Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇಬೇಕಾದ ಸುದ್ದಿಗಳಿವು

G Hareeshkumar | news18-kannada
Updated:January 9, 2020, 5:54 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • Share this:
1. 2018ರಲ್ಲಿ ಪ್ರತಿನಿತ್ಯ 80 ಕೊಲೆ, 289 ಕಿಡ್ನಾಪ್, 91 ಅತ್ಯಾಚಾರ ನಡೆಯುತ್ತಿದ್ದವು: ಕೇಂದ್ರ ಗೃಹ ಇಲಾಖೆ

ಇತ್ತೀಚೆಗೆ ಕೇಂದ್ರ ಗೃಹ ಇಲಾಖೆಯ ನ್ಯಾಷನಲ್​​​​​ ಕ್ರೈಮ್​​​​ ರೆಕಾರ್ಡ್ಸ್​​​ ಬ್ಯೂರೋ(ಎನ್​​​​​​ಸಿಆರ್​​​​​ಬಿ) ತನ್ನ ವಾರ್ಷಿಕ ವರದಿ ಬಿಡುಗಡೆ ಮಾಡಿದೆ. ಈ ವಾರ್ಷಿಕ ವರದಿ ಪ್ರಕಾರ 2018ರಲ್ಲಿ ಮಾತ್ರ ದೇಶಾದ್ಯಂತ 50,74,634 ಅರಿವಿನ ಅಪರಾಧಗಳು (cognizable crimes) ದಾಖಲಾಗಿವೆ. ಅಂದರೆ 2018ರಲ್ಲಿ ಪ್ರತಿನಿತ್ಯ 80 ಕೊಲೆ, 289 ಕಿಡ್ನಾಪ್​​​ ಮತ್ತು 91 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು ಎಂಬುದು ನ್ಯಾಷನಲ್​​​​​ ಕ್ರೈಮ್​​​​ ರೆಕಾರ್ಡ್ಸ್​​​ ಬ್ಯೂರೋ (ರಾಷ್ಟ್ರೀಯ ಅಪರಾಧ ದಾಖಲೆಗಳ ದಳ) ಬಿಡುಗಡೆ ಮಾಡಿದ ವರದಿಯಲ್ಲಿ ಬಹಿರಂಗವಾಗಿದೆ.

2.ಜೆಎನ್​ಯು ಹಿಂಸಾಚಾರ: ಮೇಲಿಂದ ಆದೇಶ ಬಂದಾಗ ದೆಹಲಿ ಪೊಲೀಸರು ಏನು ಮಾಡಲು ಸಾಧ್ಯ?ಸಿಎಂ ಕೇಜ್ರಿವಾಲ್

ಜವಾಹರ್​ ಲಾಲ್​ ವಿಶ್ವವಿದ್ಯಾಲಯ ಮತ್ತು ಜಾಮೀಯ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ದೇಶದಲ್ಲಿ ತಲ್ಲಣ ಮೂಡಿಸಿದೆ. ವಿದ್ಯಾರ್ಥಿಗಳ ಮೇಲೆ ಹಲ್ಲೆ ಕುರಿತು ಪೊಲೀಸರ ಅಸಾಹಯಕ ವರ್ತನೆಗೆ ಆಕ್ರೋಶ ಕೂಡ ವ್ಯಕ್ತವಾಗಿದೆ. ಈ ಕುರಿತು ಮಾತನಾಡಿರುವ ಸಿಎಂ ಅರವಿಂದ್​ ಕೇಜ್ರಿವಾಲ್​ ಪೊಲೀಸರ ಪರ ವಹಿಸಿ ಮಾತನಾಡಿದ್ದು, ಮೇಲಿಂದ ಆದೇಶ ಬಂದಾಗ ಅವರು ಕೂಡ ಏನು ಮಾಡಲು ಸಾಧ್ಯ ಎಂದಿದ್ದಾರೆ.

3.ಉಕ್ರೇನ್ ವಿಮಾನ ದುರಂತಕ್ಕೆ ತಾಂತ್ರಿಕ ಸಮಸ್ಯೆ ಕಾರಣವೇ ಹೊರತು ಕ್ಷಿಪಣಿ ದಾಳಿಯಲ್ಲ; ವರದಿ ನೀಡಿದ ಇರಾನ್

ಬುಧವಾರ ಅಪಘಾತಕ್ಕೀಡಾಗಿ 180 ಜನರ ಸಾವಿಗೆ ಕಾರಣವಾಗಿದ್ದ ಉಕ್ರೇನ್ ವಿಮಾನ ದುರಂತಕ್ಕೆ ಕ್ಷಿಪಣಿ ದಾಳಿ ಕಾರಣವಲ್ಲ. ಬದಲಾಗಿ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯೇ ಅಪಘಾತಕ್ಕೆ ಕಾರಣ. ವಿಮಾನ ನೆಲಕ್ಕೆ ಅಪ್ಪಳಿಸುವ ಮುನ್ನವೇ ಬೆಂಕಿಗೆ ಆಹುತಿಯಾಗಿತ್ತು ಎಂದು ಇರಾನ್ ದೇಶದ ತನಿಖಾಧಿಕಾರಿಗಳು ವರದಿ ನೀಡಿದ್ದಾರೆ.

4.ಜ. 17ಕ್ಕೆ ಸಂಪುಟ ವಿಸ್ತರಣೆ? 11 ‘ಅರ್ಹ’ರಲ್ಲಿ ಏಳ್ವರಿಗೆ ಮಾತ್ರ ಮಂತ್ರಿಭಾಗ್ಯ? ಕೆರಳಿದ ಜಾರಕಿಹೊಳಿ ಬಂಡಾಯಕ್ಕೆ ಸಜ್ಜುಕಾಂಗ್ರೆಸ್ ಮತ್ತು ಜೆಡಿಎಸ್ ಭಿನ್ನಮತೀಯರ ಸಹಾಯದಿಂದ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗ ಅದೇ ರೆಬೆಲ್​ಗಳಿಂದ ಬಂಡಾಯ ಭೀತಿ ಎದುರಿಸುತ್ತಿದ್ಧಾರೆ. ಭಿನ್ನಮತೀಯರನ್ನು ಒಗ್ಗೂಡಿಸಿ ಮುನ್ನಡೆಸಿದ್ದ ರಮೇಶ್ ಜಾರಕಿಹೊಳಿಯೇ ಈಗ ಮರುಬಂಡಾಯಕ್ಕೆ ಅಣಿಯಾಗುತ್ತಿದ್ದಾರೆ. ಗೆಲ್ಲಲಿ, ಸೋಲಲಿ ಎಲ್ಲರಿಗೂ ಮಂತ್ರಿಸ್ಥಾನ ಕೊಡುತ್ತೇನೆಂದು ಭರವಸೆ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಈಗ ಮಾತು ತಪ್ಪುತ್ತಿದ್ದಾರೆಂಬ ಆಕ್ರೋಶ ರಮೇಶ್ ಜಾರಕಿಹೊಳಿ ಅವರಲ್ಲಿ ಉದ್ಭವಿಸಿದೆ. ಒಂದು ವೇಳೆ, ಬಿಎಸ್​ವೈ ಮಾತು ತಪ್ಪಿದರೆ ಎಲ್ಲಾ ‘ರೆಬೆಲ್’ಗಳನ್ನು ಮತ್ತೊಮ್ಮೆ ಗುಳೆ ಎಬ್ಬಿಸಿ ಕರೆದುಕೊಂಡು ಹೋಗಲು ಗೋಕಾಕ್ ಶಾಸಕರು ನಿರ್ಧರಿಸಿದ್ಧಾರೆ ಎಂದು ಮೂಲಗಳು ಹೇಳುತ್ತಿವೆ.

5.ಬಿಜೆಪಿ ಕಾರ್ಯಕರ್ತರ ಧಮ್ಕಿ ಆಕ್ಷೇಪಿಸಿ ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜು ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾಲಯದಲ್ಲಿ ಫ್ರೀ ಕಾಶ್ಮೀರ್ ಕೂಗು ಕೇಳಿಬಂದು ವಿವಾದ ಮೆತ್ತಿಕೊಂಡ ಬೆನ್ನಲ್ಲೇ ಬೆಂಗಳೂರಿನಲ್ಲಿ ಬಿಜೆಪಿಗರು ಕಾಲೇಜು ವಿದ್ಯಾರ್ಥಿನಿಯರನ್ನು ಕೆಣಕಿ ಪ್ರತಿಭಟನೆಗೆ ಎಡೆ ಮಾಡಿಕೊಟ್ಟಿದ್ದಾರೆ. ಕೋರಮಂಗಲದಲ್ಲಿರುವ ಜ್ಯೋತಿನಿವಾಸ್ ಮಹಿಳಾ ಕಾಲೇಜು ಬಳಿ ಬಿಜೆಪಿಯ ಸ್ಥಳೀಯ ಕೆಲ ಕಾರ್ಯಕರ್ತರು ಸಿಎಎ ಪರ ಬ್ಯಾನರ್ ಅಂಟಿಸಿ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹಕ್ಕೆ ಯತ್ನಿಸಿದ ಘಟನೆ ನಿನ್ನೆ ನಡೆದಿರುವುದು ವರದಿಯಾಗಿದೆ.

6.ನೆರೆ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ - ಕೇಂದ್ರದ ವಿರುದ್ಧ ಸಿದ್ಧರಾಮಯ್ಯ ವಾಗ್ದಾಳಿ

ಕೇಂದ್ರ ಸರ್ಕಾರ ಕೊಟ್ಟಿರುವ ನೆರೆ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಿದ್ದಾರೆ. ಬರಗಾಲದ ಪರಿಹಾರ ಇನ್ನೂ ಬಂದಿಲ್ಲ. ಕೇಂದ್ರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ  ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಜಿಎಸ್‌ಟಿ, ಕುಡಿಯುವ ನೀರು, ಕೇಂದ್ರ ಪ್ರಾಯೋಜಿತ ಯೋಜನೆಗಳ ಹಣ ರಾಜ್ಯಕ್ಕೆ ಬಂದಿಲ್ಲ‌. ಕೇಂದ್ರದವರು ರಾಜ್ಯಗಳನ್ನೂ ದಿವಾಳಿ ಮಾಡುತ್ತಿದ್ದಾರೆ. ಐದು ಸಾವಿರ ಕೋಟಿ ರಾಜ್ಯಕ್ಕೆ ಬರಬೇಕಾದ ಹಣ ಬಂದಿಲ್ಲ. ಸಿಎಂ ಯಡಿಯೂರಪ್ಪ ಏನು ಮಾಡುತ್ತಾರೆ ನೋಡುತ್ತೇವೆ. ಆಮೇಲೆ ರಸ್ತೆಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

7.ಬೆಂಗಳೂರು ಮತ್ತು ತಮಿಳುನಾಡು ಪೊಲೀಸರ ಜಂಟಿ ಕಾರ್ಯಾಚರಣೆ; ದಾಳಿಗೆ ಸಂಚು ರೂಪಿಸಿದ್ದ 8 ಶಂಕಿತ ಉಗ್ರರ ಬಂಧನ

ದೇಶಾದ್ಯಂತ ದಾಳಿಗೆ ಸಂಚು ರೂಪಿಸಿದ್ದ ಜಿಹಾದಿ ಗ್ಯಾಂಗ್​​​​ನ ಒಟ್ಟು 8 ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಬೆಂಗಳೂರು ಸಿಸಿಬಿ ಮತ್ತು ತಮಿಳುನಾಡು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಈ ಶಂಕಿತ ಉಗ್ರರನ್ನು ಸೆರೆ ಹಿಡಿದಿದ್ದಾರೆ. ಬಂಧಿತರಲ್ಲಿ ಇಬ್ಬರನ್ನು ಕರ್ನಾಟಕದವರೆಂದು ಗುರುತಿಸಲಾಗಿದೆ. ಹನೀಫ್​ ಮತ್ತು ಇಫ್ರಾನ್​ ಶಂಕಿತ ಉಗ್ರರು. ಸಿಸಿಬಿ ಪೊಲೀಸ್​ ಠಾಣೆಯಲ್ಲಿ ಭಯೋತ್ಪಾದಕರನ್ನು ತೀವ್ರ ವಿಚಾರಣೆ ಮಾಡಲಾಗುತ್ತಿದೆ. ಶಂಕಿತ ಉಗ್ರರು ಜಿಹಾದಿ ಗ್ಯಾಂಗ್​ನವರಾಗಿದ್ದು, ದೇಶಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಪ್ಲಾನ್​ ಮಾಡಿದ್ದರು ಎಂದು ತಿಳಿದು ಬಂದಿದೆ.

8.ಮೈಸೂರು ವಿವಿಯಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಭಿತ್ತಿಪತ್ರ ಪ್ರದರ್ಶನ; ವರದಿ ಕೇಳಿದ ರಾಜ್ಯಪಾಲರು‌

ಮೈಸೂರು ವಿವಿಯಲ್ಲಿ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಭಿತ್ತಿಪತ್ರ​ ಪ್ರದರ್ಶಿಸಿದ ಘಟನೆ ಬಗ್ಗೆ ವಿವಿಯಿಂದ ರಾಜ್ಯಪಾಲ ವಜುಭಾಯಿ ವಾಲಾ ಅವರು ವರದಿ ಕೇಳಿದ್ದಾರೆ. ಅಲ್ಲದೇ ವರದಿಯನ್ನು ಇಂದು ಸಂಜೆಯವರೆಗೆ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

9.ಸೂರಿ ಸಿನಿಮಾ ತುಂಬಾನೇ ರಾ ಆಗಿದೆ; ಪಾಪ್​ಕಾರ್ನ್​ ಮಂಕಿ ಟೈಗರ್ ಟೀಸರ್​ ನೋಡಿ ಮೆಚ್ಚಿದ ಪುನೀತ್​

ಪೋಸ್ಟರ್​ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ‘ಪಾಪ್​ಕಾರ್ನ್​ ಮಂಕಿ ಟೈಗರ್’​ ಸಿನಿಮಾದ ಟೀಸರ್​ ಇತ್ತೀಚೆಗೆ ರಿಲೀಸ್ ಆಗಿತ್ತು. ಟೀಸರ್​ ನೋಡಿ ತೆಲುಗಿನ ಸ್ಟಾರ್​ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಟ್ವೀಟ್​ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದರು. ಈಗ ಟೀಸರ್​ ನೋಡಿದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಕೂಡ​ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

10.ಒಂದೇ ದಿನದಲ್ಲಿ ಎರಡು ಹ್ಯಾಟ್ರಿಕ್; ಬಿಗ್​ಬ್ಯಾಷ್​ನಲ್ಲಿ ಇತಿಹಾಸ ರಚಿಸಿದ ರಶೀದ್- ರೌಫ್!

ಕ್ರಿಕೆಟ್ ಕ್ಷೇತ್ರದಲ್ಲಿ ಸದ್ಯ ಐಪಿಎಲ್​​ನಷ್ಟೆ ಫೇಮಸ್ ಆಗುತ್ತಿರುವ ಮತ್ತೊಂದು ಲೀಗ್ ಬಿಗ್​ಬ್ಯಾಷ್ ಟಿ-20 ಟೂರ್ನಿಯಲ್ಲಿ ಒಂದೇ ದಿನ ಎರಡು ಹ್ಯಾಟ್ರಿಕ್ ವಿಕೆಟ್ ಮೂಡಿಬಂದಿದೆ. ಇಬ್ಬರು ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್​ಗಳ ಪೈಕಿ ವಿದೇಶ ಆಟಗಾರರು ಎಂಬವುದು ವಿಶೇಷ. ಈ ಮೂಲಕ ಬಿಗ್​ಬ್ಯಾಶ್​ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

 
First published:January 9, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ