Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:January 13, 2020, 6:08 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ಪ್ರತಿಭಟನಾಕಾರರನ್ನು ನಾಯಿಗಳಂತೆ ಹೊಡೆದೆವೆಂದಿದ್ದ ಬಿಜೆಪಿ ನಾಯಕನ ಹೇಳಿಕೆಗೆ ಕೇಂದ್ರ ಸಚಿವ ಸುಪ್ರಿಯೋ ಬೇಸರ

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ವೇಳೆ ಸಾರ್ವಜನಿಕ ಆಸ್ತಿ ನಾಶ ಮಾಡುತ್ತಿದ್ದವರನ್ನು ನಾಯಿಗಳಂತೆ ಹೊಡೆದೆವು ಎಂದು ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಇವರ ಈ ವಿವಾದಾತ್ಮಕ ಹೇಳಿಕೆಗೆ ಬಂಗಾಳ ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ವಿಷಾದ ವ್ಯಕ್ತಪಡಿಸಿದ್ದು, ಇದು ಬೇಜವಾಬ್ದಾರಿಯುತ ಹೇಳಿಕೆ ಎಂದು ಪ್ರತಿಕ್ರಿಯಿಸಿದ್ದಾರೆ.

2.ರತನ್ ಟಾಟಾ ವಿರುದ್ಧದ ಎಲ್ಲ ಮಾನನಷ್ಟ ಮೊಕದ್ದಮೆಗಳನ್ನು ಹಿಂಪಡೆದ ನುಸ್ಲಿ ವಾಡಿಯಾ

ಟಾಟಾ ಗ್ರೂಪ್ ಅಧ್ಯಕ್ಷ ರತನ್ ಟಾಟಾ ಮತ್ತು ಇತರರ ವಿರುದ್ಧ ಹಾನಿಗಾಗಿ ಮೂರು ಸಾವಿರ ಕೋಟಿಯ ಪ್ರಕರಣ ಸೇರಿದಂತೆ ಇತರೆ ಎಲ್ಲ ಮಾನಹಾನಿ ಪ್ರಕರಣಗಳನ್ನು ಬಾಂಬೆ ಡೈಯಿಂಗ್ ಸಂಸ್ಥೆಯ ಅಧ್ಯಕ್ಷ ನುಸ್ಲಿ ವಾಡಿಯಾ ಹಿಂಪಡೆದಿದ್ದಾರೆ.

3. ನಿಮಗೆ ಬೇಕಾದ 5 ಟೀಕಾಕಾರರೊಂದಿಗಾದರೂ ಪ್ರಶ್ನೋತ್ತರ ನಡೆಸಿ: ಮೋದಿಗೆ ಚಿದಂಬರಮ್ ಸವಾಲು

ದೇಶಾದ್ಯಂತ ಬಿರುಗಾಳಿ ಎಬ್ಬಿಸುತ್ತಿರುವ ಪೌರತ್ವ ಕಾಯ್ದೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂವಾದಕ್ಕೆ ಮುಂದಾಗಬೇಕೆಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಮ್ ಸಲಹೆ ನೀಡಿದ್ಧಾರೆ. ಇಂದು ಸರಣಿ ಟ್ವೀಟ್​ಗಳನ್ನು ಮಾಡಿರುವ ಹಿರಿಯ ಕಾಂಗ್ರೆಸ್ ಮುಖಂಡರು, ಮೋದಿ ತಮ್ಮ ಟೀಕಾಕಾರರೊಂದಿಗೆ ಚರ್ಚೆ ನಡೆಸಲಿ ಎಂದು ಕರೆ ನೀಡಿದ್ದಾರೆ.

4.ಸಿಎಎ ಬಗ್ಗೆ ಚರ್ಚಿಸಲು ಸಿದ್ಧ, ಆದರೆ ಬಿಹಾರದಲ್ಲಿ ಎನ್ಆರ್​ಸಿಗೆ ಅವಕಾಶ ಇಲ್ಲ: ಸಿಎಂ ನಿತೀಶ್ ಕುಮಾರ್ರಾಷ್ಟ್ರೀಯ ನಾಗರಿಕ ನೊಂದಣಿ(ಎನ್​ಆರ್​ಸಿ) ಯೋಜನೆಯನ್ನು ಬಿಹಾರದಲ್ಲಿ ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸಂಸತ್​ನಲ್ಲಿ ಚರ್ಚೆಯಾಗಬೇಕೆಂದು ಅವರು ಸಲಹೆ ನೀಡಿದ್ಧಾರೆ.

5.ತಿಹಾರ್ ಜೈಲಿನಲ್ಲಿ ನಾಲ್ವರು ಅಪರಾಧಿಗಳ ಗಲ್ಲಿಗೇರಿಸುವ ಅಣಕು ತಾಲೀಮು

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ದಿನಗಣನೆ ಶುರುವಾಗಿದೆ. ಆದ್ದರಿಂದಲೇ ನಿನ್ನೆಯೇ(ಭಾನುವಾರ) ತಿಹಾರ್ ಜೈಲಿನಲ್ಲಿ ನಾಲ್ವರನ್ನು ಏಕಕಾಲಕ್ಕೆ ನೇಣುಗಂಬಕ್ಕೆ ಏರಿಸುವ ನಕಲಿ ಅಣಕು(Dummy Execution) ತಾಲೀಮು ನಡೆಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

6.ಕನಕಪುರ ಬಂಡೆ ಪರ ನಿಂತ ಗೌಡ; ಕಪಾಲಬೆಟ್ಟದಲ್ಲಿ ಏಸು ಶಿಲೆ ನಿರ್ಮಾಣಕ್ಕೆ ವಿರೋಧ ಇಲ್ಲ ಎಂದ ಜೆಡಿಎಸ್ ಮುಖ್ಯಸ್ಥ

ಕನಕಪುರದ ಕಪಾಲಿ ಬೆಟ್ಟದಲ್ಲಿ 110 ಅಡಿ ಎತ್ತರದ ಏಸುವಿನ ಏಕಶಿಲಾ ವಿಗ್ರಹ ನಿರ್ಮಾಣಕ್ಕೆ ಹೊರಟಿರುವ ಡಿಕೆಶಿ ನಿರ್ಧಾರಕ್ಕೆ ದೇವೇಗೌಡರು ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಟ್ಟದ ಮೇಲೆ ಡಿಕೆ ಶಿವಕುಮಾರ್ ಏಸು ಶಿಲೆ ನಿರ್ಮಿಸಲು ತೆಗೆದುಕೊಂಡಿರುವ ನಿರ್ಣಯಕ್ಕೆ ತಮ್ಮ ಅಭ್ಯಂತರ ಇಲ್ಲ ಎಂದು ಮಾಜಿ ಪ್ರಧಾನಿಯವರು ಸ್ಪಷ್ಟಪಡಿಸಿದ್ಧಾರೆ.

7.ಸೋಮಶೇಖರ್​​ ರೆಡ್ಡಿ ಬಂಧಿಸದೆ ಜಮೀರ್​​ ಬಂಧಿಸಿರುವುದು ಖಂಡನೀಯ: ಸಿದ್ದರಾಮಯ್ಯ

ಸಂವಿಧಾನ ವಿರೋಧಿ ಹೇಳಿಕೆ ನೀಡುವ ಮೂಲಕ ಕೋಮುದ್ವೇಷ ಕೆರಳಿಸಿದ್ದ ಶಾಸಕ ಸೋಮಶೇಖರ ರೆಡ್ಡಿಯವರನ್ನು ಬಂಧಿಸಬೇಕಿದ್ದ ಬಿಜೆಪಿ ಸರ್ಕಾರ ಶಾಸಕ ಜಮೀರ್​​ ಜಮೀರ್​ ಅಹ್ಮದ್​​ರನ್ನು ಬಂಧಿಸಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಸಿದ್ದರಾಮುಯ್ಯ, ಬಿಜೆಪಿ ಸರ್ಕಾರ ಸೋಮಶೇಖರ್​​ ಬಂಧನ ಮಾಡಬೇಕಿತ್ತು. ಇವರ ಬದಲಿಗೆ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದ ನಮ್ಮ ಶಾಸಕ ಜಮೀರ್​ ಅಹಮ್ಮದ್​​ ಬಂಧಿಸಲಾಗಿದೆ. ಇದು ಖಂಡನೀಯ ಮತ್ತವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

8.ಮಂಗಳೂರು ಆಯ್ತು, ಈಗ ಬೆಂಗಳೂರು, ಕನಕಪುರ ಮಂದಿಯ ನೆಮ್ಮದಿ ಹಾಳು ಮಾಡುತ್ತಿದ್ದಾರೆ: ಕಲ್ಲಡ್ಕ ವಿರುದ್ಧ ಖಾದರ್ ವಾಗ್ದಾಳಿ

ಏಸು ಪ್ರತಿಮೆ ವಿರೋಧಿಸಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕನಕಪುರದಲ್ಲಿ ಚಲೋ ಹಮ್ಮಿಕೊಂಡಿರುವುದು ಅವರ ಸಣ್ಣ ಮನಸ್ಸನ್ನು ತೋರಿಸುತ್ತದೆ. ದೇವರ ಪ್ರತಿಮೆ ಮಾಡಲು ಅಡ್ಡಿ ಮಾಡುವ ಇವರ ಮನೋಭಾವಕ್ಕೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಬೇಸರ ಮಾಡಿಕೊಂಡಿದ್ದಾರೆ.

9.ಡಿಬಾಸ್ ನಟನೆಯ 55ನೇ ಸಿನಿಮಾಗೆ ಡೈರೆಕ್ಟರ್​ ಫಿಕ್ಸ್​!; ಯಾರು ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ರಾಬರ್ಟ್‘ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದೆ. ಇದೇ ಸಂಕ್ರಾಂತಿ ಹಬ್ಬದಂದು ‘ರಾಬರ್ಟ್‘ ಚಿತ್ರತಂಡ ಅಭಿಮಾನಿಗಳಿಗೆ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿಹಿ ಸುದ್ದಿ ನೀಡುತ್ತಿದ್ದಾರೆ. ಎಪ್ರಿಲ್ ತಿಂಗಳಿನಲ್ಲಿ ಈ ಸಿನಿಮಾ ತೆರೆಗೆ ತರಲು ನಿರ್ದೇಶಕ ತರುಣ್ ಸುಧೀರ್ ಮುಂದಾಗಿದ್ದಾರೆ.

10.ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ; ಕನ್ನಡಿಗ ಮಯಾಂಕ್, ಬುಮ್ರಾ, ಶಫಾಲಿ ಸೇರಿ ಅನೇಕರಿಗೆ ಗೌರವ

2018-19ನೇ ಸಾಲಿನ ಬಿಸಿಸಿಐ ವಾರ್ಷಿಕ ಪ್ರಶಸ್ತಿಯನ್ನು ಮುಂಬಯಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಗಿದೆ. ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೆ ಕೊಡಲಾಗುವ ಪಾಲಿ ಉಮ್ರಿಗರ್ ಪ್ರಶಸ್ತಿ ಯಾರ್ಕರ್ ಸ್ಪೆಷಲಿಸ್ಟ್ ಜಸ್​ಪ್ರೀತ್​ ಬುಮ್ರಾ ಅವರಿಗೆ ನೀಡಲಾಗಿದೆ. ಪಾಲಿ ಉಮ್ರಿಗರ್ ಪ್ರಶಸ್ತಿಗಾಗಿ 15 ಲಕ್ಷ ರೂ. ಬಹುಮಾನದ ಮೊತ್ತವನ್ನು ಬುಮ್ರಾ ತಮ್ಮದಾಗಿಸಿಕೊಂಡಿದ್ದಾರೆ.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ