ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್​ಗೆ ಬಿಜೆಪಿ ಸೇರಲು ಭಾರೀ ಆಫರ್ ನೀಡಿದ್ದರಂತೆ ಜನಾರ್ದನ ರೆಡ್ಡಿ!

ಬಿಜೆಪಿಯವರು ಮೂಟೆಗಟ್ಟಲೆ ಹಣ ಕೊಟ್ಟರೂ ನಾನು ಪಕ್ಷ ಬಿಟ್ಟು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ಆದರೆ, ಈಗಿನವರು ಕೇವಲ 3 ಕೋಟಿ ರೂ.ಗೆ ತಮ್ಮನ್ನು ಮಾರಿಕೊಂಡಿದ್ದಾರೆ ಎಂದು ಅನರ್ಹ ಶಾಸಕರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಹರಿಹಾಯ್ದಿದ್ದಾರೆ.

news18-kannada
Updated:November 26, 2019, 3:55 PM IST
ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್​ಗೆ ಬಿಜೆಪಿ ಸೇರಲು ಭಾರೀ ಆಫರ್ ನೀಡಿದ್ದರಂತೆ ಜನಾರ್ದನ ರೆಡ್ಡಿ!
ಜನಾರ್ದನ ರೆಡ್ಡಿ- ಕೆ.ಬಿ. ಚಂದ್ರಶೇಖರ್
  • Share this:
ಮಂಡ್ಯ (ನ. 26): ಮೈತ್ರಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಆಪರೇಷನ್ ಕಮಲ ನಡೆಸಿತ್ತು ಎಂಬ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್​ ನಾಯಕರು ಅಧಿವೇಶನದಲ್ಲೇ ಬಹಿರಂಗವಾಗಿ ಆರೋಪ ಮಾಡಿದ್ದರು. ಸರ್ಕಾರ ಪತನವಾದ ನಂತರವೂ ಈ ಬಗ್ಗೆ ಹಲವು ಬಾರಿ ಪ್ರಸ್ತಾಪಗಳಾಗಿತ್ತು. ಇದೀಗ ಆಪರೇಷನ್ ಕಮಲದ ಸದ್ದು ಮತ್ತೆ ಮೊಳಗತೊಡಗಿದೆ.

ಇಂದು ಕೆ.ಆರ್​. ಪೇಟೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಬಿಜೆಪಿ ವಿರುದ್ಧ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಬಿಜೆಪಿ ಸೇರಲು ಹಿಂದೆ ತಮಗೆ ಬಿಜೆಪಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮೂಟೆಗಟ್ಟಲೆ ಹಣದ ಆಫರ್ ನೀಡಿದ್ದರು. ಆದರೆ, ಅವರು ಕೊಡುವ ಹಣಕ್ಕೆ ನಾನು ಮರುಳಾಗಿರಲಿಲ್ಲ. ಎಷ್ಟೇ ಮೂಟೆಗಟ್ಟಲೆ ಹಣ ಕೊಟ್ಟರೂ ನಾನು ಪಕ್ಷ ಬಿಟ್ಟು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ಆದರೆ, ಈಗಿನವರು ಕೇವಲ 3 ಕೋಟಿ ರೂ.ಗೆ ತಮ್ಮನ್ನು ಮಾರಿಕೊಂಡಿದ್ದಾರೆ ಎಂದು ಅನರ್ಹ ಶಾಸಕರ ವಿರುದ್ಧ ಕೆ.ಬಿ. ಚಂದ್ರಶೇಖರ್ ಹರಿಹಾಯ್ದಿದ್ದಾರೆ.

ಇದನ್ನೂ ಓದಿ:  ನೀತಿ ಸಂಹಿತೆ ಉಲ್ಲಂಘನೆ ಆರೋಪ: ಎಂಟಿಬಿ ನಾಗರಾಜ್, ಆನಂದ್ ಸಿಂಗ್ ವಿರುದ್ಧ ಕಾಂಗ್ರೆಸ್ ದೂರು

2008ರಲ್ಲಿ ಆಪರೇಷನ್ ಕಮಲ ನಡೆದಾಗ ಬಿಜೆಪಿ ಸೇರಿದವರಿಗೆ ಮೂಟೆಗಟ್ಟಲೆ ಹಣ ಸಿಕ್ಕಿತ್ತು ಎಂಬ ಸಂಗತಿಯನ್ನು ಕೆ.ಬಿ. ಚಂದ್ರಶೇಖರ್ ಬಹಿರಂಗಪಡಿಸಿದ್ದಾರೆ. ಕೆ.ಆರ್.ಪೇಟೆಯ ತೆಂಗಿನಘಟ್ಟದಲ್ಲಿ ಕೈ ಅಭ್ಯರ್ಥಿ ಕೆ.ಬಿ. ಚಂದ್ರಶೇಖರ್ ಈ ರಹಸ್ಯವನ್ನು ತೆರೆದಿಟ್ಟಿದ್ದಾರೆ. ಆ ದಿನ ನನಗೆ ಕೂಡ ಜನಾರ್ದನ ರೆಡ್ಡಿ ಮೂಟೆಗಳಲ್ಲಿ ಹಣ ತಂದು ಕೊಡುತ್ತೇನೆ ಎಂದು ಹೇಳಿದ್ದರು. ನನ್ನನ್ನು ಅವರ ಬಳಿ ಕರೆದುಕೊಂಡು ಹೋಗಿದ್ದ ಡಿ.ಸಿ. ತಮ್ಮಣ್ಣ ಮತ್ತು ಆರ್. ಅಶೋಕ್​ಗೆ ಕೂಡ ಇದು ಗೊತ್ತು ಎನ್ನುವ ಮೂಲಕ ನೇರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:  ಯಾರಾದ್ರೂ ಉಂಗುರ, ದುಡ್ಡು ಕೊಟ್ಟರೆ ತಗೊಳ್ಳಿ, ಅದು ಮೋಸದ ಸಂಪಾದನೆ; ಪ್ರಚಾರ ವೇಳೆ ಎಂಟಿಬಿಗೆ ಮಾತಲ್ಲೇ ತಿವಿದ ಶರತ್ ಬಚ್ಚೇಗೌಡ

ಅಂದು ನನಗೆ ಮೂಟೆಯಲ್ಲಿ ಹಣ ಕೊಡಿಸುತ್ತೇನೆ ಎಂದು ಆಮಿಷವೊಡ್ಡಿ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದು ಡಿ.ಸಿ. ತಮ್ಮಣ್ಣ ಮತ್ತು ಆರ್. ಅಶೋಕ್. ಆದರೆ, ಆ ಕೋಟಿಗಟ್ಟಲೆ ಹಣವನ್ನು ತಿರಸ್ಕರಿಸಿ ಕಾಂಗ್ರೆಸ್ ಬಿಡುವ ಮಾತೇ ಇಲ್ಲ ಎಂದು ಹೇಳಿ ನಾನು ವಾಪಾಸ್ ಬಂದಿದ್ದೆ. ಆದರೀಗ ಅವರ ಆಮಿಷಕ್ಕೆ ಬಲಿಯಾಗಿ ಅನರ್ಹ ಶಾಸಕರು ಮೈತ್ರಿ ಸರ್ಕಾರವನ್ನೇ ಬೀಳಿಸಿ ಉಪಚುನಾವಣೆ ನಡೆಯುವ ಹಾಗೆ ಮಾಡಿದ್ದಾರೆ ಎಂದು ಕೆ.ಬಿ. ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.
First published: November 26, 2019, 3:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading