Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:January 16, 2020, 6:01 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂರ್ಭಿಕ ಚಿತ್ರ
  • Share this:
1.ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ‘ಕಾಶ್ಮೀರ’ ಕಿರಿಕ್​ಗೆ ಯತ್ನ: ಪಾಕ್, ಚೀನಾಗೆ ಮತ್ತೆ ಮುಖಭಂಗ

ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ವಿಚಾರವನ್ನು ಕೆದಕುವ ಪಾಕಿಸ್ತಾನದ ವಿಫಲ ಪ್ರಯತ್ನ ಮುಂದುವರಿದಿದೆ. ವಿಶ್ವ ಸಂಸ್ಥೆ ಭದ್ರತಾ ಮಂಡಳಿ(UNSC)ಯಲ್ಲಿ ಕಾಶ್ಮೀರ ವಿಚಾರದಲ್ಲಿ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಮತ್ತೊಂದು ಪ್ರಯತ್ನ ವಿಫಲವಾಗಿದೆ. ಪಾಕಿಸ್ತಾನದ ಪರವಾಗಿ ಅದರ ಪರಮಾಪ್ತ ರಾಷ್ಟ್ರ ಚೀನಾ ಯುಎನ್​ಎಸ್​ಸಿಯಲ್ಲಿ ಕಾಶ್ಮೀರದ ಬಗ್ಗೆ ಅಪಸ್ವರ ಎತ್ತಿದೆ. ಆದರೆ, ಕಾಶ್ಮೀರವು ದ್ವಿಪಕ್ಷೀಯ ಸಮಸ್ಯೆಯಾಗಿದ್ದು ಅದರ ಚರ್ಚೆ ಈ ವೇದಿಕೆಯಲ್ಲಿ ಅಗತ್ಯವಿಲ್ಲ ಎಂದು ಮಂಡಳಿಯ ಇತರ ಸದಸ್ಯರು ಅಭಿಪ್ರಾಯಕ್ಕೆ ಬಂದರೆನ್ನಲಾಗಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾ ದೇಶಗಳು ಭಾರತದ ವಾದವನ್ನೇ ಪುರಸ್ಕರಿಸಿವೆ.

2.PMC Bank scam: ಜೈಲಿನಿಂದ ಆರೋಪಿಗಳ ಸ್ಥಳಾಂತರ ಆದೇಶಕ್ಕೆ ಸುಪ್ರೀಂ ತಡೆಯಾಜ್ಞೆ

ಪಂಜಾಬ್ ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್ ಹಗರಣದಲ್ಲಿ ಬಂಧನಕ್ಕೀಡಾಗಿರುವ ಎಚ್​​ಡಿಐಎಲ್​​ ನಿರ್ದೇಶಕರಾದ ಸರಾಂಗ್​​ ಮತ್ತು ರಾಕೇಶ್ ವಾಧವನ್​​ರನ್ನು ಅರ್ಥರ್​​​​ ರೋಡ್​​ ಜೈಲಿನಿಂದ ಮನೆಗೆ ಸ್ಥಳಾಂತರಿಸುವಂತೆ ನೀಡಿದ್ದ ಬಾಂಬೆ ಹೈಕೋರ್ಟ್​​​​ ಆದೇಶಕ್ಕೆ ಸುಪ್ರೀಂಕೋರ್ಟ್​​ ತಡೆಯಾಜ್ಞೆ ನೀಡಿದೆ. ಇಂದು ಬಾಂಬೆ ಹೈಕೋರ್ಟ್​​ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಈ ಆದೇಶ ಹೊರಡಿಸಿದೆ.

3.Parliament Budget Session: ಜ.31ರಿಂದ ಸಂಸತ್​​ ಬಜೆಟ್ ಅಧಿವೇಶನ ಆರಂಭ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಂಸತ್​​ ಬಜೆಟ್​​ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಕೇಂದ್ರ ಬಜೆಟ್ ಅಧಿವೇಶನ ಜನವರಿ 31ರಿಂದ ಏಪ್ರಿಲ್ 3ರವರೆಗೆ ನಡೆಯಲಿದೆ. ಸಂಸತ್​​ ಕಲಾಪಗಳಿಗೆ ಅನುಗುಣವಾಗಿ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ. ಇದು ವರ್ಷದ ಮೊದಲ ಕೇಂದ್ರ ಬಜೆಟ್ ಅಧಿವೇಶನ ವಾಗಿರಲಿದೆ.

4.ಷೇರುಪೇಟೆ ಝಗಮಗ; ಹೊಸ ದಾಖಲೆ ಮಟ್ಟಕ್ಕೆ ಏರಿದ ಸೆನ್ಸೆಕ್ಸ್, ನಿಫ್ಟಿಅಂತಾರಾಷ್ಟ್ರೀಯವಾಗಿ ಪೂರಕ ವಾತಾವರಣ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ ಇನ್ನಷ್ಟು ಹೆಚ್ಚಾಗಿದೆ. ಸೆನ್ಸೆಕ್ಸ್ ಸೂಚ್ಯಂಕ ತನ್ನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ 42 ಸಾವಿರ ಅಂಕಗಳ ಗಡಿ ದಾಟಿ ಹೋಗಿದೆ. ನಿಫ್ಟಿ ಕೂಡ ತನ್ನ ಗರಿಷ್ಠ ಮಟ್ಟಕ್ಕೆ ಹೋದ ಸಾಧನೆ ಮಾಡಿದೆ. ಅಮೆರಿಕ ಮತ್ತು ಚೀನಾ ದೇಶಗಳು ವಿವಿಧ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ್ದು ಭಾರತದ ಹೂಡಿಕೆದಾರರ ವಿಶ್ವಾಸ ಹೆಚ್ಚಿಸುವಲ್ಲಿ ಸಹಕಾರಿಯಾಗಿರಬಹುದು ಎಂದು ಹೇಳಲಾಗುತ್ತಿದೆ.

5.ಉತ್ತರ ಪ್ರದೇಶದಲ್ಲಿ ಭಾರೀ ಮಳೆ, ಚಳಿ: ಲಕ್ನೋ, ಕಾನ್ಪುರದಲ್ಲಿ ಶಾಲೆಗಳಿಗೆ ರಜೆ

ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶದಲ್ಲಿ ಧಾರಾಕಾರ ಮಳೆ ಜೊತೆಗೆ ಚಳಿಯ ಪ್ರಮಾಣವೂ ಹೆಚ್ಚಾಗಿದೆ. ಇದರಿಂದಾಗಿ ಉತ್ತರ ಪ್ರದೇಶದ ಜನರು ಚಳಿ-ಮಳೆಗೆ ತತ್ತರಿಸಿ ಹೋಗಿದ್ದಾರೆ. ಇಂದು ಲಕ್ನೋ ಮತ್ತು ಕಾನ್ಪುರದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

6,ಭಾರತ ಹಿಂದೂ ರಾಷ್ಟ್ರ ಆಗಲು ಬಿಡುವುದಿಲ್ಲ: ಸಿದ್ದರಾಮಯ್ಯ

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂಬುದು ಆರೆಸ್ಸೆಸ್ ಮತ್ತು ಬಿಜೆಪಿಯವರ ಹಿಡನ್ ಅಜೆಂಡಾ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಕೇಂದ್ರ ಜಾರಿಗೆ ತರಲು ಹೊರಟಿರುವ ಸಿಎಎ, ಎನ್​ಆರ್​ಸಿ, ಎನ್​ಪಿಆರ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವು ಸಂವಿಧಾನದ ಆಶಯಕ್ಕೇ ಧಕ್ಕೆ ತರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ಧಾರೆ.

7.ಬಿಜೆಪಿಯತ್ತ ಸಿ.ಎಂ. ಇಬ್ರಾಹಿಂ? ಕುತೂಹಲ ಕೆರಳಿಸಿದ ಹೇಳಿಕೆ

ಮೊನಚು ಮಾತುಗಳಿಗೆ ಹೆಸರಾಗಿರುವ ಕಾಂಗ್ರೆಸ್ ಮುಖಂಡ ಮತ್ತು ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಯಡಿಯೂರಪ್ಪ ಪರವಾಗಿ ಹೇಳಿಕೆಗಳನ್ನು ನೀಡಿ ಅಚ್ಚರಿ ಮೂಡಿಸಿದ್ಧಾರೆ. ಅಜ್ಜಂಪುರದ ಸೊಲ್ಲಾಪುರದಲ್ಲಿ ಇಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು, ತಾನು ಮತ್ತು ಯಡಿಯೂರಪ್ಪ ಯಾವತ್ತಾದರೂ ಒಮ್ಮೆ ಸೇರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ಧಾರೆ. ಈ ಮೂಲಕ ಅವರು ಬಿಜೆಪಿ ಸೇರುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿರಬಹುದಾ ಎಂಬ ಅನುಮಾನ ಸುಳಿದಿದೆ.

8.ಶಾಂತಿ ಕದಡೋ ದುರುದ್ದೇಶದಿಂದ ಮಾಜಿ ಶಾಸಕರಿಂದ ಪ್ರತಿಭಟನೆ ; ಸತೀಶ್ ಸೈಲ್ ವಿರುದ್ಧ ಶಾಸಕಿ ರೂಪಾಲಿ ನಾಯ್ಕ ಕಿಡಿ

ಕಾರವಾರದಲ್ಲಿ ಮಾಜಿ ಶಾಸಕರು ಪ್ರತಿಭಟನೆ ಮೂಲಕ ಅಲ್ಲಿನ ಜನರ ಶಾಂತಿ ಕದಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅವರು ಕೇವಲ ರಾಜಕೀಯಕ್ಕಾಗಿ ಈ ರೀತಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸತೀಶ್ ಸೈಲ್​​​​ ವಿರುದ್ದ ಶಾಸಕಿ ರೂಪಾಲಿ ನಾಯ್ಕ ಕಿಡಿಕಾರಿದ್ದಾರೆ.

9.ಐಟಿ ದಾಳಿ ವೇಳೆ ರಶ್ಮಿಕಾ ಮಂದಣ್ಣ ಎಲ್ಲಿದ್ರು ಗೊತ್ತಾ?

ಸ್ಯಾಂಡಲ್​ವುಡ್​ ನಟಿ ರಶ್ಮಿಕಾ ಮಂದಣ್ಣ ಮನೆಯ ಮೇಲೆ ಐಟಿ ದಾಳಿ ನಡೆದಿದೆ. ಇಂದು ಬೆಳಗಿನ ಜಾವ ಮಡಿಕೇರಿ ವಿರಾಜಪೇಟೆಯಲ್ಲಿನ ಮನೆಯ ಮೇಲೆ ಐಟಿ ದಾಳಿಯಾಗಿದೆ. 3 ಕಾರಿನಲ್ಲಿ ಬಂದ ಐಟಿ 9 ಅಧಿಕಾರಿಗಳು  ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಐಟಿ ರೇಡ್​ ವೇಳೆ ರಶ್ಮಿಕಾ ಮನೆಯಲ್ಲಿರಲಿಲ್ಲ. ಅವರ ತಂದೆ ಮದನ್​ ಮಂದಣ್ಣ ಮನೆಯಲ್ಲಿದ್ದರು. 3 ಕಾರಿನಲ್ಲಿ ಬಂದಿರುವ 9 ಅಧಿಕಾರಿಗಳು ರಶ್ಮಿಕಾರ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್​ ಭದ್ರತೆಯ ಮೂಲಕ ರೇಡ್​ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಮನೆಯಲ್ಲಿರುವವರ ಫೋನ್ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

10.ಒಪ್ಪಂದದಿಂದ ಧೋನಿಯನ್ನು ಕೈಬಿಟ್ಟ ಬಿಸಿಸಿಐ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಪರಿಷ್ಕೃತ ಆಟಗಾರರ ಒಪ್ಪಂದ ಪಟ್ಟಿಯಿಂದ ಕೈಬಿಟ್ಟಿದೆ.ಈ ಮೂಲಕ ಧೋನಿಯ ಬಗ್ಗೆ ಕಳೆದ ಮೂರು ತಿಂಗಳಿಂದ ಕೇಳಿ ಬರುತ್ತಿದ್ದ ವಿದಾಯದ ಪ್ರಶ್ನೆಗಳಿಗೆ ಬಿಸಿಸಿಐ ಅಧಿಕೃತ ಮುದ್ದೆ ಒತ್ತಲು ತೀರ್ಮಾನ ತೆಗೆದುಕೊಟ್ಟಂತಿದೆ.
First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading