಿಕ್​ ಆರ್ಯನ್​ ಜೊತೆ ಪ್ರೀತಿಯಲ್ಲಿದ್ದಾರೆ ಎನ್ನುವ ವಿಚಾರ ಹರಿದಾಡಿದ ಬೆನ್ನಲ್ಲೇ ಇಬ್ಬರ ಸಂಬಂಧ ಬ್ರೇಕಪ್​ನಲ್ಲಿ ಅಂತ್ಯವಾಗಿತ್ತು. ಅಚ್ಚರಿ ಎಂದರೆ, ಈಗ ಇಬ್ಬರ ಲಿಪ್​ಕಿಸ್​ ದೃಶ್ಯವೈರಲ್​ ಆಗಿದೆ!

10.ಪಾಂಡೆ ಮ್ಯಾಜಿಕ್ ಕ್ಯಾಚ್​ಗೆ ವಾರ್ನರ್ ಶಾಕ್; ಆಸೀಸ್ ಮೊದಲ ವಿಕೆಟ್ ಪತನ

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಂಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಉತ್ತಮ ಮೊತ್ತ ಕಲೆಹಾಕಿದೆ. ಶಿಖರ್ ಧವನ್, ವಿರಾಟ್ ಕೊಹ್ಲಿ ಹಾಗೂ ಕೆ ಎಲ್ ರಾಹುಲ್ ಅರ್ಧಶತಕದ ನೆರವಿನಿಂದ ಭಾರತ 50 ಓವರ್​ನಲ್ಲಿ 340 ರನ್ ಬಾರಿಸಿದೆ. ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಆಸ್ಟ್ರೇಲಿಯಾ ಆರಂಭದಲ್ಲೇ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡಿದೆ. 4ನೇ ಓವರ್​ನ ಮೊಹಮ್ಮದ್ ಶಮಿ ಬೌಲಿಂಗ್​ನಲ್ಲಿ ಮನೀಶ್ ಪಾಂಡೆ ಹಿಡಿದ ಅದ್ಭುತ ಕ್ಯಾಚ್​ಗೆ ವಾರ್ನರ್(15) ಬಲಿಯಾಗಿ ಪೆವಿಲಿಯನ್ ಹಾದಿ ಹಿಡಿದಿದ್ದಾರೆ.
First published:January 17, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ