Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar
Updated:January 14, 2020, 5:59 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.‘ಕುಲಪತಿ ಜಗದೀಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಪಾಠ ಮಾಡುವುದಿಲ್ಲ‘: ಜೆಎನ್​​​ಯು ಪ್ರಾಧ್ಯಾಪಕರ ಆಗ್ರಹ

ಪ್ರತಿಷ್ಠಿತ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಕುಲಪತಿ ಜಗದೀಶ್ ಕುಮಾರ್ ರಾಜೀನಾಮೆ ನೀಡುವವರೆಗೆ ನಾವು ಪಾಠ ಮಾಡುವುದಿಲ್ಲ ಎಂದು ಜೆಎನ್​​ಯು ಟೀಚರ್ಸ್ ಅಸೋಸಿಯೇಷನ್​ ಘೋಷಿಸಿದೆ. ಜೆಎನ್​​​ಯು ವಿಶ್ವವಿದ್ಯಾಲಯದ ಆವರಣದೊಳಗೆ ತಮ್ಮ ವಿಭಾಗಗಳ ಎದುರು ಸೋಮವಾರ ಪ್ರಾಧ್ಯಾಪಕರು ಪ್ರತಿಭಟನೆ ಹಮ್ಮಿಕೊಂಡಿದ್ದರು. "ಕುಲಪತಿ ಸ್ಥಾನಕ್ಕೆ ಜಗದೀಶ್ ಕುಮಾರ್ ರಾಜೀನಾಮೆ ನೀಡುವತನಕ ಜೆಎನ್​​ಯು ಸಹಜ ಸ್ಥಿತಿಗೆ ಮರಳಲು ಸಾಧ್ಯವಿಲ್ಲ. ಆದ್ದರಿಂದ ಈ ಕೂಡಲೇ ಜಗದೀಶ್​​ ಕುಮಾರ್​​ ರಾಜೀನಾಮೆ ನೀಡಬೇಕೆಂದು ಟೀಚರ್ಸ್ ಅಸೋಸಿಯೇಷನ್ ಆಗ್ರಹಿಸಿದೆ.

2.ಸಿಎಎ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ

ವಿವಾದಾತ್ಮಕ ಪೌರತ್ವ ನಿಷೇಧ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ ಕೇರಳದ ಮುಖ್ಯಮಂತ್ರಿ ಪಿಣರಅಯಿ ವಿಜಯನ್ ಸುಪ್ರೀಂ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಮೂಲಕ ಸುಪ್ರೀಂ ನಲ್ಲಿ ಸಿಎಎ ಕಾನೂನನ್ನು ಪ್ರಶ್ನಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಕೇರಳ ಪಾತ್ರವಾಗಿದೆ.

3.ಖಲಿಸ್ತಾನ ಉಗ್ರರಿಗೆ ಪಾಕ್​ ಬೆಂಬಲ, ಭಾರತದ ಮೂಲಕ ಶಸ್ತ್ರಾಸ್ತ್ರ ಪೂರೈಕೆ; ಗುಪ್ತಚರ ಇಲಾಖೆ ಎಚ್ಚರಿಕೆ

ಪಂಜಾಬ್‌ ಹಾಗೂ ಗಡಿ ಭಾಗದಲ್ಲಿ ದುಷ್ಕೃತ್ಯಗಳನ್ನು ನಡೆಸಲು ಪಾಕಿಸ್ತಾನ ಖಲಿಸ್ತಾನಕ್ಕೆ ನೆರವು ನೀಡುತ್ತಿದ್ದು, ಇದಕ್ಕಾಗಿ ಭಾರತದ ಮೂಲಕ ಅಕ್ರಮವಾಗಿ ಶಸ್ತ್ರಾಸ್ತ್ರಗಳ ಕಳ್ಳ ಸಾಗಣೆಗೆ ಮುಂದಾಗಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ವರದಿ ಮಾಡಿದೆ ಎಂದು ಕೇಂದ್ರ ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಶಸ್ತ್ರಾಸ್ತ್ರ ಕಳ್ಳಸಾಗಣೆ ಕುರಿತು ಕೂಡ ತನಿಖೆ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

4. ದೀಪಿಕಾ ಪಡುಕೋಣೆಗೆ ನನ್ನಂತಹ ಉತ್ತಮ ಸಲಹೆಗಾರರ ಅಗತ್ಯವಿದೆ; ಯೋಗ ಗುರು ಬಾಬಾ ರಾಮದೇವ್ದೆಹಲಿಯ ಜೆಎನ್​ಯು ಕ್ಯಾಂಪಸ್​ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಡೆಗೆ ದೇಶಾದ್ಯಂತ ವಿರೋಧ ಕೇಳಿಬಂದಿತ್ತು. ಅದೇ ವಾರ ರಿಲೀಸ್ ಆದ 'ಚಪಾಕ್' ಸಿನಿಮಾ ಮೇಲೂ ಇದು ಪರಿಣಾಮ ಬೀರಿತ್ತು. ಜೆಎನ್​ಯು ವಿಚಾರದಲ್ಲಿ ದೀಪಿಕಾ ನಿಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯೋಗ ಗುರು ಬಾಬಾ ರಾಮದೇವ್ 'ದೀಪಿಕಾ ಪಡುಕೋಣೆ ದೇಶದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ವಿಷಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು. ಇದಕ್ಕಾಗಿ ನನ್ನ ರೀತಿಯ ಉತ್ತಮ ಸಲಹೆಗಾರರನ್ನು ನೇಮಿಸಿಕೊಳ್ಳುವುದು ಒಳಿತು' ಎಂದು ಹೇಳಿದ್ದಾರೆ.

5. ಮೂವರು ಉಗ್ರರಿಗೆ ಮನೆಯಲ್ಲಿ ಆಶ್ರಯ: ಜಮ್ಮು-ಕಾಶ್ಮೀರದ ಡಿವೈಎಸ್​​​ಪಿ ದೇವೇಂದರ್​​ ಸಿಂಗ್ ಅಮಾನತು

ಮೂವರು ಉಗ್ರರಿಗೆ ಮನೆಯಲ್ಲಿ ಆಶ್ರಯ ನೀಡಿದ್ದ ಜಮ್ಮು-ಕಾಶ್ಮೀರದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್‌ ಪೊಲೀಸ್‌ ದೇವಿಂದರ್ ಸಿಂಗ್​​ರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇಲ್ಲಿನ ಬಾದಾಮಿ ಬಾಗ್ ಕಂಟೋನ್ಮೆಂಟ್ ಬಳಿಯ ಎಕ್ಸ್​​ ವಿ ಕಾರ್ಪ್ಸ್ ಸೇನೆಯ ಪ್ರಧಾನ ಕಚೇರಿಯ ಪಕ್ಕದ ತನ್ನ ಮನೆಯಲ್ಲಿ ಮೂವರು ಉಗ್ರರಿಗೆ ದೇವೇಂದರ್​​ ಸಿಂಗ್ ಆಶ್ರಯ ನೀಡಿದ್ದರು. ಹಾಗಾಗಿ ದೇವೇಂದ್ರ ಸಿಂಗ್​​ರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

6.ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕಸರತ್ತು: ದೆಹಲಿಯಲ್ಲಿ ಸಿದ್ದರಾಮಯ್ಯ; ಎಂಬಿ ಪಾಟೀಲ್​, ಡಿಕೆಶಿ? ಯಾರಿಗೆ ಪಟ್ಟ?

ಸಂಕ್ರಾಂತಿಯೊಳಗೆ ಕೆಪಿಸಿಸಿಗೆ ನೂತನ ಸಾರಥಿ ನೇಮಿಸಲು ಮುಂದಾಗಿರುವ ಹೈ ಕಮಾಂಡ್​ ಭೇಟಿಗೆ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಒಂದೆಡೆ ಡಿಕೆ ಶಿವಕುಮಾರ್​ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೆ, ಸಿದ್ದರಾಮಯ್ಯ ಎಂಬಿ ಪಾಟೀಲ್​ ಪರ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಈ ಹಂತದಲ್ಲಿ ಸಿದ್ದರಾಮಯ್ಯ ಮತ್ತು ಸೋನಿಯಾ ಗಾಂಧಿ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

7.‘ಯಡಿಯೂರಪ್ಪ ರಾಜಾಹುಲಿ ಅಲ್ಲ, ರಾಜ ಇಲಿ‘: ಮಾಜಿ ಸಂಸದ ವಿ.ಎಸ್​​ ಉಗ್ರಪ್ಪ

"ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ರಾಜಾಹುಲಿ ಅಲ್ಲ, ರಾಜ ಇಲಿ" ಎನ್ನುವ ಮೂಲಕ ಮಾಜಿ ಸಂಸದ ವಿ.ಎಸ್​ ಉಗ್ರಪ್ಪ ಕುಹಕವಾಡಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ವಿ.ಎಸ್​ ಉಗ್ರಪ್ಪ, ಬಿ.ಎಸ್​​ ಯಡಿಯೂರಪ್ಪಗೆ ರಾಜ್ಯದ ಜನ ಏನಂತಾ ಕರೆಯುತ್ತಾರೆ. ಅವರು ರಾಜಾಹುಲಿ ಅಲ್ಲ, ರಾಜ ಇಲಿ ಎಂದು ಹೆಸರು ಬದಲಿಸಿಕೊಳ್ಳುವುದು ಸೂಕ್ತ ಎಂದು ವ್ಯಂಗ್ಯವಾಡಿದರು.

8.ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗೆ ಪ್ರತ್ಯೇಕ ಸಮಿತಿ ರಚಿಸಿ - ವ್ಯಾಜ್ಯ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಿ ; ಶಂಕರ್ ಅಂಬಲಿ ಆಗ್ರಹ

ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಕಾನೂನು ತಜ್ಞರು, ತಾಂತ್ರಿಕ ಸಲಹೆಗಾರರು ಮತ್ತು ಹೋರಾಟಗಾರರ ಸಮಿತಿ ನೇಮಿಸಬೇಕು. ವ್ಯಾಜ್ಯ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಹದಾಯಿ ಹೋರಾಟಗಾರ ಶಂಕರ್ ಅಂಬಲಿ ಸರ್ಕಾರವನ್ನುಆಗ್ರಹಿಸಿದ್ದಾರೆ.

9.ನಟಿ ವಿಜಯಲಕ್ಷ್ಮೀ ಪರಾರಿ ಪ್ರಕರಣ: ಮಗಳು ಬಾರದ ಕೊರಗಲ್ಲೇ ಪ್ರಾಣಬಿಟ್ಟ ತಾಯಿ

ಮಗಳು ಸ್ಯಾಂಡಲ್ವುಡ್ ನಿರ್ದೇಶಕನ ಜೊತೆ ಓಡಿಹೋಗಿದ್ದ ಹಿನ್ನೆಲೆ ವಿಷ ಕುಡಿದಿದ್ದ ನಟಿ ವಿಜಯಲಕ್ಷ್ಮೀ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.  ಮನೆಯವರ ವಿರೋಧ ಹಿನ್ನೆಲೆ ತಾನು ಇಷ್ಟಪಟ್ಟ ನಿರ್ದೇಶಕನ ಜೊತೆ ಓಡಿ ಹೋದ ಹಿನ್ನೆಲೆ ನಟಿ ವಿಜಯಲಕ್ಷ್ಮೀ ತಾಯಿ, ಅಜ್ಜಿ ಮರ್ಯಾದೆಗಂಜಿ ವಿಷ ಸೇವಿಸಿದ್ದರು. ಅಂದೇ ಹೀರೋಯಿನ್​ ಅಜ್ಜಿ ಅಸುನೀಗಿದ್ದಾರೆ. ತಾಯಿ ಗಂಭೀರ ಸ್ಥಿತಿಯಲ್ಲಿದ್ದರು. ತಾಯಿ ವಿಷ ಸೇವಿಸಿದ ವಿಷಯ ತಿಳಿದಾಕ್ಷಣ ನಟಿ ವಿಜಯಲಕ್ಷ್ಮೀ ಇದು ಎಲ್ಲಾ ಕೇವಲ ನಾಟಕ. ನಾವು ಇಷ್ಟಪಟ್ಟು ಮದುವೆಯಾಗಿದ್ದೇವೆ. ನಾವೆಲ್ಲೂ ಓಡಿಹೋಗಿಲ್ಲ. ನಮ್ಮನ್ನು ಬಿಟ್ಟುಬಿಡು ಎಂದು ಮನವಿ ಮಾಡಿದ್ದರು.

10.ಧವನ್-ರಾಹುಲ್ ಶತಕದ ಜೊತೆಯಾಟ; ಭಾರತ 255ಕ್ಕೆ ಆಲೌಟ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗಳು ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲಿಲ್ಲ. ಕೊಹ್ಲಿ ಪಡೆ 255 ರನ್​ಗೆ ಆಲೌಟ್ ಆಯಿತು
First published: January 14, 2020, 5:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading