• Home
  • »
  • News
  • »
  • state
  • »
  • Karnataka Politics: ಜನಾರ್ದನ ರೆಡ್ಡಿ ಹೊಸ ಪಕ್ಷದಿಂದ ಬಿಜೆಪಿಗೆ ಹಿನ್ನೆಡೆ? ಇಲ್ಲಿದೆ ವಿಶ್ಲೇಷಣೆ

Karnataka Politics: ಜನಾರ್ದನ ರೆಡ್ಡಿ ಹೊಸ ಪಕ್ಷದಿಂದ ಬಿಜೆಪಿಗೆ ಹಿನ್ನೆಡೆ? ಇಲ್ಲಿದೆ ವಿಶ್ಲೇಷಣೆ

ಗಾಲಿ ಜನಾರ್ದನ ರೆಡ್ಡಿ

ಗಾಲಿ ಜನಾರ್ದನ ರೆಡ್ಡಿ

ಬಿಜೆಪಿಗೆ ಸರ್ಕಾರ ರಚಿಸಲು ಸಹಾಯ ಮಾಡಿದ ಸ್ವತಂತ್ರರ ಬೆಂಬಲವನ್ನು ಖಾತ್ರಿಪಡಿಸುವಲ್ಲಿ ರೆಡ್ಡಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಪರೇಷನ್ ಕಮಲದ ಹಿಂದಿನ ಪ್ರಮುಖ ರುವಾರಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ.

  • Share this:

ರೆಡ್ಡಿ ಸಹೋದರರಲ್ಲಿ ಒಬ್ಬರಾದ ಜನಾರ್ದನ ರೆಡ್ಡಿ (Janardhan Reddy) ವಿವಿಧ ಗಣಿಗಾರಿಕೆ ಹಗರಣಗಳಲ್ಲಿ ಭಾಗಿಯಾಗಿ ಖ್ಯಾತಿ ಗಳಿಸಿದವರು. ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು ರಾಜಕೀಯ ವಲಯದಲ್ಲಿ (Karnataka Politics) ಸದ್ದುಮಾಡುತ್ತಿದ್ದಾರೆ. ಗಣಿಧನಿ ಜನಾರ್ದನ ರೆಡ್ಡಿ ತಮ್ಮದೇ ಆದ ಪಕ್ಷವಾದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (KRPP) ಅನ್ನು ಆರಂಭಿಸಿದ್ದು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಪಕ್ಷದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.


ಬಳ್ಳಾರಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಕೊಪ್ಪಳ ಜಿಲ್ಲೆಯ ಕ್ಷೇತ್ರದ ಅಭ್ಯರ್ಥಿ ಎಂದು ಜನಾರ್ದನ ರೆಡ್ಡಿ ತಮ್ಮನ್ನು ಘೋಷಿಸಿಕೊಂಡಿದ್ದಾರೆ.
ನ್ಯಾಯಾಲಯದಲ್ಲಿ ಹಲವಾರು ಗಣಿ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಜನಾರ್ಧನ ರೆಡ್ಡಿ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಜೊತೆಗೆ ಪ್ರಸಿದ್ಧ ಗಣಿ ಹಗರಣದಲ್ಲಿ ತಮ್ಮದೇ ತವರು ಜಿಲ್ಲೆಯಾದ ಬಳ್ಳಾರಿಯ ಪ್ರವೇಶಕ್ಕೆ ನಿಷೇಧವನ್ನು ಹೊಂದಿದ್ದಾರೆ.


ಗಣಿಧಣಿಯ ರಾಜಕೀಯ ವೃತ್ತಿಜೀವನ
ತಮ್ಮ ರಾಜಕೀಯ ವೃತ್ತಿಜೀವನವನ್ನು ಜನಾರ್ಧನ ರೆಡ್ಡಿ ಇಲ್ಲಿಂದಲೇ ಆರಂಭಿಸಿದ್ದು, ಮತ್ತು 1999 ರ ಲೋಕಸಭೆ ಚುನಾವಣೆಯಲ್ಲಿ ಪ್ರವರ್ಧಮಾನಕ್ಕೆ ಬಂದರು. ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಸುಷ್ಮಾ ಸ್ವರಾಜ್ ಅವರ ಸಹೋದರನೊಂದಿಗೆ ಪ್ರಮುಖ ಪ್ರಚಾರಕರಾಗಿ ರಾಜಕೀಯ ರಂಗದಲ್ಲಿ ರೆಡ್ಡಿ ಕಾಣಿಸಿಕೊಂಡರು.


ಬಿಜೆಪಿಯೊಂದಿಗೆ ಸಹೋದರರ ಮೈತ್ರಿ
ಅವರ ಸಹೋದರ ಕರುಣಾಕರ್ ರೆಡ್ಡಿ ಹರಪನಹಳ್ಳಿಯ ಬಿಜೆಪಿ ಶಾಸಕರಾಗಿದ್ದು, ಅವರ ನಿಕಟವರ್ತಿ ಬಿ ಶ್ರೀರಾಮುಲು ಬೊಮ್ಮಾಯಿ ಸರಕಾರದಲ್ಲಿ ಸಚಿವರಾಗಿದ್ದಾರೆ. ಕರುಣಾಕರ್ ರೆಡ್ಡಿಯವರ ಹಲವಾರು ನಿಕಟ ಸಂಬಂಧಗಳು ರಾಜಕೀಯದೊಂದಿಗೆ ಮತ್ತು ಕೆಲವು ನೇರವಾಗಿ ಬಿಜೆಪಿ ಪಕ್ಷದೊಂದಿಗೆ ಸಂಬಂಧ ಹೊಂದಿವೆ.


ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿ ಹೆಸರು
1999 ರ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿಯಿಂದ ಸುಷ್ಮಾ ಸ್ವರಾಜ್ ಮೂಲಕ ಗಮನಸೆಳೆದ ನಂತರ ಜನಾರ್ದನ ರೆಡ್ಡಿ ಜಿಲ್ಲೆಯ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿ ಖ್ಯಾತಿ ಪಡೆದುಕೊಂಡರು. 2004 ರ ಚುನಾವಣೆಯಲ್ಲಿ ಪಕ್ಷದ ಪ್ರಮುಖ ಕಾರ್ಯತಂತ್ರಗಾರರಲ್ಲಿ ಒಬ್ಬರಾಗಿದ್ದ ರೆಡ್ಡಿ, ಸ್ಪಷ್ಟ ಬಹುಮತದೊಂದಿಗೆ ಹೊರಹೊಮ್ಮಿದ ಯಾವುದೇ ಪಕ್ಷಗಳಿಲ್ಲದ ಸಭೆಯ ರಚನೆಗೆ ಕಾರಣರಾದರು. ಅವರ ಆಪ್ತರಾಗಿದ್ದ ಶ್ರೀರಾಮುಲು 2006ರಲ್ಲಿ ರಚನೆಯಾದ ಜೆಡಿಎಸ್-ಬಿಜೆಪಿ ಸರ್ಕಾರದಲ್ಲಿ ಸಚಿವರಾದರು.


ಆಪರೇಷನ್ ಕಮಲದ ಹಿಂದಿನ ಸೂತ್ರಧಾರಿಗಳಲ್ಲಿ ಒಬ್ಬರು
ಅದೇ ವರ್ಷದಲ್ಲಿ, ಜನಾರ್ದನ ರೆಡ್ಡಿ ಸ್ವತಃ ಬಿಜೆಪಿ ಅಭ್ಯರ್ಥಿಯಾಗಿ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಜನಾರ್ದನ ರೆಡ್ಡಿ ಅವರು 2008 ರ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಪ್ರಚಾರಕರಾಗಿದ್ದರು ಹಾಗೂ ಈ ಸಮಯದಲ್ಲಿ, ಬಿಜೆಪಿ ಕೆಲವು ಸ್ಥಾನಗಳಿಂದ ಬಹುಮತವನ್ನು ಪಡೆಯುವಲ್ಲಿ ವಿಫಲವಾಯಿತು.


ಬಿಜೆಪಿಗೆ ಸರ್ಕಾರ ರಚಿಸಲು ಸಹಾಯ ಮಾಡಿದ ಸ್ವತಂತ್ರರ ಬೆಂಬಲವನ್ನು ಖಾತ್ರಿಪಡಿಸುವಲ್ಲಿ ರೆಡ್ಡಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಪರೇಷನ್ ಕಮಲದ ಹಿಂದಿನ ಪ್ರಮುಖ ರುವಾರಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ.


ಪಕ್ಷದ ಅನೇಕ ಹುದ್ದೆಗಳಲ್ಲಿ ರೆಡ್ಡಿ ಹೆಸರು
ಜನಾರ್ದನ ರೆಡ್ಡಿ ಅವರು ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾದರು. ಮುಖ್ಯಮಂತ್ರಿಗಳ ಪ್ರಭಾವಿ ಸಲಹೆಗಾರರಾಗಿ ಆಯ್ಕೆಯಾದರು.


ಶೀಘ್ರದಲ್ಲೇ, ಬಂಡಾಯ ವ್ಯಕ್ತಿಯಾಗಿ ಹೊರಹೊಮ್ಮಿದ ರೆಡ್ಡಿ ಆಗಾಗ್ಗೆ ಯಡಿಯೂರಪ್ಪ ಸರ್ಕಾರವನ್ನು ಮತ್ತು ಅವರ ಉತ್ತರಾಧಿಕಾರಿ ಸದಾನಂದ ಗೌಡರನ್ನು ಅಸ್ಥಿರಗೊಳಿಸುವ ಪ್ರಯತ್ನಗಳ ಕೇಂದ್ರಬಿಂದುವಾಗಿ ಕೂಡ ಹೆಸರುವಾಸಿಯಾದರು.


ಪಕ್ಷದಿಂದ ರೆಡ್ಡಿಯನ್ನು ದೂರವಿರಿಸಿರುವ ಪ್ರಮುಖ ಮುಖಂಡರು
2014 ರಲ್ಲಿ ಬಿಜೆಪಿಯಲ್ಲಿ ಹೊಸ ಕೇಂದ್ರ ನಾಯಕತ್ವವು ಹೊರಹೊಮ್ಮಿದಾಗಿನಿಂದ, ಜನಾರ್ದನ ರೆಡ್ಡಿಯನ್ನು ಪಕ್ಷದಿಂದ ದೂರವಿಡಲು ಜಾಗೃತ ಮತ್ತು ಸ್ಥಿರ ಪ್ರಯತ್ನಗಳು ನಡೆಯುತ್ತಿವೆ.


ಗಣಿಗಾರಿಕೆ ಹಗರಣದಲ್ಲಿ ಅವರು ಭಾಗಿಯಾಗಿರುವುದು ಮತ್ತು ತನಿಖಾ ಅಧಿಕಾರಿಗಳು ಮತ್ತು ನ್ಯಾಯಾಲಯವು ಅವರ ವಿರುದ್ಧ ತೆಗೆದುಕೊಂಡ ಕ್ರಮಗಳನ್ನು ಗಮನಿಸಿದರೆ, ರೆಡ್ಡಿ ಸಹೋದರರು ಮತ್ತು ಅವರ ಸಹಚರರಿಂದ ಅಂತರವನ್ನು ಕಾಯ್ದುಕೊಳ್ಳುವುದು ಪಕ್ಷದ ಕೇಂದ್ರ ನಾಯಕತ್ವದ ಹಿತಾಸಕ್ತಿಗಳನ್ನು ಸಮರ್ಥವಾಗಿ ಪೂರೈಸಿದೆ ಎಂದೇ ತೋರುತ್ತಿದೆ.


ಜನಾರ್ಧನ ರೆಡ್ಡಿ ಬಿಜೆಪಿಯ ಭಾಗವಲ್ಲ; ಅಮಿತ್ ಶಾ
ಸರ್ಕಾರದಲ್ಲಿ ಸಚಿವೆಯಾಗಿ ಸುಷ್ಮಾ ಸ್ವರಾಜ್ ಕೂಡ ರೆಡ್ಡಿ ಸಹೋದರರ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಇತ್ತೀಚೆಗಷ್ಟೇ ಗೃಹ ಸಚಿವ ಅಮಿತ್ ಶಾ ಅವರು ಜನಾರ್ದನ ರೆಡ್ಡಿ ಬಿಜೆಪಿಯ ಭಾಗವಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು.


ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ತಮ್ಮ ರಾಜಕೀಯ ಅಸ್ಥಿತ್ವವನ್ನು ಮತ್ತೆ ದೃಢಪಡಿಸಿಕೊಳ್ಳಲು ತಮ್ಮದೇ ಆದ ರಾಜಕೀಯ ಪಕ್ಷವನ್ನು ಕಟ್ಟಿಕೊಳ್ಳುವುದು ಜಾಣತನ ಎಂದು ಭಾವಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: