Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:January 11, 2020, 6:20 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1.ಐಸಿಐಸಿಐ ಮಾಜಿ ಸಿಇಒ ಚಂದಾ ಕೊಚ್ಚಾರ್ ಅವರ 78 ಕೋಟಿ ಆಸ್ತಿ ಜಪ್ತಿ ಮಾಡಿದ ಇಡಿ

ಅಕ್ರಮ ಲೇವಾದೇವಿ ಪ್ರಕರಣ ಸಂಬಂಧ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್ ಹಾಗೂ ಅವರ ಕುಟುಂಬದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಮುಂಬೈನಲ್ಲಿರುವ ಫ್ಲಾಟ್ ಮತ್ತು ಅವರ ಗಂಡ ದೀಪಕ್ ಕೊಚ್ಚಾರ್ ಕಂಪನಿಯ ಕೆಲ ಆಸ್ತಿ ಸೇರಿ ಒಟ್ಟು 78 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

2.ವಿದ್ಯುತ್​ ಶಾಕ್​: ಪಂಜಾಬ್​ ಸಿಎಂ​ ಮನೆ ಎದುರು ಎಎಪಿ ಪ್ರತಿಭಟನೆ

ರಾಜ್ಯದಲ್ಲಿ ವಿದ್ಯುತ್​​ಚ್ಛಕ್ತಿ ದರ ಏರಿಸಿದ ಹಿನ್ನೆಲೆ ಆಮ್​ ಆದ್ಮಿ ಪಕ್ಷದ ಕಾರ್ಯಕರ್ತರು ಪಂಜಾಬ್​ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಮನೆ ಎದರು ಬೃಹತ್​ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ದೊಡ್ಡ ವಿರೋಧ ಪಕ್ಷವಾಗಿರುವ ಎಎಪಿ, ಕಾಂಗ್ರೆಸ್​ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ಎಎಪಿ ನಾಯಕ ಭಗವಂತ್​ ಮನ್​ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಗಿದ್ದು, ಪ್ರತಿಭಟನಾಕಾರರ ಚದುರಿಸಲು ಸರ್ಕಾರ ಕಾಂಗ್ರೆಸ್​ ಕಾರ್ಯಕರ್ತರ ಮೇಲೆ ಪೊಲೀಸರು ಜಲಫಿರಂಗಿಯನ್ನು ಪ್ರಯೋಗಿಸಿದ್ದಾರೆ.

3.ಕಾಶ್ಮೀರದಲ್ಲಿ ಸಂಪೂರ್ಣ ಅಂತರ್ಜಾಲ ಸೌಲಭ್ಯ ನೀಡಿ, 7 ದಿನಗಳೊಳಗೆ ನಿರ್ಬಂಧ ತೆರವುಗೊಳಿಸಿ: ಕೇಂದ್ರಕ್ಕೆ ಸುಪ್ರೀಂ

ಸಂವಿಧಾನದ 370ನೇ ವಿಧಿಯನ್ನು ಕಾಶ್ಮೀರದಿಂದ ತೆರವುಗೊಳಿಸಿದ ನಂತರ ಕಾಶ್ಮೀರದ ಎಲ್ಲಾ ಕಡೆಗಳಲ್ಲಿ ಸಂಪೂರ್ಣ ಅಂತರ್ಜಾಲ ಸೌಲಭ್ಯ ತಡೆ ಹಿಡಿಯಲಾಗಿತ್ತು. ತಿಂಗಳುಗಳ ನಂತರ ಪೋಸ್ಟ್​ಪೇಡ್​ ಸಿಮ್​ಗಳಿಗೆ ಮಾತ್ರ ದೂರವಾಣಿ ಸಂಪರ್ಕ ಕಲ್ಪಿಲಾಯಿತು. ಅದಾದ ನಂತರ ಕೆಲ ಪ್ರದೇಶಗಳಲ್ಲಿ ಮಾತ್ರ ಅಂತರ್ಜಾಲ ಸೌಲಭ್ಯ ನೀಡಲಾಗಿದೆ. ಇದೀಗ ಈ ಬಗ್ಗೆ ಸುಪ್ರೀಂ ಕೋರ್ಟ್​ ಮಹತ್ತರ ಆದೇಶ ಹೊರಡಿಸಿದ್ದು, ಸಂಪೂರ್ಣ ಅಂತರ್ಜಾಲ ಸೌಲಭ್ಯ ನೀಡುವಂತೆ ಸೂಚಿಸಿದೆ. ಜತೆಗೆ ಕಾಶ್ಮೀರ ಭೇಟಿಗೆ ಇರುವ ನಿರ್ಬಂಧಗಳನ್ನು ಏಳು ದಿನಗಳೊಳಗೆ ತೆರವುಗೊಳಿಸುವಂತೆ ತಿಳಿಸಿದೆ.

4.ದೀಪಿಕಾ ಪಡುಕೋಣೆ ತುಕ್ಡೆ ತುಕ್ಡೆ ಗ್ಯಾಂಗ್ ಜೊತೆಗೆ ನಿಂತಿದ್ದಾರೆ; ಆಕೆಯ ಹಕ್ಕನ್ನು ಅಲ್ಲಗಳೆಯಲ್ಲ; ಸಚಿವೆ ಸ್ಮೃತಿ ಇರಾನಿಜೆಎನ್​ಯು ಕ್ಯಾಂಪಸ್​ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ, ಜೊತೆಗೆ ಇರುವಾಗಿ ಭರವಸೆ ನೀಡಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರ ಸಚಿವ ಸ್ಮೃತಿ ಇರಾನಿ ಹರಿಹಾಯ್ದಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವೆ ಸ್ಮೃತಿ ಇರಾನಿ ತುಕ್ಡೆ ತುಕ್ಡೆ ಗ್ಯಾಂಗ್​ ಉಲ್ಲೇಖಿಸಿ, ದೇಶವನ್ನು ನಾಶ ಮಾಡುವ ಜನರ ಪರವಾಗಿ ನಿಂತುಕೊಳ್ಳುವುದು ಅದು ದೀಪಿಕಾ ಅವರ ಸ್ವಾತಂತ್ರ ಎಂದು ಮಾರ್ಮಿಕವಾಗಿ ಹೇಳಿದರು.

5.ಮಂಗಳೂರು ಗಲಭೆ ಪೊಲೀಸರ ಸೃಷ್ಟಿ ಎಂದು ಮೊದಲೇ ಹೇಳಿದ್ದೆ; ಸಿದ್ದರಾಮಯ್ಯ

ಮಂಗಳೂರು ಗಲಭೆ ಕುರಿತ ವಿಡಿಯೋ ಪೊಲೀಸರ ಸೃಷ್ಠಿ ಎಂದು ಈ ಮೊದಲೇ ನಾನು ಹೇಳಿದ್ದೆ. ಅವರ ತಪ್ಪು ಮುಚ್ಚಿ ಹಾಕಿಕೊಳ್ಳಲು ವಿಡಿಯೋ ಸೃಷ್ಟಿ ಮಾಡಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ಮಂಗಳೂರು ಹಿಂಸಾಚಾರ ಕುರಿತು ಎಚ್​ ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ ಹೊಸ ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಅವರು,  ಹಿಂಸಾಚಾರ ಸೃಷ್ಟಿಸಿ ಪೊಲೀಸನವರು ತಪ್ಪು ಮಾಡಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಪೊಲೀಸಿನವರೇ ವಿಡಿಯೋ ಮಾಡಿದ್ದಾರೆ. ಘಟನೆಯಲ್ಲಿ ಅಮಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಘಟನೆಯಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿಲ್ಲ ಎಂದರು.

6.ಇತಿಹಾಸ ನಿರ್ಮಿಸಿದ ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನ; ವಿರೋಧದ ನಡುವೆಯೂ ಜನರೇ ಹಣಕೊಟ್ಟು ನಡೆಸಿದರು ನುಡಿ ಜಾತ್ರೆ!

ರಾಜ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 1 ಶತಮಾನದ ಇತಿಹಾಸ ಇದೆ. ಆದರೆ, ಹಲವಾರು ಅಡೆತಡೆ, ಸರ್ಕಾರದ ವಿರೋಧದ ನಡುವೆಯೂ ಇಂದು ಜನರೇ ದೇಣಿಗೆ ಕೊಟ್ಟು ಚಿಕ್ಕಮಗಳೂರಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಹೊಸದೊಂದು ಇತಿಹಾಸಕ್ಕೆ ಕಾರಣವಾಗಿದ್ದಾರೆ.

7.ಪ್ರಧಾನಿ ಮೋದಿ ಸನ್ಯಾಸಿ ಇದ್ದಂತೆ, ಅವರಿಗೆ ಸ್ವಂತದ್ದು ಅಂತ ಏನೂ ಇಲ್ಲ; ಸಾಹಿತಿ ಎಸ್​.ಎಲ್​.ಭೈರಪ್ಪ

ಸಾಹಿತಿ ಎಸ್​​.ಎಲ್​.ಭೈರಪ್ಪ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಪೌರತ್ವ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಕಾಯ್ದೆ ಪರವಾಗಿ ಮಾತನಾಡಿದ್ದಾರೆ.  ಪ್ರಧಾನಿ ಮೋದಿ ಜಾರಿಗೆ ತಂದಿರುವ ನೀತಿಗಳಿಗೆ ಬೆಂಬಲ ಸೂಚಿಸಿದರು. ಇದೇ ವೇಳೆ ಕೇಂದ್ರದ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಹಿಂದೂ ಮುಸ್ಲಿಂ ನಡುವೆ ಒಡೆದು ಆಳುವ ನೀತಿ ಅನುಸರಿಸಿದರು. ಸ್ವಾತಂತ್ರ್ಯಾನಂತರ ಜವಹರಲಾಲ್ ನೆಹರೂ ಕೂಡ ಅದೇ ತಂತ್ರ ಅನುಸರಿಸಿದರು. ಕಾಂಗ್ರೆಸ್ ಪಕ್ಷ ಈಗಲೂ ಅದನ್ನೇ ಮಾಡುತ್ತಿದೆ. ಮುಸ್ಲಿಮರನ್ನು ಓಟ್ ಬ್ಯಾಂಕ್ ಆಗಿ ಸೃಷ್ಟಿಸಿಕೊಂಡಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

8.ಪ್ರಧಾನಿ ನರೇಂದ್ರ ಮೋದಿ ಕೇವಲ ಬುದ್ಧಿವಂತರಾದರೆ ಸಾಲದು- ಹೃದಯವಂತರಾಗಬೇಕು ; ತೋಂಟದಾರ್ಯ ಶ್ರೀ

ಪ್ರಧಾನಿ ನರೇಂದ್ರ ಮೋದಿಯವರು ಬುದ್ದಿವಂತರು. ಕೇವಲ ಬುದ್ದಿವಂತಿಕೆಯಿಂದ ಜನರ ಮನಸ್ಸಿನಲ್ಲಿ ಉಳಿಯಲು ಸಾಧ್ಯವಿಲ್ಲ. ಅದರ ಜತೆಗೆ ಹೃಯವಂತಿಕೆ ಬೇಕು ಆಗ ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಸಲು ಸಾಧ್ಯ ಎಂದು ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮಿಜಿ ಹೇಳಿದರು.

9.ಶೆಟ್ರಿಗೆ ಖುಲಾಯಿಸಿದ ಅದೃಷ್ಟ; ಪೋಷಕ ಪಾತ್ರದಿಂದ ಹೀರೋ ಆಗಿ ಬಡ್ತಿ

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು‘, ‘ಕಿರಿಕ್​ ಪಾರ್ಟಿ‘, ‘ಅವನೇ ಶ್ರೀಮನ್ನಾರಾಯಣ‘ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದ ಪ್ರಮೋದ್​ ಶೆಟ್ಟಿ ಇದೀಗ ನಾಯಕನಾಗಿ ಬಡ್ತಿ ಪಡೆದುಕೊಂಡಿದ್ದಾರೆ. ರಂಗಭೂಮಿ ಕಲಾವಿದರಾದ ಪ್ರಮೋದ್​ ಶೆಟ್ಟಿ ‘ಒಂದು ಶಿಕಾರಿಯ ಕಥೆ‘ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳಲ್ಲಿದ್ದಾರೆ.  ಈ ಸಿನಿಮಾ ಇದೇ ಫೆಬ್ರವರಿಯಂದು ತೆರೆಗೆ ಬರುವ ಸಾಧ್ಯತೆ ಹೆಚ್ಚಿದೆ.

10.ಇಂದು ಫೈನಲ್ ಟಿ-20; ಗೆದ್ದರೆ ದಾಖಲೆ ಬರೆಯಲಿರುವ ಭಾರತ

ಭಾರತ ಹಾಗೂ ಶ್ರೀಲಂಕಾ ನಡುವೆ ಇಂದು ಅಂತಿಮ ಮೂರನೇ ಟಿ-20 ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ ಸಜ್ಜಾಗಿದೆ. ಈಗಾಗಲೇ ಕೊಹ್ಲಿ ಪಡೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇಂದಿನ ಪಂದ್ಯ ಗೆದ್ದರೆ ಭಾರತ ಸರಣಿ ವಶಪಡಿಸಿಕೊಂಡು ದಾಖಲೆ ಬರೆಯಲಿದೆ. ಇತ್ತ ಮಲಿಂಗಾ ಪಡೆ ಕೊನೆಯ ಪಂದ್ಯವನ್ನಾದರು ಗೆದ್ದು ಕನಿಷ್ಠ ಸರಣಿಯನ್ನು ಸಮಬಲ ಸಾಧಿಸಿ ಭಾರತ ಪ್ರವಾಸ ಅಂತ್ಯಗೊಳಿಸುವ ಯೋಜನೆ ಹಾಕಿಕೊಂಡಿದೆ.

 
First published:January 10, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ